[27/02, 11:29 PM] Pandit Venkatesh. Astrologer. Kannada:
🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 28/02/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಶಿಶಿರ ಋತು
ಮಾಸ(ಚಾಂದ್ರ)- ಮಾಘ
ಪಕ್ಷ - ಕೃಷ್ಣಪಕ್ಷ
ತಿಥಿ - ತ್ರಯೋದಶಿ 27:16
ಮಾ.ನಿ - ಗೋವಿಂದ
ಮಾಸ (ಸೌರ) - ಕುಂಭ(ಮಾಯಿ)
ದಿನ - 16
ನಕ್ಷತ್ರ - ಉತ್ತರಾಷಾಢ 07:02 ಉಪರಿ ಶ್ರವಣ 29:19
ಯೋಗ - ವರಿಯಾನ್ 14:23
ಕರಣ - ಗರಜ 16:28
ವಿಷ - 10:45
ಅಮೃತ - 19:40
ರಾಹುಕಾಲ -08:18-09:46
ಗುಳಿಕ ಕಾಲ -02:12-03:41
ವಾರ - ಸೋಮವಾರ
ಸೂರ್ಯೋದಯ (ಉಡುಪಿ)- 06:50
ಸೂರ್ಯಾಸ್ತ - 06:37
ದಿನ ವಿಶೇಷ- *ಸೋಮಪ್ರದೋಷ*
🕉️🕉️🕉️🕉️🕉️🕉️[27/02, 11:17 PM] Pandit Venkatesh. Astrologer. Kannada: ಸೋಮವಾರ, ಫೆಬ್ರವರಿ 28, 2022
ಪಾಲ್ಗುಣ ಕೃಷ್ಣ ತ್ರಯೋದಶಿ
ಸೋಮ ಪ್ರದೋಷ ವ್ರತದ ಸಮಯ
06:28 PM ರಿಂದ 08:54 PM
ನಾಳೆ ಸೋಮ ಪ್ರದೋಷದ ಪ್ರಯುಕ್ತ ಶಿವನಿಗೆ ಬಿಲ್ವಾರ್ಚನೆ ಮಾಡಿ ಶಿವನ ಕೃಪೆ ನಿಮದಾಗಲಿ
ಹಿಂದೂ ಪಂಚಾಂಗದಲ್ಲಿ ಪ್ರತಿ ತಿಂಗಳೂ ಹದಿನೈದು ದಿನಕ್ಕೊಮ್ಮೆ (ಹದಿಮೂರನೆಯ ದಿನವು ಸಂಭವಿಸುವುದು) ಬರುವ ಆಚರಣೆಯೇ ಪ್ರದೋಷ.
ಇದು ಶಿವನಿಗೆ ಸಂಬಂಧ ಪಟ್ಟ ಆಚರಣೆ ಹಾಗು ಇದು 3 ಘಂಟೆಗಳ ಕಾಲ ಅಂದರೆ ಒಂದೂವರೆ ಘಂಟೆ ಕಾಲ ಸೂರ್ಯೋದಯದ ಮುನ್ನ ಹಾಗು ಒಂದೂವರೆ ಘಂಟೆ ಕಾಲ ಸೂರ್ಯಾಸ್ತದ ನಂತರ ಶಿವನನ್ನು ಪ್ರಾರ್ಥಿಸುವುದಕ್ಕೆ ಅತ್ತ್ಯುತ್ತಮ ಸಮಯ ಎಂದು ಸೂಚಿಸುತ್ತದೆ.
ಈ ಸಮಯದಲ್ಲಿ ಮಾಡುವ ಹರಕೆಯನ್ನು ’ಪ್ರದೋಷ ವ್ರತ’ ಎನ್ನುತ್ತಾರೆ.
ಈ ಸಮಯದಲ್ಲಿ ಹರಕೆ ಹೊತ್ತಿರುವ ಭಕ್ತರು ರುದ್ರಾಕ್ಷಿ ಹಾಗು ವಿಭೂತಿಯನ್ನು ಧರಿಸಿ, ಶಿವನನ್ನು ಅಭಿಷೇಕ, ಚಂದನ ಲೇಪನ, ಬಿಲ್ವ ಪತ್ರೆ, ಸುಗಂಧ, ದೀಪಗಳಿಂದ ಪೂಜಿಸಿ ನೈವೇದ್ಯವನ್ನು ಅರ್ಪಿಸುತ್ತಾರೆ.
ಪ್ರದೋಷ ಎನ್ನುವುದು ಪಂಚಾಂಗದಲ್ಲಿನ ದಿನಗಳನ್ನು ಸೂಚಿಸುತ್ತದೆ.
ಪ್ರದೋಷದ ಒಂದು ಚಿಕ್ಕ ಕಥೆ
ಪ್ರದೋಷ ಎಂದರೆ ಕಲ್ಪ ಹಾಗು ದೋಷ ಎನ್ನುವ ದಂಪತಿಗಳ ಪುತ್ರನು. ಅವನಿಗೆ ನಿಶಿತಾ ಹಾಗು ವ್ಯುಷ್ತ ಎನ್ನುವ ಇಬ್ಬರು ಸಹೋದರರಿದ್ದರು.
ಈ ಮೂರು ಹೆಸರುಗಳು ಪ್ರಾರಂಭ, ಮಧ್ಯ ಹಾಗು ರಾತ್ರಿಯ ಕೊನೆಯನ್ನು ಸೂಚಿಸುತ್ತವೆ.
ಅಮಾವಾಸ್ಯೆಯ ದಿನಗಳಿಂದ ಹುಣ್ಣಿಮೆಯ ದಿನಗಳವರೆಗೆ ಶುಕ್ಲ ಪಕ್ಷ ಎನ್ನುತ್ತಾರೆ
ಹಾಗು ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಕೃಷ್ಣ ಪಕ್ಷ ಎನ್ನುತ್ತಾರೆ.
ಪ್ರತಿ ತಿಂಗಳು ಹಾಗು ಪ್ರತಿ ಪಕ್ಷದಲ್ಲಿ, ತ್ರಯೋದಶಿ(13 ನೆಯ ದಿನ), ದ್ವಾದಶಿಯ(15 ದಿನಗಳ 13 ನೆಯ ದಿನ) ಕೊನೆಯನ್ನು ಸೇರಿದಾಗ, ಆ ಸಮಯವನ್ನು ’ಪ್ರದೋಷ’ ಎನ್ನುತ್ತಾರೆ.
ಪ್ರದೋಷದ ಸಮಯದಲ್ಲಿ ನಂದಿಯನ್ನು ಶಿವನ ದೇವಸ್ಥಾನಗಳಲ್ಲಿ ಪೂಜಿಸುತ್ತಾರೆ. ಶಿವ ಹಾಗು ಪಾರ್ವತಿಯು ನಂದಿಯ ಮೇಲೆ ಕುಳಿತಿರುವ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣದಲ್ಲೇ ಮೆರವಣಿಗೆ ಮಾಡಲಾಗುತ್ತದೆ.
ದೇವಾನು ದೇವತೆಗಳು ತಮ್ಮನ್ನು ರಾಕ್ಷಸರಿಂದ ಕಾಪಾಡಲೆಂದು ಶಿವನನ್ನು, ಪ್ರದೋಷ, ಅಂದರೆ ಶಿವನು ಪ್ರಸನ್ನನಾಗಿರುವ ಸಮಯದಲ್ಲಿ ಅವನನ್ನು ಮೊರೆ ಹೋಗಲು ಯೋಚಿಸುತ್ತಾರೆ.
ಕೈಲಾಸದ ಸುತ್ತ ಮುತ್ತಲೂ ತಿರುಗಿದ ಮೇಲೆ ತ್ರಯೋದಶಿಯ ಸಂಜೆ ನಂದಿಯಿಂದ ಶಿವನನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ಶಿವನು ಅಸುರರಿಂದ ದೇವಾನು ದೇವತೆಗಳನ್ನು ಕಾಪಾಡುತ್ತಾನೆ.
ಆಗಿನಿಂದ ಶಿವನ ಜೊತೆ ನಂದಿಯನ್ನು ತ್ರಯೋದಶಿಯಂದ ಪ್ರದೋಷದ ಸಮಯದಲ್ಲಿ ಪೂಜಿಸುವ ಆಚರಣೆ ಪ್ರಾರಂಭವಾಯಿತು.
ಪ್ರದೋಷ ಪೂಜೆ ಮತ್ತು ಅದರ ಲಾಭಗಳು
ಪ್ರದೋಷ ಎಂದರೆ _ ಪಾಪಗಳಿಂದ ಮುಕ್ತಿ ಎಂದರ್ಥ.
ಅಮೃತಕ್ಕಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆಯುವಾಗ ಹಾಲಾಹಲ ವಿಷವು ಉಕ್ಕಿ ಬಂದಿತು. ಆಗ ಧ್ಯಾನಾವಸ್ಥೆಯಲ್ಲಿದ್ದ ಶಿವನು ಲೋಕವನ್ನು ವಿಷದಿಂದ ಕಾಪಾಡಲು ಎಚ್ಚರಗೊಂಡನು. ಆ ಎಚ್ಚರಗೊಂಡ ಕಾಲವೇ ಪ್ರದೋಷ ಕಾಲ.
ಸಂಜೆ ನಾಲ್ಕು ಮೂವತ್ತರಿಂದ ಆರೂವರೆಯವರೆಗೆ ಈ ಕಾಲ ಇರುತ್ತದೆ. ಸಾಮಾನ್ಯವಾಗಿ ಧ್ಯಾನದಿಂದ ಶಿವ ಎಚ್ಚರಗೊಂಡಾಗ ಕೋಪಗೊಳ್ಳುವುದು ಸಹಜ. ಆದರೆ ಲೋಕ ಕಲ್ಯಾಣಕ್ಕಾಗಿ ಎಚ್ಚರಗೊಂಡ ಶಿವನು ಹಾಲಾಹಲವನ್ನು ಕುಡಿಯಲು ಸಂತೋಷದಿಂದ ಆಗಮಿಸುತ್ತಾನೆ.
ಬರುವ ದಾರಿಯಲ್ಲಿ ನಂದಿಯ ಮೇಲೆ “ಆನಂದ ತಾಂಡವ” (ಸಂತೋಷಕ್ಕಾಗಿ ನೃತ್ಯ ಮಾಡುವ ವಿಧಾನ. ರುದ್ರ ತಾಂಡವ ಎಂದರೆ ಪ್ರಪಂಚದ ಪ್ರಳಯಕ್ಕಾಗಿ ಮಾಡುವ ವಿಧಾನ) ಮಾಡಿಕೊಂಡು ಸ್ವಯಂ ಸಂತೋಷದಿಂದ ಆಗಮಿಸಿದ ಶಿವ ಹಾಲಾಹಲವನ್ನು ಕುಡಿದು ಮೂರ್ಛೆ ತಪ್ಪುತ್ತಾನೆ. ಅದು ಶ್ರಾವಣ ಮಾಸದ ಶನಿವಾರದ ದಿನವಾಗಿರುತ್ತದೆ.
ಆಗ ಬ್ರಹ್ಮ ದೇವನು ಗಂಗೆಯನ್ನು ಕರೆದು ಶಿವನ ದೇಹಕ್ಕೆ ನೀರಿನಿಂದ ಜಳಕ ಮಾಡಿಸುತ್ತಾನೆ. ಇದನ್ನೇ ರುದ್ರಾಭೀಷೇಕ ಎಂಬ ಹೆಸರಿನಿಂದ ಈಗ ಕರೆಯುತ್ತಾರೆ. ಅಂದಿನಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಬರುವ ತ್ರಯೋದಶಿಯಂದು ಸಾಕ್ಷಾತ್ ದೇವತೆಗಳೇ ಪ್ರದೋಷ ಪೂಜೆಯನ್ನು ಮಾಡುತ್ತಾ ಬಂದರು.
ಅಂದು ಉಪವಾಸವಿದ್ದು, ಶಿವ ಪೂಜೆಯನ್ನು ಮಾಡಿದರೆ ಒಳ್ಳೆಯದು.
ಅಂದಿನ ದಿನ ಪ್ರದೋಷ ಕಾಲದಲ್ಲಿ (ಸೂರ್ಯ ಮುಳುಗುವ ಹೊತ್ತಿನಲ್ಲಿ) ಪೂಜೆ ಮಾಡಿದರೆ ಎಲ್ಲಾ ದೇವರ ಅನುಗ್ರಹವನ್ನು ಗಳಿಸಬಹುದು.
ಸೋಮವಾರ ಬರುವ ಪ್ರದೋಷ ಸೋಮ ಪ್ರದೋಷ ಎಂದು ಹೆಸರಾಗಿದೆ.
ಶನಿವಾರ ಬರುವ ಪ್ರದೋಷವನ್ನು ಶನಿ ಪ್ರದೋಷ ಎಂದು ಕರೆಯುತ್ತಾರೆ.
ಈ ಮೊದಲೇ ತಿಳಿಸಿದಂತೆ, ಈಶ್ವರ ಹಾಲಾಹಲ ಕುಡಿದದ್ದು, ಶನಿವಾರವಾದ್ದರಿಂದ “ಶನಿ ಪ್ರದೋಷ” ತುಂಬಾ ಒಳ್ಳೆಯದಾಗಿರುತ್ತದೆ.
ಒಂದು ಶನಿ ಪ್ರದೋಷ ಮಾಡಿದರೆ ಐದು ವರ್ಷ ಪ್ರತಿದಿನ “ಶಿವನ ದೇವಾಲಯಕ್ಕೆ” ಹೋಗಿ ಪೂಜೆ ಮಾಡಿದ ಫಲ ದೊರೆಯುತ್ತದೆ.
ಶನಿವಾರ ಪ್ರದೋಷ ಪೂಜೆ ಮಾಡಿದರೆ, ಪದವಿಯಲ್ಲಿ ಉನ್ನತಿ, ಕಳೆದು ಹೋದ ಸಂಪತ್ತು ಮತ್ತೆ ದೊರೆಯುತ್ತದೆ. ಸಾಡೆ ಸಾತಿಯ ಪ್ರಭಾವ ಸಹ ಕಡಿಮೆಯಾಗಬಹುದು/ಹೊರಟು ಹೋಗಬಹುದು. ಈ ದಿನ ಈಶ್ವರ ಮತ್ತು ಶನಿ ಇಬ್ಬರೂ ಈ ಪೂಜೆ ಮಾಡುವವರನ್ನು ಆಶೀರ್ವದಿಸುತ್ತಾರೆ.
ಮಾಡಬಹುದಾದ ಪೂಜೆಗಳು
– ಅರ್ಚನೆ, ಶಿವ ಅಷ್ಟೋತ್ತರದ ಸಮೇತ
– ಹಾಲಿನ ಅಭಿಷೇಕ
– ಮಹಾಮೃತ್ಯುಂಜಯ ಮಂತ್ರ ನೂರ ಎಂಟು ಬಾರಿ
– ಶಿವನ ದೇವಾಲಯದಲ್ಲಿ ದೀಪ ಹಚ್ಚುವಿಕೆ
ಪ್ರದೋಷ ಅಭಿಷೇಕದ ವಸ್ತುಗಳು ಮತ್ತು ಅದರ ಫಲಗಳು
ಪಂಚಗವ್ಯ – ಎಲ್ಲಾ ಪಾಪಗಳಿಂದ ಮುಕ್ತಿ
ಪಂಚಾಮೃತ – ಸಂಪತ್ತನ್ನು ನೀಡುತ್ತದೆ
ತುಪ್ಪ – ಮೋಕ್ಷವನ್ನು ನೀಡುತ್ತದೆ
ಹಾಲು – ದೀರ್ಘಾಯುಷ್ಯ
ಮೊಸರು – ಮಕ್ಕಳ ಭಾಗ್ಯ
ಜೇನು ತುಪ್ಪ – ಉತ್ತಮ ಧ್ವನಿ
ಅಕ್ಕಿ ಪುಡಿ – ಸಾಲಗಳಿಂದ ಮುಕ್ತಿ
ಕಬ್ಬಿನ ರಸ – ಆರೋಗ್ಯ ಭಾಗ್ಯ, ಶತ್ರು ನಾಶ
ನಿಂಬೆ ರಸ – ಸಾವಿನ ಭಯದಿಂದ ದೂರ ಮಾಡುತ್ತದೆ
ಎಳೆನೀರು – ಸಂತೋಷ ಮತ್ತು ಜೀವನ ಆನಂದ
ಬೇಯಿಸಿದ ಅನ್ನ – ಜೀವನವನ್ನು ಅದ್ಭುತ ಗೊಳಿಸುತ್ತದೆ.
ಗಂಧ (ಗಂಧದ ಪೇಸ್ಟ್) – ಲಕ್ಷ್ಮಿ ಕಟಾಕ್ಷ
ಸಕ್ಕರೆ – ಶತ್ರು ನಾಶ
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
ಪ್ರದೋಷವು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ನೀಡುವ ಒಂದು ಆಚರಣೆ. ದಯವಿಟ್ಟು ಇದನ್ನು ಆಚರಿಸಿ, ಆಸಕ್ತಿ ಇರುವವರಿಗೂ ಸಹ ತಿಳಿಸಿ.
🕉️🕉️🕉️
Post a Comment