ಇಂದಿನಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭ. ʻಹಿಜಾಬ್ʼ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೆ ಚಾನ್ಸ್‌ ಇಲ್ಲ!

ಬೆಂಗಳೂರು: ಹಿಜಾಬ್ ವಿವಾದದ (Hijab Row) ನಡುವೆಯೇ ದ್ವಿತೀಯ ಪಿಯುಸಿ (Second PUC) ಪ್ರಾಯೋಗಿಕ ಪರೀಕ್ಷೆ ಇಂದಿನಿಂದ ನಡೆಯಲಿದೆ.

ಪಿಯು ಬೋರ್ಡ್​ ಈಗಾಗಲೇ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಇಂದಿನಿಂದ ಪಿಯುಸಿ ಪ್ರಾಯೋಗಿಕ ಪರೀಕ್ಷೆ (Preparatory Exams) ಆರಂಭವಾಗಲಿದೆ.ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದ್ದು, ಹಿಜಾಬ್ ವಿವಾದದಿಂದ ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ.


ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಈ ಕಾರಣದಿಂದ ಹಿಜಾಬ್​​ ವಿವಾದದಿಂದ ಗೈರಾದರೆ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಲಿದೆ.

Post a Comment

Previous Post Next Post