*ನಮ್ಮ ನಮೋ ರಾಷ್ಟ್ರಭಕ್ತರಿಗೆ ಈ ದಿನದ ನಿತ್ಯ ಪಂಚಾಂಗ ಹಾಗೂ ನಿತ್ಯಭವಿಷ್ಯ ಸೇವೆ*🌿*Date: 12/03/2022*🚩🚩🚩🚩 🌷🌻🌹✡🙌🏻🎊🙌🏻✡🌹🌻🌷

*ನಮ್ಮ ನಮೋ ರಾಷ್ಟ್ರಭಕ್ತರಿಗೆ ಈ ದಿನದ  ನಿತ್ಯ ಪಂಚಾಂಗ ಹಾಗೂ ನಿತ್ಯಭವಿಷ್ಯ  ಸೇವೆ*🌿

*Date: 12/03/2022*
🚩🚩🚩🚩
  
🌷🌻🌹✡🙌🏻🎊🙌🏻✡🌹🌻🌷

*" ನಿತ್ಯ ದ್ವಾದಶ ರಾಶಿ ಭವಿಷ್ಯ "*
*" 12/ 03/ 2022 ಶನಿವಾರ "*

  *|| श्री गुरुभ्यो नमः  ||*
*|| _श्री गणेशाय नम:_ ||*

*ॐ शक्ति युक्तो गणपतिः*
  *भक्तत्राण परायणः |*
 *विद्यार्थिभ्यो मुदां देव*
*विद्यां  बुद्धिं  प्रयच्छतु  ||*
★=★=«»★«»=★=★

*ವಾಗೀಶಾದ್ಯಾಃ ಸುಮನಸಃ*
*ಸರ್ವಾರ್ಥಾನಾಮುಪಕ್ರಮೇ |*  
*ಯಂ ನತ್ವಾ ಕೃತಕೃತ್ಯಾಃ ಸ್ಯುಃ*
*ತಂ ನಮಾಮಿ ಗಜಾನನಂ ||*
★=★=«»=★=«»=★=★

*ಕಾರ್ಯಂ ಮೇ ಸಿದ್ಧಿಮಾಯಾಂತು*
*ಪ್ರಸನ್ನೇ ತ್ವಯಿ ಧಾತರಿ |*
*ವಿಘ್ನಾನಿ ನಾಶಮಾಯಾಂತು* *ಸರ್ವಾಣಿ ಗಣನಾಯಕ ||*

*|| सिद्धि बुद्धि शक्ति गणपतये नमः ||*
    <<<<<<<<<<>>>>>>>>>

         *|| कृष्णं वंदे जगद्गुरुं ||*
         *|| धर्मसंस्थापनार्थाय*
           *संभवामि युगेयुगे ||*


*" _ಮೇಷ  ರಾಶಿ_ "* 🦜
ಈ ದಿನ ನಿಮಗೆ ಉತ್ತಮವಾಗಿರಲಿದೆ. ಕೆಲಸದಲ್ಲಿ ಅತೀ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಕೆಲವರು ನಿಮ್ಮ ಅಸಮಾಧಾನಗಳನ್ನು
ಬಳಸಿಕೊಂಡು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳು ಇರುತ್ತದೆ. ಇದರಿಂದ ನೀವು ಜಾಗರೂಕರಾಗಿರಿ. ಕೆಲಸದಲ್ಲಿ ಸಮಸ್ಯೆಗಳು ಉಂಟಾದರೆ ಕುಟುಂಬಸ್ಥರಿಂದ ಸಲಹೆಯನ್ನು ಪಡೆಯಿರಿ. ಪೋಷಕರು ಅಥವಾ ಪ್ರೀತಿಪಾತ್ರರು ಉತ್ತಮ ಸಲಹೆಯನ್ನು ನೀಡುತ್ತಾರೆ. ಸಲಹೆಯನ್ನು ತಾಳ್ಮೆಯಿಂದ ಸ್ವೀಕರಿಸಿ.
ಶ್ರದ್ಧೆಯಿಂದ ಕೆಲಸ ಮಾಡಿ.
*ಭಕ್ತಿಯಿಂದ ನವಗ್ರಹದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.*



*" _ವೃಷಭ  ರಾಶಿ_ "* 🦜
ಆಸ್ತಿಗೆ ಸಂಬಂಧಿಸಿದ ವಿವಾದಗಳು ಇಂದು ಹುಟ್ಟಿಕೊಳ್ಳಬಹುದು. ಯಾವುದೇ ಕಾಗದದ ಮೇಲೆ ಸಹಿ ಹಾಕುವ ಮುನ್ನ ಜಾಗರೂಕರಾಗಿರಿ. ಸಾಮಾಜಿಕವಾಗಿ ಶಾಂತಿ ನೆಲೆಸಿರುವುದಿಲ್ಲ. ಕೆಲವರ
ನಿಂದನೆಗೆ ಗುರಿಯಾಗುತ್ತೀರಿ.
ಆರ್ಥಿಕವಾಗಿ ಇಂದು ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿಯಲ್ಲಿ ಕೆಲವು ಗೌರವ ದೊರೆಯುವ ಯೋಗವಿದೆ.
*ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.*



*" _ಮಿಥುನ  ರಾಶಿ_ "* 🦜
ಈ ದಿನ ನಿಮಗೆ ಹೊಂದಾಣಿಕೆಯಿಂದ ಕೂಡಿರುವುದು. ನೀವು ವ್ಯವಹಾರದಲ್ಲಿ ಮುನ್ನಡೆಯುವ ದಿನವಾಗಿದೆ. ಸರ್ಕಾರಿ ನೌಕರರ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದ ಸದಸ್ಯರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಅವರಿಗೆ ಸಹಾಯ ಮಾಡಬಹುದು.
ಇಂದು ಹಳೆಯ ಸಮಸ್ಯೆಗಳಿಂದ
ಮುಕ್ತಿ ಹೊಂದುವ ದಿನ.
*ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.*



*" _ಕಟಕ  ರಾಶಿ_ "* 🦜
ಯಾರಾದರೂ ನಿಮಗೆ ಒಳ್ಳೆಯ ಕೆಲಸದ ಬಗ್ಗೆ ಸಲಹೆ ನೀಡಬಹುದು. ಜೊತೆಗೆ ಒಳ್ಳೆಯ ಸುದ್ದಿ ಸಿಗುವ ಲಕ್ಷಣಗಳೂ ಇವೆ. ಸಮಾಜದಲ್ಲಿ ಸರಿಯಾದ ಗೌರವವನ್ನು ಪಡೆಯುತ್ತೀರಿ. ಆರ್ಥಿಕ ಭಾಗವು ಮೊದಲಿಗಿಂತ ಬಲವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. 
*ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು*



*" _ಸಿಂಹ  ರಾಶಿ_ "* 🦜
ಉದ್ಯಮಿಗಳು ವ್ಯಾಪಾರವನ್ನು ಪುನರುತ್ಥಾನಗೊಳಿಸಲು ಸಿದ್ಧರಾಗುವುದು ಉತ್ತಮ. ಮನೆಯಲ್ಲಿ ಉಂಟಾಗುವ ಸಂತೋಷದಿಂದ ನಿಮ್ಮ ಮನಸಿಗೆ ನೆಮ್ಮದಿ ದೊರೆಯಲಿದೆ, ಸ್ನೇಹಿತರೊಂದಿಗೆ ಪ್ರವಾಸವು ಮನರಂಜನೆಯನ್ನು ನೀಡುತ್ತದೆ. ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಅದನ್ನು ಬಾಡಿಗೆಗೆ ನೀಡುವುದರಿಂದ ಆರ್ಥಿಕ ಅಭಿವೃದ್ಧಿ ಪಡೆಯಬಹುದು. ಉನ್ನತ
ವ್ಯಾಸಂಗ ಮಾಡುತ್ತಿರುವವರಿಗೆ
ಉತ್ತಮ ಸಾಧನೆ ಖಚಿತ.
*ಭಕ್ತಿಯಿಂದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು*



*" _ಕನ್ಯಾ  ರಾಶಿ_ "* 🦜
ಆರೋಗ್ಯ ಉತ್ತಮ. ಧನಾರ್ಜನೆ ವೃದ್ಧಿ ಯೋಗವಿದೆ. ಉದ್ಯೋಗ ವ್ಯವಹಾರಗಳಲ್ಲಿ ಸರಿಯಾದ ಯೋಜನೆಯಿಂದ ಕೂಡಿದ
ಕಾರ್ಯ ವೈಖರಿ. ಸಹೋದರ, ಸಹೋದ್ಯೋಗಿಗಳಿಂದ ಸಹಾಯ ಸಹಕಾರ ಪ್ರಾಪ್ತಿಯಾಗುವ ಯೋಗವಿದೆ.
*ಭಕ್ತಿಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು*



*" _ತುಲಾ  ರಾಶಿ_ "* 🦜
ಈ ದಿನ ನಿಮಗೆ ಅನುಕೂಲಕರವಾಗಲಿದೆ.
ನಿಮ್ಮ ಸಕಾರಾತ್ಮಕ ಚಿಂತನೆಯು
ನಿಮ್ಮ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ. ಇದಲ್ಲದೆ, ನೀವು ಹೊಸ ಸ್ನೇಹಿತರನ್ನು ಸಹ ಪಡೆಯಬಹುದು.
ಮನೆಯ ಸದಸ್ಯರ ಆಶಯಗಳನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಿ. 
*ಭಕ್ತಿಯಿಂದ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು*



*" _ವೃಶ್ಚಿಕ  ರಾಶಿ_ "* 🦜
ನಿಮ್ಮ ಆಯ್ಕೆ ಅಥವಾ ಇಚ್ಛೆಯ ಕೆಲಸಗಳನ್ನು ಮಾಡಲು ನೀವು ಉತ್ಸುಕರಾಗುತ್ತೀರಿ. ನಿಮಗೆ ಕೆಲವು ಪ್ರಮುಖ ವ್ಯಕ್ತಿಗಳ ಸಂಪರ್ಕ ದೊರೆಯಲಿದೆ. ನಿಮ್ಮ ಆದಾಯದಲ್ಲೂ ಅಭಿವೃದ್ಧಿ ಯೋಗವಿದೆ. ಯೋಜನೆ ರೂಪಿಸಿ ಕೆಲಸ ಮಾಡುವ ಮೂಲಕ ನೀವು ಯಶಸ್ವಿಯಾಗುತ್ತೀರಿ. ಆಸ್ತಿ ಸಂಬಂಧಿತ ಕೆಲಸವನ್ನು ಮಾಡುವಾಗ, ಪೇಪರ್ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.  
*ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು*



*" _ಧನು  ರಾಶಿ_ "* 🦜
ನೀವು ಯಾವುದಾದರೂ ಪ್ರಮುಖ ವಿಷಯದ ಬಗ್ಗೆ ತಿಳಿದುಕೊಳ್ಳಬಹುದು. ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇದೆ, ಆದ್ದರಿಂದ ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ನೀವು ಹಠಾತ್ ಲಾಭದ ಅವಕಾಶಗಳನ್ನು ಪಡೆಯುವ ಯೋಗವಿದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಜಾಗರೂಕರಾಗಿರಿ. ಇದಲ್ಲದೆ, ಯುವಕರು ಹೊಸ
ಉದ್ಯೋಗಗಳನ್ನು ಪಡೆಯಬಹುದು. 
*ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.*



*" _ಮಕರ  ರಾಶಿ_ "* 🦜
ಉದ್ಯೋದಲ್ಲಿ ಸಹಪಾಠಿಗಳ ಬಾಂಧವ್ಯ ನಿಮ್ಮೊಂದಿಗೆ ಉತ್ತಮವಾಗಿರುವುದು,
ಕೆಲಸದಲ್ಲಿ ಸಹಕರಿಸುತ್ತಾರೆ,
ನಿಮ್ಮನ್ನು ಬೆಳೆಸುತ್ತಾರೆ.
ವೃತ್ತಿ ಕ್ಷೇತ್ರದಲ್ಲಿ ನಿಮ್ಮವರ ಸಹಾಯವನ್ನು ಪಡೆಯಿರಿ. ಶ್ರದ್ಧೆಯಿಂದ ಮಾಡಿದ ಕೆಲಸ ನಿಮ್ಮನ್ನು ಕೊನೆವರೆಗೂ ಕೈಹಿಡಿಯುತ್ತದೆ.
*ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.*



*" _ಕುಂಭ  ರಾಶಿ_ "* 🦜
ಯುವಕರು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಬಹುದು. ಆದ್ದರಿಂದ ವಾಗ್ದಂಡನೆ ಮಾಡುವ ಬದಲು ಸಹಾಯ ಮಾಡಿ.
ಹಣಕಾಸಿನ ವಿಷಯದಲ್ಲಿ ನೀವು ಧನಾತ್ಮಕ ಸ್ಥಾನವನ್ನು ಅನುಭವಿಸುವ ಸಾಧ್ಯತೆಯಿದೆ. ವೃತ್ತಿಪರ ರಂಗದಲ್ಲಿ ನಿಮ್ಮ ಖ್ಯಾತಿಯು ಹೆಚ್ಚಾಗಲಿದೆ.
*ಭಕ್ತಿಯಿಂದ ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.*



*" _ಮೀನ  ರಾಶಿ_ "* 🦜
ನಿಮ್ಮ ನಡವಳಿಕೆಯಲ್ಲಿ
ಧನಾತ್ಮಕ ಬದಲಾವಣೆಗಳಾಗಲಿವೆ.
ಅಂಗಡಿಯವರು ಗ್ರಾಹಕರನ್ನು ಚೆನ್ನಾಗಿ ಆಕರ್ಷಿಸುವ ಯೋಗ ಹೊಂದಿದ್ದೀರಿ, ಇದಲ್ಲದೆ ನಿಮ್ಮ ಕೆಲಸದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ನಿಮ್ಮ ಯೋಜನೆಗಳು ಮತ್ತು ರಹಸ್ಯಗಳನ್ನು
ಯಾರೊಂದಿಗೂ ಹಂಚಿಕೊಳ್ಳಬೇಡಿ.
*ಭಕ್ತಿಯಿಂದ ಶ್ರೀ ಶನೈಶ್ಚರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.*

     *|| «» ಹರೇರಾಮ «» ||*
  *|| «» ಸರಳ ಪರಿಹಾರ «» ||*
   🌷🌻🌹🙏🏻🙌🏻🙏🏻🌹🌻🌷
 ★==★=«»=★=«»=★==★

( ಸಂಗ್ರಹಿಸಿದ್ದು)

ನಮೋ ಹಿಂದೂ ಸನಾತನ ಧರ್ಮ, ಜೈ ಹಿಂದ್🌺

!!!!Jai HINDUTWA!!!🚩🚩🚩
📖 *ನಮೋ ರಾಷ್ಟ್ರಭಕ್ತರು*

⛳ ​" ​*ಒಂದೂ ಗೂಡಿ ಬನ್ನಿ *ರಾಷ್ಟ್ರ ಸೇವೆಗೆ, ಶುದ್ದ ಮನದಿ ಶ್ರಧ್ದೆಯಿಂದ ಧರ್ಮಸೇವೆಗೆ*  "​ ⛳ ​
 ​

Post a Comment

Previous Post Next Post