*ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಭೂ ಸ್ವಾಧೀನ ತಡೆಯಾಜ್ಞೆ ತಂದ ರೈತರು*

*ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಭೂ ಸ್ವಾಧೀನ ತಡೆಯಾಜ್ಞೆ ತಂದ ರೈತರು*
 ದೊಡ್ಡಬಳ್ಳಾಪುರ
ನಂದಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಹಂತದಲ್ಲಿ ನಂದಿ ಬೆಟ್ಟದ ಬುಡದಲ್ಲಿ ಪಾರ್ಕಿಂಗ್ ನಿರ್ಮಾಣಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ರೈತರ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಕುರಿತು ರೈತ ಹೆಗ್ಗಡಿಹಳ್ಳಿ ಮುನಿನಾರಾಯಣಪ್ಪ ತನ್ನ ಜಮೀನಿನಲ್ಲಿ ಭೂ ಸ್ವಾಧೀನ ತಡೆಯುವಲ್ಲಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಆದೇಶ ತಂದಿದ್ದಾರೆ. 
ಈ ನಿಟ್ಟಿನಲ್ಲಿ ಪಾರ್ಕಿಂಗ್ ಕಾಮಗಾರಿ ಕಾರ್ಯವನ್ನು ನಿಲ್ಲಿಸುವಂತೆ ರೈತ ಸಂಘ ಮತ್ತು ಸಂತ್ರಸ್ತ ರೈತರು ಪ್ರತಿಭಟನೆ ಮುಂದಾಗಿದ್ದು ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಫೆಕ್ಟರ್ ಎಂ.ಬಿ.ನವೀನ್‌ಕುಮಾರ್ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಿರ್ಧಾರವನ್ನು ಕೈ ಬಿಟ್ಟರು. 
ಈ ಕುರಿತು ಮಾತನಾಡಿದ ಭೂಮಿ ಕಳೆದುಕೊಂಡ ಮುನಿನಾರಾಯಣಪ್ಪ, ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಈ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ. ಬಗರ್ ಹುಕ್ಕುಂ ಸಾಗುವಳಿ ಅಡಿ 53ಅರ್ಜಿಯನ್ನು 1998ರಲ್ಲಿ ಸಲ್ಲಿಸಿದ್ದೆ. ಈ ಕುರಿತು  ಕಂದಾಯ ಇಲಾಖೆ 2017-18ನೇ ಸಾಲಿನಲ್ಲಿ 94ಸರ್ವೆ ನಂಬರಿನಲ್ಲಿ 1.5 ಎಕರೆ ಭೂಮಿಯನ್ನು ಸ್ಕೆಚ್ ಕೂಡ ಮಾಡಿದ್ದಾರೆ. ಈ ಕುರಿತು ಹಕ್ಕು ಪತ್ರ ನೀಡುವಂತೆ ಅಂದಿನ ಶಾಸಕ ಪಿಳ್ಳಮುನಿಶಾಮಪ್ಪ ಕೂಡ ಹಕ್ಕು ಪತ್ರ ನೀಡುವಂತೆ ಶಿಪಾರಸ್ಸು ಮಾಡಿದ್ದರು. ಇದೆ ಭೂಮಿಯಲ್ಲಿ ರಾಗಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಭೂ ಸ್ವಾಧೀನ ಕುರಿತು ಹೈ ಕೋರ್ಟ್ ಕೂಡ ನಮ್ಮ ಪರವಾಗಿ ತಡೆಯಾಜ್ಙೆ ನೀಡಿದೆ. ಆದರೆ ಈ ಕುರಿತು ತಡೆಯಾಜ್ಞೆ ಆದೇಶವನ್ನೂ ನೋಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕೋರ್ಟ್ ಅದೇಶ ಪ್ರತಿಯೊಂದಿಗೆ ಮನವಿ ಪತ್ರ ನೀಡಿದ್ದೇವೆ. ಆದರೂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು  ದೂರಿದರು. 
ರೈತ ಸಂಘದ ತಾಲೂಕು ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಮಾತನಾಡಿ, ಸರ್ಕಾರದ ಅಭೀವೃದ್ಧಿ ಯೋಜನೆಗಳಿಗೆ ರೈತರು ಎಂದು ಅಡ್ಡಿ ಬಂದಿಲ್ಲ. ರೈತರ ಸಮಾದಿ ಮೇಲೆ ಅಭಿವೃದ್ಧಿ ಯೋಜನೆ ಮಾಡಬೇಡಿ. ಈ ಕುರಿತು ರೈತರರಿಗೆ ನ್ಯಾಯ ದೊರುಕುವ ಹಂತದಲ್ಲಿ ನಿಮ್ಮ ಅಭಿವೃದ್ಧಿ ಯೋಜನೆ ಇರಲಿ. ರೈತರಿಗೆ ಬದಲಿ ಭೂಮಿ ನೀಡಿ, ಇಲ್ಲವಾದಲ್ಲಿ ಈ ಭೂಮಿಯನ್ನು ರೈತರಿಗೆ ಬಿಟ್ಟುಕೊಡಿ ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು. 
ಈ ಪೈಕಿ ದೊಡ್ಡಬಳ್ಳಾಪುರ ತಾಲೂಕಿನ ಬಗರ್ ಹುಕ್ಕುಂ 53ಪಾರಂ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಹೆಗ್ಗಡಿಹಳ್ಳಿ ಮುನಿನಾರಾಯಣಪ್ಪ 1.20 ಎಕರೆ ಹಾಗು ಚೆಲುವ ಮೂರ್ತಿಯ 2 ಎಕರೆ ಸೇರಿದಂತೆ ಒಟ್ಟು3.20 ಎಕರೆ  ಭೂಮಿಯನ್ನು ಪಾರ್ಕಿಂಗ್‌ಗಾಗಿ ಒತ್ತುವರಿ ಮಾಡಲಾಗಿದೆ. ಈಮ ಕುರಿತು ಈ ಹಿಂದೆ ಪ್ರವಾಸೋಧ್ಯಮ ಮಂತ್ರಿಯಾಗಿದ್ದ ಸಿ.ಪಿ.ಯೋಗೇಶ್ವರ್ ಅವರು ಸ್ಥಳಕ್ಕೆ ಬಂದು ರೈತರ ಸಮಸ್ಯೆ ಬಗೆಹರಿಸುವುದಾಗಿ ಬರವಸೆ ನೀಡಿದ್ದರು. ಆದರೆ ಮಾರನೇ ದಿನವೇ ಅವರು ಪ್ರವಾಸೋದ್ಯಮ ಮಂತ್ರಿಗಿರಿಯಿಂದ ಕೆಳಗಿಳಿದಿದ್ದರು. ಮತ್ತೆ ಇಲ್ಲಿನ ಕಾಮಗಾರಿ ಆರಂಭವಾದ ಮೇಲೆ ಹೈ ಕೋರ್ಟಿನಿಂದ ಕೆಲಸ ನಿಲ್ಲಿಸುವಂತೆ ರೈತ ಮುನಿನಾರಾಯಣಪ್ಪ ತಡೆಯಾಜ್ಞೆ ತಂದಿದ್ದಾರೆ. 

ಈ ಸಂದರ್ಭದಲ್ಲಿ ರೈತ ಸಂಘದ ತಾ.ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಆರ್.ಸತೀಶ್, ರೈತ ಮುಖಂಡರಾದ ವಸಂತ್, ಮುನಿನಾರಾಯಣಪ್ಪ, ಚೋಗೊಂಡನಹಳ್ಳಿ ನಾಗರಾಜು, ಹನುಮಂತೇಗೌಡ, ನಾರಾಯಣಸ್ವಾಮಿ, ವಾಸುದೇವನಹಳ್ಳಿ ಕೃಷ್ಣಪ್ಪ, ಸಂತ್ರಸ್ಥ ರೈತ ಚೆಲುವಮೂರ್ತಿ ಇದ್ದರು.


: ಶ್ರೀಧರ ಮೂರ್ತಿ ತಾಲೂಕು ರಾಜ್ಯ ರೈತ ಸಂಘ ಗೌರವಾಧ್ಯಕ್ಷ
 
*"ಈ ಹಿಂದೆ ಕಾಂಗ್ರೆಸ್ ಆಡಳಿತದ ಸರ್ಕಾರ ಚಿಕ್ಕಬಳ್ಳಾಪುರ ತಾಲೂಕಿನ ಕುಡವತಿ 9.20 ಎಕರೆ ಭೂಮಿಯನ್ನು ಪಾರ್ಕಿಂಗ್‌ಗಾಗಿ ಮೀಸಲಿಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಪೂರ್ವದಿಂದ ಪಶ್ಚಿಮಕ್ಕೆ ಬಂದಿದ್ದು, ನಂದಿಬೆಟ್ಟದ ತಪ್ಪಲಿನ ಚಿಕ್ಕಬಳ್ಳಾಬಳ್ಳಾಪುರ-ದೊಡ್ಡಬಳ್ಳಾಪುರ ಗಡಿಯ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತಿವೆ"*

Post a Comment

Previous Post Next Post