Pandit Venkatesh. Astrologer. Kannada: * ಆಚಾರ-ವಿಚಾರ *ಸದಾಚಾರ

Pandit Venkatesh. Astrologer. Kannada: * ಆಚಾರ-ವಿಚಾರ *

ನಮ್ಮ ದೈನಂದಿನ ನಡೆನುಡಿ ಹೇಗಿದ್ದರೆ ಚೆಂದ. 

1) ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.
2) ಮನೆಯ ಮುಖ್ಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ. ಅಷ್ಟು ಮಾತ್ರವೇ ಅಲ್ಲ ಬೇರೆ ಯಾರೂ ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.ಬೇರೆ ಹೊಸ್ತಿಲ ಮೇಲೂ ಕೂಡಾ ನಿಲ್ಲಕೂಡದು. 
3) ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.
4) ಪರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ) ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನದ ಮನೆಯ ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.
5) ಮೊರ, ಪರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಪರಕೆಗೆ ನಮಸ್ಕರಿಸಿ.ಯಾವ ಪದಾರ್ಥಗಳನ್ನೂ ತುಳಿಯಬಾರದು.
6) ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಬಳಿ ಬಿಡಬೇಡಿ ಪಕ್ಕದಲ್ಲಿ ಸ್ವಲ್ಪ
ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು. ರಂಗೋಲಿ ಹಾಕದೆ ಹಾಗೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ. ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರೂ ಹಾಕಿ.
7) ಮನೆಯ ಗೋಡೆಯ ಮೇಲೆ, ದೇವರ ಮನೆ ಮುಂತಾದ ಸ್ಥಳಗಳಲ್ಲಿ  ಶಾಯಿ ಅಥವಾ ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.
8) ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ. ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ. ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು. ಗೆಜ್ಜೆಯ ಶಬ್ದ ಲಕ್ಷ್ಮಿಯ ಸಂಕೇತ. 
9) ಮಂಗಳವಾರ, ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ, ಬೇರೆ ದಿನ ಬಯ್ಯಬಹುದೆಂದಲ್ಲ. ವಿಶೇಷವಾಗಿ ಆ ದಿನಗಳಷ್ಟೇ.ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳಲ್ಲಿ ಅವಾಚ್ಯ ಶಬ್ದಗಳಿಂದ ಬಯ್ಯಲೇಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.
10) ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಪರಿಣಾಮ ಬೇಗ ನಿಮ್ಮಮೇಲಾದೀತು. 
11) ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.
12) ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆಯೇ ಶುಕ್ರವಾರ, ಮಂಗಳವಾರ ಹಾಗೂ ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಎಸೆಯಬಾರದು. ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.ಕಾಲಿನಿಂದ ಒರೆಸಬಾರದು. 
13) ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು, ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ. 
14) ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.
15) ಹಾಸಿಗೆ , ಸೋಫಾ, ಮಂಚದ ಮೇಲೆ ಕುಳಿತು ದ್ಯಾನ ಪೂಜೆಗಳನ್ನು ಮಾಡಬೇಡಿ ಅಂತಹವು ಯಾವ ಫಲವನ್ನೂ ನೀಡುವುದಿಲ್ಲ.
16) ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ. ಮುಸ್ಸಂಜೆ ವೇಳೆ ಮತ್ತು ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ಅದು ದರಿದ್ರಲಕ್ಷ್ಮೀ ಮನೆಯಲ್ಲಿ ತಾಂಡವವಾಡುತ್ತಾಳೆ.
17).ಹೊರಗೆ ಹೋಗಿ ಬಂದಾಗ ಕೈ ಕಾಲು ತೊಳೆದು ಒರೆಸಿಕೊಂಡು ಮನೆಯನ್ನು ಪ್ರವೇಶಿಸಿ. 
18), ಗುರುಹಿರಿಯರಿಗೆ ಗೌರವಾದರಗಳನ್ನು ನೀಡಿ. 
*ಕರ್ಮ ಅಂದರೆ ಬೇರೇನೂ ಅಲ್ಲ. ನಾವು ಮಾಡಿದ ತಪ್ಪು- ಸರಿಗಳನ್ನು ಅನುಭವಿಸುವುದು*
[19/01, 10:12 PM] Pandit Venkatesh. Astrologer. Kannada: ನವಗ್ರಹ ಶಾಂತಿ 
ನಿಮ್ಮ ಜನ್ಮಕುಂಡಲಿಯ ಜಾತಕ ಕುಂಡಲಿಯಲ್ಲಿ ಪಾಪಗ್ರಹಗಳಾದ ರಾಹು ಕೇತು ಕುಜ ಶನಿ 1 2 8 12 ಸ್ಥಾನಗಳಲ್ಲಿ ಇದ್ದಾಗ ವಿಪರೀತ ಸಮಸ್ಯೆಗಳು  ಸಮಸ್ಯೆಗಳು ಉಂಟಾಗುತ್ತದೆ ತಿಳಿದುಕೊಳ್ಳಿ
ಪಂಡಿತ್ ವೆಂಕಟೇಶ್ ಜಾತಕ ವಿಮರ್ಶಕರು ಜ್ಯೋತಿಷಿಗಳು ಮೊಬೈಲ್ 9482655011
ನಿಮ್ಮ ಹೆಸರು ಹುಟ್ಟಿದ ದಿನಾಂಕ ಸಮಯವನ್ನು 
ಕಳಿಸಿ 
ನವಗ್ರಹ ಶಾಂತಿ ಗೆ ಸಂಪರ್ಕಿಸಿ ಮೊಬೈಲ್ 9482655011
[20/01, 7:56 AM] Pandit Venkatesh. Astrologer. Kannada: ಜಗತ್ತಿನಲ್ಲಿ ಎಂಥವರೇ ಆಗಿರಲಿ ರೋಗ, ದು:ಖ, ಮುಪ್ಪು ಮತ್ತು ಸಾವು ಈ ನಾಲ್ಕರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ತತ್ವಜ್ಞಾನವಲ್ಲ, ಪ್ರಕೃತಿ ಸತ್ಯ. ಈ ಸತ್ಯವನ್ನು ಅರಿತವರು ದುರಾಸಿಗಳಾಗುವುದಿಲ್ಲ, ದುರಂಕಾರಿಗಳಾಗುವುದಿಲ್ಲ, ಸ್ವಾರ್ಥಿಗಳಾಗುವುದಿಲ್ಲ,  ಕ್ರೂರಿಗಳಾಗುವುದಿಲ್ಲ ಮತ್ತು ಕ್ರೋಧದಿಂದ ಯಾರನ್ನೂ ಯಾರು ದ್ವೇಷಿಸುವುದಿಲ್ಲ.
- ಗೌತಮ ಬುದ್ದ
🌹ಶುಭೋದಯ 🌹

Post a Comment

Previous Post Next Post