8 ವಾರಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ:*ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

8 ವಾರಗಳಲ್ಲಿ  ಸ್ಥಳೀಯ ಸಂಸ್ಥೆಗಳ  ಚುನಾವಣೆ:
*ಸರ್ವೋಚ್ಛ ನ್ಯಾಯಾಲಯದ  ತೀರ್ಪು ಸ್ವಾಗತಾರ್ಹ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಮೇ 20 :
8 ವಾರದಲ್ಲಿ  ಕ್ಷೇತ್ರಗಳ ಪುನರ್ ವಿಗಂಡಣೆ ಹಾಗೂ ಮೀಸಲಾತಿ ನಿಗದಿಪಡಿಸಿ ಸ್ಥಳೀಯ ಸಂಸ್ಥೆಗಳ  ಚುನಾವಣೆಯನ್ನು  ನಡೆಸಲು ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪುನರ್ ವಿಗಂಡಣೆ ಅಂತಿಮ ಹಂತದಲ್ಲಿದೆ. ಕೂಡಲೇ ಅಧಿಸೂಚನೆ ಹೊರಡಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು. ನಿವೃತ್ತ  ನ್ಯಾಯಮೂರ್ತಿ ಭಕ್ತವತ್ಸಲಂ ನೇತೃತ್ವದ ಆಯೋಗವು  ಎಂಟು ವಾರಗಳಲ್ಲಿ  ಒಬಿಸಿ ಮೀಸಲಾತಿ ನಿಗದಿ ಮಾಡಲಿದೆ.  ಹಿಂದುಳಿದ ವರ್ಗಗಳ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸಲು ನ್ಯಾಯಾಲಯ ಅವಕಾಶ ನೀಡಿರುವ ಸರ್ವೋಚ್ಛ ನ್ಯಾಯಾಲಯ ನಮ್ಮ ವಾದಕ್ಕೆ ಮನ್ನಣೆ ನೀಡಿದೆ.  ಚುನಾವಣೆಗೆ ಭಾ.ಜ.ಪ ಸಿದ್ಧವಿದೆ ಎಂದರು

Post a Comment

Previous Post Next Post