ಇಂದಿನ ಪಂಚಾಂಗ25 - 7 - 2022ಸೋಮವಾರ, ಈ ಮುಂದಿನ ಸುಮಾರು ೪ ತಿಂಗಳು ಕಾಲ ಅಂದರೆ ನವೆಂಬರ್ ೨೪ ತನಕ ಗುರು ವಕ್ರ .ಶ್ರೀ ಗುರು ಸೇವೆ ಮಾಡೋಣ

ಇಂದಿನ ಪಂಚಾಂಗ

25 - 7 - 2022
ಸೋಮವಾರ
ಶ್ರೀ ಶುಭಕೃತ್ ನಾಮ ಸಂವತ್ಸರ
ದಕ್ಷಿಣಾಯನೇ
ಗ್ರೀಷ್ಮ ಋತು
ಆಷಾಢ ಮಾಸ
ಕೃಷ್ಣ ಪಕ್ಷ
ದ್ವಾದಶಿ ತಿಥಿ
ಇಂದು ವಾಸರ
ಮೃಗಶಿರ ನಕ್ಷತ್ರ
ಸೂರ್ಯರಾಶಿ ಕಟಕ
ಚಂದ್ರ ರಾಶಿ ವೃಷಭ
ಸೂರ್ಯೋದಯ 06-04
ಸೂರ್ಯಾಸ್ತ 06-47
ದಿನ ವಿಶೇಷ ಸೋಮ ಪ್ರದೋಶ
ರಾಹುಕಾಲ 07-40 am ನಿಂದ 09-15 am ವರೆಗೆ .
ಯಮಗಂಡಕಾಲ 10-51 ನಿಂದ 12-26 pm ವರೆಗೆ .
ಗುಳಿಕಕಾಲ 02-01 pm ನಿಂದ 03-37 pm ವರೆಗೆ .

ವಂದನೆಗಳು.

ಈ ಮುಂದಿನ ಸುಮಾರು  ೪ ತಿಂಗಳು ಕಾಲ ಅಂದರೆ ನವೆಂಬರ್ ೨೪ ತನಕ ಗುರು ವಕ್ರ .
ಜೂನ್ 28/29 ರಿಂದ ಗುರು ವಕ್ರದಲ್ಲಿ ಸಂಚಾರ ಮೀನ ರಾಶಿ 

ಆಸ್ತಿಕ ಬಂಧುಗಳಲ್ಲಿ ಮನವಿ .

ಮುಂದಿನ ಈ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀವು ಏನಾದ್ರೂ ಸಾಧನೆ , ಅಪ್ಪ್ರೈಸಲ್ ,ಉನ್ನತ ಸ್ಥಾನ ಮಾನ ,ಹಣಕಾಸು ,ವಿದ್ಯೆ ಅಂಥದು ನಿರೀಕ್ಷೆ ಇದ್ದರೆ ಅನುಕೂಲ ತಕ್ಕ ಮಟ್ಟಿಗೆ ಸಿಗದು . ಹೆಚ್ಚಿನ ಪರಿಶ್ರಮ ಬೇಕಿದೆ . 

ಕುಡಿತ ದಿಂದ ತೊಂದರೆ , ಶುಗರ್ ಹೆಚ್ಚಿಗೆ ಆಗುವುದು .ಹೆಚ್ಚಿಗೆ ತಿನ್ನುವಂತೆ ಆಗಿ ಕಷ್ಟ ಅನುಭವಿಸವುದು .ಮುಖ್ಯ ತೂಕ ಬೇಡ ಅಂದ್ರು ಹೆಚ್ಚಾಗುವುದು .ಅಲ್ಲಲ್ಲಿ ಧರ್ಮ ವಿಚಾರದಲ್ಲಿ ಮತ್ತೆ ತೊಂದರೆ ಇರಬಹುದು . 

ಹೂಡಿಕೆ ವಿಚಾರದಲ್ಲಿ ಸಂಕಷ್ಟ ಆಗಬಹುದು . ಆರ್ಥಿಕ ಇಲಾಖೆ ಏನಾದ್ರು ತಪ್ಪು ಮಾಡುವ ಸಾಧ್ಯತೆ .

ಮೇಷ ,ಮಿಥುನ , ಸಿಂಹ , ,ತುಲಾ,ಧನಸ್ಸು,ಮಕರ ,ಮೀನ  ರಾಶಿ / ಲಗ್ನದವರು ಎಚ್ಚರಿಕೆ 

ಅದರಲ್ಲೂ ಮೇಷ ,ಸಿಂಹ,ತುಲಾ,ಮಕರ ಲಗ್ನ ಹೆಚ್ಚಿನ ಎಚ್ಚರಿಕೆ ಇರಬೇಕು . 

ಮುಖ್ಯವಾಗಿ ಗುರು ಪೀಠ ಕ್ಕೆ ಸಂಬಂಧಿಸಿದವ್ರು ,ಹಣಕಾಸು ವ್ಯವಹಾರ ಮಾಡುವವರು ,ಆರ್ಥಿಕ ಸಂಬಂಧಿಸಿದವ್ರು .

ಶೇರ್ ಮಾರ್ಕೆಟ್ ನಲ್ಲಿ ಬಹಳ ಏರಿಳಿತ ಇರಲಿದೆ .ಹೂಡಿಕೆ ಎಚ್ಚರಿಕೆ ಇರಲಿ .

ಒಟ್ಟಾರೆ ಗುರು ಸೇವೆ ಅಗತ್ಯ ಇದೆ .ಗುರುಗಳ ದರ್ಶನ ಮಾರ್ಗದರ್ಶನ ಅನುಕೂಲಕರ .ಗುರು ದತ್ತಾತ್ರೇಯರು ,ದಕ್ಷಿಣಾಮೂರ್ತಿ ಪ್ರಾರ್ಥನೆ ,ಶ್ರೀರಾಘವೇಂದ್ರ ಸ್ವಾಮಿಗಳ ಸೇವೆ , ಶ್ರೀ ಶ್ರೀಧರ ಸ್ವಾಮಿಗಳ ಸೇವೆ ಅನುಕೂಲಕರ .ಹಾಗೆಯೇ ಗೋ ಸೇವೆ ಸಹ ಅನುಕೂಲಕರ .ಗುರು ಚರಿತ್ರೆ ಪಾರಾಯಣ ಸಹ ಅನುಕೂಲಕರ .

Post a Comment

Previous Post Next Post