[06/03, 8:06 AM] Pandit Venkatesh. Astrologer. Kannada: ಭಾನುವಾರ ಸೂರ್ಯನ ಅನುಗ್ರಹ ಪಡೆಯಲು
ಸೂರ್ಯ ಮಂತ್ರ (Surya mantra)
“ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಈ ಮಂತ್ರದಲ್ಲಿ ಸೂರ್ಯನನ್ನು ಬ್ರಹ್ಮಾಂಡದ ಅಧಿಪತಿಯೆಂದು ಹೊಗಳಲಾಗುತ್ತದೆ. ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಭಕ್ತರು ಸೂರ್ಯದೇವನನ್ನು ಪ್ರಾರ್ಥಿಸಲಾಗುತ್ತದೆ. ಮಾನವನ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಂತ್ರಕ್ಕಿದೆ ಎಂದು ನಂಬಲಾಗಿದೆ.
• ಸೂರ್ಯ ಬೀಜ ಮಂತ್ರ (Surya Beeja Mantra)
“ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ”
ಈ ಮಂತ್ರವು ಸೂರ್ಯದೇವನಿಗೆ ನಮಸ್ಕರಿಸುವ ಮಂತ್ರವಾಗಿದೆ. ಸೂರ್ಯ ಬೀಜ ಮಂತ್ರವು ದೈವಿಕ ಶಕ್ತಿಯನ್ನು ಹೊಂದಿದೆ. ಈ ಮಂತ್ರ ಪಠಿಸುವುದರಿಂದ ಸೂರ್ಯ ದೇವನು ಸಕಾರಾತ್ಮಕ ಶಕ್ತಿಯನ್ನು ಕರುಣಿಸುತ್ತಾನೆ. ಮನುಷ್ಯನಿಗೆ ಈ ಮಂತ್ರವು ಕೀರ್ತಿ, ಸಮೃದ್ಧಿಯನ್ನು ನೀಡಿ ಕಷ್ಟಗಳನ್ನು ದೂರಾಗಿಸುತ್ತಾನೆ. ರೋಗನಿವಾರಣೆಯ ಶಕ್ತಿಯನ್ನು ಇದು ಹೊಂದಿದೆ.
• ಸೂರ್ಯ ಗಾಯತ್ರಿ ಮಂತ್ರ (Surya Gayatri Mantra)
“ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡೇಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್”
ಸೂರ್ಯನಿಗೆ ಸಂಬಂಧಿಸಿದ ಈ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಮಂತ್ರವನ್ನು ದಿನನಿತ್ಯ ಜಪಿಸುವುದರಿಂದ ಕಣ್ಣುಗಳ ಆರೋಗ್ಯ ವೃದ್ಧಿಸುವುದಲ್ಲದೇ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಅಷ್ಟು ಮಾತ್ರವಲ್ಲ, ಈ ಸೂರ್ಯ ಗಾಯತ್ರಿ ಮಂತ್ರವನ್ನು ದಿನನಿತ್ಯ ಪಠಿಸಿದರೆ ಸೂರ್ಯನನ್ನು ಹೊರತುಪಡಿಸಿ ಇತರೆ ಗ್ರಹಗಳಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.
• ಸೂರ್ಯ ವಶೀಕರಣ ಮಂತ್ರ (Surya Vasheekarana Mantra)
“ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ”.
• ಆದಿತ್ಯ ಹೃದಯಂ ಮಂತ್ರ (Aditya Hrudayam Mantra)
“ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ”
ಈ ಮಂತ್ರವು ಸೂರ್ಯದೇವನಿಗೆ ಧನ್ಯವಾದವನ್ನು ಅರ್ಪಿಸುವ ಮಂತ್ರವಾಗಿದೆ. ಈ ಮಂತ್ರವನ್ನು ಸೂರ್ಯದೇವನಿಗೆ ಪಠಿಸುವುದರಿಂದ ನಿರ್ಭಯವನ್ನು, ಜ್ಞಾನವನ್ನು ಪಡೆಯುತ್ತಾನೆ. ವ್ಯಕ್ತಿಯ ಮನಸ್ಸಿನಲ್ಲಿನ ಅಹಂ, ದುರಾಸೆ, ದ್ರೋಹ, ಕೋಪ ಸೇರಿದಂತೆ ಇನ್ನಿತರ ನಕಾರಾತ್ಮಕ ಅಂಶವನ್ನು ತೊಡೆದು ಹಾಕುತ್ತದೆ.
▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬
[06/03, 8:55 AM] Pandit Venkatesh. Astrologer. Kannada: ....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5123
ಶ್ರೀ ಶಾಲಿವಾಹನ ಶಕ 1944
ಪ್ಲವ ನಾಮ ಸಂವತ್ಸರ
ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸ ಶುಕ್ಲ ಪಕ್ಷ ತಿಥಿ: ಚೌತಿ ಅಂತ್ಯ 09:11PM ನಂತರ ಪಂಚಮೀ ಆರಂಭ ಭಾನುವಾರ ನಕ್ಷತ್ರ: ಅಶ್ವಿನಿ ಯೋಗ: ಬ್ರಹ್ಮ ಕರಣ: ವಣಿಜ-ವಿಷ್ಟಿ-ಬವ
ದಿನಾಂಕ : 06-03-2022 ರಾಹುಕಾಲ: 05:04PM-06:32PM
ಯಮಗಂಡ ಕಾಲ: 12:38PM-02:07PM
ಗುಳಿಕ ಕಾಲ: 03:35PM-05:04PM ಮಳೆ ನಕ್ಷತ್ರ: ಪೂರ್ವಾ ಭಾದ್ರ " ಈ ದಿನ ಎಲ್ಲರಿಗೂ ಶುಭವಾಗಲಿ." " ಆಸೆಗಳಿಗಾಗಿ ಬದುಕಲ್ಲ.... ಆದರ್ಶಗಳಿಗಾಗಿ ಬದುಕು.... ದೀರ್ಘ ಜೀವನ ಮುಖ್ಯವಲ್ಲ.... ದಿವ್ಯ ಜೀವನ ನಡೆಸಬೇಕು... "
Post a Comment