ಬೆಂಗಳೂರು, ಅಕ್ಟೋಬರ್ 05, (ಕರ್ನಾಟಕ ವಾರ್ತೆ) :
ಬೆಂಗಳೂರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಅವರು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ-ಪಕ್ಷಿಗಳ ಪಾಲನೆ, ಪೋಷಣೆಗಾಗಿ, ಆರೋಗ್ಯ ಮತ್ತು ನಿರ್ವಹಣೆಗಾಗಿ ಉದಾತ್ತವಾಗಿ ರೂ.20 ಲಕ್ಷ ದೇಣಿಗೆ ನೀಡಿರುತ್ತಾರೆ. ಮೃಗಾಲಯದ ಬಗ್ಗೆ ಅವರಿಗಿರುವ ಅಭಿಮಾನ, ಕಳಕಳಿಗಾಗಿ ಮೈಸೂರು ಮೃಗಾಲಯವು ಬೆಂಗಳೂರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಶ್ರೀಮತಿ ಸುಧಾ ಮೂರ್ತಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Post a Comment