ಮೇ 22, 2022
,
12:26PM
ಹೊಸದಾಗಿ ಚುನಾಯಿತ ಲೇಬರ್ ಪಕ್ಷದ ನಾಯಕ ಆಂಥೋನಿ ಅಲ್ಬನೀಸ್ ನಾಳೆ ಆಸ್ಟ್ರೇಲಿಯಾದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ
ಆಸ್ಟ್ರೇಲಿಯಾ, ಹೊಸದಾಗಿ ಚುನಾಯಿತ ಲೇಬರ್ ಪಕ್ಷದ ನಾಯಕ ಆಂಥೋನಿ ಅಲ್ಬನೀಸ್ ನಾಳೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲಿಬರಲ್-ರಾಷ್ಟ್ರೀಯ ಒಕ್ಕೂಟದ ನೇತೃತ್ವ ವಹಿಸಿದ್ದ ನಿರ್ಗಮಿತ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಸೋಲನ್ನು ಒಪ್ಪಿಕೊಂಡರು ಮತ್ತು ಆಸ್ಟ್ರೇಲಿಯನ್ ಜನರಿಗೆ ಧನ್ಯವಾದ ಅರ್ಪಿಸಿದರು.
ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ ಮತ್ತು 151 ಸದಸ್ಯರ ಕೆಳಮನೆಯಲ್ಲಿ ಬಹುಮತವನ್ನು ಪಡೆಯಲು ಲೇಬರ್ ಪಾರ್ಟಿ 76 ಸ್ಥಾನಗಳನ್ನು ಪಡೆಯಬಹುದೇ ಎಂಬುದು ಅಸ್ಪಷ್ಟವಾಗಿದೆ.


Post a Comment