ಉತ್ತರ ಪ್ರದೇಶದಲ್ಲಿ ಐದನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ.57 ರಷ್ಟು ಮತದಾನವಾಗಿದೆ

ಫೆಬ್ರವರಿ 28, 2022

,

8:49AM

ಉತ್ತರ ಪ್ರದೇಶದಲ್ಲಿ ಐದನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ.57 ರಷ್ಟು ಮತದಾನವಾಗಿದೆ

ಉತ್ತರ ಪ್ರದೇಶದಲ್ಲಿ ಐದನೇ ಹಂತದ ವಿಧಾನಸಭೆ ಚುನಾವಣೆಗೆ ನಿನ್ನೆ ಶಾಂತಿಯುತವಾಗಿ ಮತದಾನ ಮುಗಿದಿದ್ದು, ಅಂದಾಜು ಶೇ.57ರಷ್ಟು ಮತದಾನವಾಗಿದೆ. 12 ಜಿಲ್ಲೆಗಳ 61 ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆದಿದೆ.



ಶ್ರಾವಸ್ತಿ, ಬಹ್ರೈಚ್, ಬಾರಾಬಂಕಿ, ಅಯೋಧ್ಯಾ, ಅಮೇಥಿ, ರಾಯ್‌ಬರೇಲಿ, ಸುಲ್ತಾನ್‌ಪುರ್, ಗೊಂಡಾ, ಪ್ರತಾಪ್‌ಗಢ, ಕೌಶಂಬಿ, ಪ್ರಯಾಗ್‌ರಾಜ್ ಮತ್ತು ಚಿತ್ರಕೂಟ ಜಿಲ್ಲೆಗಳು ಚುನಾವಣೆ ನಡೆದಿವೆ. ಇವುಗಳಲ್ಲಿ, ಮತದಾನದ ಪ್ರಮಾಣವು ಬಾರಾಬಂಕಿಯಲ್ಲಿ ಅತ್ಯಧಿಕವಾಗಿದ್ದು, ಶೇಕಡಾ 66 ಕ್ಕಿಂತ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಮತ್ತು ಪ್ರತಾಪ್‌ಗಢದಲ್ಲಿ 52 ಶೇಕಡಾಕ್ಕಿಂತ ಕಡಿಮೆ ಮತದಾನವಾಗಿದೆ. ರಾಜ್ಯದಲ್ಲಿ ಏಳು ಹಂತದ ಚುನಾವಣೆಗಳು ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಈಗ ಆರು ಮತ್ತು ಏಳನೇ ಹಂತದ ಚುನಾವಣೆಗೆ ಪ್ರಚಾರ ನಡೆಸುತ್ತಿವೆ.

Post a Comment

Previous Post Next Post