15 ವರ್ಷದ ಹುಡುಗಿಯನ್ನು ಗರ್ಭಿಣಿ ಮಾಡಿದ 63ವರ್ಷದ ಮುದುಕ !
ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಆದರೇ ಕಾಮಕ್ಕೆ ಕಣ್ಣು ಮಾತ್ರವಲ್ಲ ವಯಸ್ಸಿನ ಮಿತಿಯೂ ಇಲ್ಲ ಎಂಬುವುದನ್ನು ಇತ್ತೀಚಿನ ಘಟನೆಗಳಿಂದ ತಿಳಿಯಬಹುದು. ತಮಿಳು ನಾಡಿನ ಚನ್ನೈನಲ್ಲಿ 63ವರ್ಷದ ಮುದುಕನೊರ್ವ ತನ್ನ ಮೊಮ್ಮಗಳ ವಯಸ್ಸಿನ ಹುಡುಗಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದಾನೆ. ಹತ್ತನೇ ತರಗತಿ ಓದುತ್ತಿರುವ 15ವರ್ಷದ ಹುಡುಗಿ ಮೇಲೆ, ಆಕೆಯ ಪಕ್ಕದ ಮನೆಯವನೇ ಅದ ಮುದುಕ ಕಾಮ ತೃಷೆ ತೀರಿಸಿ ಕೊಂಡಿದ್ದಾನೆ. ಶುಕ್ರವಾರ ಹುಡುಗಿಗೆ ಹೊಟ್ಟೆ ನೋವು ಶುರುವಾದ ಹಿನ್ನೆಲೆಯಲ್ಲಿ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಲಕಿ 2ತಿಂಗಳ ಗರ್ಭಿಣಿ ಎಂಬುವದನ್ನು ವೈದ್ಯರು ತಿಳಿಸಿದ್ದಾರೆ. ಈ ವೇಳೆ ಮುದುಕನ ವಿಕೃತ ಕೆಲಸ ಬೆಳಕಿಗೆ ಬಂದಿದೆ.ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
Post a Comment