ರಕ್ಷಾ ಬಂಧನವು। ಒಂದು ಧರ್ಮ, ಇತಿಹಾಸ, ಪರಂಪರೆ ಯಾದ ಏಕೈಕ, ಸಾರ್ವತ್ರಿಕ ಹಬ್ಬ... ಮಾಹಿತಿ

[10/08, 2:18 PM] Pandit Venkatesh. Astrologer. Kannada: 🕉️ಹರಿಃ ಓಂ
🙏ರಕ್ಷಾ ಬಂಧನ

🎙️ 2022 ಹಬ್ಬ - ಸಹೋದರಿಗೆ ರಾಖಿ ಕಟ್ಟುವ ಸಹೋದರಿ - ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆ

ರಾಖಿ ಹಬ್ಬ ಎಂದೂ ಕರೆಯಲ್ಪಡುವ ರಕ್ಷಾ ಬಂಧನವು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆಹಿಂದೂ ಧರ್ಮಇದು ಸಹೋದರ-ಸಹೋದರ ಸಂಬಂಧವನ್ನು ಆಚರಿಸುತ್ತದೆ. ರಕ್ಷಾ ಬಂಧನ 2022 ರ ದಿನಾಂಕವು ಭಾರತದ ಹೆಚ್ಚಿನ ಕ್ಯಾಲೆಂಡರ್‌ಗಳಲ್ಲಿ ಆಗಸ್ಟ್ 11 ರಂದು ಇರುತ್ತದೆ. 

🔮ಈ ದಿನದಂದು, ಸಹೋದರಿ ತನ್ನ ಸಹೋದರನಿಗೆ 'ರಾಖಿ' ಕಟ್ಟುತ್ತಾಳೆ ಮತ್ತು ಯಾವುದೇ ಅಪಾಯದಿಂದ ತನ್ನನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾರೆ. 

🛑ರಾಖಿ ಹಬ್ಬ ಎಂದೂ ಕರೆಯಲ್ಪಡುವ ರಕ್ಷಾ ಬಂಧನವು ಶ್ರಾವಣ ಮಾಸದ (ಶ್ರಾವಣ ಪೂರ್ಣಿಮಾ) ಹುಣ್ಣಿಮೆಯ ದಿನದಂದು ಬರುತ್ತದೆ.

🔮ಈ ಹಿಂದೆ ರಕ್ಷಾ ಬಂಧನವನ್ನು ಮುಖ್ಯವಾಗಿ ಆಚರಿಸಲಾಗುತ್ತಿತ್ತುಉತ್ತರ ಭಾರತ. ಇಂದು, ಆಚರಣೆಯನ್ನು ಎಲ್ಲಾ ಭಾಗಗಳಲ್ಲಿ ಆಚರಿಸಲಾಗುತ್ತದೆಭಾರತ. ರಾಖಿಯ ಸರಳ ಎಳೆಗಳು ಸಹೋದರ ಮತ್ತು ಸಹೋದರಿಯ ಪವಿತ್ರ ಪ್ರೀತಿಯನ್ನು ಸಂಕೇತಿಸುತ್ತವೆ.

🛑'ರಕ್ಷಾ' ಎಂದರೆ ರಕ್ಷಣೆ ಮತ್ತು 'ಬಂಧನ್' ಎಂದರೆ 'ಪ್ರೀತಿಯ ಬಂಧ'

🔮ರಕ್ಷಾ ಬಂಧನವನ್ನು ಆಚರಿಸಲು ಹಲವಾರು ಕಾರಣಗಳಿವೆ ಮತ್ತು ಇದು ಧರ್ಮ ಮತ್ತು ಸಾಮಾಜಿಕ ಪದ್ಧತಿ ಎರಡರ ಮಿಶ್ರಣವಾಗಿದೆ.

🛑ಸಾಂಪ್ರದಾಯಿಕ ರಕ್ಷಾ ಬಂಧನ
ರಕ್ಷಾ ಬಂಧನ ದಿನದಂದು, ಸಹೋದರಿಯು ಒಂದು ದಿಯಾ, ಬೇಯಿಸದ ಅನ್ನ, ರೋಲಿ ಮತ್ತು ರಾಖಿಯೊಂದಿಗೆ ಪೂಜೆ ಥಾಲಿಯನ್ನು ತಯಾರಿಸುತ್ತಾರೆ.

🔮ಅವಳು ಗಣೇಶನನ್ನು ಪೂಜಿಸುತ್ತಾಳೆ ಮತ್ತು ನಂತರ ಕುಟುಂಬದಲ್ಲಿ ಪೂಜಿಸುವ ದೇವತೆಗಳನ್ನು ಪೂಜಿಸುತ್ತಾರೆ. ಶೆನ್ ತನ್ನ ಸಹೋದರನಿಗೆ (ಬಲಗೈಯಲ್ಲಿ) ರಾಖಿಯನ್ನು ಕಟ್ಟುತ್ತಾನೆ ಮತ್ತು ಅವನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾನೆ.

🛑ಪ್ರತಿಯಾಗಿ ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ ಮತ್ತು ಅವಳಿಗೆ ಉಡುಗೊರೆಯಾಗಿ (ಸಿಹಿ) ನೀಡುತ್ತಾನೆ.

🔮ಸಹೋದರ ಮತ್ತು ಸಹೋದರಿ ನಂತರ ಸಿಹಿ ಹಂಚಿ ತಿನ್ನುತ್ತಾರೆ.

🛑ಶ್ರಾವಣ ಮಾಸದ ಪೂರ್ಣಿಮಾ ತಿಥಿಯಂದು ರಕ್ಷಾ ಬಂಧನ ಆಚರಿಸಲು ಶಾಸ್ತ್ರ ಹೇಳಿದೆ. ಇದರ ಬಗ್ಗೆ ಭವಿಷ್ಯಪುರಾಣದಲ್ಲಿ, ಬ್ರಹ್ಮವೈವರ್ತದಲ್ಲಿ ಹೇಳಲಾಗಿದೆ. ಹಾಗೆಯೇ ಧರ್ಮಸಿಂಧು, ನಿರ್ಣಯಸಿಂಧು, ಹೇಮಾದ್ರಿ, ಮದನರತ್ನ ಇತ್ಯಾದಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ವಿವರಿಸಲಾಗಿದೆ.

🔮ಈ ಹಬ್ಬದ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ..

🛑 ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ. 

🔮ರಕ್ಷಾ ಬಂಧನ ಆಚರಣೆಯ ಹಿಂದಿನ ಒಂದು ಕಥೆ :-
ಒಮ್ಮೆ ರಾಕ್ಷಸರು ಹಾಗೂ ದೇವತೆಗಳ ನಡುವೆ ಯುದ್ಧವಾಗುತ್ತಿರುತ್ತದೆ. ಯುದ್ಧದ ಸಮಯದಲ್ಲಿ ದೇವತೆಗಳು ಸೋಲುವ ಘಟ್ಟ ತಲುಪುತ್ತಾರೆ. ಸೋಲುವ ಭೀತಿಯಲ್ಲಿದ್ದ ಇಂದ್ರ ದೇವನು ಬೃಹಸ್ಪತಿಯ ಮೊರೆ ಹೋಗುತ್ತಾನೆ. ಇಂದ್ರ ಮೊರೆ ಕೇಳಿದ ಬೃಹಸ್ಪತಿ ದೇವನು ಇಂದ್ರನ ಪತ್ನಿ ಇಂದ್ರಾಣಿಗೆ ಸಲಹೆ ನೀಡುತ್ತಾನೆ. ಬೃಹಸ್ಪತಿಯ ಸಲಹೆಯಂತೆ ಇಂದ್ರಾಣಿ ರೇಷ್ಮೆಯ ದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜಯದ ಸಂಕೇತವಾಗಿ ರೇಷ್ಮೆಯ ದಾರವೊಂದನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯ ಸಾಧಿಸುತ್ತಾನೆ. 

🛑ಪೌರಾಣಿಕ ಕಥೆ : ಕೃಷ್ಣ ಮತ್ತು ದ್ರೌಪದಿ ಸೋದರತೆಯ ಸಂಬಂಧದ ಸಂಕೇತ ಈ ರಕ್ಷಾ ಬಂಧನ ಎಂದು ಹೇಳಲಾಗುತ್ತದೆ. ಶಿಶುಪಾಲನ ನೂರು ತಪ್ಪುಗಳು ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀ ಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವ ವೇಳೆ ಶ್ರೀಕೃಷ್ಣನ ಬೆರಳು ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಇದನ್ನು ಕಂಡ ದ್ರೌಪದಿ ಹಿಂದುಮುಂದು ಯೋಚಿಸದೆ ತಾನುಟ್ಟಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ಇದನ್ನು ಕಂಡ ಶ್ರೀಕೃಷ್ಣ ತನಗೆ ಏನು ಬೇಕು ಎಂದು ಕೇಳಿಕೋ ಎಂದು ಹೇಳುತ್ತಾನೆ. ಈ ವೇಳೆ ದ್ರೌಪದಿ ಜೀವನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಎಂದು ಹೇಳುತ್ತಾಳೆ. ದ್ರೌಪದಿಯ ಈ ಮಾತುಗಳನ್ನು ಕೇಳಿದ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ನಿಂತು ಸಂಕಷ್ಟದ ಸಮಯದಲ್ಲಿ ಕಾಪಾಡುವುದಾಗಿ ಹೇಳುತ್ತಾನೆ. ಇದರಂತೆ ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ದಯಪಾಲಿಸಿ ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಉತ್ತರ ಭಾರತದಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತದೆ. 

🔮ಪ್ರಾಚೀನ ಕಾಲದಲ್ಲಿ ಎಲ್ಲರಿಗೂ ರಕ್ಷಾಸೂತ್ರವನ್ನು ಕಟ್ಟುವ ಪದ್ಧತಿ ಇದ್ದಿತು. ಹೆಂಡತಿಯು ಗಂಡನಿಗೆ, ಗುರುಗಳು ಶಿಷ್ಯರಿಗೆ, ಪುರೋಹಿತರು ರಾಜರಿಗೆ, ಅಜ್ಜಿ-ತಾಯಂದಿರು ಮಕ್ಕಳಿಗೆ-ಮೊಮ್ಮಕ್ಕಳಿಗೆ ಇತ್ಯಾದಿ. ಇಷ್ಟೇ ಏಕೆ, ಮನೆಯ ಗೋಮಾತೆಗೂ ಕೂಡ ರಕ್ಷಾ ಕಟ್ಟಲಾಗುತ್ತಿತ್ತು! ಯಾರ ರಕ್ಷಣೆಯನ್ನು ನಾವು ಬಯಸುವೆವೋ ಅವರಿಗೆ ಮಂತ್ರಪೂರಿತವಾದ ರಕ್ಷೆಯನ್ನು ಕಟ್ಟುವುದು. ಕಟ್ಟಿಸಿಕೊಳ್ಳುವವರ ರಕ್ಷಣೆಯೇ ವಿನಹ ಕಟ್ಟುವವರ ರಕ್ಷಣೆಯ ಉದ್ದೇಶ ಅಲ್ಲ! ಇದೆ ರಕ್ಷಾ ಬಂಧನ. ಪುರಾಣಗಳಲ್ಲಿ. ಬಲಿ ಚಕ್ರವರ್ತಿಗೆ ಆತನ ರಾಣಿಯಾದ ವಿಂಧ್ಯಾವಳಿಯು ರಕ್ಷೆ ಕಟ್ಟಿದ್ದುಂಟು.

🛑ರಕ್ಷಾ ಸೂತ್ರ ಕಟ್ಟುವಾಗ ಹೇಳುವ ಮಂತ್ರ ಹೀಗಿ
ಕೃಷ್ಣನ ಸ್ಮರಣೆ ಮೊದಲು 

ಏನ ಬದ್ಧೋ ಬಲೀ ರಾಜಾ ದಾನವೇಂದ್ರೋ ಮಹಾಬಲಃ|
ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||
🔮ರಾಖಿಯನ್ನು ಕಟ್ಟುವುದು

ಅರ್ಥ – ಯಾವುದರಿಂದ ದಾನವೇಂದ್ರನಾದ ಮಹಾಬಲಿಯು ಬದ್ಧನಾಗಿದ್ದನೋ, ಅದರಿಂದಲೇ ನಿನ್ನನ್ನು ಬಂಧನ ಮಾಡುತ್ತೇನೆ. ಹೇ ರಕ್ಷೆ, ನೀನು ಅಚಲವಾಗಿರು, ಸ್ಥಿರವಾಗಿರು.

 ಈ ರೀತಿ ರಕ್ಷಾ-ಸೂತ್ರವನ್ನು ಕಟ್ಟಿಸಿಕೊಂಡವರು ವರ್ಷವಿಡೀ ಸುರಕ್ಷಿತರಾಗಿ, ಸುಖಿಯಾಗಿ, ಯಶಸ್ವಿಗಳಾಗಿ ಇರುತ್ತಾರೆ.

ರಕ್ಷಾಬಂಧನ ಇದು ಮಧುರವಾದ ಭಾವಾನುಬಂಧ,
ಸಹೋದರ ಸಹೋದರಿಯರ ನವೀರಾದ ಭಾವನೆಗಳನ್ನು ರಕ್ಷಾಬಂಧನದ ಮೂಲಕ ಗಟ್ಟಿಗೊಳಿಸುವ ದಿನ. "ಸಹೋದರತ್ವದ ಪ್ರತೀಕ ರಕ್ಷಾಬಂಧನ".. ರಕ್ಷಣೆಯನ್ನು ನೀಡುವ ಬಂಧನ- ಅದುವೇ ‘ರಕ್ಷಾ ಬಂಧನ’...

ವೇದಾಂತ ಜ್ಞಾನ ಯವರಿಂದ ರಕ್ಷಾಬಂಧನದ ಶುಭಾಶಯಗಳು💐

✍️ವೇದಾಂತ ಜ್ಞಾನ ➡️  1 ಲೈಕ್ / 1ಕಾಮೆಂಟ್  👇
                       ➡️  ಶೇರ್ ಮಾಡಿ ,

 ▶️ ನಮ್ಮ ಹಿಂದೂ  ಸಂಸ್ಕೃತಿ ಉಳಿಸಲು  ನಿಮ್ಮ  ಕೊಡುಗೆ  ಇರಲಿ 😊👍

➡️ ಗೋಮಾತೆಯನ್ನು ಪೂಜಿಸಿ, ಗೋಮಾತೆಯನ್ನು ರಕ್ಷಿಸಿ. 🙂👍

ಹರಿಯೇ ಪರದೈವ 🙏  
ಜಗತ್ತು ಸತ್ಯ 🙏   
ದೇವರ ಸ್ಮರಣೆ ಮುಖ್ಯ 🙏🙏.
[10/08, 10:31 PM] Pandit Venkatesh. Astrologer. Kannada: *ಯಜ್ಞೋಪವೀತ ಧಾರಣೆ ಮಾಡುವ ವಿಧಾನ*

*ಆಚಮನಮ್*

 ಓಂ ಶ್ರೀ ಕೇಶವಾಯ ಸ್ವಾಹಾ
 ಓಂ ಶ್ರೀ ನಾರಾಯಣಾಯ ಸ್ವಾಹಾ 
ಶ್ರೀ ಮಾಧವಾಯ ಸ್ವಾಹಾ 
ಶ್ರೀ ಗೋವಿಂದಾಯ ನಮಃ 
ಓಂ ಶ್ರೀ ವಿಷ್ಣವೇ ನಮಃ 
ಓಂ ಶ್ರೀ ಮಧುಸೂದನಾಯ ನಮಃ 
ಓಂ ಶ್ರೀ ತ್ರಿವಿಕ್ರಮಾಯ ನಮಃ 
ಓಂ ಶ್ರೀ ವಾಮನಾಯ ನಮಃ 
ಓಂ ಶ್ರೀ ಶ್ರೀಧರಾಯ ನಮಃ 
ಶ್ರೀ ಹೃಷಿಕೇಶಾಯ ನಮಃ 
ಓಂ ಶ್ರೀ ಪದ್ಮನಾಭಾಯ ನಮಃ
 ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಸಂಕರ್ಷಣಾಯ ನಮಃ 
ಐಓಂ ಶ್ರೀ ವಾಸುದೇವಾಯ ನಮಃ
 ಓಂ ಶ್ರೀ ಪ್ರದ್ಯುಮ್ಯಾಯ ನಮಃ 
ಓಂ ಶ್ರೀ ಅನಿರುದ್ಧಾಯ ನಮಃ 
ಓಂ ಶ್ರೀ ಪುರುಷೋತ್ತಮಾಯ ನಮಃ
 ಓಂ ಶ್ರೀ ಅಧೋಕ್ಷಜಾಯ ನಮಃ 
ಓಂ ಶ್ರೀ ನಾರಸಿಂಹಾಯ ನಮಃ 
ಓಂ ಶ್ರೀ ಅಚ್ಯುತಾಯ ನಮಃ 
ಓಂ ಶ್ರೀ ಜನಾರ್ದನಾಯ ನಮಃ
 ಓಂ ಶ್ರೀ ಉಪೇಂದ್ರಾಯ ನಮಃ 
ಓಂ ಶ್ರೀ ಹರಯೇ ನಮಃ 
ಓಂ ಶ್ರೀ ಕೃಷ್ಣಾಯ ನಮಃ  
*ಪುನರಾಚಮನಮ್*
 [ ಪುನಃ ಆಚಮನ ಮಾಡುವುದು]2 ಸಲ

*ಪ್ರಾಣಾಯಾಮಃ*
 ಓಂ | ಪ್ರಣವಸ್ಯ | ಪರಮೇಷ್ಠಿ | ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ||

 ಓಂ ಭೂಃ || ಓಂ ಭುವಃ || ಓಂ ಸ್ವಃ || ಓಂ ಮಹಃ || ಓಂ ಜನಃ ||ಓಂ ತಪಃ  || ಓಂ ಸತ್ಯಮ್ || 
ಓಂ  ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||

 ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್ | (ಕಣ್ಣಿಗೆ ನೀರನ್ನು ಹಚ್ಚಿಕೊಳ್ಳುವುದು)

ಸಾಧ್ಯವಾದಲ್ಲಿ ದೇಹ ಶುದ್ಧಿ ಮಾಡಿಕೊಳ್ಳಲು ಪಂಚಗವ್ಯ ಪ್ರಾಶಿಸಬೇಕು.

 ದೇಹಶುಧ್ಯರ್ಥಂ ಪಂಚಗವ್ಯಪ್ರಾಶನಂ ಕರಿಷ್ಯೇ || [ ನೀರು ಬಿಡುವುದು]
ಪ್ರಾಶನಮಂತ್ರಃ 

|| *ಯತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಹೇ | ಪ್ರಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್* ||

 [ ಈ ಮಂತ್ರಗಳನ್ನು ಹೇಳಿ ಪ್ರಾಶನ ಮಾಡಿ , ಆಚಮನ ಮಾಡುವುದು . ಈ ರೀತಿ ಮೂರು ಸಲ ಪಂಚಗವ್ಯವನ್ನು ಪ್ರಾಶನಮಾಡುವುದು .ಮೂರು ಸಲ ಆಚಮನ ]

ಧದಿ ಸೂಕ್ತ ಇದ್ದಲ್ಲಿ ದೇಹ ಶುದ್ದಿಗೆ ತೆಗೆದುಕೊಳ್ಳುವುದು

ಮನೆಗೆ ತಂದಿರುವ ಯಜ್ಞೋಪವೀತವು ದೇವಳದಲ್ಲಿ ಪೂಜೆ ಆಗಿದ್ದರೆ ಪುನಹ ಅಭಿ ಮಂತ್ರಣ ಮಾಡಬೇಕಾಗಿಲ್ಲ. ಹೊಸದಾಗಿ ಅಂಗಡಿಯಿಂದ ತಂದ ಉಪವೀತಗಳು ಇದ್ದರೆ ಅದನ್ನು ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಬೇಕು.

ವರ್ತಮಾನೇ ವ್ಯವಹಾರಿಕೆ ಶುಭಕೃತ್ ನಾಮ ಸಂವತ್ಸರೇ
ದಕ್ಷಿಣಾಯಣೇ ವರ್ಷಋತು ಶ್ರಾವಣಮಾಸೇ ಶುಕ್ಲಪಕ್ಷೇ
.......ತಿಥೌ  .......ವಾಸರೇ ಪೂರ್ವೋಕ್ತ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ  ಅನಂತ ಕಲ್ಯಾಣ ಗುಣ ಪರಿಪೂರ್ಣ ಕ್ಷೀರಾಬ್ದಿಶಾಯಿ ಶ್ರೀ ವಿಷ್ಣು ಪ್ರೇರಣೆಯಾ ಶ್ರೀ ವಿಷ್ಣು ಪ್ರೀತ್ಯರ್ಥಂ ಶ್ರೌತ ಸ್ಮಾರ್ತ ಸಕಲ ಕರ್ಮಾನುಷ್ಠಾನ ಫಲ ಸಿದ್ಧ್ಯರ್ಥಂ
ಯಜ್ಞೋಪವೀತ ಧಾರಣಂ ಅಹಂ ಕರಿಷ್ಯೇ
ಎಂದು ನೀರನ್ನು ಹರಿವಾಣದಲ್ಲಿ ಬಿಡುವುದು

 ಯಜ್ಞೋಪವೀತಿ ಇತಿ ಮಂತ್ರಸ್ಯ ಪರಬ್ರಹ್ಮಋಷಿ : ಪರಮಾತ್ಮಾ ದೇವತಾ ತ್ರಿಷ್ಟುಪ್ ಛಂದಃ ಯಜ್ಯೋಪವೀತಧಾರಣೇ ವಿನಿಯೋಗ : || 

*ಓಂ ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯಸ್ಸಹಜಂ ಪುರಸ್ಕಾತ್* | *ಆಯುಷ್ಯಮಗ್ರ್ಯಂ  ಪ್ರತಿಮುಂಚಶುಭ್ರಂ ಯಜ್ಯೋಪವೀತಂ ಬಲಮಸ್ತು ತೇಜಃ* ||

ಈ ಮಂತ್ರವನ್ನು ಹೇಳಿಕೊಂಡು ತಂದೆಯಿಂದ ಅಥವಾ ಹಿರಿಯರಿಂದ ಯಜ್ಞೋಪವೀತವನ್ನು ಧಾರಣೆ ಮಾಡುವುದು. ನಂತರ ಯಥಾಶಕ್ತಿ ಗಾಯತ್ರಿ ಮಂತ್ರವನ್ನು ನೂತನ ಜನಿವಾರವನ್ನು ಹಿಡಿದುಕೊಂಡು ಹೇಳುವುದು ( ಕನಿಷ್ಠ ಹತ್ತು ಗಾಯತ್ರಿ ಮಂತ್ರವನ್ನು ಹೇಳಿಕೊಂಡು ) ಆಚಮನ ಮಾಡಿಕೊಂಡು ಹಳೆಯ ಜನಿವಾರವನ್ನು  ತೆಗೆಯುವುದು

ಉಪವೀತಂ ಭಿನ್ನತಂತುಂ ಜೀರ್ಣಂ ಕಶ್ಮಲದೂಷಿತಂ | ವಿಸೃಜಾಮಿ ಸೂತ್ರದೇವಾನ್ ದೀರ್ಘಾಯುರಸ್ತು ಮೇ | " ಸಮುದ್ರಂ ಗಚ್ಚ ಸ್ವಾಹಾ " ಇತ್ಯುಕ್ಯಾ ವಿಸೃಜೇತ್ | ಪುನರಾಚಮನಂ | ಮತ್ತೆ ಆಚಮನ ಮಾಡುವುದು

ಸಾಧ್ಯವಾದಲ್ಲಿ ದೇವ   ಋಷಿ ಆಚಾರ್ಯ ಪಿತೃ ತರ್ಪಣವನ್ನು ಕೊಡುವುದು.
ಸಂಗ್ರಹ
[10/08, 10:33 PM] Pandit Venkatesh. Astrologer. Kannada: "ರಕ್ಷಾ ಬಂಧನ ಮಹತ್ವ, ಪ್ರಾಮುಖ್ಯತೆ ಮತ್ತು ಆಚರಣೆ :-"

ಪ್ರತಿಯೊಂದು ಮಾಸಕ್ಕೂ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು ನೀಡುವ ಮಾಸವಾಗಿದೆ. ಈ ಮಾಸದಲ್ಲಿ ಬರುವ ಹಬ್ಬಗಳು ಆಚರಣೆಗಳು ಭಾವಕ್ಕೆ ಹೆಚ್ಚು ಹತ್ತಿರವಾದುವುಗಳಾಗಿವೆ. ಶ್ರಾವಣ ಹುಣ್ಣಿಮೆಯೆಂಬುದು ಅತ್ಯಂತ ಅಭೂತಪೂರ್ವ ದಿನವಾಗಿದ್ದು, ಇದೊಂದು ಪುಣ್ಯಪ್ರದ ಕಾಲವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ಆಚರಿಸಬೇಕಾದ ಸಂಸ್ಕಾರಯುತವಾದ ಆಚರಣೆಯೇ ರಕ್ಷಾ ಬಂಧನ. ಇದೊಂದು ಮಹತ್ವ ಪೂರ್ಣ ಆಚರಣೆಯಾಗಿದೆ. ನಮ್ಮಲ್ಲಿ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ತಮ್ಮ ರಕ್ಷಣೆಯ ಸಲುವಾಗಿ ಸುಂದರವಾದ ದಾರ ಕಟ್ಟುವ ದಿನ / ಸಮಯ/ ಸಂದರ್ಭವೇ ರಕ್ಷಾಬಂಧನ ಎಂಬ ಭಾವನೆಯಿದೆ. ಇದು ತಪ್ಪಲ್ಲ. ಆದರೆ ಇದಕ್ಕೆ ಮಿಗಿಲಾದ ಅತ್ಯಂತ ಅದ್ಭುತವಾದ ಕಲ್ಪನೆಯನ್ನು ರಕ್ಷಾ ಬಂಧನವು ಹೊಂದಿದೆ.

ಸರ್ವಸಾಮಾನ್ಯವಾಗಿ ರಕ್ಷಾ ಬಂಧನದ ನಂತರ ಬರುವ ಉಪಕರ್ಮದ ದಿನದಂದೇ ಈ ರಕ್ಷಾಬಂಧನ ಬರುತ್ತದೆ. ಇದರ ಸಮ್ಮಿಲನದ ತಾತ್ಪರ್ಯವೇನೆಂದರೆ ವಿದ್ಯಾರ್ಜನೆಗಾಗಿ ದೀಕ್ಷಿತನಾದ ಅಗ್ರಜನೇ / ಅನುಜನೇ ನಿನ್ನ ವಿದ್ಯೆಯೆಂಬುದು ನನ್ನನ್ನು ಮತ್ತು ನನ್ನಂತಿರುವ ಸ್ತ್ರೀಸಂಕುಲವನ್ನು ಹಾಗೆಯೇ ತಾಯಿ ಭಾರತಿಯ ಸಂರಕ್ಷಣೆಗಾಗಿ ಮುಡುಪಾಗಿರಲಿ ಮತ್ತು ಅದರ ರಕ್ಷಣೆಯೂ ಕೂಡ ನಿನ್ನ ವಿದ್ಯಾರ್ಜನೆಯ ಮೂಲ ಉದ್ದೇಶ ಎಂಬುದನ್ನು ನೆನಪಿಸುವ ಸಲುವಾಗಿ ಈ ರಕ್ಷೆಯನ್ನು ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ಕಟ್ಟುತ್ತಾರೆ ಎಂಬುದು ರಕ್ಷಾ ಬಂಧನದ ಹಿಂದೆ ತಿಳಿಯಬೇಕಾದ ಸತ್ಯಾಂಶ.

ಮನುಷ್ಯ ತನ್ನ ಬದುಕಿನಲ್ಲಿ ಹಲವು ವಸ್ತುಗಳ ರಕ್ಷಣೆ ಮಾಡಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷವೂ ಹೌದು. ಇದರ ತಾತ್ಪರ್ಯ - ಸ್ತ್ರೀಯರು ಅಬಲರು ಎಂದಲ್ಲ. ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು 
ಭೂಮಿಯನ್ನು ತಾಯಿ ಎಂಬ ಭಾವದಿಂದ, 
ವಿದ್ಯೆಯನ್ನು  ಸರಸ್ವತೀ ಎಂಬ ಭಾವದಿಂದ, ಸಹೋದರಿಯರನ್ನು ತಾಯಿಸಮಾನರು ಎಂಬ ಭಾವದಿಂದ ಹೀಗೆ ಬೇರೆಬೇರೆ ಕಾರಣಗಳಿಂದ ನಾವು ಅವರನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸನಾತನ ಸಂಪ್ರದಾಯದ ಪ್ರಕಾರ ಯಾವುದೇ ಕಾರ್ಯಕ್ಕೂ ನಾವು ಕಂಕಣಬದ್ಧರಾಗಬೇಕು. ಈ ಎಲ್ಲಾ ಕಾರಣಗಳಿಂದ ರಕ್ಷಾಬಂಧನವು ಸಂಘಟಿತವಾಗಿ ಹರಿದುಬಂದಿದೆ.

ಇನ್ನು ಎಲ್ಲಾ ಕಾರ್ಯದ ಆರಂಭದಲ್ಲೂ ಆಯಾಯ ಕರ್ಮದ ರಕ್ಷಣೆಯ ಹೊಣೆ ಇರುವುದರಿಂದ ರಕ್ಷೆಯ ಧಾರಣೆಯೆನ್ನುವುದು ಅನೂಚಾನವಾಗಿ ನಡೆದುಬಂದ ಪದ್ಧತಿಯಾಗಿದೆ. ಹಿಂದಿನ ಕಾಲದಲ್ಲಿ ಕಂಕಣ ಧಾರಣೆಯೆನ್ನುವುದು ಒಂದು ವಿಶೇಷವಾದ ಸಂಸ್ಕಾರವಾಗಿತ್ತು. ಆದರೆ, ಈ ಕಾಲದಲ್ಲಿ ಇದರ ಮಾಹಿತಿಯ ಕೊರೆತೆಯಿಂದಾಗಿ ಯುವಜನತೆಯಲ್ಲಿ ರಕ್ಷಾ ಬಂಧನದ ಆಚರಣೆಯ ಮಹತ್ವದ ಅರಿವು ಇಲ್ಲದಂತಾಗಿದೆ. ಆದ್ದರಿಂದ ಸರ್ವ ಯುವಜನರು ಪ್ರಸ್ತುತ ವರ್ತಮಾನದಲ್ಲಿ ಈ ಆಚರಣೆಯನ್ನು ಪುನಃ ಆರಂಭಿಸಲು ಮುಂದಾಗಬೇಕಿದೆ.

ರಕ್ಷಾಬಂಧನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ದೇಶ ಕಾಯುವ ಯೋಧರು, ಮಾಹಿತಿ ನೀಡಿ ರಕ್ಷಿಸುವ ಮಾಧ್ಯಮದವರು, ಸಾಗಿಸುವ ಸಾರಿಗೆಯವರು, ಅನ್ನ ನೀಡುವ ರೈತರು, ಅಕ್ಷರ ಕಲಿಸುವ ಗುರುಗಳು, ಆರಕ್ಷಕರು ಇವರೆಲ್ಲಾ ನಮ್ಮ ರಕ್ಷಕರೇ ಹೌದು. ಹೀಗೇ ಹಲವಾರು ಪ್ರಾಮಾಣಿಕ ಶಕ್ತಿಗಳು ನಮ್ಮ ರಕ್ಷಕರೇ ಆಗಿರುವರು. ಇವರೊಂದಿಗೆ ಸಾಧ್ಯವಾದಷ್ಟು ಭಾವಬಾಂಧವ್ಯ ದಾರದೊಂದಿಗೆ ಬೆಸೆಯೋಣ. ಈ ಸಲದ ರಕ್ಷಾಬಂಧನವನ್ನು ಅರಿತು ಅರಿವಿರುವವರೊಂದಿಗೆ ಅರಿವಿಗಾಗಿ ಆಚರಿಸೋಣ ಅಲ್ಲವೇ ?

"ರಕ್ಷೆ ಧರಿಸುವ ಮಂತ್ರ :-"

"ಯೇನಬದ್ಧೋಬಲೀರಾಜಾ ದಾನವೇಂದ್ರೋ ಮಹಾಬಲಃ |
ತೇನತ್ವಾಮಭಿಬಧ್ನಾಮಿ ರಕ್ಷೇಮಾಚಲ ಮಾಚಲ ||"

[ ವಿಷಯಾಂಶಗಳ ಸಂಗ್ರಹ ]

🙏

Post a Comment

Previous Post Next Post