30,000 ಸಾವಿರ ನಾಗದೇವತೆಗಳನ್ನು ಹೊಂದಿರುವ ಅದ್ಭುತವಾದ ಒಂದು ದೇವಾಲಯವಿದೆ. ... ಇದು ನಿಮಗೆ...

[25/02, 8:19 AM] Pandit Venkatesh. 
....

🙏🏼🙏🏼  

30,000 ಸಾವಿರ ನಾಗದೇವತೆಗಳನ್ನು ಹೊಂದಿರುವ ಅದ್ಭುತವಾದ ಒಂದು ದೇವಾಲಯವಿದೆ. 

ನಮ್ಮ ಹಿಂದೂ ಸಂಪ್ರದಾಯದಲ್ಲಿ #ಹಾವುಗಳನ್ನು ಪೂಜಿಸುವ ಸಂಸ್ಕಾರವು ಪುರಾತನ ಕಾಲದಿಂದಲೂ ಇದೆ. 

ಹಾವುಗಳನ್ನು ನಾಗರಾಜ, ನಾಗ ದೇವತೆ ಎಂದೆಲ್ಲಾ ಕರೆದು ಆರಾಧಿಸುತ್ತೇವೆ. ಹೀಗೆ ನಾಗರಾಜನಿಗೆಂದೇ ಮುಡುಪಾಗಿರುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಕೂಡ ಒಂದು. 
ಇದೊಂದು ಪ್ರಸಿದ್ಧಿಯನ್ನು ಹೊಂದಿರುವ ನಾಗರಾಜನ ದೇವಾಲಯ. 

ಸಂತಾನ ಇಲ್ಲದೇ ಇರುವವರು ಹಾಗು ಅನೇಕ ಖಾಯಿಲೆಯಿಂದ ಬಳಲುತ್ತಿರುವವರಿಗೆ ಈ ದೇವಾಲಯ ಪರಿಷ್ಕಾರವಿದ್ದಂತೆ. 

ಹಾಗಾದರೆ ಈ ಮಹಿಮಾನ್ವಿತವಾದ ದೇವಾಲಯ ಎಲ್ಲಿದೆ? 

#ಅದರ_ವಿಶೇಷತೆ_ಏನು?

ಎಂಬುದರ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೊಣ ಬನ್ನಿ.

#ಕೇರಳದ_ಅತಿ_ದೊಡ್ಡ_ದೇವಾಲಯವಿದು...

ಕೇರಳ ರಾಜ್ಯದಲ್ಲಿನ #ಮನ್ನಾರ್‍ಶಾಲ ಶ್ರೀ ನಾಗರಾಜ ದೇವಾಲಯವಿದೆ. ಇದೊಂದು ಪುರಾತನವಾದ ಹಾಗು ಅತ್ಯಂತ ಪ್ರಖ್ಯಾತವಾದ ಸರ್ಪ ದೇವಾಲಯ ಎಂದು ಪ್ರಸಿದ್ಧಿಯನ್ನು ಪಡೆದಿರುವ ಯಾತ್ರಾ ಸ್ಥಳ. 

ಮನ್ನಾರ ಶಾಲ ದೇವಾಲಯದ ಹಾದಿ ಮತ್ತು ಮರಗಳ ನಡುವೆ ಸುಮಾರು 30,000 ಕ್ಕೂ ಅಧಿಕ ಹಾವುಗಳ ಮೂರ್ತಿಗಳನ್ನು ಕಾಣಬಹುದು. 

ನಿಮಗೆ ಗೊತ್ತ ಕೇರಳದ ಅತಿ ದೊಡ್ಡದಾದ ದೇವಾಲಯವೇ ಈ ಮನ್ನಾರಶಾಲ ನಾಗರಾಜ ದೇವಾಲಯ. 

ಈ ಮಹಿಮಾನ್ವಿತವಾದ ದೇವಾಲಯಕ್ಕೆ ದಿನನಿತ್ಯ ನೂರಾರು ಜನರು ಭೇಟಿ ನೀಡುತ್ತಿರುತ್ತಾರೆ.

#ಸಂತಾನ_ಪ್ರಾಪ್ತಿಯಾಗುತ್ತದೆ

ಈ ದೇವಾಲಯವು ಕೇರಳದ ಅತಿ ದೊಡ್ಡ ಹಾಗು ಪುರಾತನವಾದ ದೇವಾಲಯವಾಗಿದೆ. 

ಅನೇಕ ಮಂದಿ ಮಹಿಳೆಯರು ಸಂತಾನ ಪ್ರಾಪ್ತಿಗಾಗಿ ಇಲ್ಲಿನ ನಾಗದೇವತೆಗಳಿಗೆ ಪ್ರಾರ್ಥಿಸುತ್ತಾರೆ. 

ಇಲ್ಲಿಗೆ ಭೇಟಿ ನೀಡಿದ ಅನೇಕ ಮಂದಿಗಳಿಗೆ ಮಕ್ಕಳ ಭಾಗ್ಯವಾಗಿರುವ ನಿದರ್ಶನಗಳಿವೆಯಂತೆ. 

ಇದಕ್ಕೆ ಕೃತಜ್ಞತಾ ಫಲವಾಗಿ ಸಮಾರಂಭವನ್ನು ಆಚರಿಸುತ್ತಾರೆ. ಇಲ್ಲಿ ನೀಡುವ ಹರಿಶಿಣವು ಪ್ರಸಾದದಂತೆ ಸ್ವೀಕರಿಸುತ್ತಾರೆ. 

ಅಷ್ಟೇ ಅಲ್ಲ ಅನೇಕ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇಲ್ಲಿನ ನಾಗರಾಜನಿಗೆ ಇದೆ. ಹಾಗಾಗಿಯೇ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

#ಸ್ಥಳ_ಪುರಾಣ

ಒಂದು ಸ್ಥಳಕ್ಕೆ ಸಂಬಂಧಿಸಿದ ದಂತಕಥೆಗಳ ಆಧಾರದ ಪ್ರಕಾರ ಇಲ್ಲಿನ ಸರ್ಪ ದೇವತೆಗಳ ಪ್ರಮುಖ ಸ್ಥಳ ಇದಾಗಿದ್ದು, #ಪರಶುರಾಮನು ಈ ದೇವಾಲಯದ ಸೃಷ್ಟಿಕರ್ತ ಎಂದು ನಂಬಲಾಗಿದೆ. 

ಕ್ಷತ್ರೀಯರನ್ನು ಕೊಲ್ಲುವ ಪಾಪದಿಂದ ಮುಕ್ತಿ ಹೊಂದುವ ಸಲುವಾಗಿ ಒಬ್ಬ ಬ್ರಾಹ್ಮಣನನ್ನು ಕರೆದು ಒಂದು ಪವಿತ್ರವಾದ ಭೂಮಿಯನ್ನು ನೀಡಬೇಕು ಎಂದು ಅಲೋಚಿಸುತ್ತಾನೆ. 

ಶಿವನ ಆಶೀರ್ವಾದದಿಂದ ಪಡೆದಿದ್ದ ಕೊಡಲಿಯನ್ನು ಅವನು ಸಮುದ್ರಕ್ಕೆ ಎಸೆಯುತ್ತಾನೆ. 

ಇದರಿಂದ ಪರಶುರಾಮನು ಸಮುದ್ರದಿಂದ ಒಂದು ಪವಿತ್ರವಾದ ಭೂಮಿಯನ್ನು ಪಡೆಯುತ್ತಾನೆ. ಅಂದುಕೊಂಡ ಹಾಗೆ ಬ್ರಾಹ್ಮಣನಿಗೆ ಆ ಭೂಮಿಯನ್ನು ಉಡುಗೂರೆಯಾಗಿ ನೀಡುತ್ತಾನೆ.

#ವಿಪರೀತ ಹಾವುಗಳು

ಉಡುಗೂರೆಯಾಗಿ ಪಡೆದ ಭೂಮಿಯು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಜನರು ಅಲ್ಲಿಂದ ಹೊರಬರಲು ಪ್ರಾರಂಭಿಸುತ್ತಾರೆ. 

ಅಷ್ಟೇ ಅಲ್ಲ ಅಲ್ಲಿ ಅನೇಕ ಹಾವುಗಳ ವಾಸಸ್ಥಾನವಾಗಿತ್ತು. ಹೀಗಾಗಿ ಹಾವುಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಸರ್ಪ ಪೂಜೆಯನ್ನು ಮಾಡಲು ಪ್ರಾರಂಭಿಸಿದರು. 

ನಾಗರಾಜನನ್ನು ತಪ್ಪಸ್ಸಿನಿಂದ ಮೆಚ್ಚಿಸುವ ಸಲುವಾಗಿ ಪರಶುರಾಮನು ತನ್ನ ಶಿಷ್ಯರೊಂದಿಗೆ ಕಾಡಿಗೆ ಹೊರಡುತ್ತಾನೆ. 

ಅವರು ಕೇರಳದ ದಕ್ಷಿಣ ಭಾಗದಲ್ಲಿರುವ ಕಡಲ ಬಳಿ ಸೂಕ್ತವಾದ ಸ್ಥಳ ಎಂದು ಅಂದಕೊಂಡು ನಾಗರಾಜನ ಪೂಜೆಯನ್ನು ಮಾಡಲು ಪ್ರಾರಂಭಿಸುತ್ತಾರೆ. 

ಆ ಪುಣ್ಯ ಸ್ಥಳವೇ ಮನ್ನಾರಶಾಲ ನಾಗರಾಜನ ದೇವಾಲಯ.

#ನಾಗರಾಜನ_ಆಶೀರ್ವಾದ

ಪರಶುರಾಮನ ಪೂಜೆಯಿಂದ ತೃಪ್ತಿಗೊಂಡ ನಾಗರಾಜನು ಪರಶುರಾಮನಿಗೆ ದರ್ಶನವನ್ನು ನೀಡಿ, ಅಲ್ಲಿನ ಸರ್ಪಗಳೆಲ್ಲಾವನ್ನು ಅಲ್ಲಿಂದ ಹೊರಡುವಂತೆ ಆಜ್ಞೆಯನ್ನು ಹೊರಡಿಸುತ್ತಾನೆ. 

ಮನ್ನಾರ್‍ಶಾಲ ದೇವಾಲಯದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಹಾಗು ಅಕ್ಟೋಬರ್ ತಿಂಗಳಲ್ಲಿ ವಿಜೃಂಬಣೆಯಿಂದ ಸಂಭ್ರಮವನ್ನು ಆಚರಿಸುತ್ತಾರೆ. 

ಅನೇಕ ರಾಜ್ಯದಿಂದ ಭಕ್ತರು ನಾಗದೇವತೆಗಳನ್ನು ಆರಾಧಿಸಲು ಈ ಪವಿತ್ರವಾದ ಮನ್ನಾರ್‍ಶಾಲ ನಾಗರಾಜನ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

#ತಲುಪವ_ಬಗೆ_ಹೇಗೆ?

ಸಮೀಪದ ಬಸ್ ನಿಲ್ದಾಣವೆಂದರೆ: ಹರಿಪಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ ಈ ದೇವಾಲಯ.

#ಸಮೀಪದ_ರೈಲ್ವೆ_ನಿಲ್ದಾಣವೆಂದರೆ: 

#ಹರಿಪಾದ ರೈಲ್ವೆ ನಿಲ್ದಾಣದಿಂದ 3 ಕಿ.ಮೀ, ಮಾವೆಲಿಕ್ಕರ್ ರೈಲ್ವೆ ನಿಲ್ದಾಣದಿಂದ 10 ಕಿ.ಮೀ, ಕಯಾಂಕುಲಂ ರೈಲ್ವೆ ನಿಲ್ದಾಣದಿಂದ 11 ಕಿ.ಮೀ ದೂರದಲ್ಲಿದೆ.

ವಿಮಾನ ಮಾರ್ಗದ ಮೂಲಕ: ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 115 ಕಿ.ಮೀ, ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 125 ಕಿ.ಮೀ ದೂರದಲ್ಲಿದೆ

💐👍💐
[25/02, 9:00 AM] Pandit Venkatesh. Astrologer. Kannada: 
'ಜ್ಞಾನ'  ಹಂಚುವಿಕೆ ಕೌಶಲ್ಯ:- 
ಅರಸನ ಮಕ್ಕಳಾಗಲಿ, ಸಾಮಾನ್ಯರ  ಮಕ್ಕಳಾಗಲಿ ಎಲ್ಲರೂ ಎಲ್ಲವನ್ನೂ ಕಲಿಯಲು ಸಾಧ್ಯವಿಲ್ಲ. ಕಲಿಯುವ ಆಸಕ್ತಿ ಎಲ್ಲರಲ್ಲೂ ಒಂದೇ ತರಹ ಇರುವುದಿಲ್ಲ.  ಅವರವರ ಆಸಕ್ತಿಗೆ ಅನುಗುಣವಾಗಿ ವಿದ್ಯೆ ಕಲಿಸುವ ಪರಿಣತಿ, ಒಬ್ಬ  ಮಹಾನ್ ಗುರುವಿನಿಂದ ಸಾಧ್ಯ."ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ  ಪೌತ್ರಮಕಲ್ಮಷಂ  ಪರಾಶರಾತ್ಮಜಂ  ವಂದೇ ಶುಕತಾತಂ  ತಪೋನಿಧಿಮ್" ಗುರುಗಳಾದ  ವೇದವ್ಯಾಸರು  ಜ್ಞಾನದ  ಸರ್ವಾಂಗೀಣ  ಶಕ್ತಿ. ವೇದವ್ಯಾಸರು ಜ್ಞಾನವನ್ನು ಅವರವರ ಬುದ್ಧಿ ಮಟ್ಟಕ್ಕೆ ಸರಿಯಾಗಿ ಹಂಚುತ್ತಿದ್ದರು. ಯಾರನ್ನು ಕಲಿಯಲು ಅನರ್ಹರೆಂದು ಪರಿಗಣಿಸದೆ, ಕಲಿಯಲು ಶಕ್ತಿ ಇರುವಂತಹ ವಿದ್ಯೆಯನ್ನು ಅನುಗ್ರಹಿಸಿದವರು. ವಿದ್ಯೆ ಕಲಿಯಬೇಕೆನ್ನುವ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ ಆದರೆ ಕೆಲವರಿಗೆ ಬೇಗ ವಿದ್ಯೆ ಹಿಡಿಯುತ್ತದೆ. ಇನ್ನು ಕೆಲವರಿಗೆ ಸರಳವಾದ್ದು ಅರ್ಥವಾಗುತ್ತೆ , ಇನ್ನೂ  ಕೆಲವರಿಗೆ ನೀರು ಕುಡಿದಷ್ಟೇ ಸುಲಭವಾಗಿರಬೇಕು, ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡು ವೇದವ್ಯಾಸರು  ಜ್ಞಾನಕಾಂಕ್ಷಿಯಾಗಿ ಬಂದ ಶಿಷ್ಯರಲ್ಲಿ ಯಾರನ್ನು ನಿರಾಕರಿಸದೆ, ಮೂರು  ವರ್ಗಗಳನ್ನಾಗಿ ಮಾಡುತಿದ್ದರು. 

ಪ್ರಥಮ ವರ್ಗದವರಿಗೆ  ಸಿಪ್ಪೆ ತೆಂಗಿನಕಾಯಿ ಕೊಡುವರು. ಅಂದರೆ  'ವೇದಗಳನ್ನು' ಕಲಿಸುತ್ತಿದ್ದರು. ವೇದಗಳನ್ನು ಕಲಿಯುವುದು ಕಷ್ಟ. ಸಿಪ್ಪೆ ಕಾಯಿ ಸುಲಿದು, ತೆಂಗಿನ ಕಾಯಿ ಒಡೆದು,  ತುರಿದರೆ ಸಿಹಿಯಾದ ಕಾಯಿ ಸೂಸಲು ಸಿಗುತ್ತದೆ. ಕಬ್ಬಿಣದ ಕಡಲೆಗಳಂಥ  ವೇದಗಳನ್ನು ಕಲಿಯಲು, ತಿಳಿಯಲು  ಅಪಾರ ಜ್ಞಾನ, ಶ್ರದ್ಧೆ ಬೇಕು. ಅರಿತವರು  ಮೇಧಾವಿಗಳು.ದ್ವಿತೀಯ ವರ್ಗದ ಶಿಷ್ಯರಿಗೆ, ಬಾಳೆಹಣ್ಣು ಕೊಡುತ್ತಿದ್ದರು. ಇದನ್ನು ಹಾಗೆ ತಿನ್ನುವಂತಿಲ್ಲ ಸಿಪ್ಪೆ ಸುಲಿದು ತಿನ್ನಬೇಕು. ಇವರಿಗೆ  ಇತಿಹಾಸ, ಭಗವದ್ಗೀತೆ, ಮಹಾಭಾರತ, ರಾಮಾಯಣ, ಇವುಗಳನ್ನು ಕಲಿಸುತ್ತಿದ್ದರು. ಓದಲು, ಬರೆಯಲು ಬಂದರೆ, ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಇದು ಜ್ಞಾನ ಪಡೆಯುವ  ಸರಳ  ಮಾರ್ಗ. ಇವರು  ಪ್ರಥಮ ವರ್ಗದವರಿಗೆ ಕೊಟ್ಟಿದ್ದನ್ನು ನಮಗೇಕೆ ಕೊಡಲಿಲ್ಲ ಎಂದು ಕೇಳುವ ಅರ್ಹತೆ ಅವರಿಗೆ ಇರುತ್ತಿರಲಿಲ್ಲ. ಎಲ್ಲಾ ಶಿಷ್ಯರನ್ನು ಪರೀಕ್ಷೆ  ಮಾಡಿ ವಿಭಾಗ ಮಾಡುತ್ತಿದ್ದರು.  ಇನ್ನು ಮೂರನೆಯವರು, ತೃತೀಯ ವರ್ಗ, ಈ ವರ್ಗದ  ಶಿಷ್ಯರಿಗೆ ದ್ರಾಕ್ಷಿ ಹಣ್ಣು ಕೊಡುತ್ತಿದ್ದರು. ದ್ರಾಕ್ಷಿ ಹಣ್ಣುಗಳನ್ನು ನೇರವಾಗಿ ಬಾಯಿಗೆ ಹಾಕಿಕೊಂಡು, ತಿರಳನ್ನೆಲ್ಲ ತಿಂದು ಬೀಜ ಉಗುಳಿದರೆ ಆಯಿತು. ಅಂದರೆ ಪುರಾಣಗಳು, ಭಾಗವತ, ಇವುಗಳಾಗಿದ್ದವು. ಮನಸ್ಸಿಗೆ ,ಬುದ್ಧಿಗೆ ಎಟುಕಿದ್ದನ್ನು  ಓದಿಕೊಂಡು, ಎಲ್ಲೋ ಒಂದೆರಡು  ಬೋರ್  ಆದರೆ  ಪೇಜ್ ತಿರುಗಿಸಿ ಮುಂದಿನದನ್ನು  ಓದುವುದು. 

ಜ್ಞಾನವಿಲ್ಲದವರಿಗೆ  ಜ್ಞಾನ ಕೊಡುವುದು, ಅಪಾತ್ರರಿಗೆ ದಾನ ಮಾಡುವುದು, ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ. ಎಲ್ಲರಿಗೂ ಎಲ್ಲವನ್ನೂ ಕೊಡದೆ ಅವರ ಮಿತಿಗಳನ್ನು ನೋಡಿ ಕೊಡಬೇಕು. ಇಂಥ ಸೂಕ್ಷ್ಮ ವಿಷಯಗಳನ್ನು  ಶ್ರೀಕೃಷ್ಣನು ವಿಚಾರ ಮಾಡಿ ತಿಳಿಸಿದ್ದಾನೆ. ಎಲ್ಲಾ ನಿಟ್ಟಿನಲ್ಲೂ  ಸಾಮರ್ಥ್ಯ ಇರುವುದನ್ನು
ಖಚಿತ ಪಡಿಸಿಕೊಂಡೆ  ಭಗವದ್ಗೀತೆಯನ್ನು  ಅರ್ಜುನನಿಗೆ  ಉಪದೇಶ ಮಾಡಿದನು.  ಗುರು ದ್ರೋಣಾಚಾರ್ಯರು ಏಕಲವ್ಯನಿಗೆ ವಿದ್ಯೆ ಕೊಡಲಿಲ್ಲ. ಲೋಕದ ದೃಷ್ಟಿಯಲ್ಲಿ ಗುರು ಕೇಳಿದ ಗುರುದಕ್ಷಿಣೆ ಕೊಟ್ಟು ಅಪ್ರಥಿಮ ಶಿಷ್ಯ ಎನಿಸಿಕೊಂಡವನು  ಏಕಲವ್ಯ.  ಶಿಷ್ಯನ ಅಮಾಯಕತೆ ಬಳಸಿಕೊಂಡ ಸ್ವಾರ್ಥಿ ಗುರು ದ್ರೋಣಾಚಾರ್ಯರು ಎನ್ನುವರು.  ಆದರೆ ಗುರುದ್ರೋಣರು ದೂರದೃಷ್ಟಿ ಉಳ್ಳವರು  ಕಾರಣ ಅಜ್ಞಾನಿಗಳ ಕೈಯಲ್ಲಿ ಶಕ್ತಿ ಶಾಲಿ  ಅಸ್ತ್ರಗಳ ಜ್ಞಾನ ಕೊಡಬಾರದು. ಕೊಟ್ಟರೆ  ಹುಚ್ಚರ ಕೈಗೆ ಕಲ್ಲು ಕೊಟ್ಟ ಹಾಗೆ, ಅವರು ಎಲ್ಲಿಗೆ ಬೇಕಾದರೂ ಕಲ್ಲನ್ನು ಎಸೆಯಬಹುದು. ದೊಡ್ಡ ದೊಡ್ಡ  ಶಸ್ತ್ರಾಸ್ತ್ರಗಳ ಜ್ಞಾನವನ್ನು  ಕೊಟ್ಟರೆ ಕೋಪದ ಭರದಲ್ಲಿ ಸರ್ವನಾಶವನ್ನೇ  ಮಾಡಬಹುದು.
ಇದು ಹಿಂದಿನ ಜ್ಞಾನಿಗಳ ಅಭಿಪ್ರಾಯ. 

ಅಸಾಮಾನ್ಯ ಜ್ಞಾನ  ಹೊಂದಿದ್ದ  ಏಕಲವ್ಯನ ಕೈಗೆ  ಶಸ್ತ್ರಾಸ್ತ್ರಗಳು ಸಿಕ್ಕರೆ,  ಸರಿಯಾದ ಮಾರ್ಗದಲ್ಲಿ ಅವನು ಹೋದರೆ ಸರಿ.  ಆದರೆ ದ್ವೇಷಕ್ಕಾಗಿ ಅಡ್ಡದಾರಿ ತಿರುಗಿದರೆ ಅದರ ಪರಿಣಾಮ ಎದುರಿಸುವುದು ಕಷ್ಟ.  ಹೀಗೆ ಯೋಚಿಸಿ ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು. ಇದರ ಪರಿಣಾಮ ಮುಂದೆ  ಅರ್ಥವಾಗುತ್ತದೆ. ಮಗಧದ  ದೊರೆ ಜರಾಸಂದನು  ದುಷ್ಟರಾದ  ಶಿಶುಪಾಲ, ಕಾಲಯವನ,  ಇವರುಗಳ ಜೊತೆ ಸೇರಿ, ಮಥುರೆಯ ಮೇಲೆ  ಪದೇ ಪದೇ ದಾಳಿ ಮಾಡಿ ನಾಶಮಾಡುತ್ತಾನೆ. ತಕ್ಕ ಸಮಯಕ್ಕಾಗಿ  ಕಾದಿದ್ದ  ಕೃಷ್ಣನು ಅರ್ಜುನ ಮತ್ತು ಭೀಮನೊಂದಿಗೆ  ಬ್ರಾಹ್ಮಣರ  ವೇಶದಿಂದ ಹೋಗಿ, ಜರಾಸಂಧನು,  ಭೀಮನೂಂದಿಗೆ  ಮಲ್ಲಯುದ್ಧ ಮಾಡುವಂತೆ  ಉಪಾಯ ಮಾಡಿ, ಸಾಕಷ್ಟು ಸೆಣಸಾಡಿದ ಮೇಲೆ,  ಜರಾಸಂಧನ ದೇಹವನ್ನು ಸೀಳಿ ಭಾಗ ಮಾಡಿ   ಬೇರೆ ಬೇರೆ  ದಿಕ್ಕಿಗೆ ಎಸೆಯುವಂತೆ  ಹೇಳಿ ಅವನ ಸಂಹಾರ ಮಾಡಿಸುತ್ತಾನೆ.  ಆನಂತರ ಯುಧಿಷ್ಠಿರ  ರಾಜಸೂಯಯಾಗ 
ಮಾಡುತ್ತಾನೆ.‌ 

ಜರಾಸಂಧನ  ಸಾವಿನ ಪ್ರತೀಕಾರಕ್ಕಾಗಿ  ಏಕಲವ್ಯ ಯಾದವರ  ಮೇಲೆ ಕೆಂಡಾಮಂಡಲ  ದ್ವೇಷ ಕಟ್ಟಿಕೊಳ್ಳುತ್ತಾನೆ. ಜರಾಸಂಧನ  ಸೇನೆಯಲ್ಲಿ  ಏಕಲವ್ಯನ ತಂದೆ  ಬೇಡರ ನಾಯಕ 'ನಿಷಾದ'  ಇದ್ದನು. ಮುಂದೆ  ಏಕಲವ್ಯನು ಆ ಸೇನೆಯನ್ನೆ  ಸೇರಿದ್ದ. ಸೇಡು ತೀರಿಸಿಕೊಳ್ಳಲು ದ್ವಾರಕೆಯ ಮೇಲೆ ದಾಳಿ ಮಾಡುತ್ತಾನೆ. ಅದಾಗಲೇ ಕೃಷ್ಣನ ಮುಂದಾಲೋಚನೆಯಿಂದಾಗಿ, ಏಕಲವ್ಯನ  ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ದ್ರೋಣರು  ತೆಗೆದುಕೊಂಡಿದ್ದರಿಂದ  ಅವನ ಅಸಮಾನ್ಯ  ಬಿಲ್ವಿದ್ಯೆಗೆ ಸ್ವಲ್ಪ ತಡೆಯುಂಟಾಗಿ ಯಾದವರ  ವಿರುದ್ಧ ದಾಳಿ ಮಾಡಿದಾಗ  ಕೃಷ್ಣನಿಂದ ಹತನಾದನೆಂದು, ಕೆಲವರು ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ ಜೊತೆ  ಸೇರಿ ಪಾಂಡವರ ವಿರುದ್ಧ ಯುದ್ಧ ಮಾಡಿ ಹತನಾದ ನೆಂದು ಅಭಿಪ್ರಾಯವಿದೆ. 

ದ್ರೋಣರಿಗೆ ಇನ್ನೊಂದು ನೋವಿತ್ತು. ಮಗನ ಅಶ್ವತ್ಥಾಮನ  ಮೇಲಿನ ಪ್ರೀತಿಗಾಗಿ  ನಾರಾಯಣಾಸ್ತ್ರವನ್ನು ಕೊಟ್ಟರು. ಇಂಥ  ಮಹಾಸ್ತ್ರ ವನ್ನು ಅವನಿಗೆ ಕೊಡಬಾರದಾಗಿತ್ತು ಎಂದು ಆಮೇಲೆ ಗೊತ್ತಾಯ್ತು ,ಕಾಲ ಮಿಂಚಿ  ಹೋಗಿತ್ತು.  ಅಶ್ವತ್ಥಾಮನಿಗೆ  ಹುಚ್ಚರಿಗಿರುವ  ಜ್ಞಾನ. ಮಹಾಸ್ತ್ರ ವನ್ನ ಇಂಥವನಿಗೆ  ಕೊಟ್ಟರೆ,  ಕೈ ಕೊಟ್ಟು ಕೋಳ ಹಾಕಿಸಿಕೊಂಡತೆ, ಪರಿಣಾಮದ   ಪರಿಜ್ಞಾನವಿಲ್ಲದೆ  ಕೋಪದ ಕೈಗೆ ಬುದ್ಧಿ ಕೊಟ್ಟು ನಾರಾಯಣಾಸ್ತ್ರವನ್ನು  ಉಪಯೋಗಿಸುತ್ತಾನೆ.  ಅದನ್ನು  ಮುಂಜಾಗ್ರತೆಯಿಂದ  ಕೃಷ್ಣ ಕೊರಳಿಗೆ ಹಾರವಾಗಿ ಹಾಕಿಕೊಂಡ. 

ದ್ರೋಣಾಚಾರ್ಯರಿಗೆ, ಅವರವರ ಆಸಕ್ತಿಗೆ ಅನುಗುಣವಾಗಿ ವಿದ್ಯೆ ಕಲಿಸಬೇಕು ಎಂದು ತಿಳಿದಿತ್ತು. ಅರ್ಜುನನ ಬೆರಳುಗಳ ನೈಪುಣ್ಯತೆ, ಪ್ರತಿಭೆ,ಏಕಾಗ್ರತೆ, ತೀಕ್ಷಣತೆಗಳನ್ನು ಗುರುತಿಸಿದ ದ್ರೋಣರು ಅವನನ್ನು ಸರ್ವಶ್ರೇಷ್ಠ  ಧನುರ್ಧಾರಿಯನ್ನಾಗಿ  ಮಾಡಿದರು. ಇವನಷ್ಟೆ  ನೈಪುಣ್ಯತೆ ಇರುವ  ಕರ್ಣನಿಗೆ ವಿದ್ಯೆ ಕಲಿಸಲು ನಿರಾಕರಿಸಿದರು. ಕಾರಣ  ಆಚಾರ್ಯರು ಹಸ್ತಿನಾಪುರದ  ರಾಜಕುಮಾರರಿಗೆ  ಮಾತ್ರ ವಿದ್ಯೆ ಕಲಿಸಲು  ಭೀಷ್ಮರ ಮೂಲಕ  ಬಂದು ಅರಮನೆಯ ಸವಲತ್ತುಗಳನ್ನು ಪಡೆದಿದ್ದರು. ಇದಕ್ಕೂ ಮೊದಲು ಅತಿ ಕಷ್ಟದ ದಿನಗಳನ್ನೆ  ಎದುರಿಸಿದ್ದರು. ಅವರ  ಅನರ್ಗ್ಯ ವಾದ ವಿದ್ಯೆಯನ್ನು ಯಾರೂ ಗುರುತಿಸಲಿಲ್ಲ. ತಿನ್ನಲು ಗತಿಯಿಲ್ಲದೆ ಪರದಾಡಿದ್ದರು. ಮಗು ಅಶ್ವತ್ಥಾಮನಿಗೆ ಕುಡಿಯಲು ಒಂದು ಲೋಟ ಹಾಲು ಕೊಡಲು ಇರಲಿಲ್ಲ. ಹಾಲು ಕೇಳಿದಾಗ ನೀರಿಗೆ ಅಕ್ಕಿಹಿಟ್ಟು ಹಾಕಿ ಕದಡಿ ಅದನ್ನೇ ಹಾಲು ಎಂದು ಕೊಡುತ್ತಿದ್ದರು. 
ಈ ಸಮಯದಲ್ಲಿ ಆಕಸ್ಮಿಕವಾಗಿ ಗುರುತಿಸಿದ ಪಿತಾಮಹ  ಭೀಷ್ಮರು   ರಾಜಕುಮಾರರಿಗೆ ವಿದ್ಯೆ ಕಲಿಸಲು ಅರಮನೆಗೆ ಕರೆಸಿದರು. ಮುಂದೆ ರಾಜಗುರುಗಳ ಪಟ್ಟ ಕಟ್ಟಿದರು.   ಹೀಗಿರುವಾಗ,  ರಾಜ ಕುಮಾರರ ಹೊರತಾಗಿ ಬೇರೆಯವರಿಗೆ ವಿದ್ಯಾದಾನ ಮಾಡುವಂತಿರಲಿಲ್ಲ. ಇದನ್ನೇ ಕರ್ಣನಿಗೂ ಹೇಳಿದರು. ಆಗ ಅಲ್ಲೇ ನಿಂತಿದ್ದ ಅಶ್ವತ್ಥಾಮನ ಕಡೆ ತಿರುಗಿದ ಕರ್ಣನು, ಈ ಅಶ್ವಥ್ತಾಮ ಯಾವ ದೇಶದ ರಾಜಕುಮಾರ ಎಂದು  ಇವನಿಗೆ ವಿದ್ಯೆ ಕಲಿಸುತ್ತಿದ್ದೀರಿ ಎಂದು ಕೇಳಿದ.  ಇದು ಕರ್ಣನ ಉದ್ಧಟತನವಾಗಿತ್ತು. ಅಶ್ವತ್ಥಾಮ ನನ್ನ ಮಗ, ನನ್ನ ವಂಶವನ್ನು ಬೆಳೆಸಬೇಕಾದವನು, ನನ್ನ ನಂತರ ನನ್ನ ವಿದ್ಯೆಯನ್ನು ಉಳಿಸಿ ಬೆಳೆಸಬೇಕಾದವನು, ಆದ್ದರಿಂದ ನನ್ನ ಮಗನಿಗೆ ವಿದ್ಯೆ ಕಲಿಸಲು ಯಾವ ದೊಣ್ಣೆ ನಾಯಕನ ಅಪ್ಪಣೆಯು ಬೇಕಾಗಿಲ್ಲ ಎಂದು ಸಿಟ್ಟಿನಿಂದ  ಕರ್ಣನಿಗೆ ಹೇಳಬೇಕೆಂದು ತಿರುಗಿದರೆ ಕರ್ಣ  ಅಲ್ಲಿಂದ ಹೊರಟು ಹೋಗಿದ್ದನು. ಉದ್ಧಟತನ ಮಾಡುವವರಿಗೆ, ಅಜ್ಞಾನಿಗಳಿಗೆ,  ವಿದ್ಯೆ ಕಲಿಸಲು ಹಿಂದಿನವರು  ಯೋಚಿಸುತ್ತಿದ್ದರು. 

ಧರ್ಮದ ಅರಿವಿಲ್ಲದೆ ಅಸಮಾನ್ಯ ಶಕ್ತಿ ಇದ್ದವರಿಗೆ  ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳ ಜ್ಞಾನವನ್ನು ಕೊಟ್ಟರೆ, ಅದರ ಪರಿಣಾಮವನ್ನು ಎದುರಿಸುವುದು ಅಸಾಧ್ಯ ಎಂಬುದು  ತಿಳಿದ  ಜ್ಞಾನಿಗಳು ಸಂದರ್ಭಾನುಸಾರ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು.  ಜ್ಞಾನವನ್ನು ಕೊಡುವುದು, ಪಡೆಯುವುದು,  ಎರಡಕ್ಕೂ ಅದರದೇ ಆದ  ನಿಯಮಗಳಿದ್ದು  ಅದನ್ನು  ಅನುಸರಿಸಿದರೆ  ಧರ್ಮ ಸ್ಥಾಪನೆ, ಲೋಕೋದ್ಧಾರವಾಗುತ್ತದೆ. ಎಂಬ ಅಭಿಪ್ರಾಯವಿತ್ತು. 

ಇವುಗಳನ್ನೆಲ್ಲಾ ಪ್ರವಚನ, ಉಪನ್ಯಾಸ ಮಾಲಿಕೆ ಗಳಲ್ಲಿ ಕೇಳಿದ್ದು,
ಹಾಗೂ ಚಿಕ್ಕಂದಿನಲ್ಲಿ  ಹಿರಿಯರಿಂದ  ತಿಳಿದಿದ್ದು. 

ಯದಕ್ಷರ ವೇದವಿದೋ  ವದಂತಿ,  ವಿಶಂತಿ  ಯದ್ಯತಯೋ ವೀತರಾಗ !!
ಯದಿಶ್ಚಂತೋ   ಬ್ರಹ್ಮ ಚರ್ಯಂ  ತತ್ತೇ  ಪದಂ  ಸಂಗ್ರಹೇಣ  ಪ್ರವಕ್ಷ್ಯೈ!

ವೇದ-ಪಾರಂಗತರು ಯಾರನ್ನು ಅವಿನಾಶಿ ರೂಪದ ಓಂಕಾರವೆನ್ನುವರೋ.
ಸನ್ಯಾಸಾಶ್ರಮದಲ್ಲಿರುವ  ಮಹರ್ಷಿಗಳು  ಯಾರಲ್ಲಿ  ಪ್ರವೇಶಿಸುವರೋ,
ಮತ್ತು  ಯಾರನ್ನು  ಅಪೇಕ್ಷಿಸಿ   ಬ್ರಹ್ಮಚರ್ಯವನ್ನು ಆಚರಿಸುವರೋ,
ಆ  ಪರಮಪದದ  ಬಗ್ಗೆ  ನಿನಗೆ  ಸಂಗ್ರಹವಾಗಿ  ವಿವರಿಸುವೆನು. 

ವಂದನೆಗಳೊಂದಿಗೆ,

Post a Comment

Previous Post Next Post