ಗಣೇಶ ಚತುರ್ಥಿಯ ಮುಹೂರ್ತ
ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಆಗಸ್ಟ್ 31 ಬುಧವಾರಪೂಜೆಗೆ ಮುಹೂರ್ತ: ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1.38 ರವರೆಗೆ💐
ಪೂಜೆಯ ಆರಂಭದಲ್ಲಿ ಮಾಡಬೇಕಾದ ಪ್ರಾರ್ಥನೆ
‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಪೂಜೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ. ಪೂಜೆ ಮಾಡುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿರಲಿ. ನೀನು ಪ್ರತ್ಯಕ್ಷ ನನ್ನೆದುರು ಆಸೀನನಾಗಿ? ಮತ್ತು ನಾನು ನಿನ್ನ ಪೂಜೆ ಮಾಡು ತ್ತಿದ್ದೇನೆ, ಎಂಬ ಭಾವವು ನನ್ನಲ್ಲಿ ಸತತವಾಗಿರಲಿ. ಪೂಜೆಯಲ್ಲಿ ಬರಬಹುದಾದ ವಿಘ್ನಗಳು ದೂರವಾಗಲಿ. ಪೂಜೆಯಲ್ಲಿನ ಚೈತನ್ಯವು ನನಗೆ ಮತ್ತು ಉಪಸ್ಥಿತರೆಲ್ಲರಿಗೂ ದೊರಕಲಿ.’
ಕುಂಕುಮತಿಲಕ ಹಚ್ಚುವುದು: ಪೂಜಕನು (ಯಜಮಾನನು) ಮೊದಲು ತನಗೆ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಬೇಕು.
ಆಚಮನ ಮಾಡುವುದು
ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಎಂಬ ಶಬ್ದವನ್ನು ಉಚ್ಚರಿಸಿ ಆ ನೀರನ್ನು ಕುಡಿಯಬೇಕು
೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |
ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.
೪. ಶ್ರೀ ಗೋವಿಂದಾಯ ನಮಃ |
ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆ ಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.
೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |
ಪುನಃ ಆಚಮನ ಮಾಡಿ ೨೪ ಹೆಸರುಗಳನ್ನು ಹೇಳಬೇಕು. ನಂತರ ಪಂಚಪಾತ್ರೆಯಲ್ಲಿನ ಎಲ್ಲ ನೀರನ್ನು ಹರಿವಾಣದಲ್ಲಿ ಸುರಿಯಬೇಕು ಮತ್ತು ಎರಡೂ ಕೈಗಳನ್ನು ಒರೆಸಿ ಎದೆಯ ಬಳಿ ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು.
ದೇವತಾಸ್ಮರಣ
ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.
ಇಷ್ಟದೇವತಾಭ್ಯೋ ನಮಃ | ಅರ್ಥ: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.
ಕುಲದೇವತಾಭ್ಯೋ ನಮಃ | ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.
ಗ್ರಾಮದೇವತಾಭ್ಯೋ ನಮಃ | ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.
ಸ್ಥಾನದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.
ವಾಸ್ತುದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.
ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.
ಅವಿಘ್ನಮಸ್ತು| ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ.
‘ದೇಶಕಾಲ’ ಮತ್ತು ‘ಸಂಕಲ್ಪ’
‘ದೇಶಕಾಲ’ ಉಚ್ಚರಿಸಿದ ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕಾಗಿರುತ್ತದೆ.
ದೇಶಕಾಲ: ಪೂಜಕನು ತನ್ನ ಎರಡೂ ಕಣ್ಣುಗಳಿಗೆ ನೀರನ್ನು ಹಚ್ಚಿ ಮುಂದಿನ ‘ದೇಶಕಾಲ’ವನ್ನು ಹೇಳಬೇಕು.
ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತವಾರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮಚರಣೇ ಜಮ್ಬುದ್ವೀಪೇ ಭರತವರ್ಷೇ ಭರತಖಂಡೇ ದಕ್ಷಿಣಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ದಣ್ಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಶುಭಕೃತ್ ನಾಮ ಸಂವತ್ಸರೇ ದಕ್ಷಿಣಾಯನೇ ವರ್ಷಾ ಋತೌ ಭಾದ್ರಪದ ಮಾಸೇ ಶುಕ್ಲ ಪಕ್ಷೇ ಚತುರ್ಥ್ಯಾಂ ತಿಥೌ ಬುಧ ವಾಸರೇ ಚಿತ್ರಾ ದಿವಸ ನಕ್ಷತ್ರೇ ಶುಕ್ಲ ಯೋಗೇ (22.47 ವರೆಗೆ) ವಿಷ್ಟಿ ಕರಣೇ (15.22 ನಂತರ ಬವ ಕರಣೇ) ಕನ್ಯಾ ಸ್ಥಿತೇ ವರ್ತಮಾನೇ ಶ್ರೀಚಂದ್ರೇ (12.04 ನಂತರ ತುಲಾ) ಸಿಂಹ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ ಮೀನ ಸ್ಥಿತೇ ವರ್ತಮಾನೇ ಶ್ರೀದೇವಗುರೌ ಮಕರ ಸ್ಥಿತೇ ವರ್ತಮಾನೇ ಶ್ರೀಶನೈಶ್‍ಚರೌ ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಂ ಗ್ರಹ-ಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…
‘ದೇಶಕಾಲ’ದ ಸಂದರ್ಭದಲ್ಲಿನ ಸೂಚನೆ
೧. ಯಾವ ಪ್ರದೇಶಕ್ಕೆ ‘ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ’ ಎಂಬ ವರ್ಣನೆಯು ಅನ್ವಯಿಸುವುದಿಲ್ಲವೋ ಅಥವಾ ಪ್ರದೇಶದ ‘ದೇಶಕಾಲ’ವು ಪೂಜಕನಿಗೆ ಗೊತ್ತಿಲ್ಲದಿದ್ದರೆ, ಆಗ ಮೇಲೆ ಉಲ್ಲೇಖಿಸಿದ ಶಬ್ದಗಳ ಜಾಗದಲ್ಲಿ ‘ಆರ್ಯಾವರ್ತೇ ದೇಶೇ’ ಎಂದು ಹೇಳಬೇಕು.
೨. ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು ಮತ್ತು ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕು.
ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ|
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್||
ಅರ್ಥ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.
ಸಂಕಲ್ಪ
ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಂಕಲ್ಪ’ವನ್ನು ಉಚ್ಚರಿಸಬೇಕು.
ಮಮ ಆತ್ಮನಃ ಪರಮೇಶ್ವರಾಜ್ಞಾರೂಪಸಕಲಶಾಸ್ತ್ರ
ಶ್ರುತಿಸ್ಮೃತಿಪುರಾಣೋಕ್ತಫಲಪ್ರಾಪ್ತಿದ್ವಾರಾ ಶ್ರೀಪರಮೇಶ್ವರ
ಪ್ರೀತ್ಯರ್ಥಂ ಮಮ ಶ್ರೀಸಿದ್ಧಿವಿನಾಯಕಪ್ರೀತಿದ್ವಾರಾಸಕಲ್ಪ್ಯ
ಪಾಪಕ್ಷಯಪೂರ್ವಕಂಸರ್ವಕರ್ಮನಿರ್ವಿಘ್ನತ್ವಪುತ್ರಪೌತ್ರಾಭಿವೃದ್ಧಿ
ಮಹೈಶ್ವರ್ಯವಿದ್ಯಾವಿಜಯಸಂಪದಾಧಿಕಲ್ಪೋಕ್ತಫಲಸಿದ್ಧ್ಯರ್ಥಮ್
ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕ
ದೇವತಾಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರೈಃ
ಪೂಜನಮಹಂ ಕರಿಷ್ಯೇ | ತತ್ರಾದೌ ನಿರ್ವಿಘ್ನತಾಸಿದ್ಧ್ಯರ್ಥಂ
ಶ್ರೀ ಮಹಾಗಣಪತಿಪೂಜನಂ ಕರಿಷ್ಯೇ | ಶರೀರಶುದ್ಧ್ಯರ್ಥಂ ವಿಷ್ಣುಸ್ಮರಣಂ ಕರಿಷ್ಯೇ |
ಕಲಶಶಂಖಘಂಟಾದೀಪಪೂಜನಂ ಚ ಕರಿಷ್ಯೇ ||
‘ಸಂಕಲ್ಪ’ದ ಕುರಿತಾದ ಸೂಚನೆ : ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಿಂದ ಕೆಳಗೆ ಬಿಡುವಾಗ ‘ಕರಿಷ್ಯೇ’ ಎಂದು ಹೇಳಬೇಕು.
ಶ್ರೀ ಮಹಾಗಣಪತಿಪೂಜೆ
ಮೊದಲು ಮಣ್ಣಿನ ಮೂರ್ತಿಯ ಎದುರು ಅಥವಾ ಉಪಲಬ್ಧವಿರುವ ಸ್ಥಳಕ್ಕನುಸಾರ ಹರಿವಾಣ ಅಥವಾ ಬಾಳೆಯ ಎಲೆಯನ್ನಿಡಬೇಕು. ಅದರ ಮೇಲೆ ಅಕ್ಕಿಯ ರಾಶಿಯನ್ನು ಹಾಕಬೇಕು. ಅದರ ಮೇಲೆ ತೆಂಗಿನಕಾಯಿ ಯನ್ನು ಅದರ ಜುಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ನಂತರ ಚಂದನಾದಿಉಪಚಾರಗಳಿಂದ ಶ್ರೀ ಮಹಾಗಣಪತಿಯ ಪೂಜೆಯನ್ನು ಮಾಡಬೇಕು.
ಧ್ಯಾನ : ನಮಸ್ಕಾರದ ಮುದ್ರೆಮಾಡಿ ಕೈಗಳನ್ನು ಎದೆಯ ಬಳಿ ಇಡಬೇಕು ಮತ್ತು ಕಣ್ಣುಗಳನ್ನು ಮುಚ್ಚಿಶ್ರೀ ಮಹಾಗಣಪತಿಯ ರೂಪವನ್ನು ಮನಸ್ಸಿನಲ್ಲಿ ಸ್ಮರಿಸಬೇಕು ಮತ್ತು ಮುಂದಿನ ಶ್ಲೋಕವನ್ನು ಪಠಿಸಬೇಕು.
ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಅರ್ಥ: ಕೆಟ್ಟ ಮಾರ್ಗದಲ್ಲಿ ಹೋಗುವವರನ್ನು ಸರಿದಾರಿಗೆ ತರುವ, ಪ್ರಚಂಡ ಶರೀರವಿರುವ ಮತ್ತು ಕೋಟಿ ಸೂರ್ಯರ ತೇಜವಿರುವ ಹೇ ಗಣಪತಿದೇವಾ, ನನ್ನ ಕಾರ್ಯಗಳಲ್ಲಿನ ವಿಘ್ನಗಳನ್ನು ನೀನು ಶಾಶ್ವತವಾಗಿ ದೂರಗೊಳಿಸು. ನಾನು ನಿನಗೆ ನಮಸ್ಕರಿಸಿ, ನಿನ್ನ ಧ್ಯಾನ ಮಾಡುತ್ತೇನೆ.
ಶ್ರೀ ಮಹಾಗಣಪತಯೇ ನಮಃ | ಧ್ಯಾಯಾಮಿ ||
ಆವಾಹನೆ: ಬಲಗೈಯಲ್ಲಿ (ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಂದುಗೂಡಿಸಿ) ಅಕ್ಷತೆಗಳನ್ನು ತೆಗೆದು ಕೊಂಡು ‘ಆವಾಹಯಾಮಿ’ ಎನ್ನುವಾಗ ಆ ತೆಂಗಿನಕಾಯಿಯ ರೂಪದಲ್ಲಿನ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.
ಶ್ರೀಮಹಾಗಣಪತಯೇ ನಮಃ | ಮಹಾಗಣಪತಿಂ ಸಾಂಗಂ ಸಪರಿವಾರಂ ಸಾಯುಧಂ ಸಶಕ್ತಿಕಂ ಆವಾಹಯಾಮಿ ||
ಆಸನ: ಬಲಗೈಯಲ್ಲಿ ಅಕ್ಷತೆಗಳನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಅವುಗಳನ್ನು ಶ್ರೀ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.
ಶ್ರೀ ಮಹಾಗಣಪತಯೇ ನಮಃ | ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||
ಚಂದನಾದಿ ಉಪಚಾರ: ದೇವರಿಗೆ ಬಲಗೈಯ ಅನಾಮಿಕಾದಿಂದ ಗಂಧವನ್ನು (ಚಂದನ) ಹಚ್ಚಬೇಕು. ಅನಂತರ ಮುಂದಿನ ನಾಮಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದವನ್ನು ಉಚ್ಚರಿಸುತ್ತಾ ಕಂಸದಲ್ಲಿ ನೀಡಿದಂತೆ ಉಪಚಾರ ವನ್ನು ದೇವರ ಚರಣಗಳಲ್ಲಿ ಅರ್ಪಿಸಬೇಕು.
ಶ್ರೀ ಮಹಾಗಣಪತಯೇ ನಮಃ | ಚಂದನಂ ಸಮರ್ಪಯಾಮಿ || (ಗಂಧವನ್ನು ಹಚ್ಚಬೇಕು.)
ಋದ್ಧಿಸಿದ್ಧಿಭ್ಯಾಂ ನಮಃ | ಹರಿದ್ರಾಂ ಸಮರ್ಪಯಾಮಿ || (ಅರಿಶಿನವನ್ನು ಅರ್ಪಿಸಬೇಕು.)
ಋದ್ಧಿಸಿದ್ಧಿಭ್ಯಾಂ ನಮಃ | ಕುಂಕುಮಂ ಸಮರ್ಪಯಾಮಿ || (ಕುಂಕುಮವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಋದ್ಧಿಸಿದ್ಧಿಭ್ಯಾಂ ನಮಃ | ಸಿಂದೂರಂ ಸಮರ್ಪಯಾಮಿ || (ಸಿಂದೂರವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಅಲಂಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ || (ಅಕ್ಷತೆಗಳನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಪುಷ್ಪಂ ಸಮರ್ಪಯಾಮಿ || (ಹೂವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ದೂರ್ವಾಂಕುರಾನ್ ಸಮರ್ಪಯಾಮಿ || (ದೂರ್ವೆಯನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಧೂಪಂ ಸಮರ್ಪಯಾಮಿ || (ಊದುಬತ್ತಿಯಿಂದ ಬೆಳಗಬೇಕು.)
ಶ್ರೀ ಮಹಾಗಣಪತಯೇ ನಮಃ | ದೀಪಂ ಸಮರ್ಪಯಾಮಿ|| (ನೀಲಾಂಜನದಿಂದ ಬೆಳಗಬೇಕು.)
ಬಲಗೈಯಲ್ಲಿ ೨ ದೂರ್ವೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ದೂರ್ವೆಗಳಿಂದ ಆ ನೀರನ್ನು ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ದೂರ್ವೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು ಮತ್ತು ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಪವಾದ: ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಮುಂದಿನ ಮಂತ್ರವನ್ನು ಪಠಿಸಬೇಕು.
ಪ್ರಾಣಾಯ ನಮಃ | ಅಪಾನಾಯ ನಮಃ | ವ್ಯಾನಾಯ ನಮಃ | ಉದಾನಾಯ ನಮಃ | ಸಮಾನಾಯ ನಮಃ | ಬ್ರಹ್ಮಣೇ ನಮಃ ||
ಟಿಪ್ಪಣಿ : ವೇದೋಕ್ತ ಪೂಜಾವಿಧಿಯಲ್ಲಿ ‘ಪ್ರಾಣಾಯ ನಮಃ |’ ಎಂಬುದರ ಬದಲು ‘ಓಂ ಪ್ರಾಣಾಯ ಸ್ವಾಹಾ |’ ಎಂದು ಮಂತ್ರವನ್ನು ಹೇಳುತ್ತಾರೆ.
ಕೈಯಲ್ಲಿರುವ ಒಂದು ದೂರ್ವೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ದೂರ್ವೆಯನ್ನು ಶ್ರೀ ಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರವನ್ನು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.
ಶ್ರೀಮಹಾಗಣಪತಯೇ ನಮಃ | ನೈವೇದ್ಯಂ ಸಮರ್ಪಯಾಮಿ || ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ || (ಗಂಧ್ಳ ಹೂವುಗಳನ್ನು ಅರ್ಪಿಸಬೇಕು.) ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ ||
ನಮಸ್ಕಾರದ ಮುದ್ರೆ ಮಾಡಿ ಪ್ರಾರ್ಥನೆ ಮಾಡಬೇಕು.
ಕಾರ್ಯಂ ಮೇ ಸಿದ್ಧಿಮಾಯಾತು ಪ್ರಸನ್ನೇ ತ್ವಯಿ ಧಾತರಿ|ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ ||
ಅರ್ಥ : ಹೇ ಗಣನಾಯಕಾ, ನೀನು ನನ್ನ ಮೇಲೆ ಪ್ರಸನ್ನನಾಗು. ಹಾಗೆಯೇ ನನ್ನ ಕಾರ್ಯದಲ್ಲಿನ ಎಲ್ಲ ವಿಘ್ನಗಳನ್ನು ದೂರಗೊಳಿಸಿ ನೀನೇ ನನ್ನ ಕಾರ್ಯವನ್ನು ಪೂರ್ಣಗೊಳಿಸು.
ಅನಂತರ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ‘ಪ್ರೀಯತಾಮ್’ ಎಂಬ ಶಬ್ದವನ್ನು ಹೇಳುವಾಗ ಅದನ್ನು ಹರಿವಾಣದಲ್ಲಿ ಬಿಡಬೇಕು.
ಅನೇನ ಕೃತಪೂಜನೇನ ಶ್ರೀ ಮಹಾಗಣಪತಿಃ ಪ್ರೀಯತಾಮ್ |
ಶ್ರೀವಿಷ್ಣುಸ್ಮರಣೆ: ಎರಡೂ ಕೈಗಳನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸ ಬೇಕು. ನಂತರ ೯ ಸಲ ‘ವಿಷ್ಣವೇ ನಮೋ’ ಎನ್ನಬೇಕು ಮತ್ತು ಕೊನೆಯಲ್ಲಿ ‘ವಿಷ್ಣವೇ ನಮಃ |’ ಎಂದು ಹೇಳಬೇಕು.
ಪೂಜೆಗೆ ಸಂಬಂಧಿಸಿದ ಉಪಕರಣಗಳ ಪೂಜೆ
ಕಲಶಪೂಜೆ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಅರ್ಥ: ಹೇ ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳೇ, ಈ ನೀರಿನಲ್ಲಿ ನಿಮ್ಮ ವಾಸ್ತವ್ಯವಿರಲಿ.
ಕಲಶೇ ಗಂಗಾದಿತೀರ್ಥಾನ್ಯಾವಾಹಯಾಮಿ ||ಕಲಶದೇವತಾಭ್ಯೋ ನಮಃ |
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ||
ಕಲಶದಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.
ಶಂಖಪೂಜೆ
ಶಂಖದೇವತಾಭ್ಯೋ ನಮಃ | ಸರ್ವೋಪಚಾರಾರ್ಥೇ ಗಂಧಪುಷ್ಪಂ ಸಮರ್ಪಯಾಮಿ ||
ಅರ್ಥ: ಹೇ ಶಂಖದೇವತೇ, ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ ಹೂವುಗಳನ್ನು ಅರ್ಪಿಸುತ್ತೇನೆ.
(ಪ್ರತಿಯೊಂದು ಮನೆಯಲ್ಲಿ ಶಂಖ ಇರುತ್ತದೆ ಎಂದೇನಿಲ್ಲ. ಯಾರ ಮನೆಯಲ್ಲಿ ಶಂಖವಿದೆಯೋ, ಅವರು ಮೇಲಿನಂತೆ ಪೂಜೆ ಮಾಡಬೇಕು.)
ಘಂಟೆಯ ಪೂಜೆ
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ ||
ಅರ್ಥ: ದೇವತೆಗಳು ಬರಬೇಕು ಮತ್ತು ರಾಕ್ಷಸರು ತೊಲಗಬೇಕು, ಇದಕ್ಕಾಗಿ ದೇವತೆಗಳ ಆಗಮನವನ್ನು ಸೂಚಿಸುವ ನಾದ ಮಾಡುವ ಘಂಟಾದೇವತೆಗೆ ವಂದಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ.
ಘಂಟಾಯೈ ನಮಃ |ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ದೀಪಪೂಜೆ
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುತ್ರಾಂಶ್ಚ ಮತಿಂ ಶಾಂತಿಂ ಪ್ರಯಚ್ಛ ಮೇ||
ದೀಪದೇವತಾಭ್ಯೋ ನಮಃ|ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ಅರ್ಥ: ಹೇ ದೀಪದೇವತೆ, ನೀನು ಬ್ರಹ್ಮಸ್ವರೂಪ, ಎಲ್ಲ ಜ್ಯೋತಿಗಳ ಅವ್ಯಯನಾದಂತಹ (ನಾಶವಾಗದ) ಸ್ವಾಮಿ. ನೀನು ನನಗೆ ಆರೋಗ್ಯ, ಪುತ್ರಸೌಖ್ಯ, ಬುದ್ಧಿ ಮತ್ತು ಶಾಂತಿಯನ್ನು ಕೊಡು. ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)
ಮಂಟಪಪೂಜೆ
ಮುಂದಿನ ಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದದ ಸಮಯದಲ್ಲಿ ಮಂಟಪದ ಮೇಲೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.
ಮಂಡಪದೇವತಾಭ್ಯೋ ನಮಃ |ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ
ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅರ್ಥ: ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.
ಮೇಲಿನ ಮಂತ್ರವನ್ನು ಪಠಿಸಲು ಕಠಿಣವಾದರೆ ‘ಶ್ರೀ ಪುಂಡರೀಕಾಕ್ಷಾಯ ನಮಃ|’ ಎಂಬ ನಾಮಮಂತ್ರ ಹೇಳುತ್ತಾ ಮೇಲಿನ ಕೃತಿ ಮಾಡಬೇಕು. ಅನಂತರ ತುಳಸೀದಳವನ್ನು ಹರಿವಾಣದಲ್ಲಿ ಬಿಡಬೇಕು.
ಮೋದಕ ಬಾಗಿನದಾನ ಮಂತ್ರ: ಒಂದು ಬಾಳೆಎಲೆಯ ಮೇಲೆ ಅಥವಾ ತಟ್ಟೆಯಲ್ಲಿ ೧೦ ಅಥವಾ ೨೧ ಮೋದಕಗಳನ್ನಿಡಬೇಕು. ಅದರ ಮೇಲೆ ಬಾಳೆಎಲೆ ಅಥವಾ ತಟ್ಟೆಯನ್ನು ಮಗುಚಿ ಇಡಬೇಕು. ಅದರ ಮೇಲೆ ಗಂಧ ಹೂವು ಅರ್ಪಿಸಬೇಕು. ನಂತರ ಮುಂದಿನ ಮಂತ್ರವನ್ನು ಪಠಿಸುತ್ತಾ ಬ್ರಾಹ್ಮಣನಿಗೆ ಮೋದಕದ ಬಾಗಿನದಾನವನ್ನು ಕೊಡಬೇಕು.
ವಿನಾಯಕ ನಮಸ್ತುಭ್ಯಂ ಸತತಂ ಮೋದಕಪ್ರಿಯ |
ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ದಶಾನಾಂ ಮೋದಕಾನಾಂ ಚ ದಕ್ಷಿಣಾಫಲಸಂಯುತಮ್ |
ವಿಪ್ರಾಯ ತವ ತುಷ್ಟ್ಯರ್ಥಂ ವಾಯನಂ ಪ್ರದದಾಮ್ಯಹಮ್ ||
ಅನಂತರ ಆಚಮನ ಮಾಡಿ ‘ವಿಷ್ಣವೇ ನಮೋ ವಿಷ್ಣವೇ ನಮೋ ವಿಷ್ಣವೇ ನಮ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ ಜೈ ಶ್ರೀ ರಾಮ 💐💐💐💐💐💐🙏🙏🙏
Post a Comment