ಜುಲೈ 18 ರಂದು ರಾಷ್ಟ್ರಪತಿ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ

 ಜುಲೈ 17, 2022


,

8:44PM

ಜುಲೈ 18 ರಂದು ರಾಷ್ಟ್ರಪತಿ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರದಂದು ಭಾರತದ 16 ನೇ ರಾಷ್ಟ್ರಪತಿಯ ಚುನಾವಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳ ಆವರಣದಲ್ಲಿ ಮತದಾನ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಎನ್‌ಡಿಎ ಅಭ್ಯರ್ಥಿಯಾಗಿದ್ದು, ಯಶವಂತ್ ಸಿನ್ಹಾ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದಾರೆ. 776 ಸಂಸತ್ ಸದಸ್ಯರು ಮತ್ತು ನಾಲ್ಕು ಸಾವಿರದ ಮೂವತ್ತಮೂರು ಶಾಸಕರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ ನಾಲ್ಕು ಸಾವಿರದ 809 ಆಗಿರುತ್ತದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.


ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ಮತದಾನ ಮತ್ತು ಎಣಿಕೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ 37 ವೀಕ್ಷಕರನ್ನು ನೇಮಿಸಿದೆ. ಆಯೋಗವು ರಾಜ್ಯ ಮತ್ತು ಯುಟಿ ವಿಧಾನಸಭೆಗಳಲ್ಲಿ 30 ಮತದಾನದ ಸ್ಥಳಗಳಲ್ಲಿ ಮತದಾನದ ಮೇಲ್ವಿಚಾರಣೆಗೆ ಒಬ್ಬ ವೀಕ್ಷಕರನ್ನು ಮತ್ತು ಸಂಸತ್ತಿನ ಭವನಕ್ಕೆ ಇಬ್ಬರು ವೀಕ್ಷಕರನ್ನು ನಿಯೋಜಿಸಿದೆ. ನಿಯೋಜಿತ ವೀಕ್ಷಕರು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಂದ ಮತಪೆಟ್ಟಿಗೆಗಳು ಮತ್ತು ಚುನಾವಣಾ ಸಾಮಗ್ರಿಗಳ ಭದ್ರತೆ ಮತ್ತು ಸಾಗಣೆಗಾಗಿ ಮಾಡಿದ ಚುನಾವಣಾ ವ್ಯವಸ್ಥೆಗಳ ಪರಿಶೀಲನೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಸಂಸತ್ ಭವನದಲ್ಲಿ ನಿಯೋಜಿತವಾಗಿರುವ ವೀಕ್ಷಕರು ಇದೇ ತಿಂಗಳ 21 ರಂದು ಮತ ಎಣಿಕೆ ಪ್ರಕ್ರಿಯೆಯನ್ನೂ ನೋಡಿಕೊಳ್ಳಲಿದ್ದಾರೆ.

Post a Comment

Previous Post Next Post