ಬಿಜೆಪಿ ಪರ2ವಾದ ಬದಲಾವಣೆಯ ಪರ್ವ ಆರಂಭವಾಗಿದೆ* *ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ*

[07/05, 9:00 PM] Gurulingswami. Holimatha. Vv. Cm: *ಬಿಜೆಪಿ ಪರ
2ವಾದ ಬದಲಾವಣೆಯ ಪರ್ವ ಆರಂಭವಾಗಿದೆ* *ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಮೇ 07: ರಾಜ್ಯದಲ್ಲಿ ಬಿಜೆಪಿ ಪರವಾದ ಬದಲಾವಣೆಯ ಪರ್ವ ಆರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಶಾಸಕರು, ಮಾಜಿ ಸಚಿವರು ಬಿಜೆಪಿಗೆ ಸೇರ್ಪಡೆಗೊಂಡ  ಸಂದರ್ಭದಲ್ಲಿ ಹೋಟೆಲ್ ಪರಾಗ್ ನಲ್ಲಿ  ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದರು. 


ವಿವಿಧ ಸಮುದಾಯಗಳ , ಹಲವಾರು ವರ್ಷ ಅನುಭವವಿರುವ ನಾಯಕರು ಬಂದಿದ್ದಾರೆ. ಮಂತ್ರಿಗಳಾಗಿದ್ದವರು, ಶಾಸಕರು, ಸಂಸತ್ ಸದಸ್ಯರು ಸಾರ್ವಜನಿಕ ಸೇವೆ ಮಾಡುವ ಛಲವಿರುವವರು, ಯುವಕರು ಬಂದಿದ್ದಾರೆ. ಬಿಜೆಪಿ ಪರವಾದ ಬದಲಾವಣೆಯ ಪರ್ವಕಾಲವಿದು. 

. ವಿರೋಧಪಕ್ಷದ ನಾಯಕರು  ಈಗಾಗಲೇ ಅಧಿಕಾರಕ್ಕೆ ಬಂದು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅಲ್ಲಿ ಜಗಳ ನಡೆದಿದೆ. ಆದರೆ ಈ ಬಾರಿಯೂ 2018 ಕ್ಕಿಂತ  ಕಡಿಮೆ ಸ್ಥಾನಗಳನ್ನು ಖಂಡಿತವಾಗಿ ಪಡೆಯುತ್ತಾರೆ.  

ಮುಖ್ಯಮಂತ್ರಿಯಾಗಲು ಇಬ್ಬರ ನಡುವೆ ದೊಡ್ಡ ಪೈಪೋಟಿ ಇದೆ. ಅದೇ ದೊಡ್ಡ ವಿಚಾರ. ಇವರಿಂದ ರಾಜ್ಯ ಉದ್ದಾರವಾಗುವುದಿಲ್ಲ.  ಇವರ ಆಡಳಿತದಲ್ಲಿ ಯಾವ ಭಾಗ್ಯವೂ ಜನರಿಗೆ ಮುಟ್ಟಿಲ್ಲ. ಹೀಗಾಗಿ ಜನ ಅವರನ್ನು ಕಿತ್ತು ಒಗೆದಿದ್ದಾರೆ. ಅದೊಂದು ದೌರ್ಭಾಗ್ಯದ ಸರ್ಕಾರ ಎಂದು ಜನ ತಿಳಿಸಿದ್ದಾರೆ.  ಮತ್ತೊಮ್ಮೆ ಆ ದೌರ್ಭಾಗ್ಯ ಕನ್ನಡ ನಾಡಿಗೆ ಬೇಡ ಎಂಬ ತೀರ್ಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.


ಸರ್ಕಾರ ಬಜೆಟ್ ಕಾರ್ಯಕ್ರಮಗಳ  ಅನುಷ್ಠಾನವನ್ನು ಪ್ರಾರಂಭಿಸಿದೆ.  4-5 ತಿಂಗಳಲ್ಲಿ ಅದರ  ಪರಿಣಾಮ ನಿಮ್ಮ ಊರುಗಳಲ್ಲಿ ಎಲ್ಲಾ ಜನಾಂಗದ ವರಿಗೆ ತಿಳಿಯಲಿದೆ.  ಈ ಕಾರ್ಯಕ್ರಮಗಳ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ. 2023 ರಲ್ಲಿ ನಮ್ಮ ಸಾಧನೆಗಳ ಆಧಾರದ ಮೇಲೆಯೇ ಮತ್ತೊಮ್ಮೆ 150 ಕ್ಕೂ ಹೆಚ್ಚು ಸ್ಥಾನ ಗಳನ್ನು ಪಡೆದು ವಿಧಾನ ಸೌಧದಲ್ಲಿ  ಭಾಜಪ ಸರ್ಕಾರ ಸ್ಥಾಪನೆ ನಮ್ಮ ಗುರಿ. ಆ ಗುರಿಗೆ ಇಂದು ಆನೆ ಬಲ ಬಂದಿದೆ ಎಂದರು. 

 ಯುವಕರು, ಮಹಿಳೆಯರು, ರೈತರು, ಕಾರ್ಮಿಕರು ನಮ್ಮ ಶಕ್ತಿ. ಇವರಿಗೆ ಸ್ವಾಭಿಮಾನದ, ಸ್ವಾವಲಂಬನೆಯ ಬದುಕು ಕೊಡಲು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿಗಳು ನುಡಿದರು. 

 *ವಿರೋಧ ಪಕ್ಷದಲ್ಲಿ ದೊಡ್ಡ ಬದಲಾವಣೆ ಆಗಲಿದೆ *
ದಕ್ಷಿಣ ಕರ್ನಾಟಕದಲ್ಲಿ ಬದಲಾವಣೆ ಯ ಮೊದಲ ಹೆಜ್ಜೆಯನ್ನಿಟ್ಟಿದ್ದೇವೆ. ಇನ್ನು ನಿರಂತರವಾಗಿ ಬಿಜೆಪಿಯನ್ನು ಸದೃಢಗೊಳಿಸುವ ಕೆಲಸ ಮಾಡುತ್ತೇವೆ. ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ, ಅವರ ವಿಶ್ವಾಸ ವನ್ನು ಪಡೆಯುತ್ತೇವೆ. ಕರ್ನಾಟಕದಾದ್ಯಂತ ಜನ ಪಕ್ಷಕ್ಕೆ ಸೇರುತ್ತಿದ್ದಾರೆ.  
 ಐದು ರಾಜ್ಯಗಳ ಚುನಾವಣೆಯಾದ ಮೇಲೆ ವಿರೋಧ ಪಕ್ಷದ ಶಾಸಕರು ನಮ್ಮ ಬಳಿ ಬಂದಿದ್ದಾರೆ. ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಹಾಗೂ ಸಂಘಟನೆ ಮಾಡುತ್ತೇವೆ. ಸಂಘಟನೆ ನಮ್ಮ ಬಳ ಮತ್ತು ಬೆನ್ನೆಲುಬು. 1 ಕೋಟಿಗಿಂತ ಹೆಚ್ಚು ಕಾರ್ಯಕರ್ತರು ಕರ್ನಾಟಕದಲಿದ್ದಾರೆ. ಅವರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡುತ್ತೇವೆ. 

*ಪಕ್ಷ ಬಲಪಡಿಸೋಣ*
ಇಂದು ಪಕ್ಷಕ್ಕೆ ಸೇರಿರುವವರಿಗೆ ಸ್ವಾಗತ. ನರೇಂದ್ರ ಮೋದಿಯವರ, ಅಮಿತ್ ಶಾ, ಜೆ.ಪಿ ನಡ್ಡಾ , ನಳಿನ್ ಕುಮಾರ್ ಅವರ ಕೈ ಬಳಪಡಿಸಬೇಕು. ಭಾಜಪ  ಶಕ್ತಿಯನ್ನು ಬಲ ಪಡಿಸೋಣ. 

*ಆಳವಾಗಿ ಬೇರೂರಿರುವ ಹೆಮ್ಮರ*.

ಬಿಜೆಪಿ ಭಾರತದ ಭೂಮಿಯಲ್ಲಿ ಆಳವಾಗಿ ಬೇರೂರಿರುವ ಹೆಮ್ಮರ. ಕುಂಡಲಿಯ ಗಿಡವಲ್ಲ. ಹಲವಾರು ವರ್ಷಗಳ ತ್ಯಾಜ್ಯದ,ದೌರ್ಜನ್ಯದ ಸರ್ಕಾರ ದಲ್ಲಿ ಲಾಠಿ ಏಟು ತಿಂಡಿದ್ದಾರೆ ತುಷ್ಟೀಕರಣದ  ರಾಜಕಾರಣದಲ್ಲಿ ಜೀವ ಕಳೆದುಕೊಂಡಿದ್ದಾರೆ. ಬಿಜೆಪಿಯನ್ನು ಸುಲಭವಾಗಿ ಮುಟ್ಟಲು ಸಾಧ್ಯವಿಲ್ಲ. ದೆಹಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು. 




*ಯಾವುದೇ ಜಿಲ್ಲೆ, ಜನಾಂಗವನ್ನು ಕಡೆಗಣಿಸಿಲ್ಲ.*

ಎಲ್ಲರೂ ಆಶ್ಚರ್ಯ ಪಡುವಂಥ ಬಜೆಟ್ ಮಂಡಿಸಿದ್ದೇವೆ. ಆರ್ಥಿಕ ಸುಧಾರಣೆ ಮಾಡಿ ಬೊಕ್ಕಸ ತುಂಬಿ, ಸಂಪನ್ಮೂಲ ಕ್ರೋಢೀಕರಣ ಮಾಡಿ  ನಮ್ಮ ಗುರಿಗಿಂತ 15 ಸಾವಿರ ಕೋಟಿ ಹೆಚ್ಚುವರಿ ಮಾಡಿ ಬಜೆಟ್ ಮಂಡಿಸಲಾಗಿದೆ ಎಂದರು. 



ಕೋವಿಡ್ ಮೆಟ್ಟಿ ನಿಂತು ಭಾರತ ಕ್ಕೆ ಸುರಕ್ಷತೆ ಚಕ್ರವನ್ನು ಕೊಟ್ಟಿದ್ದಾರೆ. ಅಮೆರಿಕಾ, ಇಂಗ್ಲೆಂಡ್ ಮುಂತಾದ ದೊಡ್ಡ ರಾಷ್ಟ್ರಗಳು ವಿಫಲವಾಗಿರುವಲ್ಲಿ ನರೇಂದ್ರ ಮೋದಿಯವರು ಭಾರತವನ್ನು ಯಶಸ್ವಿಗೊಳಿಸಿದ್ದಾರೆ. ಬಡ ರಾಷ್ಟ್ರಗಳಿಗೂ ಹಂಚಿ ಅಲ್ಲಿಗೂ ಸುರಕ್ಷತೆ ಒದಗಿಸಿದ್ದಾರೆ.  ಭಾರತದ ನಾಯಕತ್ವವನ್ನು ವಿಶ್ವದಲ್ಲಿ ತೋರಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ದೇಶದಲ್ಲಿ ಆಗುತ್ತಿದೆ.  75 ವರ್ಷಗಳಲ್ಲಿ ಯಾವುದೇ ಪ್ರಧಾನಮಂತ್ರಿ ಪ್ರತಿ ಮನೆಗೂ ನೀರು ಕೊಡುತ್ತೇವೆ ಎಂದು ಹೇಳುವ ಸಾಹಸ ಮಾಡಿರಲಿಲ್ಲ. ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿಯೊಂದು ಮನೆಗೂ ಕೊಡುವ ಕೆಲಸವನ್ನು ಮಾಡಿದ್ದಾರೆ. 2023 ರೊಳಗೆ ಆ ಸಾಧನೆ ಮಾಡಿತೋರಿಸಲಿದ್ದಾರೆ. ಬಜೆಟ್ ಆದ ಮೇಲೆ ಜನ ಸಂಪೂರ್ಣವಾಗಿ ವಿಶ್ವಾಸವನ್ನಿಟ್ಟಿದ್ದಾರೆ. ಎಲ್ಲಾ ಭಾಗಗಳಲ್ಲಿ ಸಮಗ್ರ ಅಭಿವೃದ್ಧಿಯ ಯೋಜನೆಗಳನ್ನು ಮಾಡಲಾಗಿದೆ ಎಂದರು. 

*ಬದಲಾವಣೆಯ ತವಕ*
ಇಂದು ಪಕ್ಷವನ್ನು ಸೇರಿದವರೆಲ್ಲರೂ ಜನಸಾಮಾನ್ಯರಿಗೆ ಹತ್ತಿರವಾಗಿರುವವರು.  ಜನರ ನಾಡಿ ಮಿಡಿತ ಗೊತ್ತಿರುವವರು. ಬದಲಾವಣೆಯ ನಾಡಿಮಿಡಿತ ಅವರಿಗೆ ಗೊತ್ತಾಗಿದೆ. ವಿಶೇಷವಾಗಿ ಯುವಕರು, ವಿಶೇಷವಾಗಿ 18- 42 ವಯೋಮಾನದವರು ಬದಲಾವಣೆಯ ತವಕದಲ್ಲಿ ಇದ್ದಾರೆ. ಈ ಭಾಗದ ಪ್ರವಾಸ ಮಾಡಿದಾಗ ಅದರ ಅನುಭವಾಗಿದೆ.ಈ ಭಾಗದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನೀರಾವರಿ, ಕೈಗಾರಿಕೆ, ಸಮಗ್ರ ಅಭಿವೃದ್ಧಿ, ಮೂಲ ಭೂತ ಸೌಕರ್ಯಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ.  ಏಕೆಂದರೆ ನಾವು ಕೇವಲ ಮಾತನಾಡುತ್ತಿಲ್ಲ. ಯೋಜನೆಗಳನ್ನು ರೂಪಿಸಿ ಅನುಮೋದನೆ ಕೊಟ್ಟು ಕಾರ್ಯಗತ ಮಾಡುತ್ತಿದ್ದೇವೆ. 


*ಭಾರತೀಯ ಜನತಾಪಕ್ಷದ ಮೇಲೆ ವಿಶ್ವಾಸಾರ್ಹತೆ*
ರಾಜಕಾರಣದಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯ.  ಆ ವಿಶ್ವಾಸಾರ್ಹತೆ ಭಾರತೀಯ ಜನತಾಪಕ್ಷದ  ಮೇಲಿದೆ.  ಯಾವುದನ್ನು ಜನರ ಒಳ್ಳೆಯದಕ್ಕಾಗಿ ಹೇಳುತ್ತೇವೆಯೋ ಅದನ್ನು ಕಾರ್ಯಗತ ಮಾಡುವ ನಾಯಕತ್ವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿದೆ. ಈ ದೇಶವನ್ನು ಅಖಂಡವಾಗಿ, ಏಕತೆಯಿಂದ, ಬಾಹ್ಯ ಆಕ್ರಮಣದಿಂದ ರಕ್ಷಣೆ ಮಾಡುವ , ಆಂತರಿಕ ಸುರಕ್ಷತೆ ಕೊಡುವ, ಜಗತ್ತಿನಲ್ಲಿ ಭಾರತವನ್ನು ವಿಶ್ವ ಗುರು ಮಾಡುವ ಶಕ್ತಿ ನರೇಂದ್ರ ಮೋದಿಯವರಿಗಿದೆ. ರಾಜಕಾರಣ ಎಂದರೆ ಕೇವಲ ತೃಷ್ಟೀಕರಣ ಮಾಡುವುದು ಒಳ್ಳೆಯದಲ್ಲ ಎಂದು 75 ವರ್ಷಗಳ ಅನುಭವ ಹೇಳುತ್ತದೆ. ಎಲ್ಲರನ್ನೂ ಸಮನಾಗಿ ನೋಡುವ, ಸಮಾನ ಅವಕಾಶ ಕೊಡುವ ರಾಜಕಾರಣ, ಪ್ರಗತಿಪರ, ದೇಶಾಭಿಮಾನ, ಬೆಳವಣಿಗೆ, ಆರ್ಥಿಕ ಬೆಳವಣಿಗೆಯ ರಾಜಕಾರಣ ನರೇಂದ್ರ ಮೋದಿಯವರ ಕಲ್ಪನೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ  ನಾಲ್ಕು ಮಂತ್ರಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಟೀಕೆಗಳನ್ನು ಮಾಡುವುದು ಬಹಳ ಸುಲಭ. 130 ಕೋಟಿ ಜನರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಎದುರಿಸಿ, ಮೆಟ್ಟಿ ನಿಂತು ದೇಶವನ್ನು ಮುನ್ನಡೆಸುವ, ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಢ ಗೊಳಿಸುವ ಕೆಲಸವನ್ನು  24 ಗಂಟೆಗಳ ಕಾಲವೂ ನರೇಂದ್ರ ಮೋದಿಯವರು ಮಾಡಿದ್ದಾರೆ ಎಂದರು. 

*ದಕ್ಷಿಣದಲ್ಲಿ ಬಿ.ಜೆ.ಪಿ ಗಾಳಿ*

ದಕ್ಷಿಣ ಕರ್ನಾಟಕದಲ್ಲಿ  ಬಿ.ಜೆ.ಪಿ ಗಾಳಿ ಬೀಸುತ್ತಿದೆ. ಬಹಳ ಜನ ಬಹಳ ವರ್ಷ  ದಕ್ಷಿಣ  ಅಂದರೆ ನಮ್ಮ ಕಪಿ ಮುಷ್ಠಿಯಲ್ಲಿರುವ  ಪ್ರದೇಶ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ರಾಜಕಾರಣ ನಿಂತ ನೀರಲ್ಲ. ದಕ್ಷಿಣ ಕರ್ನಾಟಕದ ಜನ ರಾಜಕೀಯವಾಗಿ ಬಹಳ ಪ್ರಬುದ್ಧ ಜನ. ಮೈಸೂರು ಮಹಾರಾಜರ ಕಾಲದಿಂದಲೂ ರಾಜ್ಯದ ರಾಜಕೀಯ  ಪ್ರಜ್ಞಾವಂತ ಜನ ಸಮೂಹವಿದೆ. ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಹಿರಿಯರು , ಶಿಕ್ಷಣದಲ್ಲಿ ಕ್ರಾಂತಿ ಮಾಡಿದವರು. ಏಷ್ಯಾ ಖಂಡದಲ್ಲಿಯೇ ಪ್ರಥಮ ವಿದ್ಯುತ್ ಕೇಂದ್ರ, ಸಕ್ಕರೆ ಕಾರ್ಖಾನೆ,ಚಿನ್ನದ ಗಣಿ,  ಪ್ರಗತಿಪರ ಚಿಂತನೆ ಇರುವ ಪ್ರದೇಶವಾಗಿದೆ.  ಇಂಥ ಪ್ರದೇಶ ಹಲವಾರು ವರ್ಷ ಎರಡು ಪಕ್ಷಗಳಿಗೆ ಬೆಂಬಲ ನೀಡುತ್ತಾ ಇಂದು ಅವರಿಬ್ಬರ ಬಗ್ಗೆಯೂ ಭ್ರಮನಿರಸನ ಗೊಂಡು ಬದಲಾವಣೆಯನ್ನು ರೈತರು , ಕಾರ್ಮಿಕರು, ಮಹಿಳೆಯರು, ಯುವಕರು, ಜನಸಾಮಾನ್ಯರೆಲ್ಲರೂ ಬದಲಾವಣೆ ಯನ್ನು ಬಯಸುತ್ತಿದ್ದಾರೆ ಎಂದರು.
[07/05, 9:31 PM] Gurulingswami. Holimatha. Vv. Cm: ಬೆಂಗಳೂರು ಮೇ 07 *ಮಾನ್ಯಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ ಅವರ* *ಸಮ್ಮುಖದಲ್ಲಿ ಇಂದು* *ಬೆಂಗಳೂರಿನಲ್ಲಿ 4800 ಕೋಟಿ* ರೂಪಾಯಿ ಮೊತ್ತದ *ಬಂಡವಾಳ ಹೂಡಿಕೆಯ* *ಒಡಂಬಡಿಕೆ ಪತ್ರಕ್ಕೆ ಕರ್ನಾಟಕ* *ಸರ್ಕಾರ ಮತ್ತು ಟೊಯೋಟಾ* *ಕಿರ್ಲೋಸ್ಕರ ಕಂಪನಿ‌ ನಡುವೆ ಸಹಿ* ಹಾಕಿ *ಮಾತನಾಡಿದರು*
[07/05, 10:01 PM] Gurulingswami. Holimatha. Vv. Cm: *ವಿದೇಶಿ ಹಾಗೂ ದೇಶೀಯ ಹೂಡಿಕೆಯಲ್ಲಿ ನಂ. 1 ರಾಜ್ಯ ಮಾಡಲು ಸರ್ಕಾರದ ಶ್ರಮ: ಸಿಎಂ ಬಸವರಾಜ ಬೊಮ್ಮಾಯಿ* 


ಬೆಂಗಳೂರು, ಮೇ 7-
ಕರ್ನಾಟಕ ರಾಜ್ಯವು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಥಳೀಯ ಹೂಡಿಕೆಯಲ್ಲಿ ಮುಂಚೂಣಿಯನ್ನು ಕಾಯ್ದುಕೊಳ್ಳಲು ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. 
ಅವರು ಇಂದು ಟೊಯೊಟಾ ಕಂಪೆನಿಯ 4800 ಕೋಟಿ ರೂ. ಹೂಡಿಕೆಗೆ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಸಹಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕರ್ನಾಟಕ ರಾಜ್ಯ ವಿವಿಧ ವಲಯಗಳಲ್ಲಿ ಹೂಡಿಕೆಗೆ ಪ್ರಶಸ್ತ ತಾಣವಾಗಿ ರೂಪಿಸಲು ನಮ್ಮ ಸರ್ಕಾರ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಉತ್ಪಾದನೆ, ಸೇವಾ ವಲಯ, ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್ ಸೆಮಿ ಕಂಡಕ್ಟರ್, ವಿದ್ಯುತ್ ವಾಹನಗಳು ಹೀಗೆ ವಿವಿಧ ವಲಯಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ.
ರಾಜ್ಯದಲ್ಲಿ ವಿವಿಧ ಹೂಡಿಕೆದಾರರೊಂದಿಗಿನ ಒಪ್ಪಂದದ ಕಾರ್ಯಕ್ರಮ ನಿಯಮಿತವಾಗಿ ನಡೆಯುತ್ತಿದೆ. ಕಳೆದ ವಾರ ಸೆಮಿ-ಕಂಡಕ್ಟರ್ ವಲಯದಲ್ಲಿ ಬೃಹತ್ ಒಪ್ಪಂದ ಸಹಿ ಮಾಡಲಾಯಿತು. ಇದೀಗ ಟೊಯೊಟಾ ದೊಂದಿಗಿನ ಒಪ್ಪಂದ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ವಿದ್ಯುತ್ ವಾಹನಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಟೊಯೊಟಾದೊಂದಿಗೆ ಒಪ್ಪಂದ:
ರಾಜ್ಯವು ತಂತ್ರಜ್ಞಾನ ಹಾಗೂ ಹೂಡಿಕೆ ಎರಡರಲ್ಲೂ ಭಾರಿ ಮುನ್ನಡೆ ಸಾಧಿಸುತ್ತಿದೆ. ಟೊಯೊಟಾ ದಂತಹ ಪ್ರತಿಷ್ಠಿತ ಕಂಪೆನಿ ಪುನಃ ಪುನಃ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರುವುದು ರಾಜ್ಯವು ಹೂಡಿಕೆಗೆ ಹಾಗೂ ದೀರ್ಘಾವಧಿಯ ವ್ಯಾವಹಾರಿಕ ಬಾಂಧವ್ಯ ಹೊಂದಲು ಪ್ರಶಸ್ತ ತಾಣ ಎಂಬುದನ್ನು ಜಗತ್ತಿಗೇ ಸಾರುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

Post a Comment

Previous Post Next Post