ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ( Harsha Murder Case ) ಪೊಲೀಸರು ಈಗಾಗಲೇ ಆರು ಆರೋಪಿಗಳನ್ನು ಬಂಧಿಸಿರೋದಾಗಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾರಿಕುವಂತ ಪೊಲೀಸರಿಗೆ ಸ್ಪೋಟಕ ಮಾಹಿತಿಗಳು ತಿಳಿದು ಬಂದಿವೆ.ಈ ಮೂಲಕ ಹರ್ಷ ಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇ ಪ್ರಮುಖ ಆರೋಪಿ ಖಾಸೀಫ್ ಮೇಲೆ 17 ಕೇಸ್ ಇದೆ ಎನ್ನಲಾಗಿದೆ.
ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: 'ನಮ್ಮ ಮಕ್ಕಳು ಅಮಾಯಕರು' - ಕುಟುಂಬಸ್ಥರ ಅಳಲು
ನಗರದಲ್ಲಿ ಭಾನುವಾರದಂದು ನಡೆದಂತ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ತಂಡವನ್ನು ರಚಿಸಿ, ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಿರೋದಾಗಿ ಎಸ್ಪಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಪೊಲೀಸ್ ಇಲಾಖೆಯಿಂದ ಗೃಹ ಸಚಿವರಿಗೆ ಸಂಪೂರ್ಣ ವರದಿಯನ್ನು ಸಲ್ಲಿಸಿರೋದಾಗಿ ತಿಳಿದು ಬಂದಿದೆ.
ಶಿವಮೊಗ್ಗ: ನಾಳೆ ನಗರದ ಈ ಪ್ರದೇಶಗಳಲ್ಲಿ 'ವಿದ್ಯುತ್ ವ್ಯತ್ಯಯ'
ಪೊಲೀಸ್ ಇಲಾಖೆ ನೀಡಿದಂತ ವರದಿಯನ್ನು ನೋಡಿದಂತ ಗೃಹಸಚಿವ ಅರಗ ಜ್ಞಾನೇಂದ್ರ ಅವರೇ ಆತಂಕ ವ್ಯಕ್ಯ ಪಡಿಸಿದ್ದಾರೆ. ಬಂಧಿತ ಪ್ರಮುಖ ಆರೋಪಿ ಖಾಸೀಫ್ ಮೇಲೆ 17 ಕೇಸ್ ಗಳಿರೋದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಆರೋಪಿಗಳಉ ಕ್ರೈಂನಲ್ಲಿ ಗುರ್ತಿಸಿಕೊಂಡಿದ್ದರು, ಪೊಲೀಸರು ಮಾತ್ರ ಈ ವ್ಯಕ್ತಿಗಳ ಬಗ್ಗೆ ಕಣ್ಣಿಡದೇ ಇರೋದು ಹರ್ಷ ಹತ್ಯೆ ಪ್ರಕರಣಕ್ಕೆ ಕಾರಣ ಎನ್ನಲಾಗುತ್ತಿದೆ.
BIGG BREAKING NEWS: ರಾಜ್ಯದ 'ಶಾಲಾ-ಕಾಲೇಜು'ಗಳಲ್ಲಿ 'ಹಿಜಾಬ್' ತೆಗೆದಿಡಲು ಪ್ರತ್ಯೆಕ ಸ್ಥಳ ಕಲ್ಪಿಸಿ - 'ಪದವಿ ಪೂರ್ವ ಶಿಕ್ಷಣ ಇಲಾಖೆ' ಆದೇಶ | Hijab Row
ಬಂಧಿತ ಆರೋಪಿ ಖಾಸೀಫ್ ವಿರುದ್ಧ ವಿವಿಧೆಡೆ 17 ಪ್ರಕರಣಗಳು ದಾಖಲಾಗಿವೆ. 31 ವರ್ಷದ ಆಸೀಫ್ ಹರ್ಷ ಮೇಲೆ ಭಾನುವಾರದಂದು ಮಚ್ಚು ಬೀಸಿರೋದಾಗಿ ತಿಳಿದು ಬಂದಿದೆ. ಈ ಎಲ್ಲಾ ವರದಿಯನ್ನು ಗೃಹ ಸಚಿವರಿಗೆ ಪೊಲೀಸ್ ಇಲಾಖೆಯಿಂದ ಸಲ್ಲಿಸಲಾಗಿದ್ದು. ಆರೋಪಿಗಳ ಕ್ರೈಂ ರಿಪೋರ್ಟ್ ಬೆಚ್ಚಿ ಬೀಳಿಸುವಂತೆ ಆಗಿದೆ.
Post a Comment