ನಿಮಗಾಗಿ, " ಅವರ್ಯಾರು ? " ಅಂತ ನಮ್ಮ ಹುಡುಗನಿಗೆ ಕೇಳಿದ್ದೆ .

2004 ರಲ್ಲಿರಬೇಕು ಅನ್ಸುತ್ತೆ. ಡಿಗ್ರೀ ಓದ್ತಿದ್ದೆ . ಬೆಂಗಳೂರು ಓಲ್ಡ್ ಸೆಂಟ್ರಲ್ ಜೈಲಿನ ಹಿಂದುಗಡೆ ಗಾಂಧೀ ನಗರಕ್ಕೆ ಹೊಂದಿಕೊಂಡಂತೆಯೇ ಇರೋ  ಮೈದಾನವೊಂದರೊಳಗೆ ಬಿಜಾಪುರದ ' ಸಿದ್ಧೇಶ್ವರ ಸ್ವಾಮಿ'ಗಳವರಿಂದ ಒಂದು ವಾರದ ಮಟ್ಟಿಗೆ ಪ್ರತಿ ಸಂಜೆ ಆರರಿಂದ ಏಳರವರೆಗೆ ಪ್ರವಚನ ಇರುತ್ತದೆಂಬ ವಿಚಾರ ನನ್ನ ಹಾಸ್ಟೆಲಿನಲ್ಲಿದ್ದ ಬಿಜಾಪುರದ ಕಡೆಯ ಗೆಳೆಯನೊಬ್ಬನಿಂದ ನನಗೆ ಗೊತ್ತಾಗಿತ್ತು . ಅಲ್ಲಿಯವರೆಗೂ ಸಿದ್ಧೇಶ್ವರ ಸ್ವಾಮಿಗಳು ಯಾರೆಂಬುದೇ ನನಗೆ ತಿಳಿದಿರಲಿಲ್ಲ. 

" ಅವರ್ಯಾರು ? " ಅಂತ ನಮ್ಮ ಹುಡುಗನಿಗೆ ಕೇಳಿದ್ದೆ . 

" ನಮ್ಮ ಬಿಜಾಪುರ್ದ್ ಮಂದೀ ಅವ್ರನ್ನ ನಡೆದಾಡೋ ದೇವ್ರು ಅಂತ ಕರೀತಾರ್ಪ . ಇವ್ರು ಯಾರು ಅಂತ ಖರೇ ನಿಂಗೆ ಗೊತ್ತಿಲ್ಲೇನು...???" ಅಂತ ಕೇಳಿದ. 

" ತುಮಕೂರು ಸಿದ್ಧಗಂಗಾ ಸ್ವಾಮೀಗಳ್ನ ' ನಡೆದಾಡೋ ದೇವ್ರು ' ಅಂತನ್ನೋದನ್ನು ನಾನು ಕೇಳಿದೀನಪ್ಪ . ಇವ್ರು ಯಾರು ಇನ್ನೊಬ್ಬ ದೇವ್ರು ? " ಅಂತ ಮಾತಿನಲ್ಲೇ ಚೂರು ವ್ಯಂಗವನ್ನಿಟ್ಟುಕೊಂಡು ನನ್ನ ಸ್ನೆಹಿತನನ್ನು ಕೇಳಿದ್ದೆ . (ನಾನು ಆವಾಗ ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ತಿಳಿದುಕೊಳ್ಳದಿದ್ದದ್ದೇ ನನ್ನಿಂದ ಈ ಮೂರ್ಖ ಪ್ರಶ್ನೆಯನ್ನು ಕೇಳುವಂತೆ ಮಾಡಿತ್ತು ).

 ನನ್ನೀ ಅಸಭ್ಯ ಪ್ರಶ್ನೆಗೆ ಕೋಪಿಸಿಕೊಳ್ಳದ ನನ್ನ ಸ್ನೇಹಿತ ಅತ್ಯಂತ ಸಾವಧಾನದಿಂದ ಅರ್ಥವಾಗುವ ಹಾಗೆ ನನಗೆ ಹೀಗೆ ತಿಳಿಸಿ ಹೇಳಿದ್ದ " ನೋಡು ಪ್ರಕಾಶ ಒಂದೂರಲ್ಲಿ ಒಂದೇ ದೇವ್ರು ಇರೋದಿಲ್ಲ . ಕಮ್ಮ್ ಅಂದ್ರೂ ಮೂರ್ನಾಲ್ಕು ದೇವ್ರು ಇರ್ತಾವ . ಆಯಾಯ ದೇವರಿಗೆ ಸಂಬಂಧಪಟ್ಟ ಭಕ್ತಾದಿಗಳು ಅವರ ದೇವರನ್ನು ಪೂಜಿಸ್ತಾರೆ ಆರಾಧಿಸ್ತಾರೆ . ಆ ಊರಿನ ಅಷ್ಟೂ ಗ್ರಾಮಸ್ಥರು ಅವರೂರಲ್ಲಿರೋ ಎಲ್ಲಾ ದೇವರುಗಳನ್ನು ಗೌರವಿಸುತ್ತಾರೆ , ಪೂಜಿಸುತ್ತಾರೆ , ಭಯ ಭಕ್ತಿ ಇಟ್ಕೊಂಡು ನೋಡ್ತಾರೆ . ಇದೂ ಕೂಡಾ ಹಂಗೇನೇ . ಈ ನಾಡಿನಲ್ಲಿ ವ್ಯಕ್ತಿತ್ವ , ಜ್ಞಾನ ಇಟ್ಕೊಂಡು ಲೋಕ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸೋ , ಲೋಕಕ್ಕೆಲ್ಲಾ ಜ್ಞಾನದ ಬುತ್ತಿಯನ್ನು ಉಣಬಡಿಸಲು ಪ್ರಯತ್ನಿಸೋ , ಸನ್ಮಾರ್ಗದಲ್ಲಿ ಬದುಕುವಂತೆ ಪ್ರೇರೇಪಿಸೋ ಇಬ್ರೋ ಅಥವಾ ಮೂವ್ವರೋ ಜೀವಂತ ವ್ಯಕ್ತಿಗಳನ್ನು ಜನಗಳು ಅಭಿಮಾನದಿಂದ 'ನಡೆದಾಡೋ ದೇವರು ' ಅಂತ ಕರೆದುಕೊಳ್ಳುತ್ತಾರೆ . ಹಾಗೆಯೇ ಬದುಕಿರುವಾಗಲೇ ' ದೇವರು ' ಅಂತ ಕರೆಸಿಕೊಂಡವರಲ್ಲಿ ಸಿದ್ಧಗಂಗಾ ಶ್ರೀಗಳು ಮೊದಲನೆಯವರಾದರೆ , ಸಿದ್ಧೇಶ್ವರ ಸ್ವಾಮಿಗಳು ಎರಡನೇಯವರು ಅಂತ ಮಾತ್ರ ಹೇಳಬಲ್ಲೆ . ಮೂರನೇಯವರ ಹೆಸರು ನನಗಿನ್ನೂ ಸಿಕ್ಕಿಲ್ಲ ಅಥವಾ ನನಗೆ ಗೊತ್ತಿರಲಿಕ್ಕಿಲ್ಲ " ಅಂತಂದು ಸುಮ್ಮನಾದ...!!!

 " ಹೊತ್ತಾಯ್ತು ನಡಿ ಪ್ರವಚನ ಕೇಳೋಕೆ ಹೋಗೋಣ . ಗುರುಗಳು ಕಾರ್ಯಕ್ರಮಕ್ಕೆ ಒಂದೇ ಒಂದ್ನಿಮಿಷ ತಡವಾಗಿ ಬರೋಲ್ಲ . ಒಂದ್ನಿಮಿಷ ಹೆಚ್ಚಿಗೆ ಹೊತ್ತು ಸ್ಟೇಜಿನ ಮೇಲೆ ಕೂರೋಲ್ಲ , ನಿಲ್ಲೋಲ್ಲ" ಅಂತಂದು ನನ್ನನ್ನು ಕರೆದುಕೊಂಡು ಹೋಗಿದ್ದ . 

  ಆ ಪುಣ್ಯಾತ್ಮರು ತಮ್ಮ ಸಮಯಕ್ಕೆ ಸರಿಯಾಗಿ ಸ್ಟೇಜು ಹತ್ತಿ ಬಂದರು . ತಮ್ಮ ಕೈಲಿ ಕಟ್ಟಿಕೊಂಡಿದ್ದ ವಾಚನ್ನು ಪದೇ ಪದೇ ನೋಡಿಕೊಳ್ತಾ ಕರೆಕ್ಟಾಗಿ ನಲವತ್ತೈದು ನಿಮಿಷಗಳ ಕಾಲ ನಿರರ್ಗಳವಾದ ತಮ್ಮ ಮಾತುಗಳನ್ನು ಮುಗಿಸಿ ಯಾವುದೇ ಹಾರಾತುರಾಯಿಗಳಿಗೆ ಕಾಯದೇ , ಸ್ಟೇಜಿನ ಮೇಲೆ ಕೂತಿದ್ದ ಇತರೆ ಗಣ್ಯ ವ್ಯಕ್ತಿಗಳಿಂದ ಯಾವೊಂದೂ ಹೊಗಳಿಕೆಗೂ ಕಾಯದೇ ಸ್ಟೇಜಿನಿಂದಿಳಿದು ಸರಸರ ನಡೆದು ಹೋಗೇ ಬಿಟ್ಟಿದ್ದರು. ಅಲ್ಲೇ ಹಿಂದುಗಡೆ ಕೂತ್ಕೊಂಡು ಅವರ ಮಾತುಗಳನ್ನೇ ಕೇಳ್ತಿದ್ದ ನನಗೆ ಯಾರೋ ಕೊಡವಿ ಬಿಸಾಡಿದಂತಾಗಿತ್ತು . ಸಿದ್ಧೇಶ್ವರ ಸ್ವಾಮಿಗಳ ಮಾತುಗಳು ಮುಗಿಯೋವರೆಗೂ ನನ್ನನ್ನು ಕೊಚ್ಚೆಯಿಂದ ತೆಗೆದು ಜೇನುತುಪ್ಪದಲ್ಲಿ ಅದ್ದಿ ಅದ್ದಿ ತೆಗೆದಂತೆ ಭಾಸವಾಗಿತ್ತು . ಇದು ಉತ್ಪ್ರೇಕ್ಷೆಯಲ್ಲ...!!!

  ಅಲ್ಲಿಂದ ಅವರ ಮಾತುಗಳಿಗೆ ಸೆರೆಯಾದವನು ನನ್ನಲ್ಲಿರೋ ಗಬ್ಬು ಒಂದಿಷ್ಟಾದರೂ ತೊಲಗಲಿ ಅನ್ನೋ ಕಾರಣಕ್ಕೆ ಇಂದಿಗೂ ಆಗಾಗ ಅವರ ಪ್ರವಚನಗಳನ್ನು ಕೇಳುತ್ತಲೇ ಇರುತ್ತೇನೆ. 

  ಯಾರೋ ಕೊಡಲು ಬಂದ ಡಾಕ್ಟರೇಟ್ ಪದವಿಯನ್ನು ಅತ್ಯಂತ ನಯವಾಗಿ ನಿರಾಕರಿಸಿದವರು ಸಿದ್ಧೇಶ್ವರ ಸ್ವಾಮಿಗಳು. 

  ಒಬ್ಬ ಕೂಲಿಕಾರನೂ ಸಹ ಕೊಂಡು ತೊಡಬಹುದಾದ ಅತ್ಯಂತ ಕಡಿಮೆ ದರ್ಜೆಯ ಬಿಳಿ ಬಟ್ಟೆಗಳು , ಕಣ್ಣುಗಳ ಮೇಲೊಂದು ಹಳೇ ಕನ್ನಡಕ ಇವರ ವ್ಯಕ್ತಿತ್ವವನ್ನು ಹೇಳಬಲ್ಲವು . 

  ಮಗುವಿನೆದುರು ಮಗುವಿನಂತಾಗುವ ಗುಣ ಇವರದು.  

  ಇಲ್ಲಿಯವರೆಗೂ ಯಾವೊಬ್ಬ ರಾಜಕಾರಣಿಯನ್ನೂ ಹಿಂದೆ ಇಟ್ಕೊಂಡು ಬಲ ತೋರಿಸಿದವರಲ್ಲ , ಬೇಳೆ ಬೇಯಿಸಿಕೊಂಡವರಲ್ಲ .  ಜಾತಿಗಳಿಗೆ ಅಂಟಿಕೊಳ್ಳದೆ ಪರಿಶುಭ್ರ ನಡೆನುಡಿಯನ್ನು ಪಾಲಿಸಿಕೊಂಡೇ ಬಂದಿದ್ದಾರೆ .

ಇವರು ರಾಜಕಾರಣಿಗಳನ್ನು ಸುಮ್ಮನೆ ಹೊಗಳಲಾರರು . ಈ ಹಿಂದೆ ಯಾವ ರಾಜಕಾರಣಿಯನ್ನೂ ಹೊಗಳಿದ್ದನ್ನು ನಾನಂತೂ ಕೇಳಿಲ್ಲ. 

  ಇಂಥಪ್ಪಾ ಸಿದ್ಧೇಶ್ವರ ಸ್ವಾಮಿಗಳು...!!! 

  ಈ ಸಿದ್ಧೇಶ್ವರ ಸ್ವಾಮಿಗಳು ನಿನ್ನೆ ದಿನ ಮೋದಿಯವರನ್ನು ಮೆಚ್ಚಿಕೊಂಡು ಮನದುಂಬಿ  ಹೊಗಳಿದರೆಂದರೆ ಕೇಳಲು ಹಿತವಾಗಿತ್ತು ಮತ್ತು ಆಶ್ಚರ್ಯವೂ ಆಯ್ತು...!!! 

  ಬಹುಶಃ ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಎಡಚರ ಟೀಕಾ ಪ್ರಹಾರಗಳಿಗೆ ಮೋದಿಯವರು ಈಡಾದಷ್ಟು ಪ್ರಮಾಣದಲ್ಲಿ ಬೇರಾರನ್ನೂ ಕಾಣಲಿಕ್ಕೆ ಸಾಧ್ಯವಿಲ್ಲ . ಬೊಗಳಿ ಬೊಗಳಿ ನಾಯಿಗಳ ಬಾಯಿಗಳಲ್ಲಿ ಬುಡಗಳಲ್ಲಿ ನರಗಳು ಸತ್ತು ಹೋದವು . ಮೋದಿ ಅನ್ನೋ ಮೌಂಟ್ ಎವೆರೆಸ್ಟು ಬೆಳೆಯುತ್ತಲೇ ಹೋಯ್ತು...❤️❤️

  ಸಿದ್ಧೇಶ್ವರ ಸ್ವಾಮಿಗಳು ಮೋದಿಯವರನ್ನು ಶ್ಲಾಘಿಸಿದ್ದು ಹೇಗಿತ್ತೆಂದರೆ ' ಜೇನುದುಂಬಿ ಹೂವುಗಳನ್ನಷ್ಟೇ ಬಯಸುವಂತಿತ್ತು '...!!!???

  ಸಿದ್ಧೇಶ್ವರ ಸ್ವಾಮಿಗಳ ಬಗ್ಗೆ ನನಗೆ ತಿಳಿದಷ್ಟನ್ನು , ಎಲ್ಲೋ ಅಡಗಿದ್ದ ಈ ವಿಚಾರವನ್ನು ಬರೆಯುವಂತೆ ಪ್ರೇರೆಪಿಸಿದವರು ಮಹಾದೇವಪ್ಪ ಆನೇಕಲ್ ಅಣ್ಣನವರು. 

  ಮೋದಿ ಅಂದ್ರೆ ಸುಮ್ನೆ ಅಲ್ಲ...!!!

   ಪ್ರಕಾಶ್ ಕಬ್ಬೇರ್  .

Post a Comment

Previous Post Next Post