[01/03, 7:38 AM] Pandit Venkatesh. Astrologer. Kannada: ಶಿವರಾತ್ರಿ ಹಾಗೂ ಇಂದು ಪ್ರದೋಷದ ಪ್ರಯುಕ್ತ ಈ ಮಾಹಿತಿ
ಬಿಲ್ವ ಪತ್ರೆಗೆ ಯಾಕಿಷ್ಟು ಮಹತ್ವ...?
ಬಿಲ್ವಪತ್ರೆ ಹಿಂದಿದೆ ಪುರಾಣದ ಹಿನ್ನೆಲೆ.
ಆ ಹಿನ್ನೆಲೆಯ ಕಾರಣದಿಂದಲೇ ಇಷ್ಟು ಮಹತ್ವ ಪಡೆದಿದೆ ಬಿಲ್ವ ಪತ್ರೆ. ಒಮ್ಮೆ ದೇವ-ದಾನವರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದರು.
ಆ ಸಂದರ್ಭ ಆ ಕ್ಷೀರ ಸಾಗರದಿಂದ ಸಾಕಷ್ಟು ಅನರ್ಘ್ಯ ರತ್ನಗಳು ಸೃಷ್ಟಿಯಾದವು. ಅವುಗಳಲ್ಲಿ ಮುಖ್ಯವಾದವು ಉಚ್ಹೈಶ್ರವಸ್ಸು (ಅತಿಶ್ರೇಷ್ಠವಾದ 7-ತಲೆಯುಳ್ಳ ಕುದರೆ ), ಕೌಸ್ತುಭ ( ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ. ), ಕಾಮಧೇನು ಅಥವಾ ಸುರಭಿ ( ಕೋರಿದುದನ್ನು ನೀಡುವ ಹಸು.), ಪಾರಿಜಾತ (ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ ), ಐರಾವ (ಇಂದ್ರನ ಆನೆ ), ಅಪ್ಸರೆಯರು, ರಂಭಾ, ಮೇನಕಾ, ಪುನ್ಜಿಕ ಸ್ಥಳ ಇತರರು , ಶಾರ್ಞ ಧನಸ್ಸು (ವಿಷ್ಣುವಿನ ಆಯುಧ ) ಹೀಗೆ ಅನೇಕ ರತ್ನಗಳು ಸೃಷ್ಟಿಯಾದವು.
ಅವುಗಳ ಜೊತೆ ಮಹಾಲಕ್ಷ್ಮೀಯೂ ಬಂದಳು. ಆ ಮಹಾಲಕ್ಷ್ಮಿಯನ್ನು ಕಂಡು ದೈತ್ಯರು ಲಕ್ಷ್ಮಿಯ ಮೇಲೇ ಕಣ್ಣು ಹಾಕಿದರು, ಆಕೆಯನ್ನ ಶತಾಯ ಗತಾಯ ಪಡೆಯುವ ಪ್ರಯತ್ನ ಮಾಡಿದರು. ಆಗ ಬೆಚ್ಚಿ ಬಿದ್ದ ಮಹಾಲಕ್ಷ್ಮಿ ಬಿಲ್ವವೃಕ್ಷವಾಗಿ ನೆಲೆ ನಿಂತಳು. ಹಾಗಾಗಿ ಬಿಲ್ವ ವೃಕ್ಷ ಶ್ರೇಷ್ಠ ವೃಕ್ಷವಾಯ್ತು ಅನ್ನುವ ಕಥೆ ಇದೆ.
ಪಾರ್ವತಿಯ ಬೆವರಿನ ಹನಿಯೇ ಬಿಲ್ವ..!
ಮತ್ತೊಂದು ಕಥೆಯ ಪ್ರಕಾರ ಪಾರ್ವತಿಗೆ ತುಂಬ ದಣಿವಾಗಿತ್ತು. ಆಗ ಮಂದರ ಪರ್ವತದಲ್ಲಿ ವಿಶ್ರಾಂತಿಗೆ ಅಂತ ಬಂದು ಕುಳಿತಿದ್ದಳು. ಆಗ ಆಕೆಯ ಬೆವರ ಹನಿ ಭೂಮಿಯ ಮೇಲೆ ಬಿತ್ತು ಆ ಹನಿಯಿಂದ ಒಂದು ವೃಕ್ಷ ಮೂಡಿತು ಅದೇ ಬಿಲ್ವ ವೃಕ್ಷ ಅಂತಲೂ ಕಥೆ ಇದೆ.
ಲಕ್ಷ್ಮೀ ಸ್ತನದಲ್ಲಿ ಮೂಡಿದ್ದು ಬಿಲ್ವ..!
ಮತ್ತೊಂದು ಕಥೆಯ ಪ್ರಕಾರ ಅದೊಮ್ಮೆ ಲಕ್ಷ್ಮೀ ಶಿವನನ್ನು ಕುರಿತು ಸಹಸ್ರ ನಾಮಾವಳಿ ಹೇಳುತ್ತಿದ್ದಳು. ಒಂದೊಂದು ನಾಮ ಹೇಳುವಾಗಲೂ ಒಂದೊಂದು ಪುಷ್ಪ ಸಮರ್ಪಣೆ ಮಾಡುತ್ತಿದ್ದಳು.
ಕೊನೆಯ ನಾಮ ಹೇಳುವ ಹೊತ್ತಿಗೆ ಒಂದು ಹೂ ಕಾಣಿಸಲಿಲ್ಲ. ಹಾಗಾಗಿ ಒಂದು ಹೂವು ಕಡಿಮೆ ಬಿತ್ತಲ್ಲ ಅನ್ನೋ ಕಾರಣಕ್ಕೆ ತನ್ನ ಸ್ತನವನ್ನೇ ಕತ್ತರಿಸಿ ಹೂವಿನ ರೂಪದಲ್ಲಿ ಅರ್ಚಿಸಿದ್ದಳು ಮಹಾಲಕ್ಷ್ಮಿ.
ಆ ಘೋರ ಸ್ಥಿತಿಯನ್ನ ಕಂಡ ಶಿವ ತಕ್ಷಣ ಆಕೆಯ ಮೇಲೆ ಗಂಗಾಜಲವನ್ನ ಹರಿಸಿ ಆಕೆಯ ನೋವನ್ನ ಕಳೆದನಂತೆ. ಹಾಗೆ ಹರಿದ ನೀರು ಶ್ರೀ ಶೈಲವನ್ನು ತಲುಪಿ ಅಲ್ಲಿ ಬಿಲ್ವ ವೃಕ್ಷದ ಪ್ರಾದುರ್ಭಾವವಾಯಿತು ಅಂತ ಹೇಳ್ತಾರೆ. ಅಂದು ಮಹಾಲಕ್ಷ್ಮಿಗೆ ಶಿವ ವರದ ರೂಪದಲ್ಲಿ ಅಷ್ಟ ಸಿದ್ಧಿತ್ವವನ್ನು ಕೊಟ್ಟನಂತೆ. ಹಾಗಾಗೇ ಅಷ್ಟ ಮಹಾಲಕ್ಷ್ಮಿಯರ ಸೃಷ್ಟಿಯಾಯಿತು ಅಂತಲೂ ಉಲ್ಲೇಖಗಳಿದ್ದಾವೆ.
ಬಿಲ್ವ ತತ್ವ ಏನು..?
ಬಿಲ್ವದ ಕಥೆ ಗೊತ್ತಾಯ್ತು. ಆದ್ರೆ ಆ ಬಿಲ್ವದ ಕಥೆಗಿಂದ ಅದರ ತತ್ವ ನಮಗೆ ಅರ್ಥವಾಗಬೇಕು. ಹಾಗೆ ತತ್ವಾರ್ಥ ತಿಳಿದು ಮಾಡುವ ಪೂಜೆ ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ.
ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು : ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತ.
ಪ್ರಾತ: ಕಾಲ, ಮಧ್ಯಾಹ್ನ ಕಾಲ, ಸಂಧ್ಯಾ ಕಾಲಗಳ ಸಂಕೇತ.
ಬಿಲ್ವ ಪತ್ರೆಯಿಂದ ನಾವು ಶಿವನನ್ನು ಅರ್ಚಿಸುತ್ತೇವೆ. ಶಿವ ಅಂದ್ರೆ ಮಂಗಳಕರ ಅಂತ. ನಮಗೆ ಮಂಗಳವಾಗಬೇಕಾದರೆ, ಶುಭ ಫಲಗಳು ದಕ್ಕಬೇಕಾದರೆ ನಾವು ಸತ್ವ-ರಜಸ್ಸು-ತಮೋಗುಣಗಳನ್ನ ದಾಟಬೇಕು.
ನಮ್ಮ ಹುಟ್ಟು , ನಮ್ಮ ಇರುವಿಕೆ, ನಮ್ಮ ಮರಣ ಈ ಎಲ್ಲ ಸ್ಥಿತಿಯಲ್ಲೂ ಆ ಶಿವನ ನಿರ್ದೇಶನವಿದೆ. ಆವನ ಸಂಕಲ್ಪದ ಹೊರತಾಗಿ ಜಗತ್ತಿಲ್ಲ ಎಂಬ ಭಾವದಲ್ಲಿ ಬಿಲ್ವ ಪತ್ರೆಯನ್ನು ಸಮರ್ಪಿಸಿದರೆ ಖಂಡಿತಾ ಶಿವನ ಅನುಗ್ರಹವಾಗುತ್ತದೆ.
ಅದರಲ್ಲಿ ಸಂದೇಹವಿಲ್ಲ. ಬಿಲ್ವ ಪತ್ರೆ ಸಮರ್ಪಿಸುವ ಮುನ್ನ ಈ ತತ್ವ ನೆನಪಾದರೆ ಅದೆ ನಿಜವಾದ ಶಿವ ಪೂಜೆ.
ಶಿವಪೂಜೆಗೆ ಬಿಲ್ವಪತ್ರೆ ಎಲೆಗಳ ಆಯ್ಕೆ ಹೇಗಿರಬೇಕು?
ಶಿವಪೂಜೆಗೆ ಬಿಲ್ವಪತ್ರೆ ಆಯ್ಕೆ ಮಾಡುವಾಗ ಎಲೆಯ ಮೇಲೆ ಯಾವುದೇ ಹುಳುಗಳ ಕುಳಿತು ಎಲೆಗಳು ಹಾಳಾಗಿಬಾರದು, ಅದರ ಮೇಲೆ ಬಿಳಿ ಚುಕ್ಕಿಗಳಿರಬಾರದು, ಇನ್ನು ತರುವ ಎಲೆ ಹರಿದಿರಬಾರದು. ಮೂರು ಎಲೆಗಳಿರುವ ದಂಟನ್ನು ಕಿತ್ತು ತಂದು ಶಿವನಿಗೆ ಅರ್ಪಿಸಬೇಕು. ಶಿವನಿಗೆ ಬಿಲ್ವಪತ್ರೆಯ ಮಾಲೆ ಮಾಡಿ ಹಾಕಬಹುದು, ಬಿಲ್ವಪತ್ರೆ ಎಲೆಗಳ ಜತೆಗೆ ಕಾಯಿಗಳನ್ನೂ ಪೂಜೆಗೆ ಅರ್ಪಿಸಬಹುದು.
ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು?
ಬಿಲ್ವಪತ್ರೆಗಳನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ಹೀಗೆ ಮಾಡುವುದರಿಂದ ಮೂರು ಎಲೆಗಳಿಂದ ಬರುವ ಶಕ್ತಿಗಳಿಂದ ಬರುವ ಶಕ್ತಿ ನಮ್ಮ ಕಡೆಗೆ ಬರುತ್ತದೆ. ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡಿ ನಮಗೆ ಧನಾತ್ಮಕ ಶಕ್ತಿಯ ಅನುಬವ ಉಂಟಾಗುವುದು.
ಬಿಲ್ವಪತ್ರೆ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ, ಎಲೆಗಳ ತುದಿಗಳನ್ನು ಶಿವನ ಕಡೆಗೆ ಇರುವಂತೆ ಅರ್ಪಿಸಿದರೆ ಆಗ ಬಲ್ವಪತ್ರೆ ಯಾರು ಅರ್ಪಿಸುತ್ತಾರೋ ಅವರಿಗೆ ಮಾತ್ರ ಶಿವತತ್ತ್ವ ಸಿಗುತ್ತದೆ. ಮೇಲೆ ಹೇಳಿದಂತೆ ಅರ್ಪಿಸಿದರೆ ಶಿವನ ಪೂಜೆಗೆ ಬರುವ ಭಕ್ತರಿಗೂ ಶಿವತತ್ತ್ವವೂ ದೊರೆಯುವುದು.
ಬಿಲ್ವಪತ್ರೆ ಸೋಮವಾರ ಏಕೆ ಅರ್ಪಿಸಬೇಕು?
ಸೋಮವಾರ ಶಿವಪೂಜೆಗೆ ಶ್ರೇಷ್ಠವಾದ ದಿನ, ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಬಿಳಿ ಬಣ್ಣದ ಮಡಿ ಬಟ್ಟೆ ಧರಿಸಬೇಕು. ಬಿಲ್ವಪತ್ರೆಯನ್ನು ಅರ್ಚನೆ ಮಾಡುವಾಗ ಓಂ ನಮಃ ಶಿವಾಯ ಎಂಬ ಮಂತ್ರ ಪಠಣೆ ಮಾಡುತ್ತಾ ಶಿವಲಿಂಗಕ್ಕೆ ಒಂದೊಂದೇ ಎಲೆಗಳನ್ನು ಅರ್ಪಿಸಬೇಕು. ಬಿಲ್ವಪತ್ರೆ ಎಲೆಗಳು ಶಿವಲಿಂಗವನ್ನು ಮುಚ್ಚುವಂತೆ ಅರ್ಪಣೆ ಮಾಡಬೇಕು. ಬಿಲ್ವ ಪತ್ರೆ ಎಲೆಗಳ ಜತೆಗೆ ಶ್ರೀಗಂಧ, ಹೂಗಳು, ಹಣ್ಣುಗಳು, ಎಳ್ಳುಗಳನ್ನು ಅರ್ಪಿಸಬಹುದು.
ಮುಂದಿನ ಭಾಗದಲ್ಲಿ ಬಿಲ್ವಾಷ್ಟಕ ಇದೆ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*
*ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[01/03, 7:38 AM] Pandit Venkatesh. Astrologer. Kannada: ದ್ವಾದಶ ಜ್ಯೋತಿರ್ಲಿಂಗಗಳು ..
ನೀಲಕಂಠ, ಶಂಕರ, ಮಹಾದೇವ, ಕರುಣಾಸಾಗರ, ಭೋಲೆನಾಥನಾಗಿ ಎಲ್ಲರ ಮನದಲ್ಲೂ ನೆಲೆಸಿರುವ ಶಿವ ಭಕ್ತಿ ಹಾಗು ಶೃದ್ಧೆಗಳಿಂದ ಪೂಜಿಸಲ್ಪಡುವ ಮಹಾದೇವ. ಶಿವನಿಗೆ ಮುಡಿಪಾದ ಅದೇಷ್ಟೊ ಅಸಂಖ್ಯಾತ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಅವುಗಳಲ್ಲಿ ಈಶ್ವರನ ದ್ವಾದಶ ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ ದ್ವಾದಶ
ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾ ಕಟಾಕ್ಷ ದೊರೆತು ಮೋಕ್ಷ ಲಭಿಸುವುದೆಂದು ನಂಬಲಾಗಿದೆ.
1. ಸೋಮನಾಥ:
ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಇದನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗಿದೆ.
2. ಮಹಾಕಾಲೇಶ್ವರ:
ಮಧ್ಯ ಪ್ರದೇಶದ ಪುರಾತನ ಹಾಗು ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗವಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನವು ರುದ್ರ ಸಾಗರ ಕೆರೆಯ ತಟದಲ್ಲಿದೆ.
3. ಓಂಕಾರೇಶ್ವರ:
ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿರುವ ಶಿವಪುರಿ/ಮಂಡತ ಎಂಬ ದ್ವೀಪದಲ್ಲಿ ಸ್ಥಿತವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ ॐ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ. ಈ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದು ಅವುಗಳು ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಹಾಗು ಚಿರಾಯು/ಅಮರನಾದ ಅಮರೇಶ್ವರ ದೇವಸ್ಥಾನ. ದಂತಕಥೆಯ ಪ್ರಕಾರ, ಶಿವ ಲಿಂಗವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಓಂಕಾರೇಶ್ವರವಾಗಿಯೂ ಇನ್ನೊಂದು ಮಾಮಲೇಶ್ವರ ಅಥವಾ ಅಮರೇಶ್ವರವಾಗಿಯೂ ಪ್ರಸಿದ್ಧವಾಗಿವೆ.
4. ಕೇದಾರನಾಥ:
ಉತ್ತರಾಖಂಡ್ ರಾಜ್ಯದ ಹಿಮಾಲಯ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದಾರನಾಥ ಒಂದು ಪ್ರಸಿದ್ಧವಾದ ಹಿಂದು ಧಾರ್ಮಿಕ ಕೇಂದ್ರವಾಗಿದೆ. ಪ್ರದೇಶದ ವಾತಾವರಣದಲ್ಲಿ ಏರು ಪೇರು ಹೆಚ್ಚಾಗುವುದರಿಂದ ಈ ಜ್ಯೋತಿರ್ಲಿಂಗವು ವರ್ಷದ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ.
5. ಭೀಮಾಶಂಕರ:
ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾನವು ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಅಶಿರ್ವದಿಸುತ್ತಿದ್ದಾನೆ.
6. ಕಾಶಿ ವಿಶ್ವನಾಥ:
ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.
7. ತ್ರಯಂಬಕೇಶ್ವರ:
ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿದೆ. ನಾಶಿಕ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ತ್ರಯಂಬಕೇಶ್ವರವು ಪೆನಿನ್ಸುಲಾ ಭಾರತದ ಅತಿ ಉದ್ದನೆಯ ನದಿಯಾದ ಗೋದಾವರಿ ನದಿ ಮೂಲದ ಸಮೀಪ ಸ್ಥಿತವಿದೆ.
8. ವೈದ್ಯನಾಥ:
ಇದರ ನಿಖರವಾದ ಸ್ಥಳದ ಕುರಿತು ಇನ್ನೂ ವಿವಾದವಿದ್ದರೂ ಜಾರ್ಖಂಡ್ ರಾಜ್ಯದ ದೇವ್ಗಡ್ ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು 12 ಜ್ಯೋತಿರ್ಲಿಂಗಗಳ ಪೈಕಿ ಒಂದನ್ನಾಗಿ ಪರಿಗಣಿಸಲಾಗಿದೆ.
9. ನಾಗೇಶ್ವರ:
ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ತಾಣವು ಬಹು ಪ್ರಖ್ಯಾತವಾದ ಜ್ಯೋತಿರ್ಲಿಂಗ ತಾಣವಾಗಿದೆ. ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.
10. ರಾಮೇಶ್ವರ:
ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ರಾಮೇಶ್ವರ ಜ್ಯೋತಿರ್ಲಿಂಗ ದೇವಸ್ಥಾನವು ದಕ್ಷಿಣದ ಪ್ರಮುಖ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ.
11. ಮಲ್ಲಿಕಾರ್ಜುನ:
ಆಂಧ್ರದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನವು ಪವಿತ್ರ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿದೆ. ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನವು ಪ್ರಖ್ಯಾತವಾದ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ.
12. ಘುಶ್ಮೇಶ್ವರ:
ರಾಜಸ್ಥಾನದ ಜೈಪುರ್ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್ ಎಂಬಲ್ಲಿದೆ ಈ ಜ್ಯೋತಿರ್ಲಿಂಗ ದೇವಸ್ಥಾನ. ಇದನ್ನು ಕೊನೆಯ ಅಂದರೆ ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ.
(ಮಾಹಿತಿ ಸಂಗ್ರಹ)
📖 *ನಮೋ ರಾಷ್ಟ್ರಭಕ್ತರು*
ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺
!!!!Jai HINDUTWA!!!🚩🚩🚩
⛳ " *ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ* " ⛳
Post a Comment