[28/03, 9:50 PM] Pandit Venkatesh. Astrologer. Kannada: ಬೌಮ ಪ್ರದೋಷ ದ ಮಾಹಿತಿ ಓದಿ
ಮಾರ್ಚ್ 29, 2022, ಮಂಗಳವಾರ
ಭೌಮ ಪ್ರದೋಷ ವ್ರತ
06:31 PM ರಿಂದ 08:52 PM
ತ್ರಯೋದಶಿ
02 ಗಂಟೆಗಳು 21 ನಿಮಿಷಗಳು
ಚೈತ್ರ, ಕೃಷ್ಣ ತ್ರಯೋದಶಿ
ಪ್ರಾರಂಭವಾಗುತ್ತದೆ - 02:38 PM, ಮಾರ್ಚ್ 29
ಕೊನೆಗೊಳ್ಳುತ್ತದೆ - 01:19 PM, ಮಾರ್ಚ್ 30
ಭೌಮ ಪ್ರದೋಷ ವ್ರತ
ಮಂಗಳವಾರದ ಪ್ರದೋಷ ಸಮಯ..
ಪ್ರದೋಷ ಪದವು ಹಿಂದೂ ಪಂಚಾಂಗದಲ್ಲಿ ಪ್ರತಿ ಪಕ್ಷದ ಹದಿಮೂರನೇ ದಿನ ನಡೆಯುವ ಅರ್ಧಮಾಸಿಕ ಘಟನೆಯನ್ನು ಸೂಚಿಸುತ್ತದೆ.
.[೧] ಇದು ಹಿಂದೂ ದೇವತೆಯಾದ ಶಿವನ ಪೂಜೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಈ ಮಂಗಳಕರವಾದ ೩ ಗಂಟೆಯ ಅವಧಿ,
ಅಂದರೆ ಸೂರ್ಯಾಸ್ತಕ್ಕೆ ೧.೫ ಗಂಟೆ ಮೊದಲು ಮತ್ತು ನಂತರದ ಅವಧಿಯು ಶಿವನ ಪೂಜೆಗಾಗಿ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ.
ಈ ಅವಧಿಯಲ್ಲಿ ಮಾಡಲಾದ ಉಪವಾಸ ಅಥವಾ ವ್ರತವನ್ನು "ಪ್ರದೋಷ ವ್ರತ"ವೆಂದು ಕರೆಯಲಾಗುತ್ತದೆ.
[೨] ಭಕ್ತನು ರುದ್ರಾಕ್ಷಿ, ವಿಭೂತಿಗಳನ್ನು ಧರಿಸಿ ಶಿವನನ್ನು ಅಭಿಷೇಕ, ಗಂದದ ಲೇಪನ ದ್ರವ್ಯ, ಬಿಲ್ವಪತ್ರೆ, ಸುಗಂಧ ದ್ರವ್ಯ, ದೀಪ ಮತ್ತು ನೈವೇದ್ಯದಿಂದ ಪೂಜಿಸಬೇಕು.
ಪ್ರದೋಷ ಪದದ ವ್ಯುತ್ಪತ್ತಿ ಹೀಗಿದೆ -
ಪ್ರದೋಷನು ಕಲ್ಪ ಮತ್ತು ದೋಷ ಇವರ ಮಗನಾಗಿದ್ದಾನೆ.
ಅವನಿಗೆ ನಿಶಿತ ಮತ್ತು ವ್ಯುಸ್ಥ ಎಂಬ ಹೆಸರಿನ ಇಬ್ಬರು ಸೋದರರಿದ್ದಾರೆ.
ಈ ಮೂರು ಹೆಸರುಗಳ ಅರ್ಥ ರಾತ್ರಿಯ ಆರಂಭ, ಮಧ್ಯಭಾಗ ಮತ್ತು ಅಂತ್ಯ ಎಂಬುದಾಗಿದೆ.
[೩] ಪ್ರತಿ ತಿಂಗಳಲ್ಲಿ ಮತ್ತು ಪ್ರತಿ ಪಕ್ಷದ ಅವಧಿಯಲ್ಲಿ, ತ್ರಯೋದಶಿಯು ದ್ವಾದಶಿಯ ಅಂತ್ಯವನ್ನು ಸೇರುವಾಗಿನ ಸಮಯ ಬಿಂದುವನ್ನು ಪ್ರದೋಷ ಎಂದು ಕರೆಯಲಾಗುತ್ತದೆ.[೪]
ಈ ಮಂಗಳವಾರ ಪ್ರದೋಷ ಇದೆ ಇದಕ್ಕೆ ಬೌಮ ಪ್ರದೋಷ ಎನ್ನುತ್ತಾರೆ.
ದಾರಿದ್ರ್ಯ ದಹನ ಶಿವಸ್ತೋತ್ರ
ಪ್ರಸ್ತಾವನೆ :
ಸಂಸ್ಕೃತ ಭಾಷೆಯ " ದಾರಿದ್ರ್ಯಮ್" ಎಂಬ ಒಂದು ಪದಕ್ಕೆ ಭಾರತೀಯ ಭಾಷೆಗಳಲ್ಲಿ ಅಂತಹುದೇ ಆದ ಅರ್ಥವುಳ್ಳ ಪದಗಳಿವೆ. ಆದರೆ ಈ ಪದಕ್ಕೆ ಪಾಶ್ಚಿಮಾತ್ಯ ಭಾಷೆಗಳಲ್ಲಿ ಸರಿಸಮಾನವಾದ ಪದಗಳೇ ಇಲ್ಲವೆಂದರೂ ಅತಿಶಯೋಕ್ತಿಯಲ್ಲ. ಇದೇ ಸಂಸ್ಕೃತ ಭಾಷೆಯ ಸೌಂದರ್ಯ.
ದಾರಿದ್ರ್ಯಂ ಎಂಬ ಪದಕ್ಕೆ ಸಾಮಾನ್ಯವಾಗಿ ಅರ್ಥೈಸುವುದೇನೆಂದರೆ ಬಡತನ ಎಂಬುದಾಗಿ. ಬಡತನದ ಬಗ್ಗೆ ಯೋಚಿಸಿದಾಗ ನಮ್ಮ ಗಮನಕ್ಕೆ ಬರುವುದು ಭೌತಿಕ ಸಂಪತ್ತು ಹಾಗೂ ಅದರ ಸುತ್ತಾ ಸುತ್ತಿಕೊಂಡಿರುವ ಅಗತ್ಯತೆಗಳು. ಆದರೆ ದಾರಿದ್ರ್ಯಮ್ ಪದದ ಅಂತರಾರ್ಥವು ಇದಕ್ಕಿಂತ ವಿಶಾಲವಾದದ್ದು.
ಭೌತಿಕವಾಗಿ ಅಪಾರ ಸಂಪತ್ತನ್ನು ಗಳಿಸಿರುವವನೂ ಅಥವಾ ಹುಟ್ಟಿನಿಂದಲೇ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದವನೂ ಕೂಡಾ ದಾರಿದ್ರ್ಯದಿಂದ ಬಳಲುತ್ತಿರಬಹುದು. ಹಲವಾರು ಶ್ರೀಮಂತ ವ್ಯಕ್ತಿಗಳು ತಮ್ಮ ರಜೆ ದಿನಗಳನ್ನು ದಿನಕ್ಕೊಂದು ದೇಶಗಳಲ್ಲಿ ಕಳೆದು ದಿನನಿತ್ಯವೂ ಐಷಾರಾಮೀ ಕಾರುಗಳಲ್ಲಿ ಓಡಾಡಿಕೊಂಡಿದ್ದರೂ ಅವರುಗಳೂ ಸಹ ದಾರಿದ್ರ್ಯವನ್ನನುಭವಿಸುತ್ತಿರಬಹುದು.
ಅವರಲ್ಲಿ ಕೆಲವರನ್ನು ಕೂಲಿಯವರೊಂದಿಗೋ ಅಥವಾ ತರಕಾರಿ ಮಾರುವವರೊಂದಿಗೋ ಒಂದೆರಡು ರೂಪಾಯಿಗಳಿಗೂ ಚೌಕಾಸಿ ಮಾಡುವವರನ್ನು ಕಾಣಬಹುದು. ಈ ವಿಧದ ಅವರ ನಡಾವಳಿಕೆಗಳು ಅವರು ಅನುಭವಿಸುತ್ತಿರುವ ದಾರಿದ್ರ್ಯದ ಬಗೆಗೆ ಕೆಲವು ಉದಾಹರಣೆಗಳು.
ಇದೇ ರೀತಿಯ ಅನೇಕ ಸಂದರ್ಭಗಳನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಾವು ಗಮನಿಸಬಹುದು. ಇವುಗಳ ಒಟ್ಟಿನ ಸಾರಾಂಶವೆಂದರೆ ದಾರಿದ್ರ್ಯವು ಭೌತಿಕ ದಾರಿದ್ರ್ಯಕ್ಕೆ ಮಾತ್ರ ಅನ್ವಯಿಸಲಾರದು ಎಂಬುದನ್ನು ಖಚಿತಪಡಿಸುತ್ತದೆ. ದಾರಿದ್ರ್ಯವು ಭೌತಿಕ ಅಥವಾ ಸಂಪತ್ತಿಗೆ ಇಲ್ಲವೇ ಆಧ್ಯಾತ್ಮಿಕ ಬಡತನಕ್ಕೂ ಅನ್ವಯಿಸುತ್ತದೆ.
ಮಹರ್ಷಿ ವಸಿಷ್ಠರ ಈ ಸ್ತೋತ್ರವು ಈ ವಿಧದ ಬಡತನದ ದುಃಖಗಳನ್ನು ನಾಶಮಾಡೆಂದು ದೇವ ದೇವ ಮಹಾದೇವನಲ್ಲಿ ಪ್ರಾರ್ಥಿಸುವುದು. ಶಿವನು ತಮೋಗುಣದ ಸಾಕಾರಮೂರ್ತಿಯಾದರೆ ಮಹಾವಿಷ್ಣುವು ಸತ್ವ ಹಾಗೂ ರಜೋಗುಣಗಳ ಸಾಕಾರ ಮೂರ್ತಿ. ಎಲ್ಲ ಮೂರೂ ಗುಣಗಳೂ ಪರಸ್ಪರ ಏಕಕಾಲದಲ್ಲಿ ಅಸ್ತಿತ್ವದಲ್ಲಿರಬೇಕು. ಹಾಗಾಗಿ ಸೃಷ್ಟಿ ಸ್ಥಿತಿ ಲಯಗಳ ಅಧಿಪತಿಗಳು ಪರಸ್ಪರ ಜೊತೆಯಾಗಿ ಬ್ರಹ್ಮಾಂಡ ನೃತ್ಯವನ್ನು ವಿಶ್ವದ ಸಮತೋಲನಕ್ಕಾಗಿ ನರ್ತಿಸಬೇಕು.
ಶ್ಲೋಕ- 1 - ಸಂಸ್ಕೃತದಲ್ಲಿ :
ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರ ಧಾರಣಾಯ
ಕರ್ಪೂರಕಾಂತಿಧವಲಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ವಿಶ್ವೇಶ್ವರನೆ ನರಕಾಂಬುಧಿ ದಾಟಿಸುವನೆ
ಕರ್ಣಾಮೃತನೆ ಚಂದ್ರಶಿಖೆಯ ಭೂಷಣನೆ
ಕರ್ಪೂರ ಮಲ್ಲಿಗೆ ಧವಳವರ್ಣನೆ ಜಟಾಧರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರು ಸಮಸ್ತ ವಿಶ್ವದ ಅಧಿಪತಿಯೋ, ಯಾರು ನಮ್ಮನ್ನು ನರಕ ಸದೃಶವಾದ ಸಂಸಾರ ಸಾಗರವನ್ನು ದಾಟಲು ಸಹಕರಿಸುತ್ತಾರೋ, ಯಾರ ಪರಮ ಪವಿತ್ರವಾದ ನಾಮವು ಕಿವಿಗೆ ಅಮೃತದಂತೆ ಆಪ್ಯಾಯಮಾನವನ್ನುಂಟು ಮಾಡುತ್ತದೋ, ಯಾರು ಅರ್ಧ ಚಂದ್ರನನ್ನು ಒಡವೆಯಂತೆ ಧರಿಸಿರುವರೋ, ಯಾರ ದೇದೀಪ್ಯಮಾನವಾದ ಕರ್ಪೂರದ ದೀಪವು ಶುಭ್ರವಾದ ಬೆಳಕಿನಂತೆ ಬೆಳಗುತ್ತಿದೆಯೋ, ಯಾರು ಬಾಚಿರದ ಹಾಗೂ ಕತ್ತರಿಸದೇ ಇರುವ ಕೂದಲನ್ನು ಧರಿಸಿರುವರೋ, ಬಡತನದ ದುಃಖವನ್ನು ದಹಿಸುವ ಆ ಶಿವನಿಗೆ ನಾನು ವಂದಿಸುವೆ.
ಶ್ಲೋಕ - 2 - ಸಂಸ್ಕೃತದಲ್ಲಿ :
ಗೌರೀಪ್ರಿಯಾಯ ರಜನೀಶಕಲಾಧರಾಯ
ಕಾಲಾಂತಕಾಯ ಭುಜಗಾಧಿಪಕಂಕಣಾಯ
ಗಂಗಾಧರಾಯ ಗಜರಾಜವಿಮರ್ದನಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಗೌರೀಪ್ರಿಯ ಚಂದ್ರಕಲೆ ಧರಿಸಿದವನೇ
ಕಾಲಾಂತಕನೆ ಸರ್ಪರಾಜ ಕಂಕಣನೇ
ಗಂಗಾಧರನೆ ಗಜರಾಜನ ಮಣಿಸಿದವನೇ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರನ್ನು ದೇವಿ ಪಾರ್ವತಿಯು ಆರಾಧಿಸುತ್ತಾಳೋ, ಯಾರು ರಾತ್ರೆಯ ಅಧಿದೇವತೆಯಾದ ಅರ್ಧಚಂದ್ರನನ್ನು ತನ್ನ ಶಿರದಲ್ಲಿ ಧರಿಸಿರುವನೋ, ಕಾಲ ಯಮನನ್ನೇ ನಾಶಪಡಿಸುವವನೋ, ಯಾರು ಸರ್ಪಗಳ ರಾಜನನ್ನೇ ತನ್ನ ತೋಳ್ಬಂದಿಯನ್ನಾಗಿ ಧರಿಸಿರುವನೋ, ಯಾರು ತನ್ನ ಶಿರದಲ್ಲಿ ಗಂಗೆಯನ್ನು ಇಟ್ಟುಕೊಂಡಿರುವನೋ, ಯಾರು ಗಜರಾಜನನ್ನು ಸಂಹಾರಮಾಡಿದವನೋ, ಬಡತನದ ದುಃಖಗಳನ್ನು ಸುಟ್ಟುಬೂದಿಮಾಡುವ ಓ ಶಿವನೆ ! ನಿನಗೆ ನನ್ನ ಭಕ್ತಿಪೂರ್ವಕ ನಮನಗಳು.
ಶ್ಲೋಕ - 3 - ಸಂಸ್ಕೃತದಲ್ಲಿ :
ಭಕ್ತಿಪ್ರಿಯಾಯ ಭವರೋಗಭಯಾಪಹಾಯ
ಉಗ್ರಾಯ ದುರ್ಗಭವಸಾಗರತಾರಣಾಯ
ಜ್ಯೋತಿರ್ಮಯಾಯ ಪುನರುದ್ಭವವಾರಣಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಭಕ್ತಿಪ್ರಿಯನೆ ಭವರೋಗ ಭಯಹರನೆ
ಉಗ್ರನೆ ದುರ್ಗಮ ಭವಾಂಬುಧಿಯ ದಾಟಿಸುವನೆ
ಜ್ಯೋತಿಸ್ವರೂಪಿ ಮರುಜನ್ಮ ನಿವಾರಕನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರನ್ನು ಅವನ ಭಕ್ತರು ತೀವ್ರವಾಗಿ ಪ್ರೀತಿಸಲ್ಪಡುತ್ತಾನೋ, ಮಾನವನ ಜೀವನದಲ್ಲಿನ ರೋಗ, ರುಜಿನಗಳ ಭೀತಿಯನ್ನು ನಾಶಪಡಿಸುವನೋ, ಯಾರ ಇರುವಿಕೆಯೇ ದುರ್ಜನರ ಮನದಲ್ಲಿ ಭೀತಿ ಹುಟ್ಟಿಸುವುದೋ, ದುರ್ಭರವಾದ ಸಂಸಾರ ಸಾಗರವನ್ನು ದಾಟಲು ಮಾರ್ಗದರ್ಶನವನ್ನು ನೀಡುವನೋ, ಯಾರು ಬೆಳಕಿನ ಮೂರ್ತಸ್ವರೂಪನೋ, ಯಾರು ತನ್ನ ದಿವ್ಯ ನಾಮಗಳನ್ನು ಪಠಿಸುವಾಗ ನಾಟ್ಯಗೈಯುತ್ತಾರೋ, ಬಡತನದ ಬೇಗೆಯ ದುಃಖಗಳನ್ನು ಸುಟ್ಟುಬೂದಿ ಮಾಡುವ, ಮಹೇಶ್ವರನಿಗೆ ನನ್ನ ಭಕ್ತಿಪೂರ್ವಕ ನಮನಗಳು.
ಶ್ಲೋಕ - 4 - ಸಂಸ್ಕೃತದಲ್ಲಿ :
ಚರ್ಮಾಂಬರಾಯ ಶವಭಸ್ಮವಿಲೇಪನಾಯ
ಭಾಲೇಕ್ಷಣಾಯ ಮಣಿಕುಂಡಲಮಂಡಿತಾಯ
ಮಂಜೀರಪಾದಯುಗಲಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಚರ್ಮಾಂಬರನೆ ಶವಭಸ್ಮ ವಿಲೇಪಿತನೆ
ಹಣೆಗಣ್ಣವನೆ ಸರ್ಪಕುಂಡಲ ಶೋಭಿತನೆ
ಪಾದದಿ ಗೆಜ್ಜೆ ತೊಟ್ಟವನೆ ಜಟಾಧರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರ ವಸ್ತ್ರವು ಪ್ರಾಣಿಯ ಚರ್ಮದಿಂದಾಗಿರುವುದೋ, ಯಾರು ತನ್ನ ಶರೀರವನ್ನೆಲ್ಲಾ ಚಿತೆಯಲ್ಲಿ ಉರಿದು ಬೂದಿಯಾದ ಭಸ್ಮವನ್ನೇ ಲೇಪಿಸಿಕೊಳ್ಳುವನೋ, ಯಾರು ತನ್ನ ಕಾಲುಗಳಿಗೆ ಸುಮಧುರ ನಾದವನ್ನು ಉಂಟುಮಾಡುವ ಗೆಜ್ಜೆಯನ್ನು ಧರಿಸಿರುವನೋ, ಯಾರು ತನ್ನ ತಲೆಗೂದಲನ್ನು ಬಾಚದೇ ಕತ್ತರಿಸದೇ ಇಟ್ಟುಕೊಂಡಿರುವನೋ, ಬಡತನದ ದುಃಖಗಳನ್ನು ಕ್ಷಣಮಾತ್ರದಲ್ಲಿ ಸುಟ್ಟುಬೂದಿಮಾಡುವ ಹೇ ಶಂಕರನೇ ನಿನಗೆ ನನ್ನ ಪ್ರಣಾಮಗಳು.
ಶ್ಲೋಕ - 5 - ಸಂಸ್ಕೃತದಲ್ಲಿ :
ಪಂಚಾನನಾಯ ಫಣಿರಾಜವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡನಾಯ
ಆನಂದಭೂಮಿವರದಾಯ ತಮೋಹರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಐಮೊಗನೆ ಸರ್ಪರಾಜ ವಿಭೂಷಿತನೆ
ಹೊನ್ನುತ್ತರೀಯ ಹೊದ್ದವನೆ ಮೂಲೋಕ ಶೋಭಿಪನೆ
ಆನಂದಾಶ್ರಯನೆ ವರದನೆ ತಮೋಹರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರಿಗೆ ಐದು ಮುಖಗಳಿರುವುದೋ ಹಾಗೂ ಸರ್ಪರಾಜನನ್ನೇ ಆಭರಣವಾಗಿ ಧರಿಸಿರುವನೋ, ಯಾರು ದಿವ್ಯವಾದ ಬಂಗಾರದ ವಸ್ತ್ರವನ್ನು ಧರಿಸಿರುವನೋ, ಮೂರು ಲೋಕಗಳಲ್ಲೂ ಶೋಭಿಸಲ್ಪಟ್ಟವನೋ, ಭಕ್ತರಿಗೆ ಬೇಡಿದ ವರವನ್ನು ಕರುಣಿಸುವವನೋ, ಆನಂದಸಾಗರನೋ, ತಾಮಸ ಶಕ್ತಿಯನ್ನೇ ಮೂರ್ತೀಭವಿಸಿರುವ, ಬಡತನದ ಬೇಗೆಯನ್ನು ಸುಟ್ಟು ಬೂದಿಮಾಡುವ ಶಿವನಿಗೆ ನನ್ನ ನಮನಗಳು.
ಶ್ಲೋಕ - 6 - ಸಂಸ್ಕೃತದಲ್ಲಿ :
ಭಾನುಪ್ರಿಯಾಯ ದುರಿತಾರ್ಣವತಾರಣಾಯ
ಕಾಲಾಂತಕಾಯ ಕಮಲಾಸನ ಪೂಜಿತಾಯ
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಭಾನುಪ್ರಿಯನೆ ಪಾಪಶರಧಿ ದಾಟಿಸುವನೆ
ಕಾಲಾಂತಕನೆ ಕಮಲಾಸನ ಪೂಜಿತನೆ
ಮುಕ್ಕಣ್ಣನೆ ಶುಭಲಕ್ಷಣ ತೋರುವವನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರು ಸೂರ್ಯದೇವನಿಗೆ ಅತ್ಯಂತ ಪ್ರೀತಿಪಾತ್ರನೋ, ಯಾರು ನಮಗೆ ಸಂಸಾರ ಸಾಗರವನ್ನು ಕ್ಷೇಮವಾಗಿ ದಾಟಲು ಸಹಾಯ ಮಾಡುತ್ತಾರೋ, ಯಾರು ಯಮಧರ್ಮ ರಾಜನನ್ನು ನಾಶಮಾಡಿದವನೋ, ಕಮಲ ಪುಷ್ಪದ ಸಿಂಹಾಸನದಲ್ಲಿ ವಿರಾಜಮಾನನಾಗಿರುವ ಬ್ರಹ್ಮನಿಂದ ಆರಾಧಿಸಲ್ಪಡುವವನನ್ನು, ಮತ್ತು ಯಾರಿಗೆ ಮೂರು ಕಣ್ಣುಗಳಿದ್ದು, ಸಮಸ್ತ ಶುಭಲಕ್ಷಣಗಳನ್ನು ತೋರುವ, ಬಡತನದ ದುಃಖಗಳನ್ನು ಕ್ಷಣಾರ್ಧದಲ್ಲಿ ಸುಟ್ಟುಬೂದಿ ಮಾಡುವ ಆ ಶಿವನಿಗೆ ನನ್ನ ಭಕ್ತಿಪೂರ್ವಕ ನಮನಗಳು.
ಶ್ಲೋಕ - 7- ಸಂಸ್ಕೃತದಲ್ಲಿ :
ರಾಮಪ್ರಿಯಾಯ ರಘುನಾಥವರಪ್ರದಾಯ
ನಾಗಪ್ರಿಯಾಯ ನರಕಾರ್ಣವತಾರಣಾಯ
ಪುಣ್ಯಾಯ ಪುಣ್ಯಚರಿತಾಯ ಸುರಾರ್ಚಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ರಾಮಪ್ರಿಯನೆ ರಘುನಾಥ ವರದಾತನೆ
ನಾಗಪ್ರಿಯ ನರಕಾರ್ಣವ ದಾಟಿಸುವನೆ
ಪುಣ್ಯಸ್ವರೂಪಿ ಪುಣ್ಯಚರಿತ್ರ ದೇವ ಪೂಜಿತನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಯಾರು ವಿಷ್ಣುವಿನ ಅವತಾರವಾದ ಶ್ರೀ ರಾಮನಿಗೆ ಅತ್ಯಂತ ಪ್ರೀತಿಪಾತ್ರನೋ, ಹಾಗೂ ರಘುವಂಶದ ಶ್ರೇಷ್ಟ ಚಕ್ರವರ್ತಿಯಾದ ಶ್ರೀ ರಾಮಚಂದ್ರನಿಗೆ ಅನೇಕ ವರಗಳನ್ನು ದಯಪಾಲಿಸಿರುವನೋ, ಸರ್ಪಗಳಿಗೆ ಅತ್ಯಂತ ಪ್ರೀತಿಪಾತ್ರನಾದವನೋ, ನರಕವನ್ನೇ ನಾಶಪಡಿಸಿದವನೋ, ಪವಿತ್ರರಲ್ಲಿ ಪರಮ ಪವಿತ್ರನಾದವನೋ, ದೇವಾನುದೇವತೆಗಳಿಂದ ಪೂಜಿಸಲ್ಪಡುವವನೋ, ಭಕ್ತರ ಬಡತನದ ದುಃಖಗಳನ್ನು ಸುಟ್ಟು ಬೂದಿಮಾಡುವ ಆ ಶಂಕರ ಮಹಾದೇವನಿಗೆ ನನ್ನ ಭಕ್ತಿಪೂರ್ವಕ ನಮನಗಳು.
ಶ್ಲೋಕ - 8 - ಸಂಸ್ಕೃತದಲ್ಲಿ :
ಮುಕ್ತೀಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಮುಕ್ತೀಶನೆ ಫಲದಾತ ಗುಣಗಳೊಡೆಯ
ಗೀತಪ್ರಿಯನೆ ವೃಷಭೇಂದ್ರ ವಾಹನನೆ
ಮಾತಂಗ ಚರ್ಮಧರನೆ ಮಹೇಶ್ವರನೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಸಂಪೂರ್ಣ ಭಕ್ತಿಯಿಂದ ಭಜಿಸಿದರೆ ಮುಕ್ತಿಯನ್ನು ದಯಪಾಲಿಸುವ ದೇವ ದೇವನೇ ಅವನು. ಗಣಗಳ ರಾಜ ಹಾಗೂ ಸಂಗೀತಪ್ರಿಯ ಮತ್ತು ಅವನ ವಾಹನವು ನಂದಿ, ಗಜಚರ್ಮವನ್ನೇ ಧರಿಸಿರುವವನು ನೀನು, ಓ ಮಹೇಶ್ವರ ! ನೀನು ಕ್ಷಣ ಮಾತ್ರದಲ್ಲೇ ಬಡತನದ ದುಃಖಗಳನ್ನು ಸುಟ್ಟು ಬೂದಿಮಾಡುವೆ. ನಿನ್ನ ಪಾದಗಳಲ್ಲಿ ಶರಣಾಗಿ ಭಕ್ತಿಯಿಂದ ನಮಸ್ಕರಿಸುವೆ.
ಶ್ಲೋಕ - 9 - ಸಂಸ್ಕೃತದಲ್ಲಿ :
ಗೌರೀವಿಲಾಸ ಭುವನಾಯ ಮಹೋದಯಾಯ
ಪಂಚಾನನಾಯ ಶರಣಾಗತರಕ್ಷಕಾಯ
ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ
ಕನ್ನಡದಲ್ಲಿ :
ಗೌರೀವಿಲಾಸ ನಿಲಯನೆ ಮುಕ್ತಿಪ್ರದಾತ
ಐಮೊಗನೆ ಶರಣೆಂಬರನು ಕಾಯುವನೆ
ಪ್ರಲಯಕರ ಎಲ್ಲ ಜಗದೊಡೆಯ ನಿನಗೆ
ದಾರಿದ್ರ್ಯದುಃಖ ದಹಿಸುವನೆ ಶಿವನೆ ನಮಿಪೆ
ವಿವರಣೆ :
ಭಕ್ತರ ದಾರಿದ್ರ್ಯವನ್ನು ದಹಿಸುವ, ಗೌರೀದೇವಿಯ ಅನುಗ್ರಹ ಪ್ರಪಂಚವಾದ, ದೇವ ದೇವನಾದ, ಸಿಂಹದಂತಿರುವ, ಸಮಸ್ತ ಕೋರಿಕೆಗ ಈಡೇರಿಸುವ ಕಲ್ಪವೃಕ್ಷವೇ ಆಗಿರುವ, ರಕ್ಷಣೆಯನ್ನು ಬೇಡುವವರಿಗೆ ಸರ್ವಸ್ವವೂ ಆಗಿರುವ, ಹಾಗೂ ಸಮಸ್ತ ವಿಶ್ವದ ಅಧಿಪತಿಯಾದ ಮಹಾದೇವನೆ ನಿನಗೆ ಭಕ್ತಿಪೂರ್ವಕ ನಮನಗಳು.
ಫಲಶ್ರುತಿ - ಸಂಸ್ಕೃತದಲ್ಲಿ :
ವಸಿಷ್ಟೇನ ಕೃತಂ ಸ್ತೋತ್ರಂ ಸರ್ವ ಸಂಪತ್ಕರಂ ಪರಂ
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗಮವಾಪ್ಯತಾಮ್
ಫಲಶ್ರುತಿ - ಕನ್ನಡದಲ್ಲಿ :
ವಸಿಷ್ಠ ಮಾಮುನಿ ರಚಿಸಿದೀ ಸ್ತೋತ್ರವನು ಭಕ್ತಿಯಿಂ ದಿನವು
ಮೂರ್ಕಾಲ ಪಠಿಸುವವಗೆಲ್ಲ ಸಂಪದ ಸಗ್ಗ ಸುಖವು
ವಿವರಣೆ :
ವಸಿಷ್ಠ ಮುನಿಗಳು ರಚಿಸಿದ ಈ ಸ್ತೋತ್ರವನ್ನು ತ್ರಿಕಾಲದಲ್ಲೂ ಭಕ್ತಿಯಿಂದ ಪಠಿಸುವವರ ಎಲ್ಲರ ರೋಗ ರುಜಿನಗಳನ್ನು ದೂರವಾಗಿ ಎಲ್ಲ ವಿಧದ ಸ್ವರ್ಗ ಸದೃಶವಾದ ಸಂಪತ್ತುಗಳನ್ನೂ ಅನುಭವಿಸುವರು.
ಓಂ ನಮಃ ಶಿವಾಯ ಶಿವಾಯ ನಮಃ ಓಂ
ಎಲ್ಲಾ ಪ್ರದೋಷ ಆಚರಿಸಿ ಶುಭವಾಗಲಿ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*
*ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[28/03, 9:51 PM] Pandit Venkatesh. Astrologer. Kannada: 🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 29/03/22
ಶಾಲಿವಾಹನ ಶಕ ವರ್ಷ-೧೯೪೩
ಕಲಿವರ್ಷ- ೫೧೨೩
ಸಂವತ್ಸರ - ಪ್ಲವ
ಆಯಣ- ಉತ್ತರಾಯಣ
ಋತು -ಶಿಶಿರ ಋತು
ಮಾಸ(ಚಾಂದ್ರ)- ಫಾಲ್ಗುನ
ಪಕ್ಷ - ಕೃಷ್ಣಪಕ್ಷ
ತಿಥಿ - ದ್ವಾದಶಿ 14:39
ಮಾ.ನಿ - ವಿಷ್ಣು
ಮಾಸ (ಸೌರ) - ಮೀನ (ಸುಗ್ಗಿ)
ದಿನ - 15
ನಕ್ಷತ್ರ - ಧನಿಷ್ಠ 11:28
ಯೋಗ - ಸಾಧ್ಯ15:11
ಕರಣ - ತೈತುಲ 14:38
ವಿಷ - 18:28
ಅಮೃತ - 27:47
ರಾಹುಕಾಲ -03:39-05:10
ಗುಳಿಕ ಕಾಲ -12:36-02:07
ವಾರ - ಮಂಗಳವಾರ
ಸೂರ್ಯೋದಯ (ಉಡುಪಿ)- 06:30
ಸೂರ್ಯಾಸ್ತ - 06:40
ದಿನ ವಿಶೇಷ- *ಪ್ರದೋಷಃ*
🕉️🕉️🕉️🕉️🕉️🕉️🕉️🕉️🕉️
[28/03, 9:51 PM] Pandit Venkatesh. Astrologer. Kannada: *ಗಂಧದ ಮಹತ್ವ*
*ಮಂಗಳ ದ್ರವ್ಯ ಗಳಲ್ಲಿ ಮತ್ತು ಪಂಚೂಪಚಾರ ಷೊಡಶೋಪಚಾರ ಪೂಜೆ ಗಳಲ್ಲಿ ಈ ಗಂಧದ ಮಹತ್ವ ತುಂಬ ಇದೆ.*
*ಯಾವ ದೇವರ ಪೂಜೆ ಆದರೂ ಗಂಧವಿಲ್ದೇ ಪೂಜೆ ಮಾಡುವಹಾಗಿಲ್ಲ ಇದು ಶಾಸ್ತ್ರ ನಿಯಮ ಈ ಗಂಧವನ್ನು ಕೂರಡಿನಲ್ಲಿ ತೇದ ಗಂಧ ಮಾತ್ರ ಪೂಜೆಗೆ ಶ್ರೇಷ್ಠ. ಇದರ ಸಂಕೇತವು ಎನಂದ್ರೇ ನನ್ನ ಪೂರ್ವ ಜನ್ಮದ ಕರ್ಮ ವನ್ನು ತೇದು ಈ ಜನ್ಮದಲ್ಲಿ ನಿನ್ನ ಪೂಜೆಯಿಂದ ಈ ಗಂಧವನ್ನು ಹಚ್ಚುವ ಮೂಲಕ ನನ್ನನ್ನು ಅನುಗ್ರಹಿಸು ದೇವ ಎಂದು ಪ್ರಾರ್ಥನೆ ಮಾಡುವ ಸಂಕೇತವಾಗಿದೇ.*
*ಯಾರು ದಿನ ನಿತ್ಯ ಶ್ರೀಸೂಕ್ತ ವನ್ನು ಹೇಳುತ್ತ ಕೂರಡಿನಲ್ಲಿ ಗಂಧ ತೇದು ದೇವರಿಗೆ ಅರ್ಪಿಸಿದರೇ ಆ ಮನೇಯಲ್ಲಿ ದುಃಖ ದಾರಿದ್ರ ಗಳು ನಾಶಾವಾಗಿ ಆ ಮಹಾಲಕ್ಷ್ಮಿಯ ಸಾನ್ನಿಧ್ಯ ನೆಲೆಸುವುದು ಇದರಿಂದ ಅವರ ಜೀವನದಲ್ಲಿನ ಸುಖ ಸಂತೂಷ ನೆಮ್ಮದಿ ಶಾಂತಿ ಲಭಿಸುವುದರಲ್ಲಿ ಸಂಶಯವಿಲ್ಲ.* *ಇನ್ನೂ ಯಾವ ದೇವರಿಗೆ ಯಾವ ರೀತಿಯ ಗಂಧ ಹಚ್ಚ ಬೇಕು ಅಂತ ನೂಡೂಣ ಬನ್ನಿ*
*1. ಗಣಪತಿಗೆ ರಕ್ತ ಚಂದನವನ್ನು ಗಣಪತಿ ಹೂಟ್ಟೇ ಹಚ್ಚುವುದರಿಂದ ಸಕಲ ಐಶ್ವರ್ಯ ಪ್ರಾಪ್ತಿ ಗ್ರಹಚಾರ ದೋಷ ಪರಿಹಾರ*
*2 ಮಹಾಲಕ್ಷ್ಮಿಗೇ ಅರಿಶಿನ ಗಂಧವನ್ನು ಕಂಠಕ್ಕೆ ಹಚ್ಚುವುದರಿಂದ ಮನೇಯಲ್ಲಿ ಘರ್ಷಣೆಯು ಕಡಿಮೆ ಯಾಗಿ ವಾಕ್ಯ ಸಿದ್ಧಿ ಮತ್ತು ಸಾಲ ಬಾದೇ ತಿರುವುದು*
*3. ದುರ್ಗ ದೇವಿಗೆ ಕುಂಕುಮ ಗಂಧವನ್ನು ವಕ್ಷಸ್ಥಳದಲ್ಲಿ* *ಹಚ್ಚುವುದರಿಂದ ಆರೋಗ್ಯ ಸಿದ್ಧ ಮತ್ತು ಉದ್ಯೋಗ ಪ್ರಾಪ್ತಿ*
*4 ಮಹಾವಿಷ್ಣು ಗೇ ಹಳದಿ ಗಂಧವನ್ನು ಪಾದಕ್ಕೆ ಹಚ್ಚುವುದರಿಂದ ಸಕಲ ಶನಿ ದೂಷ ಪರಿಹಾರ ಮತ್ತು ದಾಂಪತ್ಯ ಸುಖ* *ಲಭಿಸುವುದು*
*5. ಪರಶಿವ ಅರಿಶಿನ ಕುಂಕುಮ ಮಿಶ್ರ ಮಾಡಿದ ಗಂಧವನ್ನು ಶಿವಲಿಂಗ ದ ಲ್ಲಿ ಬಿಲ್ವ ಪತ್ರ ಸಹಿತ ಹಣೇಗೇ ಹಚ್ಚುವುದರಿಂದ ಸಕಲ ಶಾಪ ಪಾಪ ಪರಿಹಾರ*
*6 ಆಂಜನೇಯ ಕೇಸರಿ ಗಂಧವನ್ನು ಆಂಜನೇಯ ಬಾಲಕ್ಕೆ ಹಚ್ಚುವುದರಿಂದ ಸಕಲ ಶತ್ರು ಬಾಧೇ ಪರಿಹಾರ ಸಾಧ್ಯ*
*ಹಿಗೇ ದೇವರಿಗೆ ಗಂಧವನ್ನು ಹಚ್ಚುವುದರಿಂದ ಸಕಲ ಶಾಪ ಪಾಪ ಪರಿಹಾರ ವಾಗುವುದರಲ್ಲಿ ಸಂಶಯವಿಲ್ಲ ಹಾಗಾಗಿ ಎಲ್ಲರು ಗಂಧ ಹಚ್ಚುವ ಮೂಲಕ ಆ ದೇವರ ಕೃಪೆಗೇ ಪಾತ್ರರಾಗಿ*
✍️ *ಮಾತೃಭೂಮಿ ಹಿಂದೂ ಸ್ಪಂದನೆ*
*ನಮ್ಮವರಿಂದ ನಮಗಾಗಿ*
*ಸ್ವಚ್ಛ ಹಿಂದೂ ರಾಷ್ಟ್ರ ನಿರ್ಮಾಣ*
[28/03, 9:53 PM] Pandit Venkatesh. Astrologer. Kannada: ☆☆🌹 ದೇವರನ್ನು ಸೇರುವ ಹಣ 🌹☆☆
ಬಹಳ ವರ್ಷಗಳ ಹಿಂದಿನ ಮಾತು. ಶ್ರೀಮಂತ ವರ್ತಕನ ಬಳಿ ಒಬ್ಬ ನೌಕರನು ಶ್ರದ್ಧೆಯಿಂದ ಕೆಲಸವನ್ನು ಮಾಡಿಕೊಂಡಿದ್ದ. ಶ್ರೀಮಂತನು ವಹಿಸುವ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ನೌಕರನು ವರ್ತಕನ ವಿಶ್ವಾಸವನ್ನು ಗಳಿಸಿ, ಆತನ ಪ್ರೀತಿಗೆ ಪಾತ್ರನಾಗಿದ್ದ.
ನೌಕರನು ಪುರಿ ಜಗನ್ನಾಥಸ್ವಾಮಿಯ ಪರಮಭಕ್ತನೂ ಆಗಿದ್ದ. ಕೆಲಸವಿಲ್ಲದ ಸಮಯವನ್ನು ಜಗನ್ನಾಥನ ಭಜನೆ, ಕೀರ್ತನೆಯಲ್ಲಿ ಕಳೆಯತ್ತಿದ್ದ. ಅನೇಕ ಸತ್ಸಂಗಗಳಲ್ಲಿ ಭಾಗಿಯಾಗುತ್ತಿದ್ದ. ಸಾಧು-ಸಂತರ, ಸಜ್ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಪುರಿ ಜಗನ್ನಾಥ ಪುರಿಯ ಯಾತ್ರೆ ಮಾಡಬಯಸಿದ್ದ. ಆದರೆ ಕಾಲಕೂಡಿ ಬಂದಿರಲಿಲ್ಲ. ಅದೊಂದು ದಿನ ಅಂಥ ಸಕಾಲವೂ ಕೂಡಿಬಂದಿತು. ನೌಕರನು ಶ್ರೀಮಂತ ವರ್ತಕನ ಬಳಿ ತಾನು ಜಗನ್ನಾಥಪುರಿಗೆ ಯಾತ್ರೆ ಹೊರಟಿರುವುದಾಗಿ ತಿಳಿಸಿ, ಪಾದಯಾತ್ರೆ ಪೂರೈಸಿಕೊಂಡು ಬರುವುದಕ್ಕಾಗಿ ತನಗೆ ಒಂದು ತಿಂಗಳು ರಜೆಯನ್ನು ನೀಡಬೇಕಾಗಿ ಕೋರಿಕೊಂಡನು.
ಆಗ ವರ್ತನು, "ನನಗಂತೂ ಈ ವ್ಯಾಪಾರ, ವ್ಯವಹಾರದ ಜಂಜಾಟದಲ್ಲಿ ಯಾವುದೇ ತೀರ್ಥಯಾತ್ರೆ, ಪಾದಯಾತ್ರೆ ಮಾಡುವುದಕ್ಕೆ ಆಗುವುದಿಲ್ಲ. ದೊಡ್ಡದಾದ ಸಂಸಾರವನ್ನು ಕಟ್ಟಿಕೊಂಡ ಮೇಲೆ ದೇವರಿಗಾಗಿ ಸಮಯ ಮೀಸಲಿಡುವುದಕ್ಕೆ ಆಗುವುದೇ ಇಲ್ಲ. ಈ ಕುರಿತು ನನಗೆ ನೋವಿದೆ. ನಮಗೆ ಇಷ್ಟೆಲ್ಲವನ್ನು ಕೊಟ್ಟ ದೇವರನ್ನು ನಾವು ಮರೆತು ಬಿಡುತ್ತೇವೆ. ದೇವರು ನಮ್ಮನ್ನು ಕ್ಷಮಿಸುವನೋ ಇಲ್ಲವೋ ಆದರೆ ನಮ್ಮನ್ನೊಂದು ಅಪರಾಧಿಭಾವ ಕಾಡುತ್ತಿರುತ್ತದೆ. ಹೇಗೂ ನೀನು ಪುರಿಗೆ ಹೋಗುತ್ತಿರುವೆ. ಇದೋ, ಈ ಐವತ್ತು ರೂ.ಗಳನ್ನು ತೆಗೆದು ಕೋ. ಇದನ್ನು ಜಗನ್ನಾಥಸ್ವಾಮಿಯ ಸನ್ನಿಧಿಗೆ ಅರ್ಪಿಸಿಬಿಡು. ನನ್ನ ಪರವಾಗಿ ದೇವರಿಗೆ ನನ್ನ ಈ ಕಾಣಿಕೆಯನ್ನು ಅರ್ಪಿಸಿಬಿಡು. ಜಗನ್ನಾಥನಲ್ಲಿ ಕ್ಷಮೆ ಕೇಳಿ ನನ್ನನ್ನು ಕ್ಷಮಿಸುವುದಕ್ಕೆ ಹೇಳು" ಎಂದನು.
ನೌಕರನು ವರ್ತಕನು ನೀಡಿದ 50 ರೂ.ಗಳನ್ನು ತೆಗೆದುಕೊಂಡು ಸಹಯಾತ್ರಿಗಳೊಂದಿಗೆ ಜಗನ್ನಾಥಪುರಿಗೆ ಪಾದಯಾತ್ರೆ ಹೊರಟನು. ಅನೇಕ ದಿನಗಳ ನಂತರ ಜಗನ್ನಾಥಪುರಿಯನ್ನು ತಲುಪಿದನು. ಇನ್ನೇನು ಜಗನ್ನಾಥಸ್ವಾಮಿಯ ದರ್ಶನ ಪಡೆಯುವ ಸಲುವಾಗಿ ದೇವಸ್ಥಾನಕ್ಕೆ ಹೂರಟಿರುತ್ತಾನೆ. ಮಾರ್ಗಮಧ್ಯದಲ್ಲಿ ಕೆಲವು ಭಕ್ತರು ಭಗವಂತನ ಕೀರ್ತನೆ ಮಾಡಿಕೊಂಡಿರುವುದು ಕಣ್ಣಿಗೆ ಬೀಳುತ್ತದೆ. ಕುತೂಹಲದಿಂದ ಗಮನಿಸಿದಾಗ ಆತನಿಗೆ ಕೀರ್ತನೆಯಲ್ಲಿ ತೊಡಗಿರುವ ಭಕ್ತರಲ್ಲಿ ಕೆಲವರು ಬಳಲಿದವರಂತೆ ಮತ್ತು ಹಸಿದವರಂತೆ ಕಾಣುತ್ತದೆ. ಅವರಿಗೆ ಹಸಿವೆಯಾಗಿದೆ ಎಂಬ ವಿಷಯ ಅರಿತಂತೆ ಆತನಿಗೆ ಅವರೆಲ್ಲರಿಗೂ ಊಟ ಮಾಡಿಸಬೇಕು, ಭಂಡಾರದ ವ್ಯವಸ್ಥೆ ಮಾಡಬೇಕೆನಿಸಿತು. ಆ ಕೂಡಲೆ ಆತ ಭಜನೆ ಮಾಡಿಕೊಂಡಿದ್ದ ಭಕ್ತರಿಗೆಲ್ಲ ಮೃಷ್ಟಾನ್ನ ಭೋಜನವನ್ನು ಮಾಡಿಸುತ್ತಾನೆ. ಭಗವದ್ಭಕ್ತರ ಭಂಡಾರಕ್ಕೆ (ಭೋಜನ) ಒಟ್ಟು 48 ರೂ. ಖರ್ಚು ಆಗುತ್ತದೆ. ನೌಕರನು ಶ್ರೀಮಂತ ವರ್ತಕನು ನೀಡಿದ್ದ 50 ರೂ.ಗಳಲ್ಲಿಂದ 48 ರೂಗಳನ್ನು ತೆಗೆದು ಭಂಡಾರದ ಖರ್ಚಿಗೆ ನೀಡಿದ. ಇನ್ನೆರಡು ರೂಪಾಯಿಗಳನ್ನು ದೇವಸ್ಥಾನಕ್ಕೆ ಹೋಗಿ ಜಗನ್ನಾಥನ ಸನ್ನಿಧಾನಕ್ಕೆ ಕೈಮುಗಿದು ದೇವರ ಹುಂಡಿ ಪೆಟ್ಟಿಗೆಯಲ್ಲಿ ಹಾಕಿದನು. ವರ್ತಕನ ಹಣವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿದ್ದರಿಂದ, ಆತ ಕೇಳಿದರೆ ಹಣವನ್ನು ಜಗನ್ನಾಥನಿಗೆ ಅರ್ಪಿಸಿದ್ದೇನೆ ಎಂದು ಹೇಳೋಣವೆಂದು ಮನಸ್ಸಿನಲ್ಲಿಯೋ ಅಂದುಕೊಂಡನು.
ಇತ್ತ ಶ್ರೀಮಂತ ವರ್ತಕನ ಕನಸಿನಲ್ಲಿ ಕಾಣಿಸಿಕೊಂಡ ಜಗನ್ನಾಥಸ್ವಾಮಿಯು, 'ನಾನು ನಿನ್ನ ನಲವತ್ತೆಂಟು ರೂಪಾಯಿಯ ಧರ್ಮಕಾಣಿಕೆಯನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದೇನೆ, ನನ್ನ ಆಶೀರ್ವಾದ ನಿನ್ನ ಮೇಲಿದೆ' ಎಂದು ಹೇಳಿ ಅಂತರ್ಧಾನನಾದನು.
ವರ್ತಕ ಯೋಚಿಸಿದ, 'ನಾನು ನೌಕರನಿಗೆ ಕೊಟ್ಟಿದ್ದು 50ರೂ.ಗಳು. ನನ್ನ ಕನಸಿನಲ್ಲಿ ಬಂದು ಜಗನ್ನಾಥನು 48 ರೂ.ಗಳು ಸಂದಾಯವಾಗಿದೆ, ನಿನ್ನ ಕಾಣಿಕೆಯನ್ನು ಹರ್ಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳುತ್ತಿರುವನಲ್ಲಾ? ನನ್ನ ನೌಕರ ಪ್ರಾಮಾಣಿಕ. ಆತ ಹೀಗೆಲ್ಲ ಮಾಡುವವನಲ್ಲ' ಎಂದು ತನಗೆತಾನೇ ಹೇಳಿಕೊಂಡು ಸುಮ್ಮನಾದ.
ಇದಾದ ಕೆಲದಿನಗಳ ನಂತರ ನೌಕರನು ಯಾತ್ರೆಯನ್ನು ಮುಗಿಸಿಕೊಂಡು ಬಂದನು. ವರ್ತಕನ ಬಳಿ ಆತನ ಕಾಣಿಕೆಯನ್ನು ದೇವರಿಗೆ ಅರ್ಪಿಸಿರುವುದಾಗಿ ತಿಳಿಸಿದನು. ಆಗ ವರ್ತಕನು, "ನೀನು ನಲವತ್ತೆಂಟು ರೂಪಾಯಿಗಳನ್ನು ಮಾತ್ರ ದೇವರಿಗೆ ಅರ್ಪಿಸಿರುವೆ. ಜಗನ್ನಾಥನೇ ಖುದ್ದಾಗಿ ಬಂದು ನನ್ನ ಕನಸಿನಲ್ಲಿ ಹೇಳಿದ. ಇನ್ನೆರಡು ರೂಪಾಯಿಗಳನ್ನು ಏನು ಮಾಡಿದೆ?" ಎಂದು ನೌಕರನನ್ನು ಕೇಳಿದನು.
ಆಗ ನೌಕರನು ತಾನು ನಲವತ್ತೆಂಟು ರೂಪಾಯಿಗಳನ್ನು ಖರ್ಚುಮಾಡಿ ಹಸಿದ ಭಕ್ತರಿಗೆ ಮತ್ತು ಸಂತರಿಗೆ ಭೋಜನವನ್ನು ಮಾಡಿಸಿರುವುದಾಗಿ ಹೇಳಿ, ಉಳಿದೆರಡು ರೂ.ಗಳನ್ನು ಮಾತ್ರ ದೇವರ ಹುಂಡಿಯಲ್ಲಿ ಹಾಕಿರುವುದಾಗಿ ತಿಳಿಸಿದನು. ನೌಕರನ ಮಾತು ಕೇಳುತ್ತಲೇ ವರ್ತಕನು ಗದ್ಗದಿತನಾದನು. ಆನಂದಬಾಷ್ಪದಿಂದ ಕೂಡಿ ನೌಕರನಿಗೆ ನಮಸ್ಕಾರವನ್ನು ಮಾಡುತ್ತಾ, "ನಿನ್ನಿಂದಾಗಿ ನನ್ನ ಜೀವನ ಪಾವನವಾಯಿತು. ನನ್ನ ಹಣವನ್ನು ದೇವರು ಸ್ವೀಕರಿಸಿದ್ದಾನೆ. ಸ್ವತಃ ದೇವರೇ ನನ್ನ ಕನಸಿನಲ್ಲಿ ಬಂದು ಈ ವಿವರವನ್ನು ನೀಡಿದ್ದಾನೆ. ನೀನು ಮನೆಯಲ್ಲಿಯೇ ಕುಳಿತುಕೊಂಡ ನನಗೆ ಜಗನ್ನಾಥನ ದರ್ಶನ ಮಾಡಿಸಿರುವೆ. ನಾನು ನಿನಗೆ ಜೀವನಪೂರ್ತಿ ಕೃತಜ್ಞನಾಗಿರುವೆ. ಇವತ್ತು ನನಗೆ ಯಾರ ದುಡ್ಡು ಹಸಿದವರ ಹೊಟ್ಟೆಯನ್ನು ತುಂಬಿಸುವುದಕ್ಕಾಗಿ ಉಪಯೋಗಿಸಲ್ಪಡುವುದೋ ಅದುವೇ ದೇವರನ್ನು ಸೇರುತ್ತದೆ ಎಂಬ ಸತ್ಯದ ಅರಿವಾಯಿತು. ದೇವರು ಸತ್ಪಾತ್ರಕ್ಕೆ ಸಂದಾಯವಾದ ದುಡ್ಡನ್ನು ಮಾತ್ರ ಸ್ವೀಕರಿಸುತ್ತಾನೆ. ದೇವರನ್ನು ನನ್ನ ಬಳಿಗೆ ಕರೆತಂದ ನೀನು ಇನ್ನು ಮೇಲೆ ನನ್ನ ನೌಕರನಲ್ಲ, ನೀನು ನನ್ನ ವ್ಯಾಪಾರದಲ್ಲಿ ಭಾಗೀದಾರ" ಎಂದನು.
ನಿಜ! ದೇವರು ಎಂಥ ದಾನವನ್ನು ಇಷ್ಟಪಡುತ್ತಾನೆ ಎಂದು ಮಹಾತ್ಮರು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಆದರೂ ನಾವುಗಳು ವೃಥಾ ಹೋಗಿ ದೇವರ ಹುಂಡಿಗೆ ಹಣವನ್ನು ಹಾಕುತ್ತಿರುತ್ತೇವೆ. ದೇವರ ಹುಂಡಿಗೆ ಹಾಕಿದ ಹಣ ದೇವರಿಗೆ ಸೇರುವುದಿಲ್ಲ. ಅದು ಮುಜರಾಯಿ ಇಲಾಖೆಗೋ, ಮತ್ತಿನ್ನಾರಿಗೋ ಸೇರುತ್ತದೆ. ದೇವರಿಗೆಂದೇ ನಾವು ಕೊಡುವ ಹಣ ದೇವರನ್ನೇ ಸೇರಬೇಕೆಂದರೆ ನಾವು ಆ ಹಣವನ್ನು ದೀನರಿಗೆ, ಬಡವರಿಗೆ, ಹಸಿವಿನಿಂದ ನೊಂದ ಜನರಿಗೆ ಕೊಡಬೇಕು. ಹಸಿದವರ ಹಸಿವು ನೀಗಿಸುವ ಹಣ ದೇವರನ್ನು ಸೇರುತ್ತದೆ.
ಶ್ರೀಕೃಷ್ಣಾರ್ಪಣಮಸ್ತು
Post a Comment