[20/03, 5:37 PM] Pandit Venkatesh. Astrologer. Kannada: ತೀರ್ಥಪ್ರಾಶನದ ಮಹತ್ವ.
ನೀವು ದೇವಸ್ಥಾನದಲ್ಲಿ ಅರ್ಚಕರು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ತೀರ್ಥವನ್ನು ಕೊಡುವುದನ್ನು ಗಮನಿಸಿರಬಹುದು. ಶುದ್ಧನೀರು ತುಳಸಿ ಎಲೆ ಮತ್ತು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿದ್ದರೆ ಅದು ತ್ರಿದೋಷಗಳನ್ನು (ವಾತ,ಪಿತ್ಥ,ಕಫ) ನಿವಾರಿಸುವ ಔಷಧಿಯಾಗುತ್ತದೆ ಎನ್ನುತ್ತದೆ ಆಯುರ್ವೇದ.
ಅಸ್ಥಮಾ,ನೆಗಡಿ,ಕೆಮ್ಮು,ಶ್ವಾಸ ಹಾಗೂ ಹೃದಯಸಂಬಂಧಿಕಾಯಿಲೆಗಳನ್ನು ಹಾಗೂ ಇತ್ತೀಚಿನ ಮಾರಕ ರೋಗ ಡೆಂಗ್ಯೂವನ್ನೂ ಸಹ ತುಳಸಿಯ ಮೂಲಕ ನಿಯಂತ್ರಿಸಬಹುದೆಂದು ಆಯುರ್ವೇದ ತಿಳಿಸುತ್ತದೆ.
ಪಚನಕ್ರಿಯೆಗೂ ತುಳಸಿ ಸಹಕಾರಿ. ತುಳಸಿ ಎಲೆಗಳನ್ನು ತಿಂದರೆ ಜೀರ್ಣಶಕ್ತಿಯ ಉದ್ದೀಪನವಾಗುತ್ತದೆಂದು ಆಯುರ್ವೇದ ಹೇಳಿದೆ.ಹಾಗಾಗಿ ತುಳಸಿನೀರಿನಿಂದ ತಯಾರಿಸಲ್ಪಟ್ಟ ತೀರ್ಥವೂ ಸಹ ಔಷಧಿಯೇ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಾಮ್ರ,ಬೆಳ್ಳಿ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಪಥ್ಯಕರ ಎಂಬುದು ಸಾಬೀತಾಗಿದೆ.
ಹಾಗೇ, ಶಂಖದಿಂದ ಅಭೀಷೇಕದ ನೀರು ತೀರ್ಥವಾಗುತ್ತದೆ.ಆಯುರ್ವೇದದ ಪ್ರಕಾರ ಶಂಖದ ನೀರಿಗೆ ಅನೇಕ ಔಷಧೀಯ ಗುಣಗಳಿರುತ್ತವೆ.ಇದು ಹೊಟ್ಟೆನೋವು, ತಲೆನೋವು,ಅಜೀರ್ಣತೆ,ದೃಷ್ಟಿ ಸಂಬಂಧಿ, ಚರ್ಮಸಂಬಂಧಿ ದೋಷಗಳನ್ನು ನಿವಾರಿಸುತ್ತದೆ.ಇದರ ಜೊತೆ ದೇವರ ಕಲ್ಲಿನ ಪ್ರತಿಮೆ ಅಥವಾ ಪಂಚಲೋಹ ವಿಗ್ರಹದ ಮೇಲೆ ಅಭಿಷೇಕ ಮಾಡಿದ್ದರಿಂದ ಪ್ರತಿಮೆಯಲ್ಲಿರುವ ಅನೇಕ ಸಕಾರಾತ್ಮಕ ಅಂಶಗಳೂ ತೀರ್ಥದೊಂದಿಗೆ ಸೇರುತ್ತವೆ. ತುಳಸಿ,ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿನ ನೀರು, ಶಂಖದ ನೀರು,ದೇವರ ವಿಗ್ರಹದ ನೀರು, ಈ ಎಲ್ಲವುಗಳ ಸಮ್ಮಿಶ್ರಣ ತೀರ್ಥ.ಹಾಗಾಗಿ ತೀರ್ಥವೂ ಸಹ ಔಷಧಿಯೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.
[20/03, 5:48 PM] Pandit Venkatesh. Astrologer. Kannada: ಜಾತಕದಲ್ಲಿ ಬ್ರಾಹ್ಮಣ ದೋಷ (ಶಾಪ) ಹೇಗೆ ಬರುತ್ತದೆ ?
ಒಬ್ಬ ಬ್ರಾಹ್ಮಣನನ್ನು ನಿಂದಿಸಿದೆ, ಕೆಟ್ಟ ಮಾತುಗಳಿಂದ ಬೋಯಿದರೆ, ಒಡೆದರೆ, ಬ್ರಾಹ್ಮಣನಿಗೆ ಮೋಸ ಮಾಡಿದರೆ, ಬ್ರಾಹ್ಮಣನನ್ನು ಅವಮಾನ ಮಾಡಿದರೆ, ಬ್ರಾಹ್ಮಣನ ಮನಸ್ಸಿಗೆ ನೋವು ಉಂಟುಮಾಡಿದರೆ, ಬ್ರಾಹ್ಮಣನಿಗೆ ಕೊಡುತ್ತೆನೆ ಎಂದು ಹೇಳಿದ ಹಣವನ್ನು ಕೊಡದಿದ್ದರೆ, ಬ್ರಾಹ್ಮಣರನ್ನು ಏಕವಚನದಲ್ಲಿ ಮಾತನಾಡಿಸಿದರೆ ಬ್ರಾಹ್ಮಣ ದೋಷ ಬರುತ್ತದೆ.
[20/03, 5:49 PM] Pandit Venkatesh. Astrologer. Kannada: 6. ಕುಜ ದೋಷವು 3 ವಿಧಾನ.
1. ಲಗ್ನಾತ್ ಕುಜ ದೋಷ.
2. ಚಂದ್ರಾತ್ ಕುಜ ದೋಷ.
3. ಶುಕ್ರಾತ್ ಕುಜ ದೋಷ.
ಲಗ್ನದಿಂದ 2,4,7,8,12 ನೇ ಮನೆಯಲ್ಲಿ ಕುಜ ಇದ್ದರೆ ಲಗ್ನಾತ್ ಕುಜ ದೋಷ.
ಚಂದ್ರನಿಂದ 2,4,7,8,12 ನೇ ಮನೆಯಲ್ಲಿ ಕುಜ ಇದ್ದರೆ ಚಂದ್ರಾತ್ ಕುಜ ದೋಷ.
ಶುಕ್ರನಿಂದ 2,4,7,8,12 ನೇ ಮನೆಯಲ್ಲಿ ಕುಜ ಇದ್ದರೆ ಶುಕ್ರಾತ್ ಕುಜ ದೋಷ.
[20/03, 5:50 PM] Pandit Venkatesh. Astrologer. Kannada: ನಿಮಗೆ ಸಾಲ ಜಾಸ್ತಿ ಇದೆಯೇ?
ಸಾಲಕ್ಕೆ ಕಾರಕ ಗ್ರಹಗಳು ಕುಜ ಮತ್ತು ಕೇತು.
ರಕ್ತಧಾನ ಮಾಡುವುದರಿಂದ ಕುಜನಿಗೆ ಶಾಂತಿ ಆಗುತ್ತದೆ. ತಲೆ ಗುಂಡು ಹೋಡೆಸುವುದರಿಂದ ಕೇತುವಿಗೆ ಶಾಂತಿ ಆಗುತ್ತದೆ. ಸಾಲಗಳು ಕಡಿಮೆ ಆಗುತ್ತದೆ..
[20/03, 5:50 PM] Pandit Venkatesh. Astrologer. Kannada: 4. ಲಗ್ನದಿಂದ 2ನೆ ಮನೆಯಲ್ಲಿ ಶನಿ :- ಈ ಜಾತಕರು ಇರುವ ಮನೆಯಲ್ಲಿ ಹಣ ನಿಲ್ಲುವುದಿಲ್ಲ. ಹಣ ನಿಂತರೂ ಜಗಳ ನಿಲ್ಲುವುದಿಲ್ಲ.
[20/03, 5:53 PM] Pandit Venkatesh. Astrologer. Kannada: ಯಾವ ಜಪತಪವನ್ನು ಮಾಡದೆ ಯಾವ ಶಾಸ್ತ್ರ ಅಧ್ಯಯನ ಮಾಡದೆ ಯಾವ ಪೂಜೆ ಹೂಮ ಹವನ ಮಾಡದೆ ತನ್ನ ಕರ್ಮವನ್ನು ಕಳೆಯುವ ಏಕೈಕ ಮಾರ್ಗವೇ
ಅನ್ನ ದಾನ ಮಾಡುವುದು ಈ ಅನ್ನ ದಾನ ಮಾಡುವುದರಿಂದ ಸಕಲ ಐಶ್ವರ್ಯ ಸಿದ್ಧ ಮತ್ತು ಸಕಲ ಗ್ರಹ ದೋಷ ಪರಿಹಾರ ಸಾಧ್ಯ ಇಂತಹ ಅನ್ನ ವನ್ನು ಮನುಷ್ಯ ಜೀವಿಗೇ ದಯಾಪಾಲಿಸಿದ ಸಾಕ್ಷಾತ್ ಪಾರ್ವತಿಯ ಸ್ವರೂಪಳಾದ ಶ್ರೀ ಅನ್ನ ಪೂರ್ಣೇಶ್ವರಿ ದೇವಿಗೆ ನಿನಗೆ ನನ್ನ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Post a Comment