ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ, ನಂತರ ಮತ್ತೇನು ಮಾಡಿದ್ರೂ.. ಇಲ್ಲಿದೆ ವಿವರ, ವರದಿ....

[12/03, 5:20 PM] Gurulingswami. Holimatha. Vv. Cm: ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ
*ಜನರ ಅಲೆದಾಟ ತಪ್ಪಿಸಲು ಸರ್ಕಾರವೇ ಜನರ ಬಾಗಿಲಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಚಿಕ್ಕಬಳ್ಳಾಪುರ, ಮಾರ್ಚ್ 12: ಜನರ ಅಲೆದಾಟ ತಪ್ಪಿಸಲು ವಿನೂತನ ಕಾರ್ಯಕ್ರಮವನ್ನು ರೂಪಿಸಿ, ಸರ್ಕಾರವನ್ನೇ ಮನೆಬಾಗಿಲಿಗೆ ತಲುಪಿಸಲಾಗಿದೆ ಎಂದು ಮುಖ್ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು  ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಇಲಾಖೆಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಸಣ್ಣ ದಾಖಲೆಗಳಿಗೂ ಅಲೆದಾಟ, ಜಾತಿ ಪ್ರಮಾಣ ಪತ್ರ, ಆರ್.ಟಿ.ಸಿ ಮುಂತಾದವುಗಳಿಗೆ ಬಡವರೇ ಓಡಾಡುತ್ತಾರೆ. ಬಡವರು ಅಲೆದಾಟ ತಪ್ಪಿಸಲು ಕಂದಾಯ ಸಚಿವ ಆರ್.ಅಶೋಕ್ ಉತ್ತಮ ಯೋಜನೆ ರೂಪಿಸಿದ್ದಾರೆ ಎಂದರು.  

ಕೋಲಾರ, ಚಿಕ್ಕಬಳ್ಳಾಪುರದ ರೈತರು ಶ್ರಮಜೀವಿಗಳು. ರೇಷ್ಮೆ, ಹಾಲು ಮತ್ತು ಹಣ್ಣುಹಂಪಲುಗಳಿಗೆ ಖ್ಯಾತಿ ಪಡೆದಿರುವ ಜಿಲ್ಲೆ ಇದು. ಮನೆ ಮನೆಗೆ ಕಂದಾಯ ದಾಖಲೆ ತಲುಪಿಸುವ ವಿನೂತನ ಕಾರ್ಯಕ್ರಮವನ್ನು ಇಂದು ಜಾರಿಗೊಳಿಸಿದೆ ಎಂದರು.

*ತಮ್ಮ ಉದ್ದಾರ ಮಾಡಿಕೊಂಡ ಕಾಂಗ್ರೆಸ್:*
ಸರ್ಕಾರ ಜನರ ಪಾಲಿಗೆ ಜೀವಂತವಾಗಿದೆಯೇ ಎನ್ನುವುದು ಜನರಿಗೆ ಸಂಕಷ್ಟ ಬಂದಾಗ ಅವರಿಗೆ ಪರಿಹಾರ, ಮನೆ  ಬಾಗಿಲಿಗೆ ಹೋದಾಗ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಬಡತನ, ರೈತರು, ದೀನದಲಿತರು ಹಿಂದುಳಿದ ವರ್ಗದವರು ಇವರುಗಳ  ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಅವರೆಲ್ಲಾ ಉದ್ಧಾರವಾಗಿದ್ದರೆ ನಾವು ಇಂದು ಕಂದಾಯ ದಾಖಲೆಗಳನ್ನು  ಕೊಡುವುದಕ್ಕೆ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ನಡೆದಿದೆ. ಬಡವರನ್ನು ಮತ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡರು. ನಿಮ್ಮನ್ನು ಉದ್ಧಾರ ಮಾಡುತ್ತೇವೆ ಎಂದು ತಮ್ಮ ಉದ್ದಾರವನ್ನು ಮಾಡಿಕೊಂಡಿದ್ದಾರೆ.  ಎಲ್ಲಿಯವರೆಗೆ ಇದು ನಡೆಯುತ್ತದೆ? ಜನರು ಜಾಗೃತರಾದಾಗ ಇವೆಲ್ಲವೂ ನಿಲ್ಲುತ್ತದೆ ಎಂದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಬಹಳ ದೊಡ್ಡ ಕೆಲಸವೆಂದರೆ ಜನರ ಹಕ್ಕುಗಳ ಬಗ್ಗೆ  ಜಾಗೃತಿ ಮೂಡಿಸಿದ್ದಾರೆ. ಜನರನ್ನು ಶಿಕ್ಷಿತರನ್ನಾಗಿಸಿ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು  ಸ್ವತಂತ್ರ ನಂತರದ ಭಾರತದಲ್ಲಿ ಮಾಡಿರುವ ಏಕೈಕ ಪ್ರಧಾನಮಂತ್ರಿಗಳು ಎಂದರು.
ಅಧಿಕಾರಕ್ಕಾಗಿ ರಾಜಕಾರಣ
ಹಿಂದೆಯೂ ಸರ್ಕಾರಗಳಿದ್ದವು. ಗರೀಬಿ ಹಟಾವೋ ಎಂದರು. ಏಕೆ ಮಾಡಲಿಲ್ಲ? ಅಧಿಕಾರಕ್ಕಾಗಿ ರಾಜಕಾರಣ, ಜನಸೇವೆಗಾಗಿ ರಾಜಕಾರಣ. ಇದುವರೆಗೂ ಅವರು ಮಾಡಿರುವುದು ಅಧಿಕಾರಕ್ಕಾಗಿ ರಾಜಕಾರಣ. ಅಧಿಕಾರವೇ ಅವರಿಗೆ ಕೇಂದ್ರಬಿಂದು.  ನಾವು ಮನೆಬಾಗಿಲಿಗೆ ಸೌಲಭ್ಯಗಳನ್ನು ಮುಟ್ಟಿಸಿ, ಅವರ ಆಶೀರ್ವಾದದೊಂದಿಗೆ ಮತ್ತೆ ಜನಸೇವೆಗೆ ಮುಂದಾಗಲಿದ್ದೇವೆ.
ಕಂದಾಯ ಇಲಾಖೆಯು 5 ಕೋಟಿ ಜನರಿಗೆ ಇಂದೇ ಮುಟ್ಟಿಸುತ್ತಿದ್ದಾರೆ.  ದಾಖಲೆಗಳನ್ನು  ಸರಿಯಿದೆಯೇ ಎಂದು ಖಾತ್ರಿ ಮಾಡಿಕೊಂಡು ಮನೆ ಬಾಗಿಲಿಗೆ ತಲುಪಿಸಿದೆ.  ಇದನ್ನು ಹಿಂದಿನ ಸರ್ಕಾರ ಏಕೆ ಮಾಡಿಲ್ಲ?ಎಂದು ಪ್ರಶ್ನಿಸಿದರು.

*ಜನಸಾಮಾನ್ಯನ ಸರ್ಕಾರ*:
ಇದು ಜನಸಾಮಾನ್ಯನ ಸರ್ಕಾರ. ಇನ್ನುಳಿದವು ಅಧಿಕಾರದ ಸರ್ಕಾರ. ಈ ಬಾರಿ ಬಜೆಟ್ ನಲ್ಲಿ ರೈತರ ಯಂತ್ರೋಪಕರಣಕ್ಕಾಗಿ 5 ಎಕರೆಗೆ  1050 ರೂ.ಗಳನ್ನು ಡೀಸಲ್ ಖರ್ಚಿಗಾಗಿ ರೈತ ಶಕ್ತಿ ಯೋಜನೆ ರೂಪಿಸಿದ್ದು,  600 ಕೋಟಿ ರೂ.ಗಳನ್ನು ಮೀಸಲಿರಿಸಿದೆ. 300 ಕೋಟಿ ರೂ.ಗಳನ್ನು ಯಶಸ್ವಿನಿ ಯೋಜನೆಗೆ ಮೀಸಲಿರಿಸಿ ಯೋಜನೆಯನ್ನು   ಪುನ: ಜಾರಿ ಮಾಡಲಾಗಿದೆ. 33 ಲಕ್ಷ ರೈತರಿಗೆ  ಬಡ್ಡಿ ರಹಿತ ಸಾಲವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ.  10 ಲಕ್ಷ ಕ್ಕೂ ಅಧಿಕ ರೈತರಿಗೆ ಒಂದೇ ವರ್ಷದಲ್ಲಿ ಸಾಲ ನೀಡಲಾಗುವುದು. ಈ ಪೈಕಿ  3 ಲಕ್ಷ ಹೊಸ ರೈತರು ಸಾ¯ ಪಡೆದಿದ್ದಾರೆ. ರೈತರ ಬೆಳೆಗಳಿಗೆ ಬ್ರಾಂಡಿಂಗ್ ಹಾಗೂ ರಫ್ತಿಗಾಗಿ  ಕೆಪಾಕ್ಸ್ ಸಂಸ್ಥೆಯ ಮೂಲಕ ಜಾರಿಗೊಳಿಸಲು ವಿಶೇಷ ಅನುದಾನವನ್ನು ನೀಡಲಾಗಿದೆ. ಪಂಪ್‍ಸೆಟ್‍ಗಳಿಗೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ತೋಟಗಾರಿಕಾ ಬೆಳಿಗಳಿಗೆ ಸಬ್ಸಿಡಿಯನ್ನು ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ರೈತರ ಶ್ರಮಕ್ಕೆ, ಕಾರ್ಮಿಕರ ಬೆವರಿಗೆ ಬೆಲೆ ಸಿಗಬೇಕು ಎನ್ನುವುದೇ ನಮ್ಮ ಸಂಕಲ್ಪ.  ಅದಕ್ಕಾಗಿ ನಾನು ಪ್ರಮಾಣವಚನ ತೆಗೆದುಕೊಂಡ 3 ಗಂಟೆಗಳೊಳಗಾಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಘೋಷಿಸಲಾಯಿತು.  50 ಲಕ್ಷ ಕುಟುಂಬಗಳಿಗೆ ಮಾಶಾಸನ ಹೆಚ್ಚಿಸಲಾಗಿದೆ. ಬಡವರ ಬಗ್ಗೆ ಕಳಕಳಿಯಿರುವ ಸರ್ಕಾರ ನಮ್ಮದು.
ಕೋವಿಡ್ ಪ್ರವಾಹ ಬಂದಿರುವುದರಿಂದ  ನರೇಂದ್ರ ಮೋದಿಯವರು ಒಣಬೇಸಾಯಕ್ಕೆ ಒಂದು ಹೆಕ್ಟೇರಿಗೆ 6300 ರೂ.ಗಳನ್ನು ನೀಡಿದ್ದಾರೆ. ರೈತರಿಗೆ ರೂ. 6300 ನೀಡಿ ಎರಡರಷ್ಟು  ಬೆಳೆ ಪರಿಹಾರ ನೀಡಿದ್ದೇವೆ. ನೀರಾವರಿಗೆ 25000 ರೂ.ಗಳನ್ನು,  ತೋಟಗಾರಿಕೆಗೆ ರೂ.28000 ನೀಡಲಾಗಿದೆ.  ದುಪ್ಪಟ್ಟು ಪರಿಹಾರ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಒಂದೇ ತಿಂಗಳಲ್ಲಿ ಪರಿಹಾರದ ಮೊತ್ತ ರೈತರ ಖಾತೆಗಳಿಗೆ ಮೊತ್ತ ಜಮಾ ಆಗಿದೆ ಎಂದರು.
[12/03, 5:20 PM] Gurulingswami. Holimatha. Vv. Cm: *ಶಿಡ್ಲಘಟ್ಟದಲ್ಲಿ ಅತ್ಯಾಧುನಿಕ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ:*ಸಿಎಂ.ಬಸವರಾಜ ಬೊಮ್ಮಾಯಿ*
ಚಿಕ್ಕಬಳ್ಳಾಪುರ, ಮಾರ್ಚ್ 12: 
 ಕಲ್ಬುರ್ಗಿ ಹಾಗೂ ಹಾವೇರಿ ಜಿಲ್ಲೆಯಲ್ಲಿ 30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಮಾಡುವ ಯೋಜನೆಗೆ ಶಿಡ್ಲಘಟ್ಟವನ್ನು ಸೇರ್ಪಡೆ ಮಾದಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

  ಅವರು  ಇಂದು ಕಂದಾಯ ಇಲಾಖೆಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ಗುಂಗೀರ್ಲಹಳ್ಳಿಯಲ್ಲಿ   ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿ   ಮಾತನಾಡಿದರು.

ರೇಷ್ಮೆ ಉತ್ಪಾದನೆಯನ್ನು ವೃದ್ಧಿಸಲು ದ್ವಿತಳಿ ಬಿತ್ತನೆ ಗೂಡಿಗೆ ಸಹಾಯಧನ 10,000 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ 3000 ಕೋಟಿ ಅನುದಾನವನ್ನು ಏರಿಸಲಾಗಿದೆ ಎಂದರು. 

*ಭೂ ಮಾಫಿಯಾ ಮೇಲೆ ಕಠಿಣ ಕ್ರಮ*
 ಈ ಭಾಗದ ರೈತರ ಬೆವರಿನ ಹನಿಗೆ ಎತ್ತಿನಹೊಳೆ ನೀರು   ನೀರು ತಂದು ಭೂಮಿತಾಯಿಗೆ ಹಸಿರ ಸೀರೆ ಉಡಿಸುವ ಮಹತ್ವಾಕಾಂಕ್ಷೆಯ ಇದೆ. ಸರ್ಕಾರದ ಸೌಲಭ್ಯಗಳು ಜನರ ಜನರ ಬಳಿಗೆ ತರುವ ಉದ್ದೇಶವಿದೆ.  ಅಂತೆಯೇ ಜನರಿಗೆ ತೊಂದರೆ ನೀಡುವಂತಹ ಮಾಫಿಯಾಗಳು ಅದರಲ್ಲೂ ಭೂ ಮಾಫಿಯಾದ ಮೇಲೆ ಸರ್ಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದರು.   ಜನರ ಸರ್ಕಾರ  ಕಟಿಬದ್ಧವಾಗಿದೆ ಕೆಲಸ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

*ರೈತರಿಗಾಗಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ :*
ಹಾಲು ಉತ್ಪಾದನೆ ಮೂಲಕ ಆರ್ಥಿಕ ಚಟುವಟಿಕೆಗೆ ಇಂಬು ನೀಡಲಾಗುತ್ತಿದೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಕೆಎಂಎಫ್ ನಲ್ಲಿ 23 ಸಾವಿರ ಕೋಟಿ ವ್ಯವಹಾರ ಒಂದು ತಿಂಗಳಿಗೆ ಆಗುತ್ತದೆ ರೈತರಿಗಾಗಿ ರೈತರ ಬ್ಯಾಂಕ್ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪಿಸಲು 100 ಕೋಟಿಗಳ ಅನುದಾನವನ್ನು ನೀಡುವ ಮೂಲಕ ರೈತರಿಗಾಗಿ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ದೇಶದಲ್ಲೇ ಪ್ರಥಮ ಬಾರಿ ಹಾಲು ಉತ್ಪಾದಕರ ಸ್ಥಾಪಿಸಲು  ಹಣವನ್ನು ಒದಗಿಸಿದೆ. ಇದು ರೈತಪರ ಬಡವರಪರ ಸರ್ಕಾರ ಎಂದರು.
[12/03, 5:21 PM] Gurulingswami. Holimatha. Vv. Cm: *ಚಿಕ್ಕಬಳ್ಳಾಪುರದಲ್ಲಿ ಕನಕ ಭವನ ನಿರ್ಮಾಣಕ್ಕೆ ಅಗತ್ಯ ನೆರವು* :
*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಚಿಕ್ಕಬಳ್ಳಾಪುರ, ಮಾಚ್ 12: ಚಿಕ್ಕಬಳ್ಳಾಪುರದಲ್ಲಿ  ಕನಕಭವನ ನಿರ್ಮಾಣಕ್ಕೆ 20 ಗುಂಟೆ ಸ್ಥಳವನ್ನು ಜಿಲ್ಲಾಡಳಿತ  ಹಸ್ತಾಂತರ ಮಾಡಿದೆ. ಅದರ ನಿರ್ಮಾಣಕ್ಕೆ  ಅಗತ್ಯ ನೆರವು ನೀಡಿ, ಕನಕಭವನದ ಉದ್ಘಾಟನೆಯನ್ನು  ಖುದ್ದು ತಾವೇ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಅವರು ಇಂದು ಚಿಕ್ಕಾಬಳ್ಳಾಪುರದಲ್ಲಿ ಹಮ್ಮಿಕೊಳ್ಳಾಗಿದ್ದ ದಾಸಶ್ರೇಷ್ಠ ಕನಕದಾಸರ 534 ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 ಕನಕದಾಸರ ವಿಚಾರಗಳು  ನಮ್ಮ ಆತ್ಮದ ಒಳಗಿದೆ. ಕನಕದಾಸರ ಊರು ಬಾಡಾ ಶಿಗ್ಗಾವಿ ಕ್ಷೇತ್ರದಲ್ಲಿರುವುದರಿಂದ ಕನಕದಾಸರಿಗೆ ಮತ್ತು ನಮಗೆ ಅವಿನಾಭಾವ ಸಂಬಂಧವಿದೆ. ವಿಜಯನಗರ ಅರಸರ  ಸಾಮಂತ ರಾಜರಾಗಿದ್ದ ಕನಸದಾಸರ ಹಿರಿಯರು ಹಾಗೂ ಕನಕದಾಸರೂ ಕೂಡ ರಾಜರಾಗಿ ಆಡಳಿತ ಮಾಡಿದವರು.  ದಾಯಾದಿಗಳ ನಡುವೆ ಹೋರಾಟ ನಡೆದು ಅವರಿಗೆ ಸೋಲುಂಟಾಯಿತು. ನಂತರ  ಆದಿಕೇಶವನ ಆಶೀರ್ವಾದ ಹಾಗೂ ಪತ್ನಿಯ ಸಲಹೆಯಂತೆ ಅವರು ದಾಸರಾಗಿ ಪರಿವರ್ತನೆಯಾದರು.  ಅವರು ವ್ಯಾಸರಾಯರ ಬಳಿ ಶಿಷ್ಯರಾಗಿ ಸಂಪೂರ್ಣ ಜ್ಞಾನ ಪಡೆದು ಅಕ್ಕಪಕ್ಕದ ರಾಜ್ಯಗಳನ್ನು ಸುತ್ತಿನ ನಂತರ ದಾಸಶ್ರೇಷ್ಠರಾದರು. ಅವರ ಮುಕ್ತಿಯ ಭೂಮಿ ಕಾಗಿನೆಲೆ. ಕಾಗಿನೆಲೆಯಲ್ಲಿ  ಮಾರ್ಮಿಕವಾಗಿ ಹೇಳಿದ ಮಾತು: ‘ಆವೊಂದು ಸೋಲಿನಲ್ಲಿ ನಾನು ಹಲವಾರು ಗೆಲುವನ್ನು ಕಂಡೆ ನನ್ನನ್ನು ನಾನೇ ಗೆದ್ದುಕೊಂಡೆ’ ಎಂದರು. ಸೋಲೂ ಕೂಡ ಹಲವಾರು ಗೆಲುವಿಗೆ ದಾರಿಮಾಡಿಕೊಡುತ್ತದೆ ಎಂದರು.
*ದಾಸಪರಂಪರೆಯಲ್ಲಿ ಕನಕದಾಸರು ಶ್ರೇಷ್ಠರು:*
600 ವರ್ಷಗಳ ಹಿಂದೆಯೇ ಅವರ ಸಾಹಿತ್ಯ ಸಮಾನತೆಯನ್ನು ಸಾರಿದವು. ದಾಸರ ಪರಂಪರೆಯಲ್ಲಿ ಕರ್ನಾಟಕದಲ್ಲಿ ಕನಕದಾಸರು ಮತ್ತು ಪರಂದರದಾಸರಿದ್ದಂತೆ  ಉತ್ತರ ಭಾರತದಲ್ಲಿ ರಾಮದಾಸ ಹಾಗೂ ತುಳಸೀದಾರು ಇದ್ದರು. ಹಲವಾರು ದಾಸ ಪರಂಪರೆಯ ಪೈಕಿ ಕನಕದಾಸರು ಮತ್ತು ಪುರಂದರದಾಸರು ಶ್ರೇಷ್ಠರು. ಅವರ ಜೀವನ ಚರಿತ್ರೆ, ಅವರ ಸಾಹಿತ್ಯ ನಮಗೆ ಬದುಕಿಗೆ  ದಾರಿಯನ್ನು ತೋರುತ್ತದೆ ಎಂದರು. ಬಾಡಾದಲ್ಲಿ ಕನಕದಾಸರ ಈ ಎಲ್ಲಾ ಸಾಹಿತ್ಯವನ್ನು,  ಕನಕನ ಅರಮನೆಯನ್ನು, ಕೋಟೆಗಳನ್ನು ಕಟ್ಟಿ ಅವರ ಪದಗಳನ್ನು ಬಿಡಿಸಲಾಗಿದೆ. 4 ಡಿ ಥಿಯೇಟರ್ ಕೂಡ ಮಾಡಿದ್ದು, ಸಾವಿರಾರು ಯಾತ್ರಿಕರು ಪ್ರತಿನಿತ್ಯ ಆಗಮಿಸುತ್ತಾರೆ.  ಈ ಭಾಗದ ಜನರೂ ಸಹ ಕನಕದಾಸರ ಹುಟ್ಟೂರು ಬಾಡಾ ಮತ್ತು ಕಾಗಿನೆಲೆಗೆ ಭೇಟಿ ನೀಡಬೇಕು ಎಂದು ಆಹ್ವಾನಿಸಿದರು.

‘ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ . ಎಂಬ ಕನಕದಾರ ಪದಗಳಲ್ಲಿ ತಿಳಿಸಲಾಗಿರುವ ಸತ್ಯದಲ್ಲಿ ಸ್ವಲ್ಪವನ್ನಾದರೂ ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಂಡರೆ ನಮ್ಮ ಬದುಕು ಸಾರ್ಥಕವಾಗುತ್ತದೆ.  ಆ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ ಎಂದರು. 

ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
[12/03, 5:46 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು  ವಿಧಾನಸೌಧ ಮುಂಭಾಗದ ಮಹಾ ಮೆಟ್ಟಿಲುಗಳ ಮೇಲೆ 2022 ನೇ ಸಾಲಿನಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ ಎನ್ ಸಿ ಸಿ ಕೆಡೆಟ್ ಗಳೊಂದಿಗೆ ಭಾವಚಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಎನ್ ಸಿ ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಗೌರವಾರ್ಥ ಲಘು ಉಪಹಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ,  ಶಾಸಕ ನಾರಾಯಣಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.
[12/03, 6:58 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ದಿನಪತ್ರಿಕೆ ಆಯೋಜಿಸಿದ್ದ ಸ್ಟಾರ್ಟ್ ಅಪ್ ಅವಾರ್ಡ್  ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ರಾಜೀವ್ ಚಂದ್ರಶೇಖರ್,  ಆರೋಗ್ಯ ಸಚಿವ ಡಾ. ಕೆ. ಸುಧಾಕರ,  ಸಂಸದ ತೇಜಸ್ವಿ ಸೂರ್ಯ ಮತ್ತು ಇತರರು ಉಪಸ್ಥಿತರಿದ್ದರು.
[12/03, 9:09 PM] Gurulingswami. Holimatha. Vv. Cm: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ದಿಗ್ಗಜ ಜಿ ಆರ್ ವಿಶ್ವನಾಥ ಅವರು ತಮ್ಮ ಆಟೋಬಯಾಗ್ರಫಿಯನ್ನು ನೀಡಿದ ಸಂದರ್ಭ.
[12/03, 9:54 PM] Gurulingswami. Holimatha. Vv. Cm: *ನವಕರ್ನಾಟಕ ನಿರ್ಮಾಣಕ್ಕಾಗಿ ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಮಾರ್ಚ್ 12 : 

 ಹೊಸ ಚಿಂತನೆಯ ನವಕರ್ನಾಟಕ ನಿರ್ಮಾಣದ ಆಶಯದಿಂದ ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

 ಅವರು ಇಂದು ಇಕಾಮಿಕ್ ಟೈಮ್ಸ್ ಇಂಗ್ಲೀಷ್ ದಿನಪತ್ರಿಕೆ ವತಿಯಿಂದ ಆಯೋಜಿಸಿರುವ ECONOMIC TIMES START-UP AWARDS 2021ರಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯದಲ್ಲಿ ಸ್ಟಾರ್ಟ್ ಅಪ್ ಗಳ ಸ್ಥಾಪನೆ ಹಾಗೂ ಅಭಿವೃದ್ಧಿ ಕರ್ನಾಟಕದಲ್ಲಿ ಪೂರಕ ವಾತಾವರಣವನ್ನು ಸೃಷ್ಟಿಸಲಾಗುವುದು. ನವಭಾರತಕ್ಕಾಗಿ ನವಕರ್ನಾಟಕ ದ ಧ್ಯೇಯದಡಿಯಲ್ಲಿ  ಯೋಜನಾಬದ್ಧ ಪರಿಸರ ಸ್ನೇಹಿ ನವನಗರಗಳ ನಿರ್ಮಿಸಲು ಉದ್ದೇಶಿಸಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿಗಳ ಮಟ್ಟಕ್ಕೆ ಉನ್ನತೀಕರಿಸಲಾಗುವದು. ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ 6 ಹೊಸ ಐಐಟಿ ಮಟ್ಟದ ಕಾಲೇಜುಗಳನ್ನು, ಡಿಜಿಟಲ್ ಯೂನಿವರ್ಸಿಟಿಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುವುದು. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ. ಸೆಮಿಕಂಡಕ್ಟರ್ ಪ್ಲಾಂಟ್ ಗಳು ಬರಲಿವೆ. ಬೆಂಗಳೂರು ಎಲ್ಲ ಹೊಸ ಉದ್ದಿಮೆದಾರರಿಗೆ ಅವಕಾಶ ನೀಡುತ್ತದೆ. ರಾಜ್ಯದಲ್ಲಿ ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹ, ಆರ್ ಎಂಡ್ ಡಿ ನೀತಿ ರೂಪಿಸಲಾಗುತ್ತಿದೆ.  ಜನರ ಬದುಕು ಸುಧಾರಿಸುವ  ದಿಸೆಯಲ್ಲಿ ಸ್ಟಾರ್ಟ್ ಅಪ್ ಗಳು ಬರಬೇಕು ಎಂದು ಕರೆ ನೀಡಿದರು.

*ಸ್ಟಾರ್ಟ್ ಅಪ್ ಗಳಿಗೆ  ಅವಕಾಶ*
ಕೆಲವು ನೂರು ಸ್ಟಾರ್ಟ್ ಅಪ್ ಗಳು ಇಂದು 17000 ಸ್ಟಾರ್ಟ್ ಅಪಗಳಾಗಿವೆ. ಇದು ಇಂದಿನ ಯುವಪೀಳಿಗೆ ಶ್ರಮದ ಫಲವಾಗಿದೆ. ಯುವಪೀಳಿಗೆಯಲ್ಲಿ ಬಹಳ ಶಕ್ತಿಯಿರುತ್ತದೆ. ಸ್ಟಾರ್ಟ್ ಅಪ್ ಗಳ ಉಗಮಕ್ಕೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ. ಇದಕ್ಕೆ ಸಹಕರಿಸುವಂತಹ ಸರ್ಕಾರದ ನೀತಿಗಳಿರಬೇಕು. ದೇಶದ ಪ್ರಥಮ ಐಟಿ ಕಂಪನಿ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ಪ್ರತಿಭೆಯುಳ್ಳ ಮಾನವ ಸಂಪನ್ಮೂಲ, ಅವಿಷ್ಕಾರ, ಸಂಶೋಧನೆಗಳಿಗೆ ಅವಕಾಶವಿದೆ. ಒಬ್ಬ ವ್ಯಕ್ತಿ ಇಲ್ಲವೇ ವ್ಯಕ್ತಿಗಳ ಗುಂಪು ಆಧುನಿಕ ತಂತ್ರಜ್ಞಾನ, ವೈಜ್ಞಾನಿಕತೆಯ ಸಹಾಯದಿಂದ ಸ್ಥಾಪಿಸುವ ಉದ್ದಿಮೆಯೇ ಸ್ಟಾರ್ಟ್ ಅಪ್ ಗಳು. ಇಂತಹ ವ್ಯಕ್ತಿಗಳೇ ತಮ್ಮ ಪರಿಶ್ರಮ, ವಿಜ್ಞಾನ ಹಾಗೂ ಏಕಮನಸ್ಸಿನ ಅನ್ವೇಷಣೆಯಿಂದ ಯಶಸ್ವೀ ಸ್ಟಾರ್ಟ್ ಅಪ್ ಗಳನ್ನು ಹುಟ್ಟುಹಾಕಿದ್ದಾರೆ ಎಂದರು.

*ಯೂನಿಕಾರ್ನ್ ಗಳಾಗುತ್ತಿರುವ ಸ್ಟಾರ್ಟ್ ಅಪ್ ಗಳು:*
ಪ್ರಧಾನಿ ಮೋದಿಯವರು ನವಭಾರತದ ನಿರ್ಮಾಣದ ಆಶಯದಿಂದ ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ, ಅದಕ್ಕೆ ಪೂರಕವಾಗ ಪರಿಸರ ಹಾಗೂ ವಾತಾವರಣವನ್ನು ಸೃಷ್ಟಿಸಿದ್ದಾರೆ. ಬಹಳಷ್ಟು ಸ್ಟಾರ್ಟ್ ಅಪ್ ಗಳು  ಈಗ ಯೂನಿಕಾರ್ನ್  ಗಳಾಗಿ ಪರಿವರ್ತಿತವಾಗುತ್ತಿವೆ ಎಂದು ತಿಳಿಸಿದರು.

Post a Comment

Previous Post Next Post