ಶ್ರೀ ನಾಗರಾಜ ದೇವರ ಅಷ್ಟೋತ್ತರ ಅಥವಾ ಸರ್ಪರಾಜ ಅಷ್ಟೋತ್ತರದ ಮಹತ್ವಗಳು ...
ಶ್ರೀ ಸರ್ಪರಾಜ ಅಷ್ಟೋತ್ತರ ಬಲು ಅಪರೂಪ ಮತ್ತು ವಿಶೇಷವಾದದ್ದು, ಪವಿತ್ರವಾದದ್ದು, ತುಂಬಾ ಶಕ್ತಿಯುತವಾದದ್ದು..ಪರಮ ಪವಿತ್ರವಾದ ಶ್ರೀ ಸರ್ಪರಾಜ ದೇವರ ಅಷ್ಟೋತ್ತರದಲ್ಲಿ ಮಹಾವಿಶೇಷವಾದ ಸರ್ಪರಾಜರುಗಳ ನಾಮಗಳಿವೆ..ಅನೇಕ ಚರಿತ್ರೆಗಳಲ್ಲಿ, ಪುರಾಣಗಳಲ್ಲಿ ಶಾಸ್ತ್ರಗಳಲ್ಲಿ ಈ ಸರ್ಪರಾಜರ ಬಗ್ಗೆ ಮಾಹಿತಿ ಸಿಕ್ಕುತ್ತವೆ..
ಅವುಗಳಲ್ಲಿ ಮುಖ್ಯವಾಗಿ “ನವನಾಗೇಂದ್ರ”ರ ಹೆಸರುಗಳು ತುಂಬಾ ವಿಶೇಷ..
ಶ್ರೀ ಅನಂತ ವಾಸುಕಿ, ಶ್ರೀ ತಕ್ಷಕ, ಶ್ರೀ ವಿಶ್ವತೋಮುಖ, ಶ್ರೀ ಕರ್ಕೋಟಕ, ಶ್ರೀ ಮಹಾಪದ್ಮ, ಶ್ರೀ ಪದ್ಮ, ಶ್ರೀ ಶಂಖ, ಶ್ರೀ ದೃತರಾಷ್ಟ್ರಾಯ…
ಶ್ರೀ ಸರ್ಪರಾಜರ ಹೆಸರುಗಳು ಹೇಗೆ ವಿಶೇಷವೋ ಅದೇ ರೀತಿ 16 ಜನ ನಾಗಮಾತೆಯರು ಬಲು ವಿಶೇಷ..
ಶ್ರೀನಾಗಮಾತೆ, ಶ್ರೀ ನಾಗಭಗಿನಿ, ಶ್ರೀ ವಿಷಹರೆ, ಶ್ರೀ ಮೃತಸಂಜೀವಿನಿ, ಶ್ರೀ ಸಿದ್ಧಯೋಗಿನಿ, ಶ್ರೀ ಯೋಗಿನಿ, ಶ್ರೀ ಪ್ರಿಯಾ, ಶ್ರೀ ಜರತ್ಕಾರು, ಶ್ರೀ ಜಗದ್ ಗೌರಿ, ಶ್ರೀ ಮನಸಾ, ಶ್ರೀ ವೈಷ್ಣವೀ, ಶ್ರೀ ಶೈವೀ, ಶ್ರೀ ನಾಗೇಶ್ವರೀ, ಶ್ರೀ ಆಸ್ತಿಕ, ಶ್ರೀ ಮಾತಾ, ಶ್ರೀ ವಿಷಹರಾ ದೇವಿ..
ಸ್ತ್ರೀಯರು ಪ್ರತಿದಿವಸ ಈ ದೇವಿಯರ ಸ್ಮರಣೆ ಮಾಡುತ್ತಾರೋ ಅವರು ಧೀರ್ಘ ಸುಮಂಗಲಿಯಾಗಿರುತ್ತಾರೆ.., ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿರುತ್ತಾರೆ, ದಾಂಪತ್ಯ ಜೀವನ ಸುಖಕರವಾಗಿರುತ್ತದೆ..
ಅಷ್ಟೋತ್ತರ ಫಲ..
೧. ಯಾರು ಪ್ರತಿದಿನವೂ ಶ್ರೀ ನವನಾಗೇಂದ್ರರ ಪ್ರಾರ್ಥನೆ ಮತ್ತು ಶ್ರೀ ನಾಗಮಾತೆಯರನ್ನು ಸ್ಮರಿಸಿ, ಸರ್ಪರಾಜ ಅಷ್ಟೋತ್ತರ ಓದಿದರೆ, ನಿಮ್ಮ ಮನೆಯ ಮೇಲೆ ಸರ್ಪದೇವರ ಆಶೀರ್ವಾದವಿದ್ದು , ಸರ್ವಭಯ, ಸರ್ಪಭಯ, ಶತೃಭಯ ನಿವಾರಣೆಯಾಗುತ್ತದೆ ..
೨. ನವನಾಗೇಂದ್ರರು ಮತ್ತು ನಾಗದೇವತೆಯರ ಸ್ಮರಣೆ ಮಾಡಿ , ಸರ್ಪರಾಜ ಅಷ್ಟೋತ್ತರ ಓದಿ, ಹುತ್ತಕ್ಕೆ ನಮಸ್ಕಾರ ಮಾಡುತ್ತಾ ಬಂದರೆ, ಮನೆಯಲ್ಲಿ ಜಗಳ ನಿವಾರಣೆಯಾಗಿ , ಸಂತೋಷದ ಜೀವನ ಮಾಡುವಿರಿ..
ಎಲ್ಲರೂ ಆರೋಗ್ಯವಾಗಿರುತ್ತಾರೆ..
೩. ಯಾರಿಗೆ “ಸಂತಾನಭಾಗ್ಯ” ಇರುವುದಿಲ್ಲವೋ ಅವರು ಅಶ್ವತ್ಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ಪೂಜೆ ಮಾಡಿಸಿ, ಸರ್ಪರಾಜ ಅಷ್ಟೋತ್ತರ ಓದಿ ,ಮಂಡಲ ಪೂಜೆ ಮಾಡಿಸಿದರೆ ಸಂತಾನ ಭಾಗ್ಯವಾಗುತ್ತದೆ..
೪. ಗಂಡ ಹೆಂಡತಿ ವಿರಸ ಇರುವವರು, ವಿಚ್ಛೇದನ ಸಮಸ್ಯೆ ಇರುವವರು, ಷಷ್ಠಿ ಅಥವಾ ಅಷ್ಟಮಿಯ ದಿನ ಶ್ರೀ ಸರ್ಪರಾಜ ದೇವರ ಅಷ್ಟೋತ್ತರ ಹೇಳಿ, ತನಿ ಎರೆದರೆ ಸರ್ವ ಸಮಸ್ಯೆ ನಿವಾರಣೆಯಾಗುತ್ತದೆ ..
೫. ಯಾರಿಗೆ “ಫಿಟ್ಸ್” ಖಾಯಿಲೆ ಇದೆಯೋ ಅಂಥವರು ಓದಿದರೆ , ಫಿಟ್ಸ್ ಬರುವುದಿಲ್ಲ..
೬. ಕಾಲಸರ್ಪದೋಷ ಇರುವವರು ಓದಿದರೆ ಕಾಲಸರ್ಪದೋಷ, ಕಾಲಸರ್ಪಯೋಗವಾಗಿ ಉತ್ತಮ ಫಲ ಕೊಡುತ್ತದೆ ..
೭. ಯಾವುದೇ ತರಹ ಪಂಚಮರಾಹು, ಸಪ್ತಮ ರಾಹು, ಅಷ್ಟಮರಾಹು ದೋಷಗಳು ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ನಿವಾರಣೆಯಾಗುತ್ತದೆ ..
೮. ಯಾರು ಸರ್ಪಸಂಸ್ಕಾರ ಮಾಡಿ ನಾಗರ ಪ್ರತಿಷ್ಠೆ ಮಾಡಿಸಿದ್ದರೂ, ತೊಂದರೆ ಅನುಭವಿಸುತ್ತಿದ್ದರೆ, ಶ್ರೀ ನಾಗರಾಜ ದೇವರ ಅಷ್ಟೋತ್ತರವನ್ನು 48 ದಿವಸ ಓದಿ ಪೂಜೆ ಮಾಡಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆ ..
೯. ಗರ್ಭದೋಷದ ತೊಂದರೆ ಇರುವವರು ಹಾಗೂ ರಜಸ್ವಲೆ ದೋಷ ಇರುವವರು, ಶ್ರೀ ನಾಗರಾಜ ಅಷ್ಟೋತ್ತರ ಪ್ರತಿದಿನ ಓದುತ್ತಾ ಬಂದರೆ ದೋಷ ನಿವಾರಣೆಯಾಗುತ್ತದೆ ..
ಆರೋಗ್ಯ ಭಾಗ್ಯವಾಗುತ್ತದೆ..
೧೦. ಅಶ್ವಿನೀ ನಕ್ಷತ್ರ, ಮಖಾ ನಕ್ಷತ್ರ, ಮೂಲಾ ನಕ್ಷತ್ರ ಉಳ್ಳವರು ಮತ್ತು ಜಾತಕದಲ್ಲಿ ಸರ್ಪದೋಷ ಇರುವವರು , ಶ್ರೀ ನಾಗರಾಜ ಅಷ್ಟೋತ್ತರ ಓದಿದರೆ ದೋಷ ನಿವಾರಣೆಯಾಗುತ್ತದೆ ..
೧೧. ಸರ್ಪದೋಷದಿಂದ ವಿವಾಹ ಸಮಸ್ಯೆ ಇರುವವರು ಪ್ರತಿದಿನ ಶ್ರೀ ಸರ್ಪರಾಜ ಅಷ್ಟೋತ್ತರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ ವಿವಾಹ ಸಮಸ್ಯೆ ನಿವಾರಣೆಯಾಗುತ್ತದೆ .., ದಾಂಪತ್ಯ ಚೆನ್ನಾಗಿರುತ್ತದೆ..
🌹🌹🌹
Post a Comment