*ಮೂರ್ಖರಿಗೆ ವಿದ್ಯೆ ಕೊಡಬಾರದು ಎಂಬುದನ್ನು ಅಶ್ವತ್ಥಾಮನಿಂದ ಕಲಿಯಬೇಕು.*
ಕೌರವನ ಅಂತ್ಯವಾದ ಬಳಿಕ ಅಶ್ವತ್ಥಾಮನು ಕೆರಳಿದ.ಹತಾಶನಾದ.ಆದು ಪಾಂಡವರನ್ನು ಬಲಿ ತೆಗೆದುಕೊಳ್ಳಲೇ ಬೇಕು ಎಂಬ ಸಂಕಲ್ಪಕ್ಕೆ ತಿರುಗುತ್ತದೆ. ನೇರ ವೇದವ್ಯಾಸರ ಆಶ್ರಮಕ್ಕೆ ನಡೆದ.ಅನುಗ್ರಹಕ್ಕಾಗಿ.ಅಷ್ಟರಲ್ಲಿ ಪಾಂಡವರು ವಾಸುದೇವನ ಸಹಿತ ಅಶ್ವತ್ಥಾಮನ ಬೇಟೆಗೆ ಬಂದೇ ಬಿಟ್ಟರು.ಹತಾಶನಾದ ಅಶ್ವತ್ಥಾಮನು ಆಶ್ರಮದ ಮಾಡಿನಿಂದ ಒಂದು ಹುಲ್ಲನ್ನು ಕಿತ್ತು ಅದಕ್ಕೆ ಬ್ರಹ್ಮಾಸ್ತ್ರ ಪ್ರಯೋಗಿಸಿ ಪಾಂಡವರತ್ತ ಪ್ರಯೋಗಿಸಿದ.ಬ್ರಹ್ಮಾಸ್ತ್ರಕ್ಕೆ ಬ್ರಹ್ಮಾಸ್ತ್ರವೇ ಪ್ರತಿ ಅಸ್ತ್ರ.ತಕ್ಷಣ ವಾಸುದೇವನು ಅರ್ಜುನನಿಗೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಆದೇಶಿಸಿದ. ಇಬ್ಬರ ಬ್ರಹ್ಮಾಸ್ತ್ರಗಳೂ ಪರಸ್ಪರ ಇನ್ನೇನು ಡಿಕ್ಕಿ ಹೊಡೆದು ಸ್ಪೋಟಗೊಳ್ಳುವುದರಲ್ಲಿತ್ತು.ಆಗ ವೇದವ್ಯಾಸ ದೇವರು ತನ್ನೆರಡು ಕೈಗಳಿಂದ ತಡೆದರು.ಅವರು ಮಾತ್ರ ಒಂದು ಒಂದು ಕ್ಷಣಕ್ಕೆ ಮಾತ್ರ ಅದನ್ನು ತಡೆಯುವ ಸಾಮರ್ಥ್ಯ ಹೊಂದಿದವರು. ಯಾಕೆಂದರೆ ವಿದ್ಯಾಗುರು, ವಿಷ್ಣುವಿನ ಅವತಾರವೇ ಅವರು. ಅಸ್ತ್ರಗಳನ್ನು ತಡೆದು,' ಎಲೈ ಅರ್ಜುನಾ,ಎಲೈ ಅಶ್ವತ್ಥಾಮಾ ಈ ಬ್ರಹ್ಮಾಸ್ತ್ರದ ಪ್ರಯೋಗದ ಪರಿಣಾಮ ತಿಳಿದಿದೆಯೇ. ಇದೇನಾದರೂ ಪರಸ್ಪರ ಸಂಘರ್ಷಕ್ಕಿಳಿದರೆ ಇಡೀ ಜಗತ್ತಿನ ಚರಾಚರವೆಲ್ಲ ಸುಟ್ಟು ಕರಕಲಾದೀತು. ಇದು ಪ್ರಯೋಗಿಸಲಿಕ್ಕಿರುವುದಲ್ಲ. ಯಾರಲ್ಲಿ ಬ್ರಹ್ಮಾಸ್ತ್ರ ವಿದ್ಯೆ ಇರುವುದೋ ಅವರನ್ನು ಯಾವ ಅಸ್ತ್ರಗಳೂ ಸ್ಪರ್ಷಿಸೋದಿಲ್ಲ. ಇಂತಹ ಬ್ರಹ್ಮಾಸ್ತ್ರವನ್ನೇ ಮನುಕುಲದ ನಾಶಕ್ಕೆ ಪ್ರಯೋಗಿಸುತ್ತಿದ್ದೀರಲ್ವೇ? ನಿಮ್ಮ ಗುರು ಇದನ್ನು ಹೇಳಿ ಕೊಡಲಿಲ್ಲವೇ? ಕೇವಲ ಅಶ್ವತ್ಥಾಮ ಮತ್ತು ಅರ್ಜುನರಿಗೆ ಈ ವಿದ್ಯೆಯನ್ನು ಗುರು ದ್ರೋಣರು ಹೇಳಿಕೊಟ್ಟದ್ದು. ಧರ್ಮ ರಕ್ಷಣೆ ಮಾಡುವ ಅರ್ಜುನನನ್ನು ಯಾವ ಅಸ್ತ್ರಗಳೂ ಮುಟ್ಟದಿರಲಿ ಎಂಬ ಉದ್ದೇಶಕ್ಕಾಗಿ ಅರ್ಜುನನಿಗೆ ಅಸ್ತ್ರಪ್ರಧಾನ ಮಾಡಿದರೆ, ಇನ್ನು ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಅಶ್ವತ್ಥಾಮನ ಜೀವ ರಕ್ಷಣೆಗಾಗಿ ಉಪದೇಶ ಮಾಡಿದ್ದರು.ಸ್ವಯಂ ಆಚಾರ್ಯರೇ ಇದನ್ನು ಪ್ರಯೋಗಿಸಲು ಹೊರಟಾಗ ಸ್ವಯಂ ಬ್ರಹ್ಮನೇ ತಡೆದರು. ಇಂತಹ ಅಸ್ತ್ರವನ್ನು ನೀವಿಬ್ಬರೂ ಉಪಸಂಹಾರ ಮಾಡಿಕೊಂಡು ಹಿಂದೆ ಪಡೆಯದಿದ್ದರೆ ಮುಂದಿನ ಚರಿತ್ರೆಯಲ್ಲಿ ನಿಮಗಿಬ್ಬರಿಗೂ ಶಾಶ್ವತವಾದ ಕಲಂಕ ತಪ್ಪದು.ಕರೆಯಿರಿ ಅಸ್ತ್ರವನ್ನು ಹಿಂದಕ್ಕೆ ' ಎಂದರು.ಅರ್ಜುನನು ವೇದವ್ಯಾಸರ ಮಾತಿಗೆ ಶಿರಬಾಗಿ ನಮ್ಮ ತಲೆ ಹೋದರೂ ಚಿಂತೆ ಇಲ್ಲ.ಜಗತ್ತು ಉಳಿಯಬೇಕು ಎಂದು ಅಸ್ತ್ರವನ್ನು ಹಿಂದಕ್ಕೆ ಪಡೆಯುತ್ತಾನೆ.ಆದರೆ ಅಶ್ವತ್ಥಾಮನಿಗೆ ಅಸ್ತ್ರದ ಉಪಸಂಹಾರ ವಿದ್ಯೆ ಗೊತ್ತಿಲ್ಲ.ಅದನ್ನು ಹೇಳಿಯೇ ಬಿಟ್ಟ. ಆಗ ವ್ಯಾಸರು ,' ಹೋಗಲಿ ಬಿಡು ಆದರೆ ಇದರ ದಿಶೆಯನ್ನು ತಪ್ಪಿಸಿ ನಭೋ ಮಂಡಲದ ಕ್ಷುದ್ರ ಗ್ರಹರನ್ನಾದರೂ ನಾಶ ಮಾಡು' ಎಂದರು. ಆದರೆ ಕಂತ್ರಿ ಅಶ್ವತ್ಥಾಮ ಹಾಗೆ ಮಾಡದೆ ಅದರ ದಿಶೆಯನ್ನು ಉತ್ತರೆಯ ಗರ್ಭದ ನಾಶದತ್ತ ತಿರುಗಿಸಿದ.ಹಾಗಾದ್ರೂ ಪಾಂಡವರ ಪೀಳಿಗೆ ನಾಶವಾಗಲಿ ಎಂದು. ಆಗ ಸ್ವತಃ ವಾಸುದೇವನೇ ಮುಂದೆ ಬಂದು,' ಹೇ ಮೂರ್ಖಾ,ಧರ್ಮ ಸಂಸ್ಥಾಪನೆ ಮಾಡಲು ಬಂದ ನನ್ನ ಕಾರ್ಯ ಮುಗಿತು ಎಂದಿದ್ದರೆ,ಆ ಪೀಳಿಗೆಯನ್ನೇ ನಾಶಮಾಡಲು ಹೊರಟೆಯಾ.ಇದೋ ಅದನ್ನು ನನ್ನ ಸುದರ್ಶನವೇ ಮುಗಿಸಲಿದೆ.'ಎಂದು ಸುದರ್ಶನವನ್ನು ಬ್ರಹ್ಮಾಸ್ತ್ರವನ್ನು ನಿಷ್ಕ್ರಿಯಗೊಳಿಸಲು ಕಳುಹಿಸಿದ.ನಂತರ,' ಎಲೈ ಪಾಪಿ ಬ್ರಾಹ್ಮಣನೇ,ನೀನು ಅಸುರರಿಗಿಂತಲೂ ಕೀಳು.ಬ್ರಾಹ್ಮಣ ವಧೆ ಮಾಡಿದರೆ ಬ್ರಹ್ಮ ಹತ್ಯಾದೋಷ ಬರುತ್ತದೆ.ಅದು ಬೇಡ.ನಿನ್ನ ಪರಾಕ್ರಮವು ನಿನ್ನ ಹಣೆಯಲ್ಲಿರುವ ಮಣಿಯ ಆಧಾರದಲ್ಲಿದೆ.ಅದನ್ನೇ ಕಿತ್ತು ತೆಗೆಸುತ್ತೇನೆ.ನೀನು ಚಿರಂಜೀವಿಯಾಗಿರೋದ್ರಿಂದ ಆ ವೇಧನೆಯಲ್ಲೇ ನಿನ್ನ ಜೀವನವು ನರಕಮಯವಾಗಲಿ' ಎಂದು ಪ್ರಪ್ರಥಮಬಾರಿಗೆ ಶ್ರೀ ಕೃಷ್ಣನು ಶಾಪವನ್ನೂ ಕೊಡುತ್ತಾನೆ.ಬಳಿಕ ಭೀಮಸೇನನಿಗೆ ಶ್ರೀ ಕೃಷ್ಣನು,
' ಹೇ ವೃಕೋಧರಾ,ಈಗ ಸುಸಮಯ.ಯಾವತ್ತಿನ ವರೆಗೆ ಬ್ರಹ್ಮಾಸ್ತ್ರವು ಅಶ್ವತ್ಥಾಮನಲ್ಲಿ ಇತ್ತೋ ಆವತ್ತಿನ ವರೆಗೆ ಅವನ ಶರೀರವನ್ನು ಮುಟ್ಟುವ ಹಾಗಿಲ್ಲ.ಆದರೆ ಈ ಮೂರ್ಖ ಆ ಅಸ್ತ್ರವನ್ನು ಹೊರಗೆ ಕಳುಹಿಸಿ ಬ್ರಹ್ಮತ್ವ ಕಳಕ್ಕೊಂಡ. ಈಗ ನೀನು ಅವನ ಹಣೆಯಲ್ಲಿದ್ದ ಮಣಿಯನ್ನು ಸುಲಭವಾಗಿ ಕೀಳಬಹುದು. ಅವನ ಪ್ರತಿರೋಧ ಶಕ್ತಿಯನ್ನು ಅವನೇ ಕಳೆದುಕೊಂಡಾಗಿದೆ.' ಎಂದು ಭೀಮಸೇನನಿಗೆ ಶ್ರೀಕೃಷ್ಣನು ಆಜ್ಞೆ ಮಾಡಿದ.ಒಡನೆಯೇ ಭೀಮಸೇನನು ತನ್ನಲ್ಲಿದ್ದ ಖಡ್ಗದಿಂದ ಅದನ್ನು ಕಿತ್ತುಬಿಟ್ಟ. ಕೊನೆಗೆ ಅಶ್ವತ್ಥಾಮನಿಗೆ ಜ್ಞಾನೋದಯ ಆಗುತ್ತದೆ.' ಹೇ ಪ್ರಭೂ ನನಗೆ ಕ್ಷಮೆ ನೀಡು.ಅನುಗ್ರಹ ನಿಗ್ರಹ ಮಾಡುವ ಭಗವಂತನೇ ನೀನು.ಇನ್ಯಾರಲ್ಲಿ ಕ್ಷಮೆ ಯಾಚಿಸಲಿ ' ಎಂದು ಭಗವಂತನ ಕಾಲಿಗೆರಗಿದ.ಆಗ ಸಕಲಾನುಗ್ರಹನಿಗ್ರಹಿಯಾದ ಭಗವಂತನು,' ಎಲೈ ವೀರ ಬ್ರಾಹ್ಮಣೋತ್ತಮನೇ ನಾನಿಂದು ನಿನ್ನಲ್ಲಿದ್ದ ಅಹಂಕಾರವನ್ನು ಮಾತ್ರ ಕೀಳಿಸಿದೆ.ನೀನು ಚಿರಂಜೀವಿ.ಮುಂದಿನ ದ್ವಾಪರ ಯುಗಕ್ಕೆ ಈಗಿರುವ ವ್ಯಾಸ ಪೀಠಕ್ಕೆ ನೀನು ಅಧಿಪತಿ ಯಾಗಲಿರುವೆ. ನೀನು ಅಲ್ಲಿಯ ವರೆಗೆ ವೇಧನಾಯುಕ್ತನಾಗಿ ಅಧ್ಯಯನ ಮಾಡು.ಪ್ರಜೆಗಳ ಕಣ್ಣಿಗೆ ಬೀಳದಂತೆ ನಿನಗೆ ಸೂಕ್ಷ್ಮ ರೂಪ ನೀಡುತ್ತೇನೆ.ಜತೆಗೆ ವೇದವ್ಯಾಸರ ಅನುಗ್ರಹ ಪಡೆದು ಮುಂದಿನ ವ್ಯಾಸ ಪೀಠದ ಅಧಿಪತಿಯಾಗುವ ಅರ್ಹತೆ ಪಡೆಯಲು ಮಂತ್ರ ಉಪದೇಶ ಪಡೆದುಕೋ.ಹಿಮಾಲಯಕ್ಕೆ ತೆರಳು ' ಎಂದು ಶ್ರೀ ಕೃಷ್ಣನು ಅನುಗ್ರಹಿಸಿದ.
ಇಲ್ಲೊಂದು ಅರ್ಥ ಇದೆ.ಪಾಠವೂ ಇದೆ.ಒಬ್ಬ ವಿದ್ಯಾರ್ಥಿಯು ಐಷಾರಾಮಿಯಾಗಿ ವಿದ್ಯೆ ಕಲಿತರೆ ಅದು ವ್ಯರ್ಥ. ಮಾತ್ರವಲ್ಲ, ಜಗತ್ತಿಗೇ ಮಾರಕ. ಅಶ್ವತ್ಥಾಮನ ತಂದೆ ಆಚಾರ್ಯ ದ್ರೋಣರು ಮಗನಿಗೆ ದೃತರಾಷ್ಟ್ರನ ಆಶ್ರಯದಲ್ಲಿ ವಿದ್ಯೆ ಕಲಿಸಿದರು. ಆಗ ಯಾವ ವೇಧನೆಯೂ ಇರಲಿಲ್ಲ. ಪಾಂಡವರು ನಾನಾ ಹಿಂಸೆ,ಕೌರವರ ಮತ್ಸರದಿಂದ ವೇಧನೆ ಅನುಭವಿಸಿ ವಿದ್ಯೆ ಕಲಿತರು. ವೇಧನಾಯುಕ್ತವಾಗಿ ಕಲಿತರೆ ಅದು ಜಗತ್ತಿನ ರಕ್ಷಣೆಗೆ ಸಹಾಯ ಆಗುತ್ತದೆ.ಮತಾಂಧರು ಐಷಾರಾಮಿಯಾಗಿ ಕಲಿತ ವಿದ್ಯೆಯು ಜಗತ್ತಿಗೆ ಮಾರಕವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
(ಸಂಗ್ರಹ)
*ನಮ್ಮವರಿಂದ ನಮಗಾಗಿ ಮಾತೃಭೂಮಿ ಹಿಂದೂ ಸ್ಪಂದನೆ*
Post a Comment