*ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 144 ವಿದ್ಯಾರ್ಥಿಗಳಿಗೆ 25,000 ರೂ. ಪ್ರೋತ್ಸಾಹ ಧನ ವಿತರಣೆ:*

*ಮಾಧ್ಯಮ ಮಾಹಿತಿ:*

*ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 144 ವಿದ್ಯಾರ್ಥಿಗಳಿಗೆ 25,000 ರೂ. ಪ್ರೋತ್ಸಾಹ ಧನ ವಿತರಣೆ:*

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾ ಇಲಾಖೆಯಲ್ಲಿ ಒಟ್ಟು 33 ಪ್ರೌಢಶಾಲೆಗಳಿದ್ದು, 2021-2ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 1,991 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ *1,419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 71 ರಷ್ಟು ಫಲಿತಾಂಶ ಬಂದಿರುತ್ತದೆ.*

ಅದರಂತೆ, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 1,991 ವಿದ್ಯಾರ್ಥಿಗಳ ಪೈಕಿ 742 ಗಂಡು ಮಕ್ಕಳಲ್ಲಿ 41 ಹಾಗೂ 1,249 ಹೆಣ್ಣು ಮಕ್ಕಳಲ್ಲಿ 103 ವಿದ್ಯಾರ್ಥಿಗಳು ಸೇರಿದಂತೆ 144 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಬಿಬಿಎಂಪಿ ಶ್ರೀರಾಮಪುರ ಬಾಲಕಿಯರ ಪ್ರೌಢಶಾಲೆಗಳಲ್ಲಿ ಕು. ಉಜ್ವಲ.ಎಂ.ಸಿ ಎಂಬ ವಿದ್ಯಾರ್ಥಿನಿಯು 625ಕ್ಕೆ *616 ಅಂಕಗಳನ್ನು ಪಡೆದು ಪಾಲಿಕೆ ಪ್ರೌಢಶಾಲೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿರುತ್ತಾರೆ.*

ಮುಂದುವರಿದು, ಪಾಲಿಕೆಯ ಶಾಂತಿನಗರ ಪ್ರೌಢಶಾಲೆಯು ಶೇ. 100 ರಷ್ಟು ಫಲಿತಾಂಶವನ್ನು ನೀಡಿ ಮೊದಲ ಸ್ಥಾನ, ಭೈರವೇಶ್ವರ ನಗರ ಪ್ರೌಢಶಾಲೆಯು ಶೇ. 91.52 ರಷ್ಟು ಫಲಿತಾಂಶವನ್ನು ನೀಡಿ ಎರಡನೇ ಸ್ಥಾನ, ಹೇರೋಹಳ್ಳಿ ಪ್ರೌಢಶಾಲೆಯು ಶೇ. 90.12 ರಷ್ಟು ಫಲಿತಾಂಶವನ್ನು ನೀಡಿ ಮೂರನೇ ಸ್ಥಾನವನ್ನು ಪಡೆದಿರುತ್ತದೆ. *ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 144 ವಿದ್ಯಾರ್ಥಿಗಳಿಗೂ ಪಾಲಿಕೆ ವತಿಯಿಂದ ತಲಾ 25,000 ರೂ. ಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ* ಎಂದು ಪಾಲಿಕೆಯ ವಿದ್ಯಾ ಇಲಾಖೆಯು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತದೆ. 

*ಮುಖ್ಯ ಆಯುಕ್ತರಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ:*

*ಬಿಬಿಎಂಪಿಯ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಭಿನಂದನೆಗಳನ್ನು ತಿಳಿಸಿದ್ದಾರೆ.*

*ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆಯ ಪ್ರತಿಯನ್ನು ಲಗತ್ತಿಸಿದೆ.*

Post a Comment

Previous Post Next Post