ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
Aug 11, 2022,
11:52 PM IST

ಬೆಂಗಳೂರು (ಆ.11): ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಹೃದಯಾಘಾತವಾಗಿ ಶಿವಮೊಗ್ಗ ಸುಬ್ಬಣ್ಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಾಗಿದ್ದ ಜಿ. ಸುಬ್ರಹ್ಮಣ್ಯ ಅವರ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಪ್ರಖ್ಯಾತಿ ಪಡೆದಿತ್ತು. 1979ರಲ್ಲಿ ‘ಕಾಡು ಕುದುರೆ’ ಚಲನಚಿತ್ರಕ್ಕೆ ಕಾಡು ಕುದುರೆ ಓಡಿ ಬಂದಿತ್ತಾ ಹಾಡನ್ನು ಸುಬ್ಬಣ್ಣ ಹಾಡಿದ್ದರು.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ಇನ್ನಿಲ್ಲ
ಹಿರಿಯ ನಿರ್ಮಾಪಕ-ವಿತರಕ ನರ್ಗಿಸ್ ಬಾಬು ನಿಧನ: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕ ನರ್ಗಿಸ್ ಬಾಬು ಇಂದು ಸಂಜೆ 7 ಗಂಟೆಗೆ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರ್ಗಿಸ್ ಬಾಬು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ನರ್ಗಿಸ್ ಬಾಬು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. 76 ವರ್ಷದ ನರ್ಗಿಸ್ ಬಾಬುಕನ್ನಡದಲ್ಲಿ ಸುಂದರ ಪುರಷ, ಯಾರಿಗೆ ಬೇಡ ದುಡ್ಡು, ಧನ್ ಧನಾ ಧನ್, ಅನಂತ್ ಗೌಡ ವರ್ಸಸ್ ರೆಡ್ಡಿ ಸಿನಿಮಾಗಳನ್ನ ನರ್ಗಿಸ್ ಬಾಬು ನಿರ್ಮಾಣ ಮಾಡಿದ್ದಾರೆ.
ಖ್ಯಾತ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಹೃದಯಾಘಾತದಿಂದ ನಿಧನ
ಅನಂತ್ ನಾಗ್, ಶಶಿಕುಮಾರ್, ನೆನಪಿರಲಿ ಪ್ರೇಮ್ ಅಂತಹ ನಟರ ಸಿನಿಮಾಗಳನ್ನ ನರ್ಗಿಸ್ ಬಾಬು ನಿರ್ಮಾಣ ಮಾಡಿದರು. ಕಳೆದ 50 ವರ್ಷಗಳಿಂದ ವಿತರಕರಾಗಿ 600ಕ್ಕೂ ಹೆಚ್ಚು ಸಿನಿಮಾಗಳನ್ನ ವಿತರಣೆ ಮಾಡಿದ್ದಾರೆ. ಇನ್ನು ನರ್ಗಿಸ್ ಬಾಬುಗೆ ಒಟ್ಟು ಆರು ಜನ ಮಕ್ಕಳಲ್ಲಿ ಕಮಾರ್ ಹಾಗು ವಸೀಮ್ ಎಂಬ ಇಬ್ಬರು ಮಕ್ಕಳು ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾಳೆ (ಶುಕ್ರವಾರ) ಮುನಿರೆಡ್ಡಿ ಪಾಳ್ಯದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ.
Post a Comment