cm, ಚಟುವಟಿಕೆ

[30/06, 11:58 AM] Gurulingswami. Holimatha. Vv. Cm: ಬೆಂಗಳೂರು, ಜೂನ್ 30: ಇಂದು *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ ತುಮಕೂರು ಹಾಗೂ *ಸಾಲುಮರದ* *ತಿಮ್ಮಕ್ಕ ಇಂಟರ್* *ನ್ಯಾಷನಲ್* *ಫೌಂಡೇಶನ್ ಇವರ ವತಿಯಿಂದ* ವಸಂತನಗರದ ಡಾ. ಅಂಬೇಡ್ಕರ್ ಭವನದಲ್ಲಿ ‌ಆಯೋಜಿಸಿರುವ *ವೃಕ್ಷ ಮಾತೆ,* *ಪದ್ಮಶ್ರೀ ನಾಡೋಜ, ಡಾ. ಸಾಲು* *ಮರದ ತಿಮ್ಮಕ್ಕ ಅವರ* *111ರ ಜನುಮ ಸಂಭ್ರಮ* ಹಾಗೂ *ನ್ಯಾಷನಲ್* *ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ* ಪ್ರದಾನ *ಕಾರ್ಯಕ್ರಮದಲ್ಲಿ ಪಾಲ್ಗೊಂಡ* ಕಾರ್ಯಕ್ರಮವನ್ನುದ್ದೇಶಿಸಿ *ಮಾತನಾಡಿದರು .*
[30/06, 12:37 PM] Gurulingswami. Holimatha. Vv. Cm: *ಜಿಎಸ್ ಟಿ ಪರಿಹಾರ: ಆಗಸ್ಟ್ ತಿಂಗಳಲ್ಲಿ  ಅಂತಿಮ ನಿರ್ಣಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಂಗಳೂರು, ಜೂನ್ 20: ಜಿಎಸ್ ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವನ್ನು ವಿಸ್ತರಿಸುವ ಬಗ್ಗೆ ಚರ್ಚೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. 

ಜಿ. ಎಸ್.ಟಿ ಕಾನೂನು ಸಮಿತಿಯು ಕಾನೂನು ತೊಡಕುಗಳನ್ನು ನಿವಾರಣೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ.  ಫಿಟ್ ಮೆಂಟ್ ಸಮಿತಿಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ ಎಂದರು.
[30/06, 12:37 PM] Gurulingswami. Holimatha. Vv. Cm: *ಉದಯಪುರ ಘಟನೆಯ ಹಿಂದೆ ಭಯೋತ್ಪಾದಕ ಸಂಸ್ಥೆಗಳಿವೆ* *ಸಿಎಂ ಬೊಮ್ಮಾಯಿ*

ಬೆಂಗಳೂರು, ಜೂನ್ 20: ಉದಯಪುರದಲ್ಲಿ ಆಗಿರುವುದು  ಅಮಾನವೀಯ ಹಾಗೂ ಅತ್ಯಂತ ಹೇಯ ಕೃತ್ಯ. ಇದರ ಹಿಂದೆ ವ್ಯಕ್ತಿ ಗಳಷ್ಟೇ ಅಲ್ಲ ಭಯೋತ್ಪಾದಕ ಸಂಸ್ಥೆ ಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಇದು  ಭಯೋತ್ಪಾದನೆಯ ಒಂದು ಕ್ರಮವಾಗಿದೆ. ಅದರ ಹಿಂದೆ  ದೊಡ್ಡ ಅಂತರರಾಷ್ಟ್ರೀಯ ಷಡ್ಯಂತರವಿದೆ. ಅದು ಪತ್ತೆಯಾಗಿ,  ಅಪರಾಧಿಗಳನ್ನು ಗಲ್ಲಿಗೇರಿಸಬೇಕು.  ರಾಜಸ್ತಾನ ಸರ್ಕಾರ ಸಂಪೂರ್ಣ ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂದರು. 

*ಪ್ರಧಾನ ಮಂತ್ರಿಗಳ ನಿರ್ದೇಶನದ ಮೇರೆಗೆ ತನಿಖೆ*
 ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ದಾಖಲೆಗಳನ್ನು ಒದಗಿಸಲು ಸೂಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಕೊಡಲಿ ತೊಂದರೆ ಇಲ್ಲ. ಪ್ರಧಾನ ಮಂತ್ರಿಗಳ ನಿರ್ದೇಶನದ ಮೇರೆಗೆ ತನಿಖೆ ಮಾಡಲಾಗುವುದು ಎಂದರು. 


ಬಿ.ಟಿ.ಲಲಿತಾ ನಾಯಕ್ ಅವರು ಪಿ ಎಸ್ ಐ ನೇಮಕಾತಿಗೆ ಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಮೊದಲು ತನಿಖೆಯಾಗಲಿ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
[30/06, 1:18 PM] Gurulingswami. Holimatha. Vv. Cm: ಪ್ರಧಾನಿ ನರೇಂದ್ರ ಮೋದಿ  ಅವರು ಬೆಂಗಳೂರಿನ ಆಡುಗೋಡಿಯಲ್ಲಿರುವ ಬಾಷ್ ಕಂಪನಿಯ ಬಾಷ್ ಇಂಡಿಯಾ ಸ್ಪಾರ್ಕ್ ಡಾಟ್ ಎನ್ ಎಕ್ಸ್ ಟಿ ಕ್ಯಾಂಪಸ್ ನ ಉದ್ಘಾಟನಾ ಸಮಾರಂಭದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸಿ ಮಾತನಾಡಿದರು.
[30/06, 1:44 PM] Gurulingswami. Holimatha. Vv. Cm: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬಾಷ್ ಕಂಪೆನಿಯು ಬೆಂಗಳೂರಿನ ಆಡುಗೋಡಿಯಲ್ಲಿ ಸ್ಥಾಪಿಸಿರುವ ದೇಶದ ಅತಿದೊಡ್ಡ ಸ್ಮಾರ್ಟ್ ಕ್ಯಾಂಪಸ್ spark.nxt  ಅನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರ್ಟ್ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ರಾಬರ್ಟ್ ಬಾಷ್ ಜಿಎಂಬಿಹೆಚ್  ನ ಆಡಳಿತ ಮಂಡಳಿ ಸದಸ್ಯರಾದ ಫಿಲ್ಲಿಝ್ ಅಲ್ ಬ್ರೆಕ್ಟ್ ಹಾಗೂ ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷರಾದ ಸೌಮಿತ್ರ ಭಟ್ಟಾಚಾರ್ಯ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
[30/06, 4:00 PM] Gurulingswami. Holimatha. Vv. Cm: *ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸಿ : ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ*

ಬೆಂಗಳೂರು, ಜೂನ್ 30 :

 ಹೊಸ ಆಯಾಮ, ಸಂಶೋಧನೆಗಳ ಮೂಲಕ ಬೆಂಗಳೂರಿನಲ್ಲಿ ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸುವಂತೆ ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಅವರು ಇಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಆಡುಗೋಡಿಯಲ್ಲಿ   ನಿರ್ಮಿಸಿರುವ ಬಾಷ್ ಸ್ಮಾರ್ಟ್ ಕ್ಯಾಂಪಸ್ ನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು ಶಿಕ್ಷಣ, ಆರೋಗ್ಯ, ಉತ್ಪಾದನೆ,  ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮುಂದಿನ 25 ವರ್ಷಗಳು ಬಹಳ ಪ್ರಮುಖವಾಗಿದ್ದು, ಅದನ್ನು ಅಮೃತ ಕಾಲ ಎಂದು ಕರೆಯಲಾಗಿದೆ. ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನಮಟ್ಟ ಸುಧಾರಣೆ, ಉತ್ತಮ ಪರಿಸರ , ಪರಿಸರ ಮತ್ತು ಉದ್ಯಮಗಳ ಸಂಯೋಜನೆಗೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ತನ್ನ ಛಾಪನ್ನು ಮೂಡಿಸಿರುವ ಬಾಷ್ ಸಂಸ್ಥೆ ಮೇಲ್ಪಂಕ್ತಿ ಹಾಕಬೇಕು ಎಂದು ತಿಳಿಸಿದರು.

*ಬಾಷ್ ಸಂಸ್ಥೆ ಒಂದು ಸಂಸ್ಕೃತಿಯಾಗಿ ಬೆಳೆದಿದೆ :*
ಬಾಷ್ ಕಂಪನಿ ಯುವ ಇಂಜಿನಿಯರ್ಸ್‍ಗಳ ಕನಸಿನ ಸಂಸ್ಥೆಯಾಗಿದೆ. ನಾನು ಇಂಜಿನಿಯರ್ ಕಾಲೇಜಿನಲ್ಲಿದ್ದಾಗ  ಟಾಟಾ ಮೋಟರ್ಸ್, ಬಾಷ್ ನಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದೆ. ಇದು ಕೇವಲ ಉತ್ಪಾದನಾ ಅಥವಾ ಸಾಫ್ಟ್‍ವೇರ್ ಕಂಪನಿಯಲ್ಲ, ಬಾಷ್ ಒಂದು ಸಂಸ್ಕøತಿಯಾಗಿ ಬೆಳೆದಿದೆ. ಬದ್ಧತೆ, ಸಮರ್ಪಣೆ, ಪರಿಶ್ರಮಗಳಿಂದ ಇದು ಸಾಧ್ಯವಾಗಿದೆ. ಬಾಷ್ ಸಂಸ್ಥೆಯ 100 ವರ್ಷಗಳು ತನ್ನ ಸಾಧನೆಯನ್ನು ತಾನೇ ಹೇಳುತ್ತದೆ. ಸ್ವಾತಂತ್ರ್ಯದ ಮುಂಚೆಯೇ ಭಾರತವನ್ನು ಆಧುನಿಕ ಆರ್ಥಿಕ ಕೇಂದ್ರವಾಗಿ ಗುರುತಿಸಿ, ಭಾರತಕ್ಕೆ ಪ್ರವೇಶಿಸಿದರು. ಆರ್ಥಿಕ ಸ್ವಾವಲಂಬನೆಯಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಲು ಕಾರಣವಾಯಿತು. ವಿಶ್ವ ಎರಡು ಮಹಾಯುದ್ಧಗಳನ್ನು ಕಂಡಿದೆ. ಬಾಷ್ ಎರಡೂ ಯುದ್ಧಗಳ ನಡುವೆಯೂ ಬೆಳೆದಿದೆ. ಮಹಾಯುದ್ಧಗಳು ಹೊಸ ತಂತ್ರಜ್ಞಾನ, ಹೊಸ ಉತ್ಪನ್ನಗಳಿಗೆ ನಾಂದಿಯಾಯಿತು. ಬಾಷ್ ನಲ್ಲಿನ ವಿನ್ಯಾಸಗಳ ನಿಖರತೆಯನ್ನು ಅವುಗಳ ಉತ್ತಮ ಉತ್ಪನ್ನಗಳು ನಿರೂಪಿಸುತ್ತವೆ.  ಬಾಷ್ ತನ್ನ ಸದೃಢ ಸಾಧನೆಗಳಿಂದ ವಿಶ್ವದಲ್ಲಿ ಖ್ಯಾತಿ ಪಡೆದಿದೆ ಎಂದರು.

*ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ :*
ಬೆಂಗಳೂರು ತನ್ನ ಪರಿಶ್ರಮದಿಂದ ತಾಂತ್ರಿಕ ಹಬ್ ಆಗಿದೆ. ಹಿಂದಿನಿಂದಿಲೂ ರಾಜ್ಯ ಹಾಗೂ ಕೇಂದ್ರ ಪಿಎಸ್‍ಯುಗಳ ತಾಂತ್ರಿಕತೆ, ಸಂಶೋಧನೆಗಳು, ಬೆಂಗಳೂರು ನಗರವನ್ನು ಐಟಿಬಿಟಿ ನಗರವಾಗಲು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಜೆನಿಟಿಕ್ಸ್ ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. 400 ಫಾರ್ಚೂನ್ ಕಂಪನಿಗಳು ಇಲ್ಲಿವೆ.  ಏರೋಸ್ಪೇಸ್, ನವೀಕರೀಸಬಹುದಾದ ಇಂಧನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೈಡ್ರೋಜನ್ ಇಂಧನದ ಉತ್ಪಾದನೆಗೆ ಒತ್ತು ನೀಡಲಾಗಿದ್ದು, ಸಮುದ್ರದ ನೀರಿನಿಂದ ಅಮೋನಿಯಾ  ಉತ್ಪಾದನೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದರು.
ಬಾಷ್ ಸಂಸ್ಥೆಯ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಗಲಿಗೆ ಹೆಗಲು ನೀಡಲಿದೆ. ಬಾಷ್ ಸಂಸ್ಥೆಯ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಸಲಹೆ ನೀಡಿದರು. ಬಾಷ್‍ನ ಸ್ಮಾರ್ಟ್ ಕ್ಯಾಂಪಸ್ ಪರಿಸರ ಸ್ನೇಹಿಯಾಗಿದೆ ಎಂದರು....
[30/06, 6:17 PM] Gurulingswami. Holimatha. Vv. Cm: *ಪ್ರೊ. ಸಿ.ಎನ್.ಆರ್. ರಾವ್ ಹುಟ್ಟುಹಬ್ಬ: ಶುಭಾಶಯ ಕೋರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* 

ಬೆಂಗಳೂರು, ಜೂನ್ 30- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಿರಿಯ ವಿಜ್ಞಾನಿ ಭಾರತರತ್ನ ಪ್ರೊ. ಸಿ ಎನ್ ಆರ್ ರಾವ್ ಅವರಿಗೆ ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಮುಂದೆಯೂ ಅವರ ಜ್ಞಾನ, ಸೇವೆ ದೇಶಕ್ಕೆ ಲಭ್ಯವಾಗಲಿ. ಭಗವಂತ ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಹಾರೈಸಿದರು.
[30/06, 7:36 PM] Gurulingswami. Holimatha. Vv. Cm: *ಸಾಲುಮರದ ತಿಮ್ಮಕ್ಕನಿಗೆ ಪರಿಸರ ರಾಯಭಾರಿ ಬಿರುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಜೂನ್ 30: ಸಾಲು ಮರದ ತಿಮ್ಮಕ್ಕನಿಗೆ  ಪರಿಸರದ ರಾಯಭಾರಿ ಎಂಬ ವಿಶೇಷ ಬಿರುದು ನೀಡಿ   ಆಕೆ ಬಯಸಿದಲ್ಲಿ ಹೋಗಿ ಪ್ರಚಾರ ಕೈಗೊಳ್ಳಲು ರಾಜ್ಯ ಸಚಿವರ ಸ್ಥಾನ ನೀಡಿ , ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

 ಅವರು ಇಂದು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ ತುಮಕೂರು ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ಇವರ ವತಿಯಿಂದ ವಸಂತನಗರದ ಡಾ. ಅಂಬೇಡ್ಕರ್ ಭವನದಲ್ಲಿ ‌ಆಯೋಜಿಸಿರುವ ವೃಕ್ಷ ಮಾತೆ, ಪದ್ಮಶ್ರೀ ನಾಡೋಜ, ಡಾ. ಸಾಲು ಮರದ ತಿಮ್ಮಕ್ಕ ಅವರ 111ರ ಜನುಮ ಸಂಭ್ರಮ  ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ  ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು .

ತಿಮ್ಮಕ್ಕ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು. 

*ವೆಬ್ ಸೈಟ್ ಅಭಿವೃದ್ಧಿ*

ತಿಮ್ಮಕ್ಕ ವೆಬ್ ಸೈಟ್ ಅಭಿವೃದ್ಧಿ ಪಡಿಸಿ ಭಾರತದ ತುಂಬಾ ಪ್ರಚುರಪಡಿಸಲು ವಾರ್ತಾ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸಾಲುಮರದ ತಿಮ್ಮಕ್ಕ ಅಲ್ಲದೇ  ಈ ರೀತಿಯ ಸೇವೆಗಳನ್ನು ಮಾಡಿರುವವರ ವೆಬ್ ಸೀರೀಸ್ ನ್ನು ವಾರ್ತಾ ಇಲಾಖೆ ನಿರ್ಮಿಸಲಿದೆ ಎಂದರು. 

ತಿಮ್ಮಕ್ಕನ ಊರಿನ ಬಳಿ 10 ಎಕರೆ ಸ್ಥಳ ನಿಗದಿ ಮಾಡಿ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು. ತಿಮ್ಮಕ್ಕ ಅವರಿಗೆ ಈಗಾಗಲೇ ಬಿಡಿಎ  ನಿವೇಶನ ನೀಡಿ ನೋಂದಾಣಿಯನ್ನು ಮಾಡಿಕೊಡಲಾಗಿದೆ. ನಿವೇಶನವನ್ನು ಭದ್ರಪಡಿಸಲು ತಂತಿಬೇಲಿ ಹಾಕಬೇಕು. ಶೀಘ್ರವಾಗಿ ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಾಧನೆ ಮಾಡಲು ಪದವಿ, ನೆರವು ಅವಕಾಶಗಳು ಅಗತ್ಯ ವಿಲ್ಲ. ಒಂದು ಧ್ಯೇಯ ಇದ್ದಲ್ಲಿ ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸ ಮಾಡಿದರೆ ಇಡೀ ಜಗತ್ತಿಗೆ ಬದಲಾವಣೆ ತರುವ ಪ್ರಭಾವಿ ಶಕ್ತಿಯಾಗಬಹುದು ಎನ್ನುವ ಉದಾಹರಣೆ ನಮ್ಮವರೇ ಆದ ಸಾಲು ಮರದ ತಿಮ್ಮಕ್ಕ ಎಂದರು.


*ತಿಮ್ಮಕ್ಕ ಬಹು ದೊಡ್ಡ ಪ್ರೇರಣಾ ಶಕ್ತಿ*
ಸಾಲು ಮರದ ತಿಮ್ಮಕ್ಕನ ಮುಖದಲ್ಲಿ ಮುಗ್ಧತೆ ಇದೆ. ಅವರ ಪ್ರಾಂಜಲ ಮನಸ್ಸು ಮತ್ತು ಶುದ್ಧ ಅಂತ:ಕಾರಣದಿಂದ ಮಾಡಿದ ಕಾಯಕಯೋಗದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆ ಕಡಿಮೆ ಸಾಧನೆಯಲ್ಲ. ಪ್ರಶಸ್ತಿ ಗಳು ತಿಮ್ಮಕ್ಕ ನನ್ನು ಹುಡುಕಿಕೊಂಡು ಬಂದಿವೆ. ಆಕೆಯ ಕತೃತ್ವ ಶಕ್ತಿ ಅಷ್ಟಿದೆ.   ತಮ್ಮ  ಊರಿನ ನಾಲ್ಕು ಕಿಮೀ ಉದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸಿರುವುದು ಅಸಾಮಾನ್ಯ. ಸಾಲು ಮರದ ತಿಮ್ಮಕ್ಕ ಪ್ರಸಿದ್ದರಾದ ನಂತರ    ಬಹಳ ಜನರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ಶಾಲೆ ಹಾಗೂ ಊರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅದ್ಭುತವಾಗಿದೆ. ಆಕೆ ಅಷ್ಟು ದೊಡ್ಡ ಪ್ರೇರಣಾ ಶಕ್ತಿ ಎಂದರು. 

*ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು*

  ಅವಕಾಶಗಳಿಲ್ಲದಾಗ ಪ್ರಾಮಾಣಿಕತೆಯಿಂದ ಕರ್ತವ್ಯ ಮಾಡಿದಾಗ ತನ್ನಿಂದ ತಾನೇ ಪ್ರಸಿದ್ಧಿಗೆಬರುತ್ತದೆ.  ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ತಾವೇ ಅವಕಾಶಗಳನ್ನು ಸೃಷ್ಟಿ ಸಿಕೊಳ್ಳುವವರು ಚಿರಸ್ಥಾಯಿಯಾಗುತ್ತಾರೆ. ತನ್ನ ಯಶಸ್ಸು ಲೋಕಕಲ್ಯಾಣಕ್ಕೆ ಉಪಯೋಗವಾದರೆ, ಇಡೀ ಸಮಾಜ, ದೇಶಕ್ಕೆ ಒಳ್ಳೆಯದಾದರೆ  ಅದು ಸಾಧನೆ. 
ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಈ ಸಾಧನೆಯನ್ನು ವೈಭವೀಕರಿಸಿದಾಗ ಹೆಚ್ಚಿನ ಜನರಿಗೆ ತಿಳಿಯಬೇಕು. ಎಲ್ಲ ಕಡೆ ಪ್ರಚಾರವಾಗಬೇಕು. ವಿಶೇಷವಾಗಿ ಯುವಜನರಿಗೆ ತಿಳಿಯಬೇಕು. ಸಾಲುಮರದ ತಿಮ್ಮಕ್ಕನ ಬಗ್ಗೆ ಪ್ರಚಾರ ಎಂದರೆ ಹಸಿರು, ಪರಿಸರ, ಶುದ್ದೀಕರಣದ ಪ್ರಚಾರ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.
 
*ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿ*
ಪರಿಸರ ದಿನನಿತ್ಯ ಕಲುಷಿತವಾಗುತ್ತಿದೆ. ನಾವು ಉಸಿರಾಡುವ ಗಾಳಿ, ನೀರು, ಆಹಾರ, ಭೂಮಿ, ಪಂಚಭೂತಗಳು ಕಲುಷಿತಗೊಳ್ಳುವುದು ಕಾಣುತ್ತಿದ್ದೇವೆ. ಒಂದು ಸಮೀಕ್ಷೆಯ ಪ್ರಕಾರ 2000 ಇಸವಿಯವರೆಗೆ ಆಗಿದ್ದ ಪರಿಸರ ಹಾನಿ ಈ 20 ವರ್ಷಗಳಲ್ಲಿ ಆಗಿದೆ.  ಅಷ್ಟು ವೇಗದಲ್ಲಿ ಪರಿಸರ ನಾಶವಾಗುತ್ತಿದೆ. ಮಣ್ಣಿನ ಮೇಲ್ಪದರ ಸೃಷ್ಟಿಯಾಗಲು 200 ವರ್ಷಗಳು ಬೇಕು. ಅದನ್ನು ನಾವು ನಾಶಮಾಡುತ್ತಿದ್ದೇವೆ.  ಮನುಷ್ಯನ ಅವಶ್ಯಕತೆ ಗೆ ನಿಸರ್ಗ ಎಲ್ಲವನ್ನೂ ನೀಡುತ್ತದೆ, ದುರಾಸೆಗಲ್ಲ ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದಾರೆ.  ಲೋಹದ ಮೋಹ, ಬೇಕು ಎನ್ನುವ ವ್ಯಾಮೋಹ ಇಷ್ಟೆಲ್ಲಾ ಪರಿಸರ ಹಾನಿಗೆ ಕಾರಣ. ಪ್ರತಿಯೊಬ್ಬ ಮನುಷ್ಯ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂದು ಅರ್ಥಮಾಡಿಕೊಳ್ಳಬೇಕು. ಇಂದು ಪರಿಸರ ನಾಶ ಮಾಡಿದರೆ ಮುಂದಿನ ಪೀಳಿಗೆಯ ಆಸ್ತಿಯನ್ನು ಕಳ್ಳತನ ಮಾಡಿದಂತೆ ಎಂದರು. 

*ನಿಸರ್ಗದೊಂದಿಗೆ ಮನುಷ್ಯ ಬದುಕಬೇಕು*
ಸಾಲುಮರದ ತಿಮ್ಮಕ್ಕ ತಮಗೆ ಬಂದ 
ಬಳುವಳಿಯನ್ನು ಶ್ರೀಮಂತ ಗೊಳಿಸಿ, ಮೌಲ್ಯವರ್ಧನೆ ಮಾಡಿದ್ದಾರೆ. ಅವರಿಗೆ ಅತ್ಯುನ್ನತ ಪ್ರಶಸ್ತಿಗಳು ಸಂದಿವೆ.  ಪ್ರಶಸ್ತಿಗೆ ಇವರಿಂದ ಹಿರಿಮೆ ಬಂದಿದೆ. ತಿಮ್ಮಕ್ಕನ ಕಾರ್ಯದಿಂದ ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆ ಯಾಗಿದೆ. ಅವರ ಸೇವೆಯನ್ನು ಸದಾ ಕಾಲ ನೆನಪಿಸುತ್ತೇವೆ. ನಮ್ಮ ಸರ್ಕಾರ ಪ್ರಥಮ ಬಾರಿಗೆ ಪರಿಸರ ಆಯವ್ಯಯ ವನ್ನು ಘೋಷಿಸಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ.  ಪ್ರತಿ ವರ್ಷ ನಷ್ಟವಾಗುವ ಪರಿಸರವನ್ನು ತುಂಬಿಕೊಡಲು ಕಾರ್ಯಕ್ರಮ ರೂಪಿಸಲಾಗುವುದು. ಅಗತ್ಯ ಬಿದ್ದರೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದೇನೆ ಎಂದರು.  ನಮ್ಮ ನದಿ, ಕಾಡು, ಗುಡ್ಡಗಾಡುಗಳು, ಸಸ್ಯ ಸಂಪತ್ತು ಉಳಿಯಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ನಿಸರ್ಗದ ಜೊತೆ  ಮನುಷ್ಯ ನಡೆಯಬೇಕು. ಅದರ ವಿರುದ್ಧ ಹೋದರೆ ಮಾನವನಿಗೆ ಕಷ್ಟವಿದೆ ಎಂದರು.

Post a Comment

Previous Post Next Post