ಹದಿನಾಲ್ಕು ರಾಜ್ಯಗಳಿಗೆ 7,183.42 ಕೋಟಿ ರೂಪಾಯಿಗಳ ಕಂದಾಯ ಕೊರತೆ ಅನುದಾನ ಬಿಡುಗಡೆಯಾಗಿದೆ

 ಆಗಸ್ಟ್ 03, 2022

,


5:22PM

ಹದಿನಾಲ್ಕು ರಾಜ್ಯಗಳಿಗೆ 7,183.42 ಕೋಟಿ ರೂಪಾಯಿಗಳ ಕಂದಾಯ ಕೊರತೆ ಅನುದಾನ ಬಿಡುಗಡೆಯಾಗಿದೆ

ಹಣಕಾಸು ಸಚಿವಾಲಯವು ಇಂದು ಹದಿನಾಲ್ಕು ರಾಜ್ಯಗಳಿಗೆ ಏಳು ಸಾವಿರದ ನೂರ ಎಂಭತ್ತಮೂರು ಕೋಟಿ ರೂಪಾಯಿಗಳ ವಿಕೇಂದ್ರೀಕರಣದ ನಂತರದ ಕಂದಾಯ ಕೊರತೆ ಅನುದಾನದ 5 ನೇ ಮಾಸಿಕ ಕಂತುಗಳನ್ನು ಬಿಡುಗಡೆ ಮಾಡಿದೆ. ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಅನುದಾನ ಬಿಡುಗಡೆ ಮಾಡಲಾಗಿದೆ. 15ನೇ ಹಣಕಾಸು ಆಯೋಗವು 2022-23ನೇ ಹಣಕಾಸು ವರ್ಷಕ್ಕೆ 14 ರಾಜ್ಯಗಳಿಗೆ ಒಟ್ಟು 86 ಸಾವಿರದ 201 ಕೋಟಿ ರೂಪಾಯಿಗಳ ವಿಕೇಂದ್ರೀಕರಣದ ನಂತರದ ಕಂದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ. ಶಿಫಾರಸು ಮಾಡಲಾದ ಅನುದಾನವನ್ನು 12 ಸಮಾನ ಮಾಸಿಕ ಕಂತುಗಳಲ್ಲಿ ಶಿಫಾರಸು ಮಾಡಿದ ರಾಜ್ಯಗಳಿಗೆ ಖರ್ಚು ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ.


5 ನೇ ಕಂತಿನ ಬಿಡುಗಡೆಯೊಂದಿಗೆ, 2022-23 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಆದಾಯ ಕೊರತೆ ಅನುದಾನದ ಮೊತ್ತವು 35 ಸಾವಿರದ 917 ಕೋಟಿ ರೂಪಾಯಿಗಳಿಗೆ ಏರಿದೆ. 2022-23ರ ಅವಧಿಯಲ್ಲಿ ಹದಿನೈದನೇ ಹಣಕಾಸು ಆಯೋಗವು ವಿಕೇಂದ್ರೀಕರಣದ ನಂತರದ ಕಂದಾಯ ಕೊರತೆ ಅನುದಾನವನ್ನು ಶಿಫಾರಸು ಮಾಡಿರುವ ರಾಜ್ಯಗಳೆಂದರೆ - ಆಂಧ್ರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.

Post a Comment

Previous Post Next Post