ಬೆಂಗಳೂರು: ಹಿಜಾಬ್​​ ಪ್ರಕರಣ (Hijab Case) ಸಂಬಂಧ ಕರ್ನಾಟಕ ಹೈಕೋರ್ಟ್​​ (Karnataka High Court) ನೀಡಿರುವ ತೀರ್ಪಿನ ಬಗ್ಗೆ ಅಸಮಾಧಾನಗೊಂಡಿರುವ ಮುಸ್ಲಿಂ ಸಂಘಟನೆಗಳು (Muslim Organisation) ನಾಳೆ ಕರ್ನಾಟಕ ಬಂದ್​ಗೆ (Karnataka Bandh) ಕರೆ ನೀಡಿವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್​ ಆಯುಕ್ತರು , ಮುಸ್ಲಿಂ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕಮಿಷನರ್ ಕಚೇರಿಯಲ್ಲಿ ಸಭೆ ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಮೌಲಾನಾ ಮುಸ್ಕೂದ್ ಇಬ್ರಾನ್ ರಶೀದ್ , ಹಿಜಾಬ್ ಗೆ ಸಂಬಂಧಪಟ್ಟಂತೆ ಹೈಕೋರ್ಟ್​ ಆದೇಶ ನೀಡಿದೆ. ಮುಸ್ಲಿಂ ಬಾಂಧವರಿಗೆ ಇದ್ರಿಂದ ಸ್ವಲ್ಪ ನೋವಾಗಿದೆ. ಆ ನೋವನ್ನು ನಾಳೆ ತೋರಿಸಲ್ಲಿದ್ದೇವೆ. ಮುಸ್ಲಿಂ ಸಂಘಟನೆಗಳು ನಾಳೆ ಬಂದ್ ಗೆ ಕರೆ ಕೊಟ್ಟಿವೆ. ನಾಳೆ ಯಾರು ಕೂಡ ಮನೆಯಿಂದ ಆಚೆಗೆ ಬರಬಾರದು, ಯಾರು ಮೈದಾನದಲ್ಲಿ ಸೇರಬಾರದು. ಯಾರ್ಲಿ ಗಳನ್ನು ಮಾಡಬಾರದು, ಯಾರು ಸ್ಕೂಲ್ ಹಾಗೂ ಆಫೀಸ್ ಗಳಿಗೆ ಹೋಗದೆ ಮನೆಯಲ್ಲಿ ಇರಿ. ಶಾಂತಿಯಿಂದ ನಮ್ಮ ನೋವನ್ನು ತೋರಿಸುತ್ತೇವೆ. ಶಾಂತಿಯುತವಾಗಿ ನಾವು ಹೋರಾಟ ಮಾಡ್ತೀವಿ ಎಂದರು.

Karnataka Bandh: ಹಿಜಾಬ್ ತೀರ್ಪು: ನಾಳೆ ಕರ್ನಾಟಕ ಬಂದ್

ನಾಳೆ ಬಲವಂತದ ಬಂದ್​ ಮಾಡಂಗಿಲ್ಲ

ಸಭೆ ಬಳಿಕ ಮಾತನಾಡಿದ ಕಮಿಷನರ್ ಕಮಲ್ ಪಂಥ್, ನಾಳೆ ಮುಸ್ಲಿಂ ಮುಖಂಡರು ಬಂದ್ ಗೆ ಕರೆ ಕೊಟ್ಟಿದ್ದಾರೆ. ಈ ಹಿನ್ನಲೆ ಇವತ್ತು ಮುಖಂಡರ ಜೊತೆ ಸಭೆ ಮಾಡಿದ್ದೇವೆ, ಅವರು ನಮಗೆ ಭರವಸೆ ಕೊಟ್ಟಿದ್ದಾರೆ. ನಾಳೆ ಹೊರಗಡೆ ಕಾರ್ಯಕ್ರಮ ಮಾಡಲ್ಲ ಅಂತಾ ಹೇಳಿದ್ದಾರೆ. ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿಸುವುದು, ಆಫೀಸ್ ಗೆ ಹೋಗುವವರನ್ನ ಬಲವಂತವಾಗಿ ತಡಿಯಲ್ಲ ಎಂದು ಭರವಸೆ ನೀಡಿದ್ದಾರೆ. ಆದರೂ ಕೂಡ ಸಾಕಷ್ಟು ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಬೀಟ್ ನಲ್ಲಿ ಇರ್ತಾರೆ. ಕೆಲವು ಕಡೆ ರೂಟ್ ಮಾರ್ಚ್ ಮಾಡಲಾಗುವುದು. 25 ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. 35 ಸಿಎ ಆರ್ ತುಕಡಿಗಳು ನಿಯೋಜನೆ ಮಾಡಲಾಗಿದೆ ಎಂದರು.

ಹೆಲಿಕಾಪ್ಟರ್​​ ಬಳಕೆಗೆ ಅನುಮತಿ ಇಲ್ಲ

ನಾಳೆ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲೂ ಭದ್ರತೆ ಕೈಗೊಂಡಿರುವುದಾಗಿ ಕಮಿಷನರ್ ಕಮಲ್ ಪಂಥ್ ಹೇಳಿಕೆ ನೀಡಿದರು. ಎಲ್ಲಾ ಥಿಯೇಟರ್ ನಲ್ಲಿ ಲೋಕಲ್ ಪೊಲೀಸರು ಭದ್ರತೆ ತೆಗೆದುಕೊಳ್ಳಲಿದ್ದಾರೆ. ಪುನೀತ್ ಅಭಿಮಾನಿಗಳು ಶಾಂತಿಯುವಾಗಿ ವರ್ತನೆ ಮಾಡ್ತಾರೆ ಅನ್ನೋ ನಂಬಿಕೆ ಇದೆ. ಯಾವುದೇ ಅಹಿತಕರ ಘಟನೆ ನಡೆಯಲ್ಲ. ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಠಿ ಮಾಡಲು ಅನುಮತಿ ‌ನೀಡಿಲ್ಲ. ತಾಂತ್ರಿಕ ತೊಂದರೆ ಹಿನ್ನೆ ಲೆ ಅನುಮತಿ ನೀಡಿಲ್ಲ ಎಂದರು. ಹೆಲಿಕಾಪ್ಟರ್ ಕೆಳಗೆ ಬಂದರೆ ತಾಂತ್ರಿಕ ತೊಂದರೆ ಅಗುತ್ತೆ. ಜೊತೆಗೆ ಹೆಲಿಕಾಪ್ಟರ್ ನಲ್ಲಿ ಬಳಕೆ ಬಗ್ಗೆ ಅಧಿಕೃತ ವಾಗಿ ಯಾವುದೇ ಪತ್ರ ನಮಗೆ ಬಂದಿಲ್ಲ, ಬಾಯಿ ಮಾತಲ್ಲಿ ಮಾತ್ರ ತಿಳಿಸಿದ್ದರು ಎಂದರು.

Hijab Verdict ನಂತರ ಉಡುಪಿ ಗ್ರೌಂಡ್ ರಿಪೋರ್ಟ್; ಜಿಲ್ಲೆ ಸಂಪೂರ್ಣ ಸ್ತಬ್ಥ, ಎಲ್ಲೆಲ್ಲೂ ಖಾಕಿ ಕಣ್ಗಾವಲು

ಸಾರ್ವಜನಿಕವಾಗಿ ಹೋಳಿ ಆಚರಣೆ ಮಾಡುವಂತಿಲ್ಲ

ಹೋಳಿ ಆಚರಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಕಮಲ್ ಪಂತ್ ಸ್ಪಷ್ಟನೆ ನೀಡಿದ್ರು. ತಮ್ಮ ಮನೆಗಳಲ್ಲಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಶಾಂತಿಯುತವಾಗಿ ಮನೆಗಳಲ್ಲಿ ಹೋಳಿ ಆಚರಣೆಗೆ ಅನುಮತಿ ಇದೆ. ಸಾರ್ವಜನಿಕವಾಗಿ ಹೋಳಿ ಆಚರಣೆ ಮಾಡುವಂತಿಲ್ಲ. ರಸ್ತೆಗಳಲ್ಲಿ ಬರೋದು ಗುಂಪು ಸೇರಿ ಓಡಾಡುವಂತಿಲ್ಲ ಎಂದರು.

ಇಂದಿನ ಸಭೆಯಲ್ಲಿ ಎಲ್ಲಾ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಭಟನೆ, ರ್ಯಾಲಿಗೆ ಅವಕಾಶವಿಲ್ಲವೆಂದು ಮುಸ್ಲಿಂ ಮುಖಂಡರಿಗೆ ತಿಳುವಳಿಕೆ ಮೂಡಿಸುವಂತೆ ಸೂಚನೆ ನೀಡಲಾಗಿದೆ. ಇಂದು ಸಂಜೆಯೇ ಸೂಕ್ಷ್ಮ ಪ್ರದೇಶಗಳಾದ ಜೆಜೆ ನಗರ,ಬ್ಯಾಟರಾಯನಪುರ, ಶಿವಾಜಿನಗರ, ಆರ್.ಟಿ ನಗರ, ಜೆಸಿ ನಗರದಲ್ಲಿ ರೂಟ್ ಮಾರ್ಚ್ ಮಾಡಲು ಸೂಚಿಸಲಾಗಿದೆ.

Post a Comment

Previous Post Next Post