ಬರೀ ಮೇಲ್ನೋಟಕ್ಕೆ ಮಾತ್ರ ಸದನದಲ್ಲಿ ಕದನ
ರಾಜಕೀಯ ವ್ಯಕ್ತಿಗಳು
ಸೇನಾನಾಯಕರಂತೆ ರಣ ರಂಗದಲ್ಲಿ ಮುಂಚೂಣಿಯಲ್ಲಿ ನಿಂತು ಸಮರ ಸಾರಿದರೆ ಅದು ಕದನವಾಗುತ್ತೇ. ಇಲ್ಲೇ ಸದನದಲ್ಲೇ ನಿಂತು ಸಾಮೂಹಿಕವಾಗಿ ಗಲಾಟೆ ಮಾಡಿದರೆ ಸಮರ ಜಯಸಿದಂತೆ ಆಗುವುದಿಲ್ಲ. ಸೈನಿಕರಂತೆ ಹೋರಾಡದಿದ್ದರು ಪರವಾಗಿಲ್ಲ. ಜನರ ಮನಸ್ಸಾದರು ಗೆದ್ದು ತೋರಿಸಿ, ಚುನಾವಣೆಯ ಕದನ ಇವರಿಗೆ ಮುಖ್ಯ ಹೊರತು ಜನರ ಕಾಳಜಿ ಅಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಯಾವುದೇ ಪಕ್ಷಕ್ಕೆ ನಷ್ಟವೇನು ಮತ್ತು ಲಾಭವೇನು ಎಂಬೆಲ್ಲ ಕುರಿತು ರಾಜಕೀಯದಲ್ಲಿ ಚರ್ಚೆಗಳು ನಡೆಯುತ್ತಲ್ಲೆ ಇರುತ್ತವೆ.
ಸದನದಲ್ಲಿ ರಾಜಕಾರಣಿಗಳು ಚರ್ಚೆ ಮಾಡುವುದು ಸಹಜವೇ ಬಿಡಿ. ಸದನದಲ್ಲಿ ಜಯಸಿದವರಿಗೆ ಯಾವ ಪ್ರಶಸ್ತಿ ಕೊಡಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಮುಂದೆಯೂ ಸದನದಲ್ಲಿ ಗೆದ್ದರಿಗೆ ಸರ್ಕಾರ ಪ್ರಶಸ್ತಿ ನೀಡಲಿ.
ನಿಷ್ಟಾವಂತರಾಗಿ,ಪ್ರಾಮಾಣಿಕವಾಗಿ ಜನರ ಕಾಳಜಿ ಜೊತೆಗೆ ಕಾರ್ಯ ಮಾಡಬೇಕಿದೆ ಜನನಾಯಕರು ಜಗಳ ಮಾಡ್ತಾ ಇದ್ದರೆ ಮಹತ್ತರವಾದ ಕಾರ್ಯದಲ್ಲಿ ಹೆಗಲೂ ಕೊಡುವರ್ಯಾರು. ಸಾರ್ವ ಜನಿಕ ಜೀವನದಲ್ಲಿ ಇರುವವರು ಅಧಿಕಾರಸ್ಥರಿಗೆ ಯಾವುದೇ ಕೆಲಸದ ವಿಷಯವಾಗಿಯೂ ಅಥವಾ ಯೋಜನೆ ಕುರಿತು ಜನರ ಪರವಾಗಿ ಇದ್ದರೆ ಮೆಚ್ಚುಗೆ ವ್ಯಕ್ತವಾಗುತ್ತವೆ.
ಕಾರ್ಯಗಳು ಮಾಡಿದರೆ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಾಗಬೇಕು. ಹಾಗಾದರೆ ಕರ್ನಾಟಕದ ರಾಜಕೀಯ ವ್ಯಕ್ತಿಗಳು ಇಷ್ಟೇಲ್ಲ ಗಮನ ಸೆಳೆಯಲು, ಹಾಗೆ ನೋಡಿದರೆ ಅವರ- ಪರ ವಿರೋಧ ಗುಂಪುಗಳು ಮೊದಲಿನಿಂದಲ್ಲೂ ಇವೆ. ಜನರಲ್ಲಿ ಹೊಸ ಕನಸನ್ನು ಬಿತ್ತುವ ಜಾಣ್ಮೆ ತೊರಬಲ್ಲ ನಾಯಕನ ಲಕ್ಷಣ ಇರಬೇಕು. ನಿರಂತರವಾಗಿ ರಾಜಕೀಯದಲ್ಲಿ ತೊಡಗಿ ಜನ ಮೆಚ್ಚುಗೆ ಕಾರ್ಯವಾಗಲಿ. ರಾಜಕಾರಣಕ್ಕೆ ಸಂಚಲನಮೂಡಿಸುವಂತರಾಗಬೇಕು. ಹಾಗಂತ ಕದನ ಮಾಡುತ್ತಾ ಇದ್ದಾರೆ ಜನ ಸುಮ್ಮನೆ ಇರುತ್ತಾರಾ. ಸದನದಲ್ಲಿ ಕದನದ ಬಿಟ್ಟು ಪ್ರಾಮಾಣಿಕ ನಾಯಕರಾಗಿ ,ಸೃಜನಶೀಲರಾಗಿ.
Post a Comment