ಈ ಹಿನ್ನೆಲೆ ಜಾಮಿಯಾ ಮಸೀದಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜಾಮಿಯಾ ಮಸೀದಿಯಲ್ಲಿ ಮದರಸಾ ಶಿಕ್ಷಣ ಮುಂದುವರಿದದಿದೆ. ಮಸೀದಿಯಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮದರಸಾ ಶಿಕ್ಷಣ ನೀಡಲಾಗುತ್ತಿದೆ. ಇಬ್ಬರು ಮೌಲ್ವಿಗಳು ವಿದ್ಯಾರ್ಥಿಗಳಿಗೆ ಧಾರ್ಮಿಕ ಪಾಠ ಬೋಧನೆ ಮಾಡುತ್ತಿದ್ದಾರೆ.
ಜಾಮಿಯಾ ಮಸೀದಿಯನ್ನು ಪ್ರವೇಶಿಸಿ ತೀರುವುದಾಗಿ ಹಿಂದುತ್ವವಾದಿಗಳು ಶುಕ್ರವಾರ ಕರಪತ್ರಗಳನ್ನು ಹಂಚಿದ್ದರು. ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ್ದರೂ, ಪಟ್ಟಣ ವ್ಯಾಪ್ತಿಯಲ್ಲಿ ಚುರುಕಿನ ಚಟುವಟಿಕೆಗಳು ಕಂಡು ಬಂದಿವೆ. ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯಲ್ಲಿ ಹಿಂದುತ್ವವಾದಿ ಮುಖಂಡ ಶಿವಕುಮಾರ್ ಆರಾಧ್ಯ ಈ ಸಂಬಂಧ ಕರಪತ್ರ ಹಂಚಿದ್ದು, ಪೊಲೀಸರಿಗೆ ಸೆಡ್ಡು ಹೊಡೆದಿದ್ದಾರೆ.
ಈ ಬಾರಿಯ ಹನುಮ ಜಯಂತಿಗೆ ಜಿಲ್ಲೆಯ ಶ್ರೀರಂಗಟ್ಟಣದಲ್ಲಿರುವ ಜಾಮಿಯ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದು ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಜಾಮಿಯ ಮಸೀದಿಯಲ್ಲಿ ವಾಸಿಸುತ್ತಿದ್ದವರನ್ನು ಖಾಲಿ ಮಾಡಿಸುವಂತೆ ಭಜರಂಗದಳದ ಸದಸ್ಯರು ಸೂಚಿಸಿದ್ದರು. ಆದರೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆ, ಇಂದು ಸಹಸ್ರಾರು ಸಂಖ್ಯೆಯಲ್ಲಿ ಶ್ರೀರಂಗಪಟ್ಟಣ ಚಲೋ ಚಾಲನೆಗೆ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: ಮಕ್ಕಳ ಬಿಸಿಯೂಟದ 4.42 ಲಕ್ಷ ರೂ. ದುರುಪಯೋಗ ಆರೋಪ: ಹನಗೋಡು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಶ್ರೀರಂಗಪಟ್ಟಣ ಚಲೋಗೆ ಚಾಲನೆ ನೀಡಿದ್ದು, ಜೂನ್ 4 ರಂದು ಹನುಮ ಮಾಲಾದಾರಿಗಳಿಂದ ಜಾಮಿಯ ಮಸೀದಿ ಪ್ರವೇಶಕ್ಕೆ ಸಿದ್ಧತೆ ನಡೆದಿದೆ.
ಶೃಂಗಾರ್ ಗೌರಿ-ಜ್ಞಾನವಾಪಿ ಮಸೀದಿ ಮೊಕದ್ದಮೆಗೆ ತಡೆ ನೀಡಲು ಸುಪ್ರೀಂ ನಿರಾಕರಣೆ:
ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ದೇವರ ದೈನಂದಿನ ಪೂಜೆ ಮತ್ತು ಆಚರಣೆಗಳಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ಪ್ರಸ್ತುತ ಕಾನೂನು ಹೋರಾಟ ಪ್ರಾರಂಭವಾಗಿತ್ತು. ಅನಾದಿ ಕಾಲದಿಂದಲೂ ಶೃಂಗಾರ್ ಗೌರಿ ದೇವಿಯು ಸ್ಥಳದಲ್ಲಿ ನೆಲೆಸಿದ್ದಾಳೆ ಎಂದು ಅರ್ಜಿದಾರರು ವಾದಿಸಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯವನ್ನು ಒತ್ತಾಯಿಸಿದರು.
Post a Comment