ಜಯ ಏಕಾದಶಿ ಪ್ರಯುಕ್ತ ಈ ಮಾಹಿತಿ
ಮಲ್ಯಾವನ ಮತ್ತು ಪುಷ್ಯಾವತಿ ಎನ್ನುವ ಇಬ್ಬರು ಗಂಧರ್ವ ದಂಪತಿಗಳು ಇಂದ್ರನ ಆಸ್ಥಾನದಲ್ಲಿ ಹಾಡನ್ನು ಹಾಡುತ್ತಿರುವಾಗ ಇಬ್ಬರ ಮನಸ್ಸು ಪ್ರೀತಿಯಲ್ಲಿ ಕರಗಿಹೋಯಿತು.
ಇದರಿಂದ ಅವರ ಗಮನ ಹಾಡಿನತ್ತ ಇರದೆ ಹಾಡು ಲಯ ತಪ್ಪಿತು. ಇದರಿಂದ ಕೋಪಗೊಂಡ ಇಂದ್ರ ದೇವನು ಗಂಧರ್ವರಿಗೆ ಈಗಲೇ ನಿಮ್ಮ ಜನ್ಮ ಸ್ವರ್ಗವನ್ನು ತೊರೆದು ಭೂಮಿಗೆ ಹೋಗಿ ಅಲ್ಲಿ ರಕ್ತಪಿಶಾಚಿಗಳಾಗಿ ಜೀವಿಸುವಂತಾಗಲಿ ಎಂದು ಶಾಪವನ್ನು ನೀಡುತ್ತಾನೆ.
ಇದರಿಂದ ಈ ಗಂಧರ್ವ ದಂಪತಿಗಳು ಹಿಮಾಲಯದಲ್ಲಿ ರಕ್ತಪಿಶಾಚಿಗಳಾಗಿ ಉಳಿಯಬೇಕಾಯಿತು.
ಮಾಘ ಶುಕ್ಲ ಏಕಾದಶಿ ದಿನದಂದು ಈ ದಂಪತಿಗಳು ಅತಿಯಾದ ಚಳಿಯಿಂದಾಗಿ ಏನು ಆಹಾರವನ್ನು ಸೇವಿಸದೇ ಉಪಾವಸವಿದ್ದು ಶೀತದಿಂದ ಬಳಲಿ ಸಾವನ್ನಪ್ಪುತ್ತಾರೆ.
ಅವರಿಗೆ ತಿಳಿಯದೇ ಸರ್ವೈಕಾದಶಿ ವ್ರತ ಮಾಡಿರುವುದರಿಂದ ಮುಂದಿನ ಜನ್ಮದಲ್ಲಿ ಮತ್ತೆ ಸ್ವರ್ಗದಲ್ಲಿ ಜನಿಸುತ್ತಾರೆ.
ಇದರಿಂದ ಆಶ್ಚರ್ಯಗೊಂಡ ಇಂದ್ರನು ಇದಕ್ಕೆ ಕಾರಣವೇನೆಂದು ತಿಳಿಯಲು ಮುಂದಾದಾಗ ಆತನಿಗೆ ಈ ವ್ರತದ ಬಗ್ಗೆ ತಿಳಿಯುತ್ತದೆ.
ಶಾಪದಿಂದ ಮುಕ್ತ ರಾಗಿ ಗಂದರ್ವ ದಂಪತಿಗಳು ಮತ್ತೆ ಸ್ವರ್ಗವನ್ನು ಸೇರುತ್ತಾರೆ.
ಜಯ ಏಕಾದಶಿ ಮಹತ್ವ ತಿಳಿದ ನೀವು ತಪ್ಪದೆ ಈ ಏಕಾದಶಿ ಆಚರಣೆ ಮಾಡಿ ಶ್ರೀ ಹರಿಯ ಕೃಪೆ ಪಡೆದುಕೊಳ್ಳಿ.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
Post a Comment