ಸದಾಚಾರ

"ಪರಮಾತ್ಮನ ನಿಯಮಗಳು ಸರ್ವಕಾಲಿಕ :-"
"ಅಜ್ಞಾನವೆಂಬ ಮಾಯಾಪರದೆ - ಪರಮಾತ್ಮನ ಸತ್ಯ ದರ್ಶನದಿಂದ ದೂರ :-"

1. ಮಾನವರಾದ ನಮ್ಮ ಚಿಂತನೆ ಮತ್ತು ತತ್ವಗಳಿಗೆ ಒಂದು ಗಡಿರೇಖೆಯಿದೆ. ಆದರೆ, ಪರಮಾತ್ಮನ ಚಿಂತನೆಗಳು ಮತ್ತು ತತ್ವಗಳು ನಮ್ಮ ತತ್ವಗಳಿಗಿಂತಲೂ ಒಂದು ಕೈ ಮೇಲಿರುವುದು.

2. ಪರಮಾತ್ಮನ ನಿಯಮಗಳು ಅನಂತವಾದದ್ದು. ಅಂದರೆ, ಸರ್ವಕಾಲಿಕವಾದದ್ದು. ಪರಮಾತ್ಮನ ನಿಯಮಗಳಿಗೆ ಗಡಿರೇಖೆ ಹಾಕಲು ಸಾಧ್ಯವಿಲ್ಲವಾದ್ದರಿಂದ ನಮಗೆ ಭಗವಂತನ ಸರ್ವ ನಿಯಮಗಳ ಸ್ವಷ್ಟ ಚಿತ್ರಣವನ್ನು ಪಡೆದುಕೊಳ್ಳಲು ಎಂದೆಂದಿಗೂ ಸಾಧ್ಯವಿಲ್ಲ.

3. ನಮ್ಮ ಬುದ್ಧಿಶಕ್ತಿ ಸಾಮರ್ಥ್ಯದಿಂದ ಭಗವಂತನ ಸೃಷ್ಟಿಯೊಳಗಿನ ರಹಸ್ಯತೆಯ ಜ್ಞಾನವನ್ನು ಅರಿಯಲು ಯತ್ನಿಸಿದರೂ ಸಮಗ್ರ ವಿಚಾರವನ್ನರಿಯಲು ಸಾಧ್ಯವಿಲ್ಲ. ಆದರೂ, ನಾವು ನಮ್ಮ ಇಚ್ಛೆ ಮತ್ತು ಸಾಮರ್ಥ್ಯಕ್ಕನುಗುಣವಾಗಿ ಪರಮಾತ್ಮನ ಜ್ಞಾನ ಸ್ವರೂಪವಾದ ರಹಸ್ಯತೆಯ ತತ್ವಗಳನ್ನು ನಮ್ಮ ಇಂದ್ರಿಯಗಳಿಗೆ ಶಕ್ತಿರೂಪದಲ್ಲಿ ತುಂಬಿಸಬಹುದು.

4. ನಾನಾ ಬಯಕೆಗಳ ಮೋಹಕ್ಕೊಳಗಾದ ಅಜ್ಞಾನಿಯು ಎಂದೆಂದಿಗೂ ಪರಮಾತ್ಮನ ಸ್ವರೂಪವನ್ನು ಅರಿಯಲಾರನು. ಏಕೆಂದರೆ, ಈತನ ಮತ್ತು ಪರಮಾತ್ಮನ ನಡುವೆ ಅಜ್ಞಾನವೆಂಬ ಮಾಯಾ ಪರದೆಯಿರುವುದರಿಂದ ಭಗವಂತನ ಸತ್ಯ ದರ್ಶನ ಕಾಣುವುದಿಲ್ಲ. 🙏

Post a Comment

Previous Post Next Post