ಕೇದಾರನಾಥ " ಯೋಗ ಸಮಾಧಿಗೆ "

ದೇವಭೂಮಿ ಒಡೆಯ ಕೇದಾರನಾಥನ ಮಂದಿರ ಶೀತಕಾಲ ಪ್ರಯುಕ್ತ ಇಂದು ಬಾಗಿಲು ಮುಚ್ಚಲಾಯಿತು.
 ನಿನ್ನೆ ಗೋಧೂಳಿ ಕಾಲದಿಂದ ಕೇದಾರನಾಥ ದೈವವನ್ನು " ಯೋಗ ಸಮಾಧಿಗೆ " ಕಳುಹಿಸಲು ಅಖಂಡ ಅಭಿಷೇಕ, ಭಸ್ಮಾರ್ಚನೆ, ವಿಶೇಷ ಆರತಿ, ವಿವಿಧ ಧಾರ್ಮಿಕ ಪ್ರಕ್ರಿಯೆ ನಡೆದು ಅಖಂಡ ಜ್ಯೋತಿ ಬೆಳಗಿಸಿ(ಈ ಜ್ಯೋತಿ ನೂರೈವತ್ತು ಗ್ರಾಂಎಣ್ಣೆ ಹಿಡಿಯುವ ಪ್ರಣತಿ ಹೊತ್ತಿಸಲಾಗುತ್ತದೆ.ಆರು ತಿಂಗಳು ಹಾಗೆ ಉರಿಯುತ್ತದೆ.) ಇಂದು ಬಾಗಿಲು ಮುಚ್ಚಿ,ಕೇದಾರನಾಥನ ಉತ್ಸವ ಮೂರ್ತಿಯನ್ನು ಡೊಲಿ ಮೂಲಕ ಊಖಿಮಠದಲ್ಲಿರುವ ವೈರಾಗ್ಯ ಸಿಂಹಾಸನ ಮಹಾ ಸಂಸ್ಥಾನ ಪೀಠಕ್ಕೆ ಮಿಲ್ಟ್ರಿ ವಾದ್ಯಗಳ ಗೌರವದಿಂದ ಕರೆತರಲಾಗುತ್ತದೆ.

Post a Comment

Previous Post Next Post