ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ನಿವೃತ್ತ ಪೈಲ್ವಾನರು ಸನ್ಮಾನಿಸಿದರು

ನಿವೃತ್ತ ಪೈಲ್ವಾನರ ಮಾಸಾಶನವನ್ನು ಹೆಚ್ಚಳ ಮಾಡುವ ಘೋಷಣೆಯನ್ನು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಬೆಂಗಳೂರಿನಲ್ಲಿ ನಿವೃತ್ತ ಪೈಲ್ವಾನರು ಸನ್ಮಾನಿಸಿದರು. ಮಾಜಿ ಶಾಸಕ ಜಿ ಎಸ್ ನ್ಯಾಮಗೌಡ ನೇತೃತ್ವದಲ್ಲಿ ನಿವೃತ್ತ ಪೈಲ್ವಾನರು ಸಿಎಂ ಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ನಿವೃತ್ತ  ಪೈಲ್ವಾನರ   ಮಾಸಾಶನವನ್ನು 2500 ರಿಂದ 3500 ಕ್ಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ನಿವೃತ್ತ ಪೈಲ್ವಾನರ ಮಾಸಾಶನವನ್ನು 3000 ದಿಂದ 4000 ಕ್ಕೆ  ಹೆಚ್ಚಿಸುವ ಘೋಷಣೆಯನ್ನು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಮಾಡಿದ್ದಾರೆ.‌

Post a Comment

Previous Post Next Post