ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಸ್ಕಾಟ್ಲೆಂಡ್‍ನ ಕ್ರಿಸ್ಟೆಲ್ಲೆ ಲೆಮೊಫ್ಯಾಕ್ ಲೆಟ್ಚಿಡ್ಜಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ ಸಂಭ್ರಮ ಹಂಚಿಕೊಳ್ಳುತ್ತ ಪೂಜಾ ಗೆಹ್ಲೋಟ್, ನಾನು ನನ್ನ ದೇಶವಾಸಿಗಳೊಂದಿಗೆ ಕ್ಷಮೆಯಾಚಿಸುತ್ತೇನೆ. ವಿಜಯ ವೇದಿಕೆಯಲ್ಲಿ ನಾನಿರುವಾಗ ನಮ್ಮ ದೇಶದ ರಾಷ್ಟ್ರಗೀತೆ ಮೊಳಗಬೇಕೆಂದು ನಾನು ಬಯಸಿದ್ದೆ. ಆದರೆ ನನ್ನ ತಪ್ಪುಗಳಿಂದ ಈ ಅವಕಾಶ ಸಿಗಲಿಲ್ಲ. ಈ ಸೋಲಿನಿಂದ ಪಾಠ ಕಲಿತು ಮುಂದೆ ಮುನ್ನಡೆಯುತ್ತೇನೆ ಎಂದಿದ್ದರು. ಇದನ್ನೂ ಓದಿ: ಇದು ಯಾವ್ ಶಾಟ್ ಗುರು –https://twitter.com/DilipGhoshBJP/status/1555969748155764736?ref_src=twsrc%5Etfw%7Ctwcamp%5Etweetembed%7Ctwterm%5E1555969748155764736%7Ctwgr%5E84e195bde593e0c5fd969d38f5b653c7d61b4e8f%7Ctwcon%5Es1_c10&ref_url=https%3A%2F%2Fd-442461520567963312.ampproject.net%2F2207221643000%2Fframe.htmlhttps://twitter.com/DilipGhoshBJP/status/1555969748155764736?ref_src=twsrc%5Etfw%7Ctwcamp%5Etweetembed%7Ctwterm%5E1555969748155764736%7Ctwgr%5E84e195bde593e0c5fd969d38f5b653c7d61b4e8f%7Ctwcon%5Es1_c10&ref_url=https%3A%2F%2Fd-442461520567963312.ampproject.net%2F2207221643000%2Fframe.html
ಪೂಜಾ ಗೆಹ್ಲೋಟ್ ಆಡಿದ ಈ ಮಾತುಗಳನ್ನು ಕೇಳಿಸಿಕೊಂಡ ಬಳಿಕ ಮೋದಿ, ನಿಮ್ಮ ಪದಕವು ದೇಶದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ನೀವು ಕ್ಷಮೆ ಕೇಳುವ ಅಗತ್ಯವಿಲ್ಲ. ನಿಮ್ಮ ಜೀವನ ಪಯಣ ನಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಯಶಸ್ಸು ನಮಗೆ ಸಂತೋಷವನ್ನು ನೀಡುತ್ತದೆ. ನೀವು ಮುಂದೆ ಮಹತ್ತರವಾದ ಗುರಿ ಹೊಂದಿದ್ದೀರಿ. ಮುಂದಿನ ದಿನಗಳಲ್ಲೂ ಇದೇ ರೀತಿ ಹೊಳೆಯುತ್ತಿರಿ ಎಂದು ಟ್ವಿಟ್ಟರ್ ಮೂಲಕ ಪೂಜಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಧೈರ್ಯ ತುಂಬಿದ್ದಾರೆ
Post a Comment