ಬಿಜೆಪಿ ಸಂತಾಪ

[16/02, 11:05 AM] Karunakar. Khasale. Bjp. Media: 16-2-2022
ಪ್ರಕಟಣೆಯ ಕೃಪೆಗಾಗಿ
ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನಕ್ಕೆ 
 ನಳಿನ್‍ಕುಮಾರ್ ಕಟೀಲ್ ಸಂತಾಪ
ಬೆಂಗಳೂರು: ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಚೆÀನ್ನವೀರ ಕಣವಿ ಅವರು ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಪ್ರಸಿದ್ಧರಾಗಿದ್ದರು. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು. ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಕಣವಿಯವರು ಜನಿಸಿದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು ಎಂದು ವಿವರಿಸಿದ್ದಾರೆ.
ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿμÁ್ಠನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ ಎಂದು ತಿಳಿಸಿದ್ದಾರೆ.
ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

                                                                   

                                                                   
 (ಕರುಣಾಕರ ಖಾಸಲೆ)
 ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ
[16/02, 1:24 PM] Karunakar. Khasale. Bjp. Media: 16-02-2022
ಪ್ರಕಟಣೆಯ ಕೃಪೆಗಾಗಿ
ಶ್ರೇಷ್ಠ ಬದುಕಿನ ಕಾರಣಕ್ಕೆ ಜಯಂತಿ ಆಚರಿಸಿ ಆದರ್ಶ ಗುಣಗಳ ಮನನ: ಸಿ.ಟಿ.ರವಿ
ಬೆಂಗಳೂರು: ಬದುಕಿನ ಶ್ರೇಷ್ಠತೆಯ ಕಾರಣಕ್ಕೆ ಸಂತ ಸೇವಾಲಾಲ್, ಬಸವಣ್ಣ, ರವಿದಾಸ, ಡಾ. ಅಂಬೇಡ್ಕರ್, ನಾರಾಯಣಗುರು, ಕಬೀರರನ್ನು ನಾವು ನೆನಪಿಸಿ ಅವರ ಆದರ್ಶ ಗುಣಗಳನ್ನು ಮನನ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಪ್ರಭಾರಿಗಳಾದ ಸಿ.ಟಿ. ರವಿ ಅವರು ತಿಳಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾದ ವತಿಯಿಂದ ಶ್ರೀ ಸಂತ ರವಿದಾಸ ಅವರ ಜನ್ಮದಿನದ ಪ್ರಯುಕ್ತವಾಗಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಏರ್ಪಡಿಸಿದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರವಿದಾಸರನ್ನು ದೇವರೆಂದು ಉತ್ತರ ಭಾರತದಲ್ಲಿ ಪರಿಭಾವಿಸುತ್ತಾರೆ. ಇಲ್ಲಿ ಬಸವಣ್ಣ, ಕನಕದಾಸರು, ಪುರಂದರದಾಸರು ಮತ್ತು ಸರ್ವಜ್ಞರನ್ನು ನೋಡುವ ಹಾಗೆ ಅಲ್ಲಿ ರವಿದಾಸರಿಗೆ ವಿಶೇó ಸ್ಥಾನ ನೀಡುತ್ತಾರೆ. ಮಹಾನ್ ವ್ಯಕ್ತಿಗಳ, ಸಂತರ ಹಾಗೂ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಣೆಯು ನಮ್ಮ ಬದುಕಿಗೆ ಪ್ರೇರಣೆ ನೀಡಬೇಕು ಎಂದು ಆಶಿಸಿದರು.
ಭಕ್ತಿಯ ಮಾರ್ಗ ಹಿಡಿದು ಭಕ್ತಿ ಚಳವಳಿ ಆರಂಭಿಸಿದ ಅವರು, ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸುವ ಆಶಯದೊಂದಿಗೆ ಸಾಮಾಜಿಕ ಸುಧಾರಣೆಯ ಹರಿಕಾರರಾಗಿ ಅವರು ಕೆಲಸ ಮಾಡಿದ್ದರು. ಇದರಿಂದ ಸಂತ ರವಿದಾಸರು ಇಂದಿಗೂ ಪೂಜಾರ್ಹರು ಎಂದು ವಿಶ್ಲೇಷಿಸಿದರು.
ಹೇಗೆ ಡಾ. ಅಂಬೇಡ್ಕರÀರನ್ನು ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲವೋ ಹಾಗೇ ಸಂತರಿಗೆ ಜಾತಿ, ಭಾಷೆ, ಪ್ರಾಂತ್ಯದ ಗೋಡೆ ಇರುವುದಿಲ್ಲ. ಬಸವಣ್ಣ, ಕನಕದಾಸರನ್ನು ಒಂದು ಜಾತಿಯ ಫ್ರೇಮ್ ಒಳಗೆ ಸೀಮಿತಗೊಳಿಸಿದರೆ ಅದು ಅವರ ವಿಚಾರಧಾರೆ, ಬೋಧನೆಗಳಿಗೆ ಮಾಡಿದ ಅಪಮಾನ ಎನಿಸುತ್ತದೆ ಎಂದು ತಿಳಿಸಿದರು.
ಸಮಾಜಮುಖಿ ರಾಜರನ್ನು ಮಾತ್ರ ನಾವು ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ಒಳ್ಳೆಯದನ್ನು ಬಿಟ್ಟು ಹೋದ ಮತ್ತು ಸ್ವಾರ್ಥ ಮೀರಿ ಸಮಾಜಮುಖಿ ಕಾರ್ಯ ಮಾಡಿದವರನ್ನು ನಾವು ನೆನಪು ಮಾಡಿಕೊಳ್ಳುತ್ತೇವೆ. ಅದೇರೀತಿ ಸಂತ ರವಿದಾಸರನ್ನೂ ನೆನಪಿಸುತ್ತೇವೆ ಎಂದರು. 
ಪರಪೀಡನೆಯೇ ಪಾಪ. ಪರೋಪಕಾರದಿಂದ ಪುಣ್ಯ ಸಂಚಯ ಆಗುತ್ತದೆ. ಅದರಿಂದ ಸ್ವರ್ಗಕ್ಕೆ ಹೋಗಲು ಸಾಧ್ಯ ಎಂದು ಸಂತರು ಮಾರ್ಗದರ್ಶನ ಮಾಡಿದ್ದಾರೆ. ಜಾತಿ ಕಾರಣಕ್ಕೆ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು. ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದ ಸಂತ ರವಿದಾಸರ ಮತಾಂತರಕ್ಕೆ ಸಿಖಂದರ್ ಲೋಧಿ ಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ ಎಂದು ವಿವರಿಸಿದರು.
ಬಸವಣ್ಣನಂತೆಯೇ ಕಾಯಕದ ಪ್ರೀತಿ- ಮಹತ್ವವನ್ನು ರವಿದಾಸರು ಪ್ರತಿಪಾದಿಸಿದ್ದರು. ಯಾವುದೇ ಕಸುಬು ಕೀಳಲ್ಲ ಎಂಬ ವಿಷಯವನ್ನು ಜನರಿಗೆ ತಿಳಿಸಿದ್ದರು ಎಂದ ಅವರು, ವಾಸ್ತವಿಕ ನೆಲೆಯಲ್ಲಿ ಬಿಜೆಪಿಯು ಅಂಬೇಡ್ಕರರನ್ನು ನೋಡಿದ್ದು ಮತ್ತು ಮೊಸಳೆಕಣ್ಣೀರು ಸುರಿಸುವ ಜನರು ಹಿಂದೆ ಅವರನ್ನು ನಡೆಸಿಕೊಂಡ ರೀತಿಯನ್ನು ಹೋಲಿಸಿ ನೋಡಬೇಕಿದೆ ಎಂದು ನುಡಿದರು.
ಅಂಬೇಡ್ಕರರನ್ನು ಸೋಲಿಸಿದ ಪಕ್ಷ ಯಾವುದು? ಬಿಜೆಪಿಯಾ? ಯಾವ ಕಾರಣಕ್ಕೆ ಅಂಬೇಡ್ಕರರು ಕಾಂಗ್ರೆಸ್ಸನ್ನು ಉರಿಯುವ ಮನೆ ಎಂದು ಕರೆದರು ಎಂದು ಪ್ರಶ್ನಿಸಿದರು. ಈ ಕುರಿತು ನಾವು ಆಲೋಚಿಸಬೇಕಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಆನಸಂಘವು ಅವರಿಗೆ ಬೆಂಬಲ ನೀಡಿತ್ತು ಎಂದು ಅವರು ವಿವರಿಸಿದರು.
ನಮ್ಮ ದೇಶದಲ್ಲಿ ಕಾಂಗ್ರೆಸ್ಸಿಗರು ಭಾರತರತ್ನವನ್ನು ಅವರಿಗೆ ಅವರೇ ಕೊಟ್ಟುಕೊಂಡರು. ಆದರೆ, ಅಟಲ್‍ಜಿ ಪ್ರಸ್ತಾಪದ ಬಳಿಕ ಅಂಬೇಡ್ಕರರಿಗೆ ಭಾರತರತ್ನ ನೀಡಲಾಯಿತು ಎಂದು ತಿಳಿಸಿದರು. ದೇಶ ವಿಭಜನೆಯ ಪ್ರಸ್ತಾಪವನ್ನು ಡಾ. ಅಂಬೇಡ್ಕರ್ ವಿರೋಧಿಸಿ ಅಂದಿನ ಪ್ರಬಲರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ತಿಳಿಸಿದರು.
ವಿಚಾರದ ಚಿಂತನೆಗಾಗಿ ಮಹಾತ್ಮರ ಜಯಂತಿಯನ್ನು ಆಚರಿಸಬೇಕು. ಶಿಕ್ಷಣ- ಪ್ರಶ್ನಿಸುವ ಮನೋಭಾವದಿಂದ ಸಂಘಟನೆಯನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದರು. ಅಂಬೇಡ್ಕರ್ ಅವರ ಪಂಚಧಾಮಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಉತ್ತರ ಭಾರತದಲ್ಲಿ ದೇವರಂತೆ ಸಂತ ರವಿದಾಸ್‍ಜಿ ಅವರನ್ನು ಆರಾಧಿಸುತ್ತಾರೆ. ಅವರ ಜಯಂತಿ ಆಚರಿಸಿ ಅವರ ಸೇವೆಯನ್ನು ಕೊಂಡಾಡುತ್ತಾರೆ ಎಂದರು.
ರವಿದಾಸರು ದಲಿತ ಸಮಾಜದ ನ್ಯೂನತೆ ಹೋಗಲಾಡಿಸಲು ವಿಶೇóಷ ಪ್ರಯತ್ನ ಮಾಡಿದ್ದ ಸಂತರು ಎಂದ ಅವರು, ಬಿಜೆಪಿ ದಲಿತರು, ಹಿಂದುಳಿದವರನ್ನು ಒಳಗೊಂಡು ಬೆಳೆಯುತ್ತಿದೆ ಎಂದು ತಿಳಿಸಿದರು.
ಅಂಬೇಡ್ಕರರ ವಿರುದ್ಧ ಇರುವ ಪಕ್ಷ ಬಿಜೆಪಿ, ಸಂವಿಧಾನ ತೆಗೆದೇ ಬಿಡುತ್ತಾರೆ ಎಂಬ ಅಪಪ್ರಚಾರ ಮಾಡುವ ಕಾರ್ಯ ವಿರೋಧ ಪಕ್ಷವಾದ ಕಾಂಗ್ರೆಸ್‍ನಿಂದ ನಡೆಯುತ್ತಿದೆ. ಈಗ ದಲಿತರ್ಯಾರೂ ಕಾಂಗ್ರೆಸ್ ನಲ್ಲಿ ಉಳಿದಿಲ್ಲ. ದಲಿತರು ಬಿಜೆಪಿ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಶಾಸಕರಾದ ನಂಜುಂಡಸ್ವಾಮಿ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್, ರಾಜ್ಯ ಕಾರ್ಯದರ್ಶಿಗಳಾದ ವೆಂಕಟೇಶ್ ದೊಡ್ಡೇರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
                                                                  

                                                                   
  (ಕರುಣಾಕರ ಖಾಸಲೆ)
 ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post