ಮೇ 24, 2022
,
8:24AM
ಪಿಬಿಕೆಎಸ್ ಶಿಖರ್ ಧವನ್ ಐಪಿಎಲ್‌ನಲ್ಲಿ 700 ಬೌಂಡರಿ ಬಾರಿಸಿದ ಮೊದಲ ಆಟಗಾರ
ಐಪಿಎಲ್ ಪಂಜಾಬ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ 700 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಿಬಿಕೆಎಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2022 ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಧವನ್ ಈ ಸಾಧನೆ ಮಾಡಿದರು. ಬ್ಯಾಟರ್ ಈಗ ಒಟ್ಟು 701 ಐಪಿಎಲ್ ಬೌಂಡರಿಗಳನ್ನು ಹೊಂದಿದ್ದಾರೆ. ಅವರ ನಂತರ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 577 ಮತ್ತು 576 ಬೌಂಡರಿಗಳೊಂದಿಗೆ ಇದ್ದಾರೆ.
Post a Comment