ನವದೆಹಲಿ: ಜಲ ಶಕ್ತಿ ಅಭಿಯಾನ: ಕ್ಯಾಚ್ ದ ರೈನ್ 2022 ಕುರಿತು ಎರಡು ದಿನಗಳ ಕಾರ್ಯಾಗಾರ ಮತ್ತು ದೃಷ್ಟಿಕೋನ ಕಾರ್ಯಕ್ರಮ

ಮೇ 19, 2022 , 1:18PM ನವದೆಹಲಿ: ಜಲ ಶಕ್ತಿ ಅಭಿಯಾನ: ಕ್ಯಾಚ್ ದ ರೈನ್ 2022 ಕುರಿತು ಎರಡು ದಿನಗಳ ಕಾರ್ಯಾಗಾರ ಮತ್ತು ದೃಷ್ಟಿಕೋನ ಕಾರ್ಯಕ್ರಮ ಇಂದು ಪ್ರಾರಂಭ
ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ 2022 ಕುರಿತು ಎರಡು ದಿನಗಳ ಕಾರ್ಯಾಗಾರ ಮತ್ತು ದೃಷ್ಟಿಕೋನ ಕಾರ್ಯಕ್ರಮ ಇಂದು ನವದೆಹಲಿಯಲ್ಲಿ ಪ್ರಾರಂಭವಾಯಿತು. ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ 2022 ಅಭಿಯಾನವನ್ನು ಈ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಜಾರಿಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಪಂಕಜ್ ಕುಮಾರ್, ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲಿಗೆ ಒತ್ತು ನೀಡಿದರು. ಕ್ಷೀಣಿಸುತ್ತಿರುವ ನೀರಿನ ಮಟ್ಟ ಮತ್ತು ನೀರಿನ ಬೇಡಿಕೆ ಹೆಚ್ಚಳದತ್ತ ಗಮನಸೆಳೆದ ಅವರು, ಜಲಶಕ್ತಿ ಅಭಿಯಾನದಡಿಯಲ್ಲಿ ಮಳೆಯನ್ನು ಹಿಡಿದಿಡಲು ಮುಂಗಡ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು. ಅಭಿಯಾನದಡಿ ಈ ವರ್ಷ ಗಣನೀಯ ಪ್ರಗತಿ ಸಾಧಿಸುವ ಭರವಸೆ ವ್ಯಕ್ತಪಡಿಸಿದರು. ಜಲಮೂಲಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಅವರು, ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ರಚಿಸಲಾಗುವುದು ಅಥವಾ ಪುನರ್ಯೌವನಗೊಳಿಸಲಾಗುವುದು ಅದನ್ನು ಅಮೃತ್ ಸರೋವರ್ಸ್ ಎಂದು ಕರೆಯಲಾಗುವುದು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಎಅಜಯ್ ಟಿರ್ಕಿ ಅವರು ಮಳೆ ನೀರು ಕೊಯ್ಲು ಮತ್ತು ಸಂರಕ್ಷಣೆಯಲ್ಲಿ ಜಲಾನಯನ ನಿರ್ವಹಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಜಲಾನಯನ ಅಭಿವೃದ್ಧಿ ಘಟಕ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಒಟ್ಟು ಒಂದು ಸಾವಿರದ 99 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದರು. ಜಲಾನಯನ ನಿರ್ವಹಣೆಯಲ್ಲಿ ಭಾರತವು ಜಾಗತಿಕ ಮುಂಚೂಣಿಯಲ್ಲಿದೆ ಎಂದು ಹೇಳಿದ ಅವರು, 478 ಜಿಲ್ಲೆಗಳನ್ನು ಒಳಗೊಳ್ಳಲಾಗಿದೆ ಮತ್ತು ಜಲಾನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ ಒಟ್ಟು 4.92 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ಮಂಜೂರು ಮಾಡಲಾಗಿದೆ. ಮಾನ್ಸೂನ್ ಪ್ರಾರಂಭವಾಗುವ ಮೊದಲು ದೇಶದಾದ್ಯಂತ ಮಳೆ ನೀರು ಕೊಯ್ಲು ರಚನೆಗಳನ್ನು ರಚಿಸಲು ಕ್ಯಾಚ್ ದಿ ರೈನ್ ಅಭಿಯಾನವನ್ನು ಪ್ರಾರಂಭಿಸಲಾಯಿತು.

Post a Comment

Previous Post Next Post