ಧರ್ಮ, ದರ್ಶನ

[02/06, 6:44 AM] Pandit Venkatesh. Astrologer. Kannada: ಕುಬೇರನ ಜನನ ಕಥೆ:- 

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೂಬ್ಬನು. ಉತ್ತರ ದಿಕ್ಕಿನ ಅಧಿಪತಿ. 'ಕುಬೇರ' ಹೆಸರು ನಮಗೆಲ್ಲಾ  ನೆನಪಾಗುವುದು  ಎಷ್ಟೋ ವರ್ಷಗಳ ನಂತರ  ಆತ್ಮೀಯರು ಅಥವಾ ನೆಂಟರ ಮನೆಗೆ ಹೋದಾಗ ಅವರ ಮನೆಯಲ್ಲಿರುವ  ಒಡವೆ, ಸೀರೆ, ಮನೆಯಲ್ಲಿ ದುಬಾರಿ ಗೃಹೋಪಯೋಗಿ ವಸ್ತುಗಳನ್ನು ನೋಡಿ,  ಏನು ಕುಬೇರನ ಹಾಗೆ ಬಾರಿ ಶ್ರೀಮಂತರಾಗಿ ಬಿಟ್ಟಿದ್ದಿರಿ  ಲಾಟರಿ ಹೊಡಿತಾ  ಅಂತ ಕೇಳುವುದುಂಟು. ಕೃತಯುಗದಲ್ಲಿ ಬ್ರಹ್ಮನ ಮಾನಪುತ್ರರಾಗಿದ್ದು,  ಎರಡನೇ ಬ್ರಹ್ಮ ಅಂತ ಕರೆಯಲ್ಪಡುವ 'ಪುಲಸ್ತ್ಯ'ರು ತಾವು ತಪಸ್ಸು ಮಾಡಬೇಕೆಂದು ಮೇರು ಪರ್ವತದ ಪ್ರಾಂತ್ಯದಲ್ಲಿನ ತೃಣ ಬಿಂದುವಿನ  ಆಶ್ರಮದಲ್ಲಿದ್ದು, ತಪಸ್ಸು ಮಾಡಿಕೊಂಡಿರುವಾಗ, ಆ ಪ್ರದೇಶವು ಬಹಳ ಸುಂದರವಾಗಿ ರಮಣೀಯವಾಗಿದ್ದುದರಿಂದ ದೇವ, ನಾಗ, ಋಷಿ, ಹಾಗೂ ರಾಜರ್ಷಿ  ಕನ್ಯೆಯರು  ನಿತ್ಯವೂ  ಬಂದು ಮನಸೋಇಚ್ಛೆ ಆಟ- ಪಾಠಗಳನ್ನು ಆಡುತ್ತಾ ಬಹಳ ಗಲಾಟೆ ಮಾಡುತ್ತಿದ್ದರು. ಇದರಿಂದ ಪುಲಸ್ತ್ಯರ ತಪಸ್ಸಿಗೆ  ತೊಂದರೆಯಾಗುತ್ತಿತ್ತು. ತಾಳ್ಮೆಯಿಂದ  ಒಂದೆರಡು ಸಲ  ಹೀಗೆಲ್ಲಾ ಗಲಾಟೆ ಮಾಡಬಾರದೆಂದು  ಬುದ್ಧಿ ಹೇಳಿದನು. ಆದರೆ ಅವರ್ಯಾರು  ಅವನ  ಮಾತನ್ನು ಕೇಳಲಿಲ್ಲ. ಆಗ ಕೋಪ ಬಂದು  ಯಾವುದೇ ಸ್ತ್ರೀ ಇಲ್ಲಿಗೆ ಬಂದರೆ  'ಗರ್ಭವತಿಯಾಗುತ್ತೀರಿ' ಎಂದು ಶಾಪವನ್ನು ಕೊಡುತ್ತಾನೆ. ಈ ಶಾಪದ ವಿಷಯ ಎಲ್ಲರಿಗೂ ತಿಳಿದರೂ,  ತೃಣಬಿಂದು   ಮಗಳಿಗೆ ಮಾತ್ರ ಗೊತ್ತಿರಲಿಲ್ಲ. ಅವಳು  ನಿತ್ಯದಂತೆ ಅಲ್ಲಿಗೆ ಬಂದು ಸ್ನೇಹಿತರನ್ನು ಕರೆಯುತ್ತಾಳೆ. ಆದರೆ
ಒಬ್ಬರೂ  ಅಲ್ಲಿ ಇರಲಿಲ್ಲ .ಅವಳು ವೇದಾಧ್ಯಯನ ಮಾಡುತ್ತಿದ್ದ  ಪುಲಸ್ತ್ಯ ರ ಆಶ್ರಮದ ಬಳಿ ಬಂದಳು.  

ಪುಲಸ್ತ್ಯ ರನ್ನು ನೋಡುತ್ತಿದ್ದ ಹಾಗೆಯೇ ಅವಳಲ್ಲಿ ಗರ್ಭ ಚಿನ್ಹೆಗಳು ಕಾಣಿಸಿಕೊಂಡಿತು. ಆಕೆ  ಗಾಬರಿಯಾಗಿ ತಂದೆ ತೃಣ ಬಿಂದುವಿನ ಬಳಿ ಬಂದು  ಅಪ್ಪ ನಾನು ಪುಲಸ್ತ್ಯ ರ ‌ ಆಶ್ರಮದ ಬಳಿ ಗೆಳತಿಯರಿಗಾಗಿ ಹೋಗಿದ್ದಾಗ ನನ್ನ ಶರೀರದಲ್ಲಿ  ಏನೋ  ಬದಲಾವಣೆ ಆಗಿದೆ.  ಕಾರಣ ಗೊತ್ತಾಗಲಿಲ್ಲ ಎಂದಳು.  ತೃಣಬಿಂದುವಿಗೆ ತಿಳಿಯಿತು  ಪುಲಸ್ತ್ಯ ರ ಶಾಪ ತನ್ನ ಮಗಳಿಗೆ ಫಲಿಸಿ ಗರ್ಭವತಿಯಾಗಿದ್ದಾಳೆ ಎಂದು ತಿಳಿದಕೂಡಲೇ ಮಗಳನ್ನು  ಪುಲಸ್ತ್ಯ ರಲ್ಲಿಗೆ  ಕರೆ ತಂದು, ಮಹಾನುಭಾವ ಈಕೆ ನನ್ನ ಮಗಳು, ತುಂಬಾ ಒಳ್ಳೆಯವಳು ನಿಮಗೆ ಯಾವತ್ತೂ ಯಾವ  ತರಹದ ತೊಂದರೆ  ಕೊಟ್ಟಿಲ್ಲ, ನಿಮ್ಮ ಮೇಲೆ ತುಂಬಾ ಭಕ್ತಿ ,ಗೌರವ ಇದೆ. ಈಕೆ ಗೊತ್ತಿಲ್ಲದೆ  ಗೆಳತಿಯರಿಗಾಗಿ ಇಲ್ಲಿಗೆ ಬಂದಿದ್ದಳು.  ಈಗ ನೀವು ಇವಳನ್ನು ವಿವಾಹವಾಗಿ ಉದ್ದರಿಸಬೇಕು ಎಂದು  ಪ್ರಾರ್ಥಿಸಿ ಕೊಂಡನು.  ತೃಣ ಬಿಂದುವಿನ ಪ್ರಾರ್ಥನೆಯನ್ನು ಸ್ವೀಕರಿಸಿ  ಪುಲಸ್ತ್ಯ ರು ಅವಳ ಮಗಳನ್ನು ವಿವಾಹವಾಗುತ್ತಾರೆ. ಕೆಲ ಸಮಯ ಕಳೆಯಿತು. ಪತ್ನಿಯಿಂದ ಪುಲಸ್ತ್ಯ ರು  ಬಹಳ ಸಂತೋಷವಾಗಿದ್ದರು.‌ ಆಕೆ ಬಹಳ  ಒಳ್ಳೆಯವಳು ಹಾಗೂ ಯೋಗ್ಯಳಾದಂತ  ಪತ್ನಿಯಾಗಿದ್ದಳು, ಒಂದು ದಿನ ಆಕೆಗೆ,  ನಾನು ವೇದಪಾರಾಯಣವನ್ನು ಮಾಡುವಂತಹ ಸಮಯದಲ್ಲಿ ನೀನು  ಗರ್ಭ ಧರಿಸಿದ್ದರಿಂದಲೂ ನಿನ್ನ ಉತ್ತಮ, ನಡೆನುಡಿಗಳಿಂದಾಗಿ, ನಿನಗೆ ನನ್ನಂತಹ ಮಗನೇ ಜನಿಸುತ್ತಾನೆ. ಅವನು 'ವಿಶ್ರವಸು' ಎಂಬ ಹೆಸರಿನಿಂದ  ಪ್ರಸಿದ್ಧಿ ಆಗುತ್ತಾನೆ.  ಹಾಗೂ ನನ್ನ ಮಗನಾದ್ದರಿಂದ 'ಪೌಲಸ್ತ್ಯ' ಎಂಬ ಹೆಸರಿನಿಂದಲೂ ಪ್ರಖ್ಯಾತಿ ಹೊಂದುತ್ತಾನೆ. ನಿನಗೆ ಎಲ್ಲವೂ ಶುಭವಾಗುತ್ತದೆ  ಎಂದು ಹರಸುತ್ತಾನೆ. 

ಸ್ವಲ್ಪ ದಿನಗಳಲ್ಲಿಯೇ 'ವಿಶ್ರವಸು' ಹುಟ್ಟುತ್ತಾನೆ. ಅವನು ಸಹ ಸದ್ಗುಣಗಳಿಂದ ತುಂಬಿದನಾಗಿರುತ್ತಾನೆ. ಇವನನ್ನು ದೇವತೆಗಳು ಹೊಗಳುತ್ತಾರೆ. ಇದನ್ನೆಲ್ಲ ತಿಳಿದಂತಹ 'ಭಾರದ್ವಾಜ' ಮುನಿಗಳು ತಮ್ಮ ಮಗಳಾದ 'ದೇವವರ್ಣಿ' ಎಂಬುವಳನ್ನು 'ವಿಶ್ರವಸು' ವಿಗೆ  ಕೊಟ್ಟು ಮದುವೆ ಮಾಡುತ್ತಾರೆ.  ಇವರಿಬ್ಬರ ದಾಂಪತ್ಯ ಜೀವನ  ಚೆನ್ನಾಗಿದ್ದು ಇವರಿಗೆ ಹುಟ್ಟಿದ ಮಗುವೇ 'ಕುಬೇರ'  ಕುಬೇರ ಹುಟ್ಟಿದ ತಕ್ಷಣ ಇಡೀ ಜಗತ್ತೇ ಬೆಳಕಾಗುತ್ತೆ. ಸೂರ್ಯನ ಪ್ರಜ್ವಲವಾದ ಕಿರಣಗಳ ಬೆಳಕಿನಂತೆ ಜಗತ್ತೆಲ್ಲ ಬೆಳಕು ಹರಡುತ್ತದೆ. ಈ ಮಗು ಹುಟ್ಟಿದಾಗ ಸ್ವತಹ ತಾತನಾದ ಬ್ರಹ್ಮನೇ ಬಂದು, ಮುಂದೆ ನೀನು 'ಧನಾಧಿಪತಿಯಾಗು' ಎಂದು ಆಶೀರ್ವದಿಸುತ್ತಾನೆ. ಹಾಗೆಯೇ ಬ್ರಹ್ಮನು ಇವನಿಗೆ 'ವೈಶ್ರವಣಾಯ' ಎಂಬ ಇನ್ನೊಂದು ಹೆಸರನ್ನು ಇಡುತ್ತಾನೆ. 

ಕುಬೇರನಿಗೆ ಚಿಕ್ಕಂದಿನಿಂದಲೂ ತಪಸ್ಸು ಮಾಡುವ ಹುಚ್ಚು. ಹೀಗಾಗಿ ಅವನು ಕಾಡಿಗೆ ಹೋಗಿ ಗಾಢವಾದ ತಪಸ್ಸನ್ನು ಮಾಡುತ್ತಾನೆ. ಆಹಾರವನ್ನು ಬಿಟ್ಟು ಬರಿ ಜಲಾಹಾರ, ವಾಯು ಸೇವನೆ, ಏನು ಇಲ್ಲದೆ ಉಪವಾಸ ಮಾಡಿ, 3000 ವರ್ಷಗಳಷ್ಟು ಅವನು ತಪಸ್ಸಿನಲ್ಲಿ ನಿರತನಾಗಿರುತ್ತಾನೆ. ಕುಬೇರನ ತಪಸ್ಸನ್ನು ಮೆಚ್ಚಿದ ಬ್ರಹ್ಮ ,ಇಂದ್ರಾದಿ ದೇವತೆಗಳು ಪ್ರತ್ಯಕ್ಷರಾದರು. ನಿನ್ನ ತಪಸ್ಸನ್ನು ಇಲ್ಲಿಗೆ ಮುಗಿಸು,  ನಿನ್ನ ತಪಸ್ಸಿನಿಂದ ನಾವೆಲ್ಲರೂ ಪ್ರಸನ್ನ ರಾಗಿದ್ದೇವೆ ನಿನಗೆ ಯಾವ ವರ ಬೇಕು ಕೇಳು ಎಂದರು. ಆಗ 'ವೈಶ್ರವಣನು'   ತನ್ನ ತಾತನಾದ ಬ್ರಹ್ಮನ ಹತ್ತಿರ ನನಗೆ  ಲೋಕಾದಿಪತ್ಯ ಹಾಗೂ  ಧನಾದಿಪತ್ಯವನ್ನು  ಕೊಡಬೇಕು ಎಂದು ಪ್ರಾರ್ಥಿಸಿದನು,  ಬ್ರಹ್ಮನು ಹಾಗೂ ದೇವತೆಗಳು  ಕುಬೇರನ ಬೇಡಿಕೆಗೆ ಸಂತಸ ವ್ಯಕ್ತಪಡಿಸಿದರು. ಆಗ ಬ್ರಹ್ಮನು ಹೇಳಿದನು ನಾನು ಈಗಾಗಲೇ ಒಬ್ಬ  ಲೋಕಾದಿಪತ್ಯನನ್ನು ಸೃಷ್ಟಿಸ ಬೇಕೆಂದಿದ್ದೆ. ಈಗ ನೀನೇ,  ಇಂದ್ರ , ವರುಣ, ಯಮ,  ಅವರ ಜೊತೆಗೆ ನಾಲ್ಕನೆಯ ಲೋಕಾದಿ ಪತಿಯಾಗಿ 'ಸಂಪತ್ತಿಗೆ'' ಅಧಿಪತಿಯಾಗು ಎಂದು ಆಶೀರ್ವದಿಸುತ್ತಾನೆ. ಹಾಗೂ ಅವನಿಗೆ ದೇವಾನುದೇವತೆಗಳ ಸಮನಾಗಿ ಓಡಾಡಲು 'ಪುಷ್ಪಕ ವಿಮಾನ' ವನ್ನು ಕೊಡುತ್ತಾನೆ. ಇದರಲ್ಲಿ ಲೋಕವನ್ನೆಲ್ಲಾ ಸಂಚರಿಸಬಹುದು. ಇದು ಇನ್ನು ಮುಂದೆ ನಿನ್ನ ಸ್ವಂತ ವಿಮಾನ ಎಂದು ಹೇಳಿ ಅದೃಶ್ಯನಾದನು. ಆನಂತರ 'ವೈಶ್ರವಣನ' ಹೆಸರು 'ಕುಬೇರ' ಎಂದು ಪ್ರಸಿದ್ಧಿ ಹೊಂದುತ್ತದೆ. 

ಈ ರೀತಿ ದೇವತೆಗಳಿಂದ ಆಶೀರ್ವಾದವನ್ನು ಪಡೆದ ಕುಬೇರನು ತಂದೆಯ ಹತ್ತಿರ ಬಂದನು.  'ವಿಶ್ರವಸು' ವಿಗೆ ನಮಸ್ಕರಿಸಿ, ಅಪ್ಪ ನಾನು ಬ್ರಹ್ಮನಿಂದ  ವರವನ್ನು ಪಡೆದೆ. ಆದರೆ ನನಗೆ ವಾಸಮಾಡಲು ಯೋಗ್ಯ ಸ್ಥಳವನ್ನು ಬ್ರಹ್ಮನು ತಿಳಿಸಲಿಲ್ಲ ನಾನು ಕೇಳಲಿಲ್ಲ. ಆದ್ದರಿಂದ ನನಗೆ ವಾಸಮಾಡಲು,ಹಾಗೂ ಯಾರಿಗೂ ತೊಂದರೆ ಕೊಡದಂತೆ. ಒಂದು ಜಾಗ ಬೇಕು  ನೀನೇ ತೋರಿಸು  ಎಂದನು. ಮಿಶ್ರವಸು ಮಗನ ಸಾಧನೆಗೆ ಸಂತೋಷಪಟ್ಟನು. ನೀನು ಸರಿಯಾಗಿ ನೆಲೆನಿಲ್ಲಲು, ದಕ್ಷಿಣ ಸಮುದ್ರ ತೀರದಲ್ಲಿರುವ ತ್ರಿಕೂಟ ಪರ್ವತದ ಶಿಖರದ ಮೇಲೆ  ದೇವೇಂದ್ರನ  ಅಮರಾವತಿಗೆ ಸರಿಸಮನಾಗಿ ಇರುವಂತ ನಗರವನ್ನು ವಿಶ್ವಕರ್ಮನು ನಿರ್ಮಾಣ ಮಾಡಿದ್ದಾನೆ. ಇದನ್ನು 'ಲಂಕೆ' ಅಂತ ಕರೆಯುತ್ತಾರೆ.  ಈ ಪಟ್ಟಣದ  ಪ್ರಾಕಾರವೆಲ್ಲ ಸುವರ್ಣದಿಂದ ತುಂಬಿದೆ ದ್ವಾರಗಳೆಲ್ಲ  ವಜ್ರಖಚಿತವಾದುದಾಗಿದೆ. ಮುತ್ತು ರತ್ನ ಹವಳ ಗಳಿಂದ ಪಟ್ಟಣ ವೆಲ್ಲ ಅಲಂಕರಿಸಲ್ಪಟ್ಟ ಸುಂದರವಾದ ಪಟ್ಟಣವಾಗಿದೆ 'ಲಂಕಾ ಪಟ್ಟಣ' 

ಈ ಲಂಕಾ ಪಟ್ಟಣವನ್ನು ಹಿಂದೆ ರಾಕ್ಷಸ ರಿಗಾಗಿ ನಿರ್ಮಾಣ ಮಾಡಲಾಗಿತ್ತು.
ಆದರೆ ರಾಕ್ಷಸರು ತಮ್ಮ ಕೆಟ್ಟ ಪ್ರವೃತ್ತಿಯಿಂದಾಗಿ ವಿಷ್ಣುವಿನ ಕೋಪಕ್ಕೆ ಗುರಿಯಾಗುತ್ತಾರೆ. ಹಾಗೂ ನಾರಾಯಣ ನೊಂದಿಗೆ  ಯುದ್ದವನ್ನು ಮಾಡುತ್ತಾರೆ.  ನಾರಾಯಣನಿಂದ  ಸೋತು ಹೈರಾಣಾಗಿ ಪಾತಾಳಲೋಕಕ್ಕೆ ರಾಕ್ಷಸರೆಲ್ಲಾ ಓಡಿಹೋಗುತ್ತಾರೆ, ಈಗ ಅಂತಹ ಸುಂದರ ಪಟ್ಟಣವು ಖಾಲಿಯಾಗಿ ಉಳಿದಿದೆ. ಈಗ ನೀನು ಅಲ್ಲಿಗೆ ಹೋಗಿ ರಾಜನಾಗಿ ಲಂಕಾ ಪಟ್ಟಣವನ್ನು ಅಭಿವೃದ್ಧಿಪಡಿಸು ಎಂದು ಮಗನಾದ ವೈಶ್ರವಣನಿಗೆ ವಿಶ್ರವಸು ಹೇಳುತ್ತಾರೆ. ತಂದೆಯ ಸಲಹೆಯಂತೆ ಕುಬೇರನು ಸಾವಿರಾರು ಮಂದಿ  ಮೇರುತರೊಂದಿಗೆ  'ಲಂಕಾ ಪಟ್ಟಣ'ಕ್ಕೆ  ಹೋಗಿ ನೆಲೆಯೂರಿ  ರಾಜನಾಗಿ, ಬಹಳ ಚೆನ್ನಾಗಿ ಆಡಳಿತವನ್ನು  ನಡೆಸುತ್ತಾನೆ.  ತನ್ನ ಪುಷ್ಪಕ ವಿಮಾನದಲ್ಲಿ ಆಗಾಗ್ಗೆ ಲೋಕವನ್ನು ಸಂಚರಿಸುತ್ತಾ ತಂದೆ-ತಾಯಿಯರನ್ನು ಬಂದು ನೋಡಿಕೊಂಡು ಹೋಗುತ್ತಿದ್ದನು. ಲಂಕಾ ನಗರದಲ್ಲಿ ರಾವಣ ರಾಜ್ಯಭಾರ ಮಾಡುವುದಕ್ಕೂ ಮುಂಚೆಯೇ ಕುಬೇರನು ರಾಜ್ಯಭಾರ ಮಾಡಿದ್ದನು.  
                        
                         ಕುಬೇರ ಮಂತ್ರ :-
"ಓಂ  ಯಕ್ಷಾಯ  ಕುಬೇರಾಯ ವೈಶ್ರವಣಾಯ ಧನ-ದಾನ್ಯಧಿ ಪತಯೇ
ಧನ ಧಾನ್ಯ  ಸಮೃದ್ಧಿಂ ಮೇ  ದೇಹಿ   ದಾಪಯೇ   ಸ್ವಾಹಾ"
ಕುಬೇರ ಧನ ಪ್ರಾಪ್ತಿ ಮಂತ್ರ :-
ಓಂ  ಶ್ರೀಂ  ಹ್ರೀಂ ಕ್ಲೀಂ
ಶ್ರೀಂ  ಕ್ಲೀಂ ವಿತ್ತೇಶ್ವರಾಯ  ನಮಃ!! 

ವಂದನೆಗಳೊಂದಿಗೆ,
[02/06, 7:59 AM] Pandit. Venkatesh. Astrologer. Kannada. group: "ತಾಂಬೂಲ ಪ್ರಶ್ನೆ"

ಹಾಗೆಂದರೇನು?
ಹೇಗೆ ನೋಡುತ್ತಾರೆ?
ಇಷ್ಟಕ್ಕೂ ಈ ತಾಂಬೂಲ ಪ್ರಶ್ನೆ ಎಂದರೇನು?
ಹೇಗೆ ಭವಿಷ್ಯ ನೋಡಲಾಗುತ್ತದೆ?

ಜ್ಯೋತಿಷ್ಯ ಕಲ್ಪ ನಿರುಕ್ತ ಶಿಕ್ಷಾ ವ್ಯಾಕರಣ ಛಂದಸ್ಸು ಎಂಬುದು ವೇದಗಳ ಷಡಂಗವೆನಿಸಿದೆ. 
ಜ್ಯೋತಿಷ್ಯದಲ್ಲಿ ಕೂಡಾ ಷಡಂಗ ವಿಭಾಗವಾಗಿ ಜಾತಕ, ಗೋಲ, ನಿಮಿತ್ತ, ಪ್ರಶ್ನೆ, ಮುಹೂರ್ತ ಮತ್ತು ಗಣಿತ ಎಂಬುದಾಗಿ ಆರು ವಿಧಗಳಿವೆ. ಇದರಲ್ಲಿ ಪ್ರಶ್ನಾ ಭಾಗ ಬರುತ್ತದೆ. ಜಾತಕದಿಂದ ಎಲ್ಲವನ್ನೂ ನಿರ್ಣಯ ಮಾಡಲಾಗದೇ ಇದ್ದ ಗಂಭೀರ ಸಮಸ್ಯೆಗಳಿಗೆ ಪ್ರಶ್ನಶಾಸ್ತ್ರ ರಚನೆಯಾಗಿದ್ದು ಕೇರಳದ ತಲಕೇರಿ ವೈಷ್ಣವೀಯ ಬ್ರಾಹ್ಮಣ ಋಷಿಯು ತೋರಿಸಿದ ಗಹನ ಶಾಸ್ತ್ರವಿದು. 
ಪ್ರಶ್ನಾ ಶಾಸ್ತ್ರದಲ್ಲಿ ಅಷ್ಟಮಂಗಲ, ಸ್ವರ್ಣಾರೂಢ, ತಾಂಬೂಲ ಪ್ರಶ್ನೆಗಳೆಂಬ ವಿಧಾನಗಳು ಅಡಕವಾಗಿವೆ. 

ಅಷ್ಟಮಂಗಲ ಪ್ರಶ್ನೆ ಎಂದರೇನು?
ಅಷ್ಟಮಂಗಲ ಅಂದರೆ, ಅಕ್ಕಿಯ ಮಧ್ಯೆ ದೀಪ - ಕನ್ನಡಿ- ಬಂಗಾರ- ಹಾಲು, ಮೊಸರು, ಫಲ, ಪುಸ್ತಕ, ಬಿಳಿಯ ವಸ್ತ್ರ- ಈ ಎಂಟೂ ಮಂಗಲ ವಸ್ತುಗಳ ಆಯಾ ಅಭಿಮಾನಿ ದೇವತೆಗಳ ಆವರಣ- ಸ್ಥಾನ- ಕಲ್ಪೋಕ್ತ ಪೂಜೆ ಮಾಡಿ- ರಾಶಿ ಬರೆದು ಪ್ರಶ್ನಾವಳಿ ನಡೆಸುವುದು. 

ತಾಂಬೂಲ ಪ್ರಶ್ನೆ
ಇದರಂತೆಯೇ ತಾಂಬೂಲ ಪ್ರಶ್ನೆಯೂ ಆಗಿದೆ. 
ಪ್ರಷ್ಟ್ರಾ ವಿತೀರ್ಣ ತಾಂಬೂಲೈಃ ಶುಭಾಶುಭ ಮಶೇಷತಃ
ವಾಚ್ಯಂ ದ್ವಾದಶ ಭಾವೋತ್ಭಂ ತತ್ಪ್ರಕಾರೋಥ ಲಿಖ್ಯತೇ

ಪ್ರಶ್ನೆ ಮಾಡುವವರು ಇಂತಿಷ್ಟು ವೀಳ್ಯದೆಲೆಗಳ ದೈವಜ್ಞರಿಗೆ ಕೊಟ್ಟು - ಅದರ ಆಕಾರ, ಸಂಖ್ಯೆಗೆ ಅನುಗುಣವಾಗಿ ದ್ವಾದಶ ರಾಶಿಚಕ್ರದಲ್ಲಿ ಲಗ್ನಾದಿ ಶುಭಾಶುಭ ಫಲವನ್ನು ಹೇಳುವುದೇ ತಾಂಬೂಲ ಪ್ರಶ್ನೆಯ ಜ್ಯೋತಿಷ್ಯವಾಗಿದೆ.

ತಾಂಬೂಲ ಪ್ರಶ್ನೆಯ ಶೈಲಿ ಹೆಚ್ಚಾಗಿ ದೇವಳ ಸಂಬಂಧಿ ಜೀರ್ಣೋದ್ಧಾರ, ಅದರ ಜನಸಭೆ- ಮಂಗಲ ಕಾರ್ಯಗಳಿಗೆ ಬಳಸುವುದು. ತಾಂಬೂಲಂ ಶ್ರೀಕರಂ ಭದ್ರಂ ಎಂಬ ಶಾಸ್ತ್ರಪ್ರಮಾಣದಂತೆ ವೀಳ್ಯದೆಲೆಯು ಹರಿಪ್ರೇತಿಕರವಾದ ವಸ್ತು. ಹಾಗಾಗಿ, ದೇವಳ ಸಂಬಂಧಿ ಮಂಗಲ ಚಿಂತನೆಗಳಿಗೆ ಇದರ ಬಳಕೆ ನಡೆದಿದೆ. 

ಮಧ್ಯಾಹ್ನದ ಒಳಗಾದರೆ, ಪ್ರಶ್ನಕನು ಕೊಟ್ಟ ತಾಂಬೂಲಗಳನ್ನು - ಎಡಗೈ ಮೇಲಿಟ್ಟು ಒಂದೊಂದೇ ಎಲೆಗಳ ಬಲಗೈಯಿಂದ ಲಗ್ನಾದಿ 12 ಭಾವಗಳನ್ನು ಜೋಡಿಸುವುದು. ಉಳಿದ ಎಲೆಗಳ ಪಕ್ಕದಲ್ಲಿ ಎತ್ತಿಟ್ಟು ಕೊನೆಯಲ್ಲಿ ಎಲ್ಲವನ್ನೂ ಒಟ್ಟು ಮಾಡಿ ಫಲ ನಿರ್ದೇಶನ ಮಾಡುವುದು. 

ಮಧ್ಯಾಹ್ನದ ಮೇಲೆ ಆದರೆ, ಎಲೆಗಳನ್ನು ಕೆಳಗಿನಿಂದ ಎಣಿಸಿ ರಾಶಿ ಜೋಡಿಸುವುದು. 

ಹೀಗೆ ಜೋಡಿಸಿದ ಎಲೆಗಳ ಗುಣ ಹೇಗಿದೆ? ಚಿಕ್ಕದು, ದೊಡ್ಡದು, ಹರಿದಿದೆಯೇ, ಪೂರ್ಣವೇ, ಒದ್ದೆಯಾಗಿದೆಯೇ, ಒಣಗಿದೆಯೇ, ತೂತಾಗಿದೆಯೇ ಇದೆಲ್ಲವನ್ನೂ ಗಮನಿಸಿ- ಆಯಾ ರಾಶಿಯ ಗುಣದೋಷಗಳ ಹೇಳುತ್ತಾ ಸಾಗುವುದು. 

ಲಗ್ನದಿಂದ ದೇವತಾ ಸ್ವರೂಪ- ಎರಡರಿಂದ ಧನ- ಜನ, ಆದಾಯ- ಮೂರರಿಂದ, ಸಂಬಂಧಗಳು ನಾಲ್ಕರಿಂದ, ಐದರಿಂದ ಭೂತಾದಿ ಸತ್ವ ಮತ್ತು ದೈವ ಸಾನಿಧ್ಯ, ಆರರಿಂದ ಉಪದ್ರವ, ಏಳರಿಂದ ಶುಭಕಾರ್ಯ, ಎಂಟರಿಂದ ಪ್ರಸಾದ- ನೈವೇದ್ಯ- ಕಾಲ- ಆಯು, ಒಂಬತ್ತರಿಂದ ಜೀರ್ಣೋದ್ಧಾರ ಪುಣ್ಯ ವಿಶೇಷ, ಹತ್ತರಿಂದ ಕೀರ್ತಿ, ಹನ್ನೊಂದರಿಂದ ಸಂಪತ್ತಿನ ಗುಣ, ಹನ್ನೆರಡರಿಂದ ಲಾಭ ನಷ್ಟ ಕಾರಣ, ಇತರ ಬಾಧೆ ಅನುಕೂಲಗಳನ್ನು ನೋಡುವುದು. 

ಹೀಗೆ ಒಂದೊಂದು ತಾಂಬೂಲ ಭಾವಕೂ ಇರುವ ಬಾಧೆಗಳಿಂದ ಆಯಾ ದೇವಳ ಮತ್ತು ತತ್‌ಸಂಬಂಧಿ ಕುಟುಂಬ, ಪರಿಸರ ಬಳಲುತ್ತ ಇರುತ್ತದೆ, ಇದೆಲ್ಲದರ ಕಾರಣಗಳು ಸ್ಪಷ್ಟವಾಗಿ ಅಷ್ಟಮಂಗಲ- ತಾಂಬೂಲ ಪ್ರಶ್ನೆ ಮೂಲಕ ಪರಿಹರಿಸಬಹುದಾಗಿದೆ.
 ಸಂಗ್ರಹ🕉️🙏🙏🙏
[02/06, 9:19 AM] Pandit Venkatesh. Astrologer. Kannada: 🙏🏻🌹🤝🏻👌🏻👏🏻👍🏼💪❤️😊
 ನಮಗೆ ಸಹಾಯದ ಅವಶ್ಯಕತೆ ಇದ್ದಾಗ, ದುರದೃಷ್ಟ ಬಂದಾಗ, ಬರ ಬಂದಾಗ,ಆರೋಗ್ಯ ಸರಿ ಇಲ್ಲದಾಗ ನಮ್ಮ ಜೊತೆಗೆ ಕೈ ಬಿಡದಂತೆ ಇರುವವನು  ನಿಜವಾದ ಸ್ನೇಹಿತ 
🌹👏🏻👍🏼🤝🏻👌🏻    
 ಯಾರು ಬೇಕಾದರೂ ಎಷ್ಟೇ ಶ್ರೀಮಂತರಾಗಿ ಇರಬಹುದು, ಆದರೆ ಜಗತ್ತಿನಲ್ಲಿರುವ ಯಾವ ವ್ಯಕ್ತಿಯೂ ಕಳೆದುಹೋದ ದಿನವನ್ನು ಮರಳಿ ಪಡೆಯುವಷ್ಟು ಶ್ರೀಮಂತನಲ್ಲ.......
🙏🏻🌹ಶುಭೋದಯ🙏🏻🌹              
          🙏🕉️🙏
[02/06, 9:19 AM] Pandit Venkatesh. Astrologer. Kannada: ದೇವರ ದರ್ಶನ ಕ್ರಮ...

 ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆಯಬೇಕು? ಅನ್ನುವುದಕ್ಕೆ ನಮ್ಮ ಪೂರ್ವಜರು  ಸರಿಯಾದ ಕ್ರಮವನ್ನು  ತಿಳಿಸಿರುತ್ತಾರೆ. ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತೆ...‌‌  ಯಾವುದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ  ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು  ಹೀಗೆ ಹೇಳಬೇಕು..

"ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ  ತತ್ವ ಉಪದೇಶ ಮಾಡಿಸು, ವೈಕುಂಠಕ್ಕೆ ಕರೆದೋಯ್ದು  ನಿನ್ನ ದರುಶನ ಮಾಡಿಸು"  ಎಂದು ಪ್ರಾರ್ಥಿಸಿ ನಂತರ ಹೊರಗಿನಿಂದಲೇ  ದೇವರ ದರ್ಶನ ಮಾಡಬೇಕು.. ಅದಕ್ಕೆ ಧೂಳಿದರ್ಶನ  ಅಂತಾರೆ
  
ಧೂಳಿ ದರ್ಶನಂ ಪಾಪ ನಾಶನಂ 

ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ . 

ನಂತರ 

ತಲೆಯಲ್ಲಿರುವ ಚಿಂತೆಗಳನ್ನೆಲ್ಲ ಬಿಟ್ಟು  ಶಿಖರ ದರ್ಶನ ಮಾಡಿ 

ಶಿಖರ ದರ್ಶನಂ  ಚಿಂತಾ ನಾಶನಂ

ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು  ತೊಳೆದು  ದೇವಸ್ಥಾನ ಒಳಗಡೆ ಪ್ರವೇಶಮಾಡಿ  ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ  ಅದಕ್ಕೂ ಒಂದು ಕ್ರಮವಿದೆ .

ಮೊದಲು ಪಾದ ದರ್ಶನ ಮಾಡಿ 

ಪಾದ ದರ್ಶನಂ ಪಾಪನಾಶನಂ ...‌

ನಂತರ ಕಟಿ ದರ್ಶನ 

ಕಟಿ ದರ್ಶನಂ  ಕಾಮನಾಶನಂ 

ನಂತರ ನಾಭಿ ದರ್ಶನ 

ನಾಭಿ ದರ್ಶನಂ ನರಕ ನಾಶನಂ 

ನಂತರ ಕಂಠ ದರ್ಶನ 

ಕಂಠ ದರ್ಶನಂ  ವೈಕುಂಠ ಸಾಧನಂ 

ನಂತರ ಮುಖ ದರ್ಶನ
 
ಮುಖ ದರ್ಶನಂ ಮುಕ್ತಿ ಸಾಧನಂ 

ನಂತರ ಕಿರೀಟ ದರ್ಶನ

ಕೀರಿಟ ದರ್ಶನಂ ಪುನರ್ಜನ್ಮ ನಾಶನಂ

ನಂತರ ಸರ್ವ ದರ್ಶನ

ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ. 

ಸರ್ವಾಂಗ ದರ್ಶನ ಮಾಡಬೇಕು.. 
ಇದು ಕ್ರಮ....

ಸತ್ಸಂಗ ಗುಂಪಿನಿಂದ ದೊರೆತಿದ್ದು

ಹರೇ ಶ್ರೀನಿವಾಸ
ಗುರೋ ರಾಘವೇಂದ್ರ🙏🙏
[02/06, 9:19 AM] Pandit Venkatesh. Astrologer. Kannada: ದೇವರು ಎಲ್ಲಿರುತ್ತಾನೆ ?

ದೇವರೆಲ್ಲಿಲ್ಲ ?

ಪ್ರತಿ ಪ್ರಾಣಿಯಲ್ಲಿಯೂ ದೇವರಿದ್ದಾನೆ.

- ಪಂಡಿತನಲ್ಲಿ, ಪಾಮರನಲ್ಲಿ, ಬೇಡಿ ತಿನ್ನುವ ಭಿಕ್ಷುಕನಲ್ಲಿ, ನೀಚರಲ್ಲಿ, ಮಹರ್ಷಿಗಳಲ್ಲಿ, ನಾಯಿಯಲ್ಲಿ, ಪಶುಗಳಲ್ಲಿ, ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ, ಕ್ರಿಮಿಕೀಟಗಳಲ್ಲಿ, ಎಲ್ಲವುಗಳಲ್ಲಿಯೂ ಪರಮಾತ್ಮನಿದ್ದಾನೆ. ದೇವರಿಗೆ ಉಚ್ಛ, ನೀಚತ್ವಗಳಿಲ್ಲ. ನಮಗಿವೆಯಷ್ಟೇ !

ದೇವರೆಂದರೆ ನಾವು ನೋಡುತ್ತಿರುವ ಚಿತ್ರ ಮಾತ್ರವಲ್ಲ. ಗುಡಿಯಲ್ಲಿ ನಾವು ಕೈಮುಗಿಯುತ್ತಿರುವ ವಿಗ್ರಹ ಮಾತ್ರವಲ್ಲ. ನಾಲ್ಕು ಕೈಗಳು, ಹತ್ತು ಕೈಗಳು ದೇವರಿಗಿರುವುದಿಲ್ಲ. ನಾವು ನೋಡುತ್ತಿರುವ ಕೇಳುತ್ತಿರುವ ದೇವರುಗಳೆಲ್ಲರೂ ನಮ್ಮ ಕಲ್ಪನೆ. ನಮ್ಮ ಭ್ರಮೆ! ದೇವರಿಗೆ ಹೆಂಡತಿಯರು ಮಕ್ಕಳು ಯಾರೂ ಇರುವುದಿಲ್ಲ. ದೇವರಿಗೆ ನಮ್ಮ ಹಾಗೆ ಕೈಕಾಲುಗಳು ಇರುವುದಿಲ್ಲ.

ಒಟ್ಟಾರೆ ದೇವರು ಎಂದರೆ
ದೇ : ದೇಹವಿಲ್ಲ
ವ : ವರ್ಣವಿಲ್ಲ
ರು: ರೂಪವಿಲ್ಲ

ದೇವರಿಗೆ ರೂಪವೇ ಇಲ್ಲ !

ದೇವರಿಗೆ ಹೆಸರೂ ಇಲ್ಲ !

ದೇವರು ಏನನ್ನೂ ಬಯಸುವುದಿಲ್ಲ !

ದೇವರು ಏನನ್ನೂ ತಿನ್ನುವುದಿಲ್ಲ !

ದೇವರು ಸರ್ವಾಂತರ್ಯಾಮಿ !

ದೈವತ್ವವನ್ನು ತಿಳಿಯುವುದು ಅತಿಕಷ್ಟದ ಕೆಲಸ! ದೈವತ್ವವನ್ನು ಅರಿಯುವುದು ಸಾಮಾನ್ಯರಿಗೆ ಸಾಧ್ಯವಿಲ್ಲ. ಸಾಧಾರಣ ಗೃಹಸ್ಥರಿಗೆ ಎಂದೆಂದೂ ಸಾಧ್ಯವಿಲ್ಲ. ಈ ಕಾರಣಗಳಿಂದಲೇ ಪಾಮರ ಜನರಿಗೆ ಅರ್ಥವಾಗುವ ರೀತಿಯಲ್ಲಿ ದೇವಸ್ಥಾನಗಳನ್ನು ನಿರ್ಮಿಸಿ ನಮ್ಮ (ಮನುಷ್ಯಾಕಾರದ) ಆಕಾರದ ದೇವರುಗಳನ್ನು ಸ್ಥಾಪನೆ ಮಾಡಿ ಇವನೇ ದೇವರು ಎಂದು ಹೇಳಿದ್ದಾರೆ. (ಒಂದು ವೇಳೆ ಹುಲಿಗಳಿಗೆ ಮಾನವನಿಗಿರುವ ಬುದ್ಧಿಶಕ್ತಿ, ಭಾವನೆಗಳು ಇದ್ದಿದ್ದರೆ ಹುಲಿಯ ರೂಪದಲ್ಲೇ ದೇವರನ್ನು ಕಾಣುತ್ತಿದ್ದವು, ಅಲ್ಲವೇ..!?) ಜನಮನಗಳಲ್ಲಿ ದೈವಚಿಂತನೆ, ದೈವಭಾವನೆಗಳನ್ನು ಸುಸ್ಥಿರಗೊಳಿಸಲು ಆ ಮೂರ್ತಿಗಳಿಗೆ ದೈವತ್ವವನ್ನು ಆರೋಪಿಸಿ, ಅದು ದೇವರು ಎಂದು ಪರಿಭಾವಿಸುವಂತೆ ಮಾಡಿದ್ದಾರೆ. ತಪ್ಪಿಲ್ಲ, ಮೂರ್ತಿಗಳಲ್ಲಿ, ವಿಗ್ರಹಗಳಲ್ಲಿ, ಮಂದಿರಗಳಲ್ಲಿ ದೇವರನ್ನು ಕಾಣುವುದರಲ್ಲಿ ತಪ್ಪಿಲ್ಲ. ಆದರೆ ದೇವರು ಅಲ್ಲಿ ಮಾತ್ರ ಎಂದುಕೊಳ್ಳುವುದು ತಪ್ಪು.

ನಂಬಿದರೆ ಶಿಲೆಯಲ್ಲಿಯೂ ಶಿವನನ್ನು ಕಾಣಬಹುದು. ವಿಗ್ರಹದಲ್ಲಿಯೂ ವಿಷ್ಣುವನ್ನು ಕಾಣಬಹುದು. ಶಿವ, ವಿಷ್ಣು, ಆದಿಶಕ್ತಿ ...  ಇವೆಲ್ಲವೂ ಮಾನವನು ಕಂಡುಕೊಂಡ ದೈವತ್ವದ ರೂಪಕಗಳೇ, ಉಪಾಧಿಗಳೇ.

ನಂಬದಿದ್ದರೆ ಶಿವನೂ ಶಿಲೆಯೇ..!

2800-3000 ವರ್ಷಗಳ ಹಿಂದೆ ನಮಗೆ ದೇವಾಲಯಗಳು, ದೈವಪ್ರತಿಮೆಗಳು ಇಲ್ಲವೆಂದು ಕಾಣುತ್ತದೆ. ಅದಕ್ಕೂ ಬಹು ಹಿಂದೆ ಋಷಿಸಂಸ್ಕೃತಿ ಇದ್ದ ಕಾಲದಲ್ಲಿ ಋಷಿಮುನಿಗಳು ತಪೋಧ್ಯಾನಗಳಿಂದ ನಿರಾಕಾರ ದೇವರನ್ನು ಆರಾಧಿಸುವ ಪದ್ಧತಿಯಿತ್ತು. ನಂತರ ಅಗ್ನಿಯನ್ನೇ ದೇವರನ್ನಾಗಿ ಅಥವಾ ದೇವರ ಪ್ರತಿನಿಧಿಯಾಗಿ ಆರಾಧಿಸುವ, ಯಜ್ಞಯಾಗಗಳನ್ನು ಆಚರಿಸಿ ಅಗ್ನಿಯ ಮೂಲಕ ದೇವರಿಗೆ ತರ್ಪಣಗೈಯ್ಯುವುದರ ಮೂಲಕ, ಸೂರ್ಯನನ್ನು ಪ್ರತ್ಯಕ್ಷದೇವರೆಂದು ಸೂರ್ಯದೇವರಿಗೆ ಜನರೆಲ್ಲರೂ ಕೈಮುಗಿಯುವ ಮೂಲಕ ದೇವರನ್ನು ಆರಾಧಿಸುವ ಪದ್ಧತಿ ಬಂದಿತು. ತದನಂತರ ಕಾಲದಲ್ಲಿ ಪುರಾಣಗಳ ರಚನೆಯಾಗಿ ಅವು ಪ್ರಚಾರಕ್ಕೆ ಬಂದವು. ನೂರಾರು ಅಷ್ಟೇ ಅಲ್ಲ ಸಾವಿರಾರು ದೇವದೇವತೆಗಳು ಬಂದರು. ಆಮೇಲೆ ಸಾವಿರ ವರ್ಷಗಳ ನಂತರ ದೇವಸ್ಥಾನಗಳು ದೇವರ ಪ್ರತಿಮೆಗಳು ಪ್ರಾರಂಭವಾದವು. ದೇವತಾಮೂರ್ತಿಗಳಲ್ಲಿ ಮೊಟ್ಟಮೊದಲ ದೇವರೆಂದರೆ "ಲಿಂಗರೂಪದಲ್ಲಿರುವ ದೇವರೇ. ಆ ಸಮಯದಲ್ಲಿ ಶೈವ ವೈಷ್ಣವರೆಂಬ ವ್ಯತ್ಯಾಸಗಳಿರಲಿಲ್ಲ. ಸೃಷ್ಟಿ ಸಂಕೇತವಾದ 'ಪಾಣಿಪೀಠದಿಂದಿರುವ ಲಿಂಗವನ್ನೇ ದೇವರೆಂದು ಭಾವಿಸಿದ್ದರು. ಇದು ಹಾಗಿರಲಿ..............! ದೇವರು ಎಲ್ಲಿರುತ್ತಾನೆ ಎಂಬ ಪ್ರಶ್ನೆ ನಮ್ಮ ಮುಂದಿದೆ.

ದೇವರೆಂದರೆ ಕರುಣೆ! ದೇವರೆಂದರೆ ಪುಣ್ಯ ದೇವರೆಂದರೆ ಪ್ರೀತಿ! ದೇವರೆಂದರೆ ಧರ್ಮ! ದೇವರೆಂದರೆ ನ್ಯಾಯ! ದೇವರೆಂದರೆ ಸತ್ಯ! ದೇವರೆಂದರೆ ತ್ಯಾಗ! ದೇವರೆಂದರೆ ನಿಸ್ವಾರ್ಥ ! ದೇವರೆಂದರೆ ಸಂತೋಷ! ದೇವರೆಂದರೆ ದಾನ! ಒಟ್ಟಾಗಿ ದೇವರೆಂದರೆ ನಂಬಿಕೆ! ಕರುಣೆ, ಪ್ರೀತಿ, ಪುಣ್ಯ, ಧರ್ಮ, ನ್ಯಾಯ ಸತ್ಯ, ತ್ಯಾಗ, ನಿಸ್ವಾರ್ಥ, ಸಂತೋಷ, ದಾನ, ನಂಬಿಕೆ ಇವುಗಳಿರುವ ಸ್ಥಳದಲ್ಲಿ ತಪ್ಪದೇ ದೇವರಿರುತ್ತಾನೆ, ಸಂಶಯವೇ ಬೇಡ.

🙏🙏🙏🙏🙏
ಶಿವಾರ್ಪಣಮಸ್ತು
ಸದ್ವಿಚಾರ ತರಂಗಿಣಿ
ಆರ್ಷಧರ್ಮ
[02/06, 10:54 AM] Pandit Venkatesh. Astrologer. Kannada: 🕉️🐍🕉️🐍🕉️🐍🕉️🐍ಮೊಬೈಲ್ 9482655011 WhatsApp ಮಾಡಿ 
ಶ್ರೀ ವೆಂಕಟೇಶ್ ಜ್ಯೋತಿಷ್ಯರು ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು
ಕಾಳಸರ್ಪ ದೋಷ  9 ಬಗ್ಗೆಯ ಸಪ೯ ದೋಷಗಳಿಗೆ
ವಾಸುಕಿ ಕಾಳಸಪ೯ ದೋಷ :
9ನೇ ಮನೆಯಲ್ಲಿ ಕೇತು ಹಾಗೂ 3ನೇ ಮನೆಯಲ್ಲಿ ರಾಹುಯಿದ್ದರೆ ಈ ದೋಷ ಕಾಡುತ್ತದೆ ಹಣದ ತೊಂದರೆ ಸಮಸ್ಯೆ ಸಂಬಂಧಗಳಲ್ಲಿ ತೊಂದರೆ ಅನುಭವಿಸುತ್ತಾರೆ 
ಅನಂತ ಕಾಳಸರ್ಪ ದೋಷ :
27ವರ್ಷಗಳ ಕಾಲ ಬಾಧಿಸುವುದು ಇದು ದೀರ್ಘಾವಧಿಯ ದೋಷವಾಗಿದೆ 1ನೇ ಮನೆಯಲ್ಲಿ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಬಾಧಿಸುತ್ತದೆ ಈ ಕೀಳು ಮನೋಭಾವ ಹೊಂದಿರುವ ದೋಷಿಗಳು ಅನಾರೋಗ್ಯ ದಾಂಪತ್ಯ ವಿರಸ ಉದ್ಯೋಗ ತೊಂದರೆ ಅನುಭವಿಸುತ್ತಾರೆ 
ಪದ್ಮನಾಭ ಕಾಳಸರ್ಪ ಯೋಗ :
ಐದನೇ ಮನೆಯಲ್ಲಿ ರಾಹು ಹನ್ನೊಂದನೇ ಮನೆಯಲ್ಲಿ ಕೇತು ಆಡಳಿತ ಇರುವ ಈ ಕುಂಡಲಿಯಲ್ಲಿ ಈ ದೋಷ 
48 ವಷ೯ಗಳ ಕಾಲ ಇರುತ್ತದೆ ಸಂತಾನ ಹೀನತೆಯಿಂದ ಬಳಲುವ  ಇವರು ಮಕ್ಕಳ ಬಗ್ಗೆ ಚಿಂತಿಸಿ ಅನಾರೋಗ್ಯಕ್ಕೆ ಈಡಾಗಿದ್ದಾರೆ 
ಕುಳಿಕ ಕಾಳಸಪ೯ ಯೋಗ:
ಎರಡನೇ ಮನೆಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಕೇತುವಿದ್ದರೆ ಈ ದೋಷ ಸಂಭವಿಸುತ್ತದೆ 
ಶಂಖಪಾಲ ಕಾಳಸರ್ಪ ಯೋಗ :
ನಾಲ್ಕನೇ ಮನೆಯಲ್ಲಿ ರಾಹು ಹಾಗೂ ಹತ್ತನೆ ಮನೆಯಲ್ಲಿ ಕೇತುವಿದ್ದರೆ ಈ ದೋಷ ಸಂಭವಿಸುತ್ತದೆ ಇದು ನಲವತ್ತೆರಡು ವರ್ಷಗಳ ಕಾಲ ಇರುತ್ತದೆ 
ಮಹಾಪದ್ಮ ಕಾಳಸರ್ಪ ಯೋಗ :
ಆರನೇ ಮನೆಯಲ್ಲಿ ರಾವು ಹಾಗೂ ಹನ್ನೆರಡನೇ ಮನೆಯಲ್ಲಿನ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ
ಸಿಕ್ಕಾಪಟ್ಟೆ ಶತ್ರುಗಳನ್ನು ಕಟ್ಟಿಕೊಳ್ಳುವ ಇವರು ನೂರಾರು ಕಾಯಿಲೆಗಳಿಂದ ಬಳಲುತ್ತಾರೆ 
ತಕ್ಷಕ ಕಾಳಸಪ೯ಯೋಗ:
ಏಳನೇ ಮನೆಯಲ್ಲಿ ರಾಹು ಹಾಗೂ 1 ಮನೆಯಲ್ಲಿ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ ಬೇಡದ ಚಟಗಳಿಗೆ ಬಲಿಯಾಗುತ್ತಾರೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಾರೆ 
ಶೇಷಕಾಳಸಪ೯ಯೋಗ:
ಹನ್ನೆರಡನೇ ಮನೆಯಲ್ಲಿ  ಆಗ ಆರನೇ ಮನೆಯಲ್ಲಿ ಕೇತು ಇದ್ದರೆ ಈ ದೋಷ ಸಂಭವಿಸುತ್ತದೆ 
ಬದುಕಿನಲ್ಲಿ ದುಃಖದಾರಿದ್ರ್ಯಗಳ ಅನುಭವಿಸುತ್ತಾರೆ 
ಅನಾರೋಗ್ಯದಿಂದ ಬಳಲುತ್ತಾರೆ 
ಮೊಬೈಲ್ 9482655011 ಗುರುದಕ್ಷಿಣೆ ಸಲ್ಲಿಸಬೇಕಾಗುತ್ತದೆ 501 WhatsApp ಮಾಡಿ
ನಿಮ್ಮ ಕುಂಡಲಿಯಲ್ಲಿ ಯಾವ ದೋಷಇದೆ ಯೆಂಬವುದು ತಿಳಿರಿ🐍🕉️🙏🙏🙏🙏
[02/06, 8:16 PM] Pandit Venkatesh. Astrologer. Kannada: 🕉️ದೇವರ ದರ್ಶನ ಮಾಡಿದ ನಂತರ
 ಏನು ಮಾಡಬೇಕು?

ಅನೇಕ ಜನ  ಅವಸರದಲ್ಲಿ ಓಡಿ ಓಡಿ 
ಬರುತ್ತಾರೆ ಇದರಿಂದ ಏನೂ ಪ್ರಯೋಜನ ವಿಲ್ಲ !

ಪ್ರಶ್ನೆ : ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?
 *ಉತ್ತರ* : ದೇವಾಲಯಗಳಿಗೆ ಹೋದಾಗ ದೇವರ ದರ್ಶನ ಮುಗಿಸಿ ನಮಸ್ಕಾರವನ್ನು ಮುಗಿಸಿದ ನಂತರ ಒಂದೆರಡು ನಿಮಿಷ ಹೊರಗೆ ಕುಳಿತು ಕೊಳ್ಳುವದು ಸಂಪ್ರದಾಯ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನೆಸಿಕೊಂಡು ಈ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ವಾಸ್ತವವಾಗಿ ಇಂದಿನ ಜನರು ಈ ಶ್ಲೋಕವನ್ನು ಮರೆತಿದ್ದಾರೆ. 

 *ಶ್ಲೋಕ ಹೀಗಿದೆ :-*               
 
 *(೧) ಅನಾಯಾಸೇನ ಮರಣಂ|* 
 *(೨)ವಿನಾ ದೈನೇನ ಜೀವನಂ•* 
 *(೩) ದೇಹಾಂತ ತವ ಸಾನಿಧ್ಯಮ್|* 
 *(೪) ದೇಹಿಮೇ ಪರಮೇಶ್ವರ |* 

ಈ ಶ್ಲೋಕದ ಅರ್ಥ
*ಅನಾಯಾಸೇನ ಮರಣಂ** ಅಂದರೆ ನಮ್ಮ ಅಂತ್ಯಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಸಾಯಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಎಂದಿಗೂ ಹಾಸಿಗೆಯ ಮೇಲೆ ಬೀಳಬಾರದು, ದುಃಖದಿಂದ ಸಾಯಬಾರದು ಮತ್ತು ನಾವು ನಡೆದಾಡುವಾಗಲೇ ನಮ್ಮ  ಜೀವನದ ಅಂತ್ಯ ಆಗಬೇಕು.
*ವಿನಾ ದೈನೇನ ಜೀವನಂ* ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ಇರಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ,  ಅಥವಾ ಅಸಹಾಯಕನಾಗಿರಬಾರದು.  ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬಹುದು.
*ದೇಹಾಂತ ತವ ಸಾನಿಧ್ಯಮ್* ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು.  ಭೀಷ್ಮ ಪಿತಾಮರ ಮರಣದ ಸಮಯದಲ್ಲಿ, ದೇವರು (ಕೃಷ್ಣ ) ಅವರ ಮುಂದೆ ನಿಂತಿದ್ದರು.  ಅವನನ್ನು ನೋಡಿ ಪ್ರಾಣ ಬಿಟ್ಟರು
 *ದೇಹಿಮೇ ಪರಮೇಶ್ವರ*
ಅಂದರೆ ಓ ದೇವರೇ, ನಮಗೆ ಅಂತಹ ವರವನ್ನು ನೀಡು. 

*ದೇವರನ್ನು ಪ್ರಾರ್ಥಿಸುವಾಗ ಮೇಲಿನ ಶ್ಲೋಕವನ್ನು ಪಠಿಸಿ.* ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಂಸಾರಿಕ ವಿಷಯಗಳು), ಈ ಅರ್ಹತೆಯು ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ.  ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ಈ ಪ್ರಾರ್ಥನೆಯನ್ನು ಕುಳಿತು ಪ್ರಾರ್ಥಿಸಬೇಕು.  ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ.  ವಿಜ್ಞಾಪನೆಯು ಲೌಕಿಕ ವಿಷಯಗಳಿಗಾಗಿ.  ಉದಾಹರಣೆಗೆ, ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖಗಳು, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ, ಬೇಡಿಕೆಯಿಡುವುದು.

    *'ಪ್ರಾರ್ಥನೆ' ಎಂಬ ಪದದ ಅರ್ಥ 'ಪ್ರಾ' ಎಂದರೆ 'ವಿಶೇಷ', ವಿಶಿಷ್ಟ, ಉತ್ತಮ ಮತ್ತು 'ಆರ್ಥನಾ' ಎಂದರೆ ವಿನಂತಿ.  ಪ್ರಾರ್ಥನೆ ಎಂದರೆ ವಿಶೇಷ ವಿನಂತಿ.*
           ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು.  ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ.  ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ.  ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ. ನಿಮ್ಮ ಕಣ್ಣುಗಳನ್ನು ದೇವರ ನ್ವರೂಪದಿಂದ ತುಂಬಿಸಿ. 
       ನೀವು ದರ್ಶನದ ನಂತರ ಹೊರಗೆ ಕುಳಿತಾಗ, ನಂತರ ನೀವು ಕಣ್ಣುಗಳನ್ನು ಮುಚ್ಚಿಕೊಂಡು ನೋಡಿದ ಸ್ವರೂಪವನ್ನು ಧ್ಯಾನಿಸಿ.             
*ಇದನ್ನು ನಿಮ್ಮ ಆಪ್ತರಿಗೆ ರವಾನಿಸಿ*

🙏 ಹರಿ ಓಂ

🕉️ ಶ್ರೀ ಜ್ಯೋತಿಷ್ಯ ಸಲಹೆ ಕೆಂದ್ರ.🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011 //7975508110👍🙏🙏🙏
[02/06, 8:16 PM] Pandit Venkatesh. Astrologer. Kannada: ಅರಿವಿನ ಮಾತು
ಮಾಡಬೇಕಾದುದು: ಹಣವಿದ್ದರೆ ವ್ಯಾಪಾರ, ಭೂಮಿ ಇದ್ದರೆ ಬೇಸಾಯ, ಏನೂ ಇಲ್ಲದಿದ್ದರೆ ಸೇವಾವೃತ್ತಿ, ಯಾವ ಕಾಲಕ್ಕೂ ಭಿಕ್ಷೆ ಬೇಡಕೂಡದು.
ಪುಣ್ಯಾತ್ಮರಿಗೆ ಮಾತ್ರ ಲಭ್ಯವಾದವು: ಮಂದಾಕಿನೀ ಜಲದ ಸ್ನಾನ ಹಾಗೂ ಪಾನ (ಚಿತ್ರಕೂಟದಲ್ಲಿದೆ), ಮಂದಾಕ್ಷೀ ಮುಖಚುಂಬನ, ಮಂದರಪರ್ವತದ ವನವಿಹಾರ
ಪುಣ್ಯವಂತರು ಮಾತ್ರ ಇವನ್ನು ಪಡೆಯುತ್ತಾರೆ: ಒಳ್ಳೆಯ ನಡತೆಯ ಮಗ, ಗಂಡನ ಹಿತ ಬಯಸುವ ಮಡದಿ, ಕಷ್ಟಸುಖಗಳಲ್ಲಿ ಭಾಗಿಯಾದ ಗೆಳೆಯ.
ಇವರು ಬೇಗ ನಾಶವಾಗುತ್ತಾರೆ: ಆದಾಯವಿಲ್ಲದೇ ವೆಚ್ಚ ಮಾಡುವಾಗ, ಸಹಾಯಕರಿಲ್ಲದ ಯುದ್ಧಾಸಕ್ತ, ಕಂಡುದೆಲ್ಲವನ್ನೂ ತಿನ್ನುವ ರೋಗಗ್ರಸ್ತ.
ಇವು ಸಮೂಲ ನಾಶವಾಗುತ್ತವೆ: ಇರುವೆ ಕೂಡಿಟ್ಟ ಕಾಳು, ಜೇನುಹುಳುಗಳು ಸಂಗ್ರಹಿಸಿದ ಮಧು, ಜಿಪುಣನ ಹಣ.
ಸುಖದ ಗುಟ್ಟು: ದಾನದಿಂದ ಭೋಗಿಯೂ, ವೃದ್ಧಸೇವೆಯಿಂದ ಮೇಧಾವಿಯೂ, ಅಹಿಂಸೆಯಿಂದ ದೀರ್ಘಾಯುವು ಲಭಿಸುತ್ತದೆ.
ಇವರು ತೃಪ್ತರಾದರೆ ತಪಸ್ಸು ಸಿದ್ಧಿಸುತ್ತದೆ: ತಾಯಿ, ತಂದೆ, ಆಚಾರ್ಯ
ಇವು ಒಂದೆಡೆ ಸೇರಲಾರವು: ಐಶ್ವರ್ಯವಿರುವೆಡೆ ವಿನಯವಿಲ್ಲ, ವಿನಯವಿರುವೆಡೆ ಐಶ್ವರ್ಯವಿಲ್ಲ, ಇವೆರಡೂ ಇರುವೆಡೆ ವಿದ್ಯೆಯಿಲ್ಲ.
ಬಡತನದ ಗುಣ: ಸಂಚಾರ ಮಾಡಲು ಶಕ್ತಿಕೊಡುತ್ತದೆ, ಚಳಿ-ಮಳೆ-ಬಿಸಿಲುಗಳನ್ನು ಸಹಿಸುವಂತೆ ಮಾಡುತ್ತದೆ, ಹಸಿವನ್ನುಂಟುಮಾಡುತ್ತದೆ.
ಇದ್ದೂ ಪ್ರಯೋಜನವಿಲ್ಲದವು: ಪುಸ್ತಕದಲ್ಲಿರುವ ವಿದ್ಯೆ, ಮತ್ತೊಬ್ಬರ ಬಳಿಯಿರುವ ಹಣ, ಯುದ್ಧದ ಸಮಯದಲ್ಲಿ ಊರಿನಲ್ಲಿರುವ ಸೈನ್ಯ.
ಇವು ಹೀಗಿದ್ದರೇ ಶೋಭೆ: ಚಾರಿತ್ರ್ಯದ ಗುಣವುಳ್ಳ ಹೆಣ್ಣು, ಹೂಗಳ ಭಾರದಿಂದ ಬಳುಕುವ ಬಳ್ಳಿ, ಅರ್ಥಗರ್ಭಿತವಾದ ಮಾತು.
ಇವನು ಬಿಟ್ಟರೆ ಪರಮ ಸುಖ: ಪಾಪಕ್ಕೆ ಕಾರಣವಾದ ಲೋಭ, ವ್ಯಾಧಿಗೆ ಕಾರಣವಾದ ರುಚಿ, ದುಃಖಕ್ಕೆ ಕಾರಣವಾದ ಬಯಕೆ.
ಕಲಿಯು ಈತನನ್ನು ಕಾಡುವುದಿಲ್ಲ: ಸತ್ಯವಂತ, ದಯಾವಂತ, ಪರೋಪಕಾರಿ.
ಸಜ್ಜನರ ಸ್ವಭಾವ: ಉಪಕಾರ ಮಾಡುವುದು, ಪ್ರಿಯವಾಗಿ ಮಾತನಾಡುವುದು, ಕೃತ್ರಿಮವಲ್ಲದ ಸ್ನೇಹ ಮಾಡುವುದು
ಇವು ಸ್ಥಿರವಲ್ಲ: ಐಶ್ವರ್ಯ, ತಾರುಣ್ಯ, ಆಯುಷ್ಯ
ವ್ಯಕ್ತಿಯ ಏಳಿಗೆಗೆ ಇವು ಅತ್ಯವಶ್ಯ: ಒಳ್ಳೆಯ ಕುಲದವರೊಡನೆ ಸಂಪರ್ಕ, ವಿದ್ವಾಂಸರ ಸ್ನೇಹ, ದಾಯಾದಿಗಳೊಡನೆ ಸಾಮರಸ್ಯ, ಹೊಂದಾಣಿಕೆ.

ಶ್ರೀಕೃಷ್ಣಾರ್ಪಣಮಸ್ತು

Post a Comment

Previous Post Next Post