ಹಣಕಾಸು ಕಳೆದು ಕೊಳ್ಳುವ ರಾಶಿಗಳು.
ಮನುಷ್ಯನ ಸ್ವಭಾವವನ್ನು ಆತನು ಜನಿಸಿದ ನಕ್ಷತ್ರಗಳು ನಿಯಂತ್ರಿಸುತ್ತವೆ ಕೆಲವೊಂದು ರಾಶಿಯಲ್ಲಿ ಜನಿಸಿದವರು ಹಣವನ್ನು ಗಳಿಸುತ್ತಾರೆ ಹಾಗೆಯೇ ಕೆಲವೊಂದು ರಾಶಿಯಲ್ಲಿ ಜನಿಸಿದವರು ಹಣವನ್ನು ಕಳೆದುಕೊಳ್ಳುತ್ತಾರೆ.
_ಮನುಷ್ಯರು ಹಣವನ್ನು ಗಳಿಸುವಲ್ಲಿ ಮತ್ತು ಕಳೆಯುವಲ್ಲಿ ಅವರು ಜನಿಸಿದ ರಾಶಿ ನಕ್ಷತ್ರಗಳು ಪ್ರಭಾವ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ._
ಅಂದರೆ...
*“ಅಗ್ನಿ ತತ್ವ”* ದಲ್ಲಿ ಯಾವ ರಾಶಿಯವರು ಬರುತ್ತಾರೆ ಅವರು ಹಣವನ್ನು ಹೆಚ್ಚಾಗಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ ಹಾಗಾದರೆ ಹಣವನ್ನು ಕಳೆದುಕೊಳ್ಳುವ ರಾಶಿಗಳು ಯಾವುವು ಎಂದರೆ...
*ಮೇಷ ರಾಶಿ,ಸಿಂಹ ರಾಶಿ, ಮತ್ತು ಧನಸ್ಸು ರಾಶಿ* ಯಲ್ಲಿ ಜನಿಸಿದವರು ಅಗ್ನಿತತ್ವರಾಶಿ ಯಲ್ಲಿ ಬರುತ್ತಾರೆ,
ಈ ಅಗ್ನಿತತ್ವ ರಾಶಿಯಲ್ಲಿ ಜನಿಸಿದವರು ಹಣವನ್ನು ನೀರಿನಂತೆ ವ್ಯಯ ಮಾಡುತ್ತಾರೆ ಆದರೆ ಯೋಚನೆ ಮಾಡಿ ಯೋಜನೆ ನಿರ್ಮಿಸಿಕೊಂಡು ಎಲ್ಲಿ ಯಾವಾಗ ಎಷ್ಟು ಖರ್ಚು ಮಾಡಬೇಕು ? ಮತ್ತು ಅದರಿಂದ ಏನು ಲಾಭ ಎನ್ನುವುದನ್ನು ತಿಳಿದುಕೊಂಡು ಹಣವನ್ನು ಖರ್ಚು ಮಾಡುತ್ತಾರೆ, ಜೊತೆಗೆ ಬೇರೆ ಬೇರೆ ಮಾರ್ಗಗಳಿಂದ ಹಣ ಸಂಪಾದನೆ ಮಾಡುವಲ್ಲಿ ಇವರು ತುಂಬಾ ಜಾಣ್ಮೆಯನ್ನು ಹೊಂದಿರುತ್ತಾರೆ.
*ಪೃಥ್ವಿ ತತ್ವ* ರಾಶಿಯಲ್ಲಿ ಜನಿಸಿದವರು ಹಣವನ್ನು ಕೂಡಿಡುವ ಸ್ವಭಾವ ಇರುತ್ತದೆ,
*ವೃಷಭ ರಾಶಿ, ಕನ್ಯಾ ರಾಶಿ ಮತ್ತು ಮಕರ ರಾಶಿ* ಯಲ್ಲಿ ಜನಿಸಿದವರು ಪೃಥ್ವಿ ತತ್ವದಲ್ಲಿ ಬರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಹಣವನ್ನು ಹೆಚ್ಚು ಖರ್ಚು ಮಾಡದೆ ಉಳಿಸುತ್ತಾರೆ ಮುಂದೆ ಭವಿಷ್ಯದಲ್ಲಿ ಹಣದ ಅವಶ್ಯಕತೆ ಹೆಚ್ಚಿರುತ್ತದೆ ಎಂದು ಈಗಿನ ಎಲ್ಲಾ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಿ ಹಣವನ್ನು ಹೆಚ್ಚಾಗಿ ಉಳಿತಾಯ ಮಾಡುತ್ತಾರೆ, ಜೊತೆಗೆ ಹಣವನ್ನು ಸಂಗ್ರಹಿಸಿ ಇಡುತ್ತಾರೆ .
*ಜಲತತ್ವ* ರಾಶಿಯಲ್ಲಿ ಬರುವವರು *ಕರ್ಕಟ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿ* ಯಲ್ಲಿ ಜನಿಸಿದವರು ಜಲ ತತ್ವದಲ್ಲಿ ಬರುತ್ತಾರೆ, ಇವರು ಹಣದ ಬಗ್ಗೆ ಹೆಚ್ಚು ಜಾಗರೂಕತೆಯಿಂದ ಇರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಕರ್ಕಾಟಕ ವೃಶ್ಚಿಕ ಮತ್ತು ಮೀನ ರಾಶಿಯವರು ಹಣದ ವಿಚಾರದಲ್ಲಿ ಅತಿಯಾಗಿ ಜಾಗರೂಕರಾಗಿರುತ್ತಾರೆ, ಕಷ್ಟಕಾಲದಲ್ಲಿ ಬೇಕಾಗುತ್ತದೆ ಎಂದು ಹಣವನ್ನು ಉಳಿಸುವ ಸ್ವಭಾವವನ್ನು ಹೊಂದಿರುತ್ತಾರೆ, ಹಾಗೆಯೇ ಕರ್ಕಾಟಕ ರಾಶಿಯವರು ಕೆಲವೊಂದು ಬಾರಿ ಹಣಕ್ಕೆ ಸಂಬಂಧಿಸಿದಂತೆ ಜಾಗರೂಕರಾಗಿ ಇದ್ದು ಬಿಡುತ್ತಾರೆ ಆದರೆ ಸತ್ಯ ಗೊತ್ತಾದಾಗ ಹೆಚ್ಚು ಜಾಗರೂಕತೆಯಿಂದ ಇರುತ್ತಾರೆ. ನಂತರ ವೃಶ್ಚಿಕ ರಾಶಿಯವರು ಹಣವನ್ನು ಗಳಿಸುತ್ತಾರೆ ಮತ್ತು ಹಣವನ್ನು ಕೂಡಿ ಇಡುತ್ತಾರೆ. ಹಾಗೇನೇ ಮೀನ ರಾಶಿಯವರು ಹಣದ ವಿಚಾರದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ
*ಮಿಥುನ ರಾಶಿ ತುಲಾ ರಾಶಿ ಮತ್ತು ಕುಂಭ ರಾಶಿ* ಯವರು *ವಾಯು ತತ್ವ* ದಲ್ಲಿ ಬರುತ್ತಾರೆ, ಹಣಕ್ಕೆ ಸಂಬಂಧಿಸಿದಂತೆ ಇವರು ಭಾವನೆ ಮತ್ತು ಹಡ್ಡವನ್ನು ಹೊಂದಿರುತ್ತಾರೆ ಇವರು ಜೀವನದಲ್ಲಿ ತುಂಬಾ ಕಷ್ಟ ಪಟ್ಟು ಹಣವನ್ನು ಸಂಪಾದನೆ ಮಾಡುತ್ತಾರೆ ಆದರೆ ಸಂಪಾದಿಸಿದ ಹಣವನ್ನು ಅಷ್ಟೇ ವೇಗವಾಗಿ ಖರ್ಚು ಮಾಡಿ ಕಳೆದುಕೊಳ್ಳುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಆದ್ದರಿಂದ ಹಣವನ್ನು ಕಡಿಮೆ ಕರ್ಚು ಮಾಡುವುದು ಒಳ್ಳೆಯದು.
_ಒಟ್ಟಿನಲ್ಲಿ ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ನಮ್ಮ ರಾಶಿ ನಕ್ಷತ್ರಗಳು ನಿರ್ಧರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ._
ಧನ್ಯವಾದಗಳು🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011🙏🙏🙏🙏
Post a Comment