ಡಿಸೆಂಬರ್ 29 ರಂದು ಬೆಂಗಳೂರು ನಗರ ಜಿಲ್ಲಾ ಯುವಜನೋತ್ಸವ

ಪತ್ರಿಕಾ ಪ್ರಕಟಣೆ
ಡಿಸೆಂಬರ್ 29 ರಂದು ಬೆಂಗಳೂರು ನಗರ ಜಿಲ್ಲಾ ಯುವಜನೋತ್ಸವ

        ಬೆಂಗಳೂರು ನಗರ ಜಿಲ್ಲೆ (ಕರ್ನಾಟಕ ವಾರ್ತ) ಡಿ.22 :  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಯುವಜನರಲ್ಲಿ ಶಾಸ್ತ್ರೀಯ ಕಲೆ, ಜಾನಪದ ಕಲೆ, ಸಂಗೀತ ಮತ್ತು ಸಂಸ್ಕೃತಿಯನ್ನು   ಪ್ರೋತ್ಸಾಹಿಸಲು ಯುವಜನೋತ್ಸವದ ಆಯ್ಕೆ ಕಾರ್ಯಕ್ರಮವನ್ನು ಡಿಸೆಂಬರ್ 29 ರಂದು  ಬೆಳಗ್ಗೆ 10.00ಕ್ಕೆ ಯವನಿಕ ಸಭಾಂಗಣ,  ರಾಜ್ಯ ಯುವ ಕೇಂದ್ರ,  ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ  ಹಮ್ಮಿಕೊಳ್ಳಲಾಗಿದೆ. 

 ಯುವಜನೋತ್ಸವದಲ್ಲಿ 15 ರಿಂದ 29 ವರ್ಷಗಳ ವಯೋಮಾನದ ಯುವಜನರಿಗಾಗಿ  ಜನಪದ ಗೀತೆ, ಜಾನಪದ ನೃತ್ಯ,  ಏಕಾಂಕ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದ್ಯ, ಶಾಸ್ತ್ರೀಯ ನೃತ್ಯ, ಹಾರ್ಮೋನಿಯಂ, ಗಿಟಾರ್ ಹಾಗೂ ಅಶುಭಾಷಣ  ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

  ಪ್ರವೇಶ ಉಚಿತ. ಆಸಕ್ತ ಯುವಜನರು ಪ್ರವೇಶ ಪತ್ರ ಹಾಗೂ ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಕೊಠಡಿ ಸಂಖ್ಯೆ: 17, 18, ಶ್ರೀ ಕಂಠೀರವ ಕ್ರೀಡಾ ಸಂಕೀರ್ಣ, ಕಸ್ತೂರಬಾ ರಸ್ತೆ, ಬೆಂಗಳೂರು 560001 ಇಲ್ಲಿ ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ: 204266766/8660852203  ಗೆ ಸಂಪರ್ಕಿಸಲು ಕೋರಿದೆ.

Post a Comment

Previous Post Next Post