08-05-2022
ಪ್ರಕಟಣೆಯ ಕೃಪೆಗಾಗಿ
ಬಿಜೆಪಿ ಬಾಗಿಲು ತಟ್ಟುತ್ತಿರುವ ಕಾಂಗ್ರೆಸ್, ಜೆಡಿಎಸ್‍ನ
ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರ ನೇತೃತ್ವ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮುಂದಿನ ಚುನಾವಣೆ ಎದುರಿಸಲಿದ್ದು, 150 ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅತಿ ಹೆಚ್ಚು ಶಾಸಕರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾರನ್ನು ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದು ಲಿಸ್ಟ್ ಮಾಡಲು ಪುರುಸೊತ್ತಿಲ್ಲದಷ್ಟು ಮುಖಂಡರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರುವುದು ಖಚಿತ ಎಂದು ತಿಳಿಸಿದರು.
ಭಾರತದಲ್ಲಿರುವ ಸುಮಾರು 60 ಶೇಕಡಾದಷ್ಟು ಯುವಕರು ಜಗತ್ತಿನ ಭವಿಷ್ಯವನ್ನೇ ರೂಪಿಸುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಸ್ವಾತಂತ್ರ್ಯಾನಂತರ ಭಾರತ ರಾಮರಾಜ್ಯ ಆಗಬೇಕೆಂಬ ಆಶಯ ಮಹಾತ್ಮ ಗಾಂಧಿ ಅವರದಾಗಿತ್ತು. ವ್ಯಕ್ತಿ ನಿರ್ಮಾಣ, ಸಂಕಲ್ಪ, ಗುರಿ ನೀಡುವ ಕಾರ್ಯ ಆಗಬೇಕು. ಇದರಿಂದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದಿದ್ದರು. ಅದೇ ಪರಿಕಲ್ಪನೆಯಡಿ ಬಿಜೆಪಿ ಮುಂದುವರಿಯುತ್ತಿದೆ ಎಂದು ತಿಳಿಸಿದರು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಬೇರೆ ಪಕ್ಷದಲ್ಲಿ ಪರಿವಾರದಿಂದ ಬರಬೇಕು; ಇಲ್ಲವೇ ಪರಿವಾರದಪರವಾಗಿ ಇದ್ದು ಮೇಲೆ ಬರಬೇಕೆಂಬ ಪದ್ಧತಿ ಇದೆ. ಆದರೆ, ಚಹಾ ಮಾರಬಲ್ಲ ವ್ಯಕ್ತಿಯೂ ಪ್ರಧಾನಿ ಆಗಬಲ್ಲರು ಎಂದು ಬಿಜೆಪಿ ತೋರಿಸಿಕೊಟ್ಟಿದೆ. ಬೇರೆ ಪಕ್ಷಗಳಲ್ಲಿ ಜಾತಿ, ಆರ್ಥಿಕ ಅಥವಾ ಪರಿವಾರದ ಬಲ ಇರಬೇಕು. ಬಿಜೆಪಿಯಲ್ಲಿ ಅಂಥ ಪರಿವಾರದ ಹಿನ್ನೆಲೆ ಬೇಕಿಲ್ಲ. ತಾಯಿ ಭಾರತಿಯನ್ನು ಜಗದ್ವಂದ್ಯ ಮಾಡುವ ದೃಷ್ಟಿಯಿಂದ ಬಂದವರು ಇಲ್ಲಿ ನಾಯಕತ್ವ ವಹಿಸುತ್ತಾರೆ ಎಂದು ನುಡಿದರು.
ಹಿಂದೆ ಮಂತ್ರಿ ಮಾಗಧರ ಮನೆ ಬಾಗಿಲಿಗೆ ತಿರುಗಾಡುತ್ತಿದ್ದವರಿಗೆ ಪದ್ಮಶ್ರೀ ಪ್ರಶಸ್ತಿ ಬರುತ್ತಿತ್ತು. ಹಣ್ಣು ಮಾರಾಟ ಮಾಡಿ ಶಿಕ್ಷಣಕ್ಕೆ ನೆರವಾದ ಹಾಜಬ್ಬ, ಕಾಡಿನ ಸಂರಕ್ಷಣೆ ಮಾಡುವ ತುಳಸೀ ಗೌಡ ಮತ್ತಿತರ ಜನಸಾಮಾನ್ಯರಿಗೆ ಇಂಥ ಪ್ರಶಸ್ತಿ ಸಿಗುತ್ತಿದೆ. ಇದು ನೈಜ ಪರಿವರ್ತನೆ ಎಂದರು.
ರಾಜಕೀಯ ಪಕ್ಷವೊಂದು ಅಧಿಕಾರ ಪಡೆಯಲು ತಂತ್ರಗಾರಿಕೆ ಮಾಡುವುದು ಅನಿವಾರ್ಯ. ಆದರೆ, ಬಿಜೆಪಿ ತನ್ನ ಗುರಿ, ನಡೆಯಲ್ಲಿ ವ್ಯತ್ಯಾಸ ಮಾಡಿಲ್ಲ. ಮತಾಂತರ ನಿಷೇಧ, ಗೋಹತ್ಯೆ ನಿಷೇಧದ ಸಂಕಲ್ಪದಿಂದ ಹಿಂದೆ ಹೋಗಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ್ದೇವೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವಿಚಾರದಲ್ಲೂ ಗುರಿಯತ್ತ ಮುನ್ನಡೆ ಸಾಧಿಸಲಿದ್ದೇವೆ. ಪಕ್ಷಕ್ಕಾಗಿ ದುಡಿದ ಸಾಮಾನ್ಯರಲ್ಲಿ ಸಾಮಾನ್ಯರೆನಿಸಿದ ಶಾಂತಾರಾಮ ಸಿದ್ದಿ, ಪ್ರತಾಪಸಿಂಹ ನಾಯಕ್ ಶಾಸಕರಾಗಲು ಬಿಜೆಪಿ ಅವಕಾಶ ಕೊಟ್ಟಿದೆ. ಅದು ಬಿಜೆಪಿಯ ವಿಶಿಷ್ಟತೆ ಮತ್ತು ಅದು ವಿಭಿನ್ನ ಎಂದರು.
ಅಧಿಕಾರವೇ ಗುರಿಯಾಗಿ ಕೆಲಸ ಮಾಡಬೇಡಿ. ಇದೊಂದು ಈಶ್ವರೀಯ ಕಾರ್ಯ. ಕಾಂಗ್ರೆಸ್‍ನಲ್ಲಿ ಒಂದು ಕುಟುಂಬದ ವ್ಯಕ್ತಿಗಳಿಗೆ ಜೈಕಾರ ಕೂಗಲಾಗುತ್ತದೆ. ಆದರೆ, ಕೌಟುಂಬಿಕವಾದ ಇಲ್ಲದ ಬಿಜೆಪಿ ಬೆಳೆಯುತ್ತಾ ಸಾಗಿದೆ. ಜಗತ್ತಿನ ಅತಿ ದೊಡ್ಡ ಪಕ್ಷವಾಗಿದೆ ಎಂದು ತಿಳಿಸಿದರು. ಇನ್ನೊಂದೆಡೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ. ಇದೀಗ ಮೋದಿ ಯುಗ ಪ್ರಾರಂಭವಾಗಿದೆ ಎಂದರು.
ಕಾಂಗ್ರೆಸ್‍ಗೆ ರಾಜ್ಯ ಪದಾಧಿಕಾರಿಗಳ ಘೋಷಣೆಗೆ ಎರಡು ವರ್ಷ ಬೇಕಾಯಿತು. ಅದು ರಾಜ್ಯದಲ್ಲಿ ಸತ್ತು ಹೋಗಿದೆ. ಒಂದು ಪಕ್ಷ ನಡೆಸಲು ಅಸಾಧ್ಯವಾದ ಮುಖಂಡರಿಗೆ ಮುಂದಿನ ದಿನಗಳಲ್ಲಿ ಸರಕಾರ ನಡೆಸಲು ಸಾಧ್ಯವೇ ಎಂದು ಕೇಳಿದರು. ಕಾಂಗ್ರೆಸ್ ಐಸಿಯು ಒಳಗಿದೆ. ಚುನಾವಣೆಗೆ ಮೊದಲು ಅದು ಸತ್ತು ಹೋಗಲಿದೆ. ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಬೂತ್‍ಗೆ ಒಬ್ಬ ಪ್ರಧಾನ ಕಾರ್ಯದರ್ಶಿ ನೇಮಕ ಆದರೂ ಆಚ್ಚರಿಯಿಲ್ಲ ಎಂದು ತಿಳಿಸಿದರು. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡದ ಕಾಂಗ್ರೆಸ್ ಸೋಲುತ್ತಿದೆ ಎಂದು ವಿಶ್ಲೇಷಿಸಿದರು.
ನಾವು ರಾಜಕಾರಣದ ಮೂಲಕ ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಪಕ್ಷವು ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ವ್ಯಕ್ತಿತ್ವ ಮತ್ತು ಚಾರಿತ್ರ್ಯ ಒಂದೇ ನಾಣ್ಯದ ಎರಡು ಮುಖಗಳು. ಚಾರಿತ್ರ್ಯ ಮತ್ತು ವ್ಯಕ್ತಿಗಳ ಮೂಲಕವೇ ನಾವು ದೇಶ ನಿರ್ಮಾಣಕ್ಕೆ ಹೊರಟಿದ್ದೇವೆ ಎಂದು ತಿಳಿಸಿದರು.
ಭ್ರಷ್ಟಾಚಾರರಹಿತ ಮತ್ತು ಕಳಂಕರಹಿತ ಆಡಳಿತವನ್ನು ಕಳೆದ 8 ವರ್ಷಗಳ ಕಾಲ ನರೇಂದ್ರ ಮೋದಿ ಅವರ ತಂಡ ನೀಡಿದೆ ಎಂದರಲ್ಲದೆ, ಸಿದ್ದರಾಮಯ್ಯರಿಗೆ ಒಂದು ಕೋಟಿಯ ವಾಚ್ ಕೊಟ್ಟವರು ಯಾರು? ಎಂದು ಕೇಳಿದ ಅವರು, ಅರ್ಕಾವತಿ ಮತ್ತು ರೀಡು ಕುರಿತ ಕೆಂಪಣ್ಣ ಆಯೋಗದ ವರದಿಯನ್ನು ಹೊರಹಾಕಿದರೆ ಸಿದ್ರಾಮಣ್ಣ ಶಾಶ್ವತವಾಗಿ ಜೈಲಲ್ಲಿ ಇರುತ್ತಾರೆ. ಅದನ್ನು ಹೊರಕ್ಕೆ ಹಾಕುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ ಎಂದರು.
ಸಿದ್ರಾಮಣ್ಣನಷ್ಟು ಭ್ರಷ್ಟಾಚಾರಿ ಈ ರಾಜ್ಯದಲ್ಲಿ ಬೇರೆ ಯಾರೂ ಇರಲಿಲ್ಲ. ಹಾಸಿಗೆ ಹಗರಣ, ದಿಂಬಿನ ಹಗರಣ, ಹಾಸ್ಟೆಲ್ ಹಗರಣ, ಪಿಡಬ್ಲ್ಯುಡಿ ಹಗರಣ, ಬೋರ್‍ವೆಲ್ ಹಗರಣ, ಮೆಡಿಕಲ್ ಹಗರಣ ನಡೆದಿತ್ತು. ಗಣಪತಿ ಆತ್ಮಹತ್ಯೆ ಆಗಿ ಏಳು ತಿಂಗಳ ಬಳಿಕ ಹಾಗೂ ಕೋರ್ಟ್ ಸೂಚಿಸಿದ್ದರಿಂದ ಸಚಿವ ಜಾರ್ಜ್ ರಾಜೀನಾಮೆ ಕೊಟ್ಟರು. ಹಗರಣಗಳ ತನಿಖೆಗೆ ಸಿದ್ರಾಮಣ್ಣ ಸರಕಾರ ಮುಂದಾಗಲಿಲ್ಲ ಎಂದು ಟೀಕಿಸಿದರು.
ಪಿಎಸ್‍ಐ ನೇಮಕ ಹಗರಣದ ತನಿಖೆಗೆ ತಕ್ಷಣ ಆದೇಶ ನೀಡಿದ ಬೊಮ್ಮಾಯಿ ಸರಕಾರ ಅಭಿನಂದನಾರ್ಹ ಎಂದರು. ಪಾರದರ್ಶಕ ತನಿಖೆ ನಡೆದಿದೆ. ಹಿಂದೆ ಸಿದ್ರಾಮಣ್ಣ ಡ್ರಗ್ಸ್ ಹಣದಲ್ಲಿ ಸರಕಾರ ನಡೆಸಿದ್ದರು. ಆದರೆ, ಡ್ರಗ್ಸ್ ಮುಕ್ತವಾಗಿ ನಾವು ರಾಜ್ಯ ಮುನ್ನಡೆಸಿದ್ದೇವೆ ಎಂದು ತಿಳಿಸಿದರು.
ಜೈಲಲ್ಲಿ ಇರಬೇಕಾದವರ ತಂಡ ಕಾಂಗ್ರೆಸ್‍ನದು. ಅತಿ ಹೆಚ್ಚು ಕೋಮುಗಲಭೆ ಕಾಂಗ್ರೆಸ್ ಕಾಲಘಟ್ಟದಲ್ಲಿ ಆಗಿದೆ. ಹುಬ್ಬಳ್ಳಿ, ಶಿವಮೊಗ್ಗ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಹಿಂದೆ ಸಿದ್ರಾಮಣ್ಣ ಇದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಘಟನೆಯಲ್ಲಿ ದಲಿತರಿಗೆ ನ್ಯಾಯ ಲಭಿಸಿಲ್ಲ ಎಂದು ಟೀಕಿಸಿದರು.
ಅಧಿಕಾರ ಇದ್ದಾಗ ಭ್ರಷ್ಟಾಚಾರ, ಅಧಿಕಾರ ಇಲ್ಲದಾಗ ಅರಾಜಕತೆ ಸೃಷ್ಟಿಸುವುದು ಕಾಂಗ್ರೆಸ್ ಸಂಸ್ಕøತಿ. ಈ ದೇಶವನ್ನು ಭಿಕ್ಷುಕರ ರಾಷ್ಟ್ರ, ಹಾವಾಡಿಗರ ದೇಶವೆಂದು ಬಿಂಬಿಸಿದ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ನೇಪಾಳದಲ್ಲಿ ಏನು ಮಾಡಿದರೆಂದು ಹಾಗೂ ಯಾಕೆ ನೈಟ್ ಕ್ಲಬ್‍ಗೆ ಹೋದರೆಂದು ತಿಳಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ದೇಶದ ಬಗ್ಗೆ ಅಭಿಮಾನ ಮತ್ತು ಗೌರವ ಇಲ್ಲದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಬಾಂಬಿನ ಕಾರ್ಖಾನೆಗಳನ್ನು ಸೃಷ್ಟಿಸಿತು. ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಯಿತು. ಭಯೋತ್ಪಾದನೆಯ ಸೃಷ್ಟಿಗೆ ಕಾಂಗ್ರೆಸ್ ಕಾರಣವಾಯಿತು ಎಂದು ವಿವರಿಸಿದರು.
ನರೇಂದ್ರ ಮೋದಿ ಅವರ ಆಡಳಿತದಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಆಗಿಲ್ಲ. ನಕ್ಸಲ್‍ವಾದ ನಿಂತಿದೆ. ಜನರು ಮೋದಿಯವರ ಮತ್ತು ಬೊಮ್ಮಾಯಿಯವರ ಆಡಳಿತವನ್ನು ಗಮನಿಸುತ್ತಿದ್ದಾರೆ. ಜನರು ಬಿಜೆಪಿ ಯುಗವನ್ನು ಬಯಸುತ್ತಾರೆ ಎಂದರು.
ಸಾಮಾನ್ಯರಾಗಿ ರಾಜಕಾರಣಕ್ಕೆ ಬಂದ ಪ್ರಿಯಾಂಕ್ ಖರ್ಗೆ ಕುಟುಂಬ ಸಾವಿರಾರು ಕೋಟಿಯ ಧನಿಕರಾದುದು ಎಲ್ಲಿಂದ? ಪ್ರಿಯಾಂಕ್ ಸುಳ್ಳನ್ನೇ ಹೇಳುತ್ತಾರೆ. ಅವರು ದಾಖಲೆಗಳನ್ನು ಕೊಡಬೇಕು ಎಂದು ಆಗ್ರಹಿಸಿದರು. ಪಿಎಸ್‍ಐ ನೇಮಕ ಹಗರಣದ ತನಿಖೆ ಪೂರ್ಣಗೊಂಡಾಗ ಕಾಂಗ್ರೆಸ್‍ನ ಶೇ 80 ಜನರು ಜೈಲಿನಲ್ಲಿ ಇರುತ್ತಾರೆ ಎಂದು ಅವರು ನುಡಿದರು.
ಯುವ ಮೋರ್ಚಾವು ಕಳೆದೆರಡು ವರ್ಷಗಳಲ್ಲಿ ಮಂಡಲದವರೆಗೆ ವಿಸ್ತರಿಸಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸೇವಾ ಹೀ ಸಂಘಟನ್ ಮೂಲಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಮಾನಸದಲ್ಲಿ ಬಿಜೆಪಿ ಬಗ್ಗೆ ವಿಶ್ವಾಸ ಮೂಡಿಸಿದೆ ಎಂದು ಅಭಿನಂದನೆ ಸೂಚಿಸಿದರು.
ಸ್ವಾಮಿ ವಿವೇಕಾನಂದರು ಯಾವತ್ತೂ “ನನಗೆ ಕಬ್ಬಿಣದ ಕೈಗಳು, ಸ್ನಾಯುಗಳಿರುವ ಯುವ ಸಮುದಾಯ ಬೇಕು” ಎನ್ನುತ್ತಿದ್ದರು. ಆಗ ದೇಶವು ಪರಿವರ್ತನೆ ಹೊಂದುತ್ತದೆ ಎಂಬ ಚಿಂತನೆ ಅವರಲ್ಲಿತ್ತು. ಯುವ ಮೋರ್ಚಾ ತಂಡವು ರಾಷ್ಟ್ರ ಮತ್ತು ರಾಜ್ಯವನ್ನು ಪರಿವರ್ತನೆ ಮಾಡುತ್ತಿದೆ. ಕಲ್ಯಾಣಿಗಳ ಸ್ವಚ್ಛತೆ ಸೇರಿದಂತೆ ಅನೇಕ ಜನಪರ ಕಾರ್ಯವನ್ನು ಅದು ಮಾಡುತ್ತಿದೆ. ಮೋದಿಯವರ ಜನಪರ ಕಾರ್ಯದ ಕುರಿತು ಅರಿವು ಮೂಡಿಸಿದೆ. ಅದಕ್ಕಾಗಿ ಅಭಿನಂದನೆಗಳು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಮಹಾರಾಷ್ಟ್ರದ ಮಾಲ್‍ಸಿರಸ್ ಕ್ಷೇತ್ರದ ಶಾಸಕರು ಮತ್ತು ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರಾದ ರಾಮ್ ಸಾತ್ಪುತೆ ಹಾಗೂ ಯುವ ಮೋರ್ಚಾ ರಾಜ್ಯ ಅಧ್ಯಕ್ಷರಾದ ಡಾ|| ಸಂದೀಪ್ ಕುಮಾರ್ ಕೆ.ಸಿ ಅವರು ಭಾಗವಹಿಸಿದ್ದರು.
ಕರುಣಾಕರ ಖಾಸಲೆ
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment