*ಆಂಧ್ರದ ಚಿತ್ತೂರು ಬಳಿ ಭೀಕರ ಅಪಘಾತ : ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯ ಪಿಎಸ್ಐ ಅವಿನಾಶ ಸೇರಿ ಮೂವರ ಸಾವು*
ಬೆಂಗಳೂರು : ಜುಲೈ 24 ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೂತನಪೆಟ್ಟು ತಾಲೂಕಿನ ಪಿ. ಕೊತ್ತಕೊಟ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭಿಸಿದ್ದು, ಬೆಂಗಳೂರಿನ ಶಿವಾಜಿನಗರದ ಪೊಲೀಸ್ ಅಧಿಕಾರಿ ಪಿಎಸ್ಐ ಅವೀನಾಶ, ಪೊಲೀಸ್ ಕಾನ್ಸಟೇಬಲ್ ಅನೀಲ ಮತ್ತು ಓರ್ವ ಖಾಸಗಿ ವ್ಯಕ್ತಿ ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಾಂಜಾ ಕೇಸ್ ಆರೋಪಿಗಳನ್ನು ಬಂಧಿಸಲು ಶಿವಾಜಿನಗರ ಠಾಣೆ ಪೊಲೀಸರು ಖಾಸಗಿ ಇನೋವಾ ಕಾರು ಬಾಡಿಗೆಗೆ ಪಡೆದು, ಓರ್ವ ಪಿಎಸ್ಐ ಸೇರಿ ಆರು ಮಂದಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಚಿತ್ತೂರು ಬಳಿಯ ಪೂತಲಪಟ್ಟು ಮಂಡಲ, ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಅಪಘಾತವಾಗಿದೆ. ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಕಾನ್ಸ್‌ಟೇಬಲ್ ಶರಣಬಸವ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಚಿತ್ತೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಾನ್ಯ ಗೃಹಸಚಿವ ಶ್ರೀ ಆರಗ ಜ್ಞಾನೇಂದ್ರ ಕಂಬನಿ: ಅಪಘಾತ ದಲ್ಲಿ ಪೊಲೀಸ್ ಸಿಬ್ಬಂದಿಗಳ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಕ್ರಕೈಗೊಳ್ಳುವಂತೆ ಸೂಚಿಸಿದ್ದಾರೆ.
ಗಾಯಗೊಂಡ ಸಿಬ್ಬಂದಿಗಳ ನೆರವಿಗೆ ಧಾವಿಸಿ, ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು ಎಂದೂ ಸೂಚಿಸಿದ್ದಾರೆ.
ಸಾರ್ವಜನಿಕರ ಪ್ರಾಣ ಹಾಗೂ ಆಸ್ತಪಾಸ್ತಿಗಳ ರಕ್ಷಿಸುವ ಕಾರ್ಯದಲ್ಲಿ, ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವುದು ಅತ್ಯಂತ ನೋವು ತಂದಿದೆ, ಎಂದೂ ಸಚಿವರು ಹೇಳಿದ್ದಾರೆ.
ಶಿವಾಜಿನಗರ ಠಾಣೆಯಲ್ಲಿ ನೀರವ ಮೌನ
ಇನ್ನು ತಮ್ಮ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ಶಿವಾಜಿನಗರ ಠಾಣೆ ಬಳಿ ನೀರವ ಮೌನ ನೆಲೆಸಿದೆ. ತಮ್ಮ ಸಹೋದ್ಯೋಗಿಗಳನ್ನು ನೆನೆದು ಪೊಲೀಸ್ ಸಿಬ್ಬಂದಿ ಕಣ್ಣೀರು ಹಾಕುತ್ತಿದ್ದಾರೆ.
✍
ಸಂಜೀವ ಕೋಲಕಾರ,
ಬೆಂಗಳೂರು
ಹರಪನಹಳ್ಳಿ : ಡೀಸೆಲ್ ಟ್ಯಾಂಕರ್ ವೊಂದು ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಹರಪನಹಳ್ಳಿಯ ರೈಲ್ವೆಗೇಟ್ ಬಳಿ ನಡದಿದೆ.ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಈ ವೇಳೆ ಬೆಂಕಿಯಿಂದಾಗಿ ಬೈಕ್ ಸವಾರ ಸಜೀವ ದಹನವಾಗಿದ್ದಾರೆ. ಟ್ಯಾಂಕರ್ ಚಾಲಕ ಲಾರಿಯಿಂದ ಹಾರಿ ಬಚಾವ್ ಆಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
Post a Comment