ಇಂದಿನ ಪಂಚಾಂಗ, : || ಶ್ರೀ ಗುರುಭ್ಯೋ ನಮಃ |||| ಹರಿಃ ಓಂ ||ನಿತ್ಯ ಪಂಚಾಂಗ ೩೦-೦೮-೨೦೨೨ಮಂಗಳವಾರ ಗಣೇಶ ಚತುರ್ಥಿ ಪೂಜೆಗೆ ಶುಭ ಮುಹೂರ್ತ ಯಾವಾಗ? ಗೌರಿ / ಸ್ವರ್ಣ ಗೌರಿ ಹಬ್ಬದ ಮಹತ್ವ.

....🙏🏻 ಹರಿಃ ಓಂ :-
ಇಂದಿನ ಪಂಚಾಂಗ
ಜಂಬೂ ದ್ವೀಪೇ 
ಭರತ ಖಂಡೇ
ಭರತ ವರ್ಷೇ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೇ
ವೈವಸ್ವತ ಮನ್ವಂತರೇ
28 ನೇ ಚತುರ್ಯುಗೇ
ಕಲಿಯುಗೇ ಪ್ರಥಮಪಾದೇ
ಸ್ವಸ್ತಿಶ್ರೀ ವಿಜಯಾಭ್ಯುದಯ
ಶ್ರೀ ಕೃಷ್ಣ ಶಕ 5124
ಶ್ರೀ ಶಾಲಿವಾಹನ ಶಕ 1945
ಶುಭಕೃತು ನಾಮ ಸಂವತ್ಸರ
ದಕ್ಷಿಣಾಯನ                                      ವರ್ಷ ಋತು                                    ಭಾದ್ರಪದ ಮಾಸ                                                                      ಶುಕ್ಲ ಪಕ್ಷ                                                 ತಿಥಿ: ತದಿಗೆ ಅಂತ್ಯ 03:33PM ನಂತರ ಚೌತಿ ಆರಂಭ                                    ಮಂಗಳವಾರ                                                                             ನಕ್ಷತ್ರ: ಹಸ್ತ ಅಂತ್ಯ 11:50PM ನಂತರ ಚೈತ್ರ ಆರಂಭ                                         ಯೋಗ: ಶುಭ                                         ಕರಣ: ಗರಜ-ವಣಿಜ-ವಿಷ್ಟಿ
ದಿನಾಂಕ : 30-08-2022                     ರಾಹುಕಾಲ: 03:37PM-05:12PM
ಯಮಗಂಡ ಕಾಲ: 09:18AM-10:53AM
ಗುಳಿಕ ಕಾಲ: 12:27PM-02:02PM ಮಳೆ ನಕ್ಷತ್ರ: ಮಖಾ                                                 " ಈ ದಿನ ಎಲ್ಲರಿಗೂ ಗೌರಿ ಹಬ್ಬದ ಶುಭಾಶಯಗಳು"

[29/08, 8:45 AM] Pandit Venkatesh. Astrologer. Kannada: 👌🇮🇳👌 *ಪುಣ್ಯಭೂಮಿ ಗೆಳೆಯರ ವೇದಿಕೆ*👌🇮🇳👌*Ganesh Chaturthi 2022 : ಗಣೇಶ ಚತುರ್ಥಿ ಪೂಜೆಗೆ ಶುಭ ಮುಹೂರ್ತ ಯಾವಾಗ? 
*ಹಿಂದೂಗಳಿಗೆ ಸಡಗರದ ಹಬ್ಬ ವಿನಾಯಕ ಚತುರ್ಥಿ. ಆ ದಿನ ವಿಘ್ನ ನಿವಾರಕನಾದ ಗಣೇಶನನ್ನು ಕೂರಿಸಿ ಅದ್ಧೂರಿಯಾಗಿ ಆಚರಿಸಲಾಗುವುದು. ವಿನಾಯಕ ಚತುರ್ಥಿಯಂದು ಮೋದಕ, ಕರ್ಜಿಕಾಯಿ, ಲಡ್ಡು ಸೇವಿಸುತ್ತಾ ಶೋಡಶೋಪಚಾರ ಸೇವೆ ಪಡೆಯಲು ಮನೆ-ಮನೆಗೆ ಬರುತ್ತಾನೆ, ತಾಯಿ ಗೌರಿಯನ್ನು ಕರೆದುಕೊಂಡು ಹೋಗಲು ಗಣೇಶ ಬರುತ್ತಾನೆ ಎಂಬುವುದು ನಂಬಿಕೆ.*

ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನದಂದು ಗಣೇಶ ಹಬ್ಬವನ್ನು ದೇಶದೆಲ್ಲೆಡೆ ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ವರ್ಷ ವಿನಾಯಕ ಚತುರ್ಥಿ ಯಾವಾಗ, ಪೂಜೆಗೆ ಶುಭ ಮುಹೂರ್ತ, ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳೇನು ಎಂಬುವುದರ ಬಗ್ಗೆ ತಿಳಿಯೋಣ:

*ಗಣೇಶ ಚತುರ್ಥಿ ದಿನಾಂಕ ಮತ್ತು ಸಮಯ*

2022ರಲ್ಲಿ ಗಣೇಶ ಚತುರ್ಥಿಯನ್ನು ಆಗಸ್ಟ್‌ 31ರಂದು ಆಚರಿಸಲಾಗುವುದು.* ಶುಕ್ಲ ಪಕ್ಷ ವಿನಾಯಕ ಚತುರ್ಥಿ/ ಗಣೇಶ ಚತುರ್ಥಿಆಗಸ್ಟ್‌ 31, 2022

*ಮುಹೂರ್ತ*

ಚತುರ್ಥಿ ತಿಥಿ ಪ್ರಾರಂಭ: ಆಗಸ್ಟ್‌ 30, 2022 ಸಂಜೆ 3:33ಕ್ಕೆ ಪ್ರಾರಂಭಚತುರ್ಥಿ ತಿಥಿ ಮುಕ್ತಾಯ: ಆಗಸ್ಟ್ 31, 2022 ಸಂಜೆ 3:22ರವರೆಗೆ

*ಗಣೇಶ ಚತುರ್ಥಿಯ ಮಹತ್ವ*

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಹಬ್ಬವನ್ನು ಮಾಡಲಾಗುವುದು. ದಿನ ವಿನಾಯಕನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ನಾವು ಬೇಡಿದ್ದೆಲ್ಲಾ ಕೊಟ್ಟು ಅನುಗ್ರಹಿಸುತ್ತಾನೆ. ಗಣೇಶನನ್ನು ಅತ್ಯಂತ ಬುದ್ಧಿವಂತ, ಜ್ಞಾನವಂತ, ಸಂಪತ್ತು ಹಾಗೂ ಜ್ಞಾನದ ದೇವರು ಮತ್ತು ಎಲ್ಲಾ ಅಡೆತಡೆಗಳನ್ನು ನಿವಾರಿಸುವವನು ಎಂದು ಪರಿಗಣಿಸಲಾಗಿದೆ.ಇನ್ನು ಯಾವುದೇ ದೇವರಿಗೆ ಮಾಡುವ ಪೂಜೆಯಾಗಲಿ ಮೊದಲಿಗೆ ಗಣಪತಿಗೆ ಪೂಜೆ ಮಾಡಿದ ಬಳಿಕವಷ್ಟೇ ಉಳಿದ ದೇವರುಗಳಿಗೆ ಪೂಜೆ ಮಾಡಲಾಗುವುದು. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮುನ್ನ ಯಾವುದೇ ವಿಘ್ನಗಳು ಬಾರದಂತೆ ಗಣಪತಿ ರಕ್ಷಣೆ ನೀಡಲಿ ಎಂದು ಬಯಸಿ ಗಣಪತಿಗೆ ಪೂಜೆಯನ್ನು ಸಲ್ಲಿಸಲಾಗುವುದು.

ಗಣೇಶ ಪುರಾಣ ಮತ್ತು ಸ್ಕಂದ ಪುರಾಣದ ಪ್ರಕಾರ, ಗಣೇಶನು ಶುಕ್ಲ ಚತುರ್ಥಿಯಂದು ಭಾದ್ರಪದ ಮಾಸದಲ್ಲಿ ಜನಿಸಿದನು. ಆದ್ದರಿಂದ ಭಾದ್ರಪದ ಮಾಸದಲ್ಲಿ ವಿನಾಯಕ ಚತುರ್ಥಿಯನ್ನು ಆಚರಿಸಲಾಗುವುದು. ವಿನಾಯಕನನ್ನು ನಂಬಿದವರನ್ನು ಎಂದಿಗೂ ಕೈ ಬಿಡಲ್ಲ, ಆದ್ದರಿಂದ ಜನರು ವಿನಾಯಕನನ್ನು ತುಂಬಾ ನಂಬುತ್ತಾರೆ.

*ಪೂಜೆ ಮಾಡುವ ಪದ್ಧತಿ*

ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಗಣಪತಿ ಹಬ್ಬವನ್ನು ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸಲಾಗುವುದು. ಭಾದ್ರಪದ ಚತುರ್ಥಿಯಂದು ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಗಣೇಶನನ್ನು ಕೂರಿಸಿರುವ ಸ್ಥಳವನ್ನು ಹೂವಿನಿಂದ ಅಲಂಕರಿಸಿ, ತಳಿರು ತೋರಣಗಳಿಂದ ಸಿಂಗರಿಸಬೇಕು. ಗಣೇಶನಿಗೆ ಪ್ರಿಯವಾದ ಹೂಗಳು, ಎಕ್ಕದ ಹೂ, ದಾಸವಾಳ, ಗರಿಕೆಯನ್ನು ತಪ್ಪದೆ ಅರ್ಪಿಸಬೇಕು. ಗಣೇಶನಿಗೆ ಪ್ರಿಯವಾದ ತಿಂಡಿಗಳು, ಮೋದಕ, ಕರ್ಜಿಕಾಯಿ, ಲಡ್ಡು ಇವುಗಳನ್ನು ಅರ್ಪಿಸಲಾಗುವುದು. ಹಸುವಿನ ಸಗಣಿಯಲ್ಲಿ ಗರಿಕೆಯನ್ನು ಇಟ್ಟರೆ ಗಣಪನಿಗೆ ಶ್ರೇಷ್ಟ ಎಂದು ಹೇಳಲಾಗುತ್ತದೆ.

ಈ ದಿನ ಬೇಗನೆ ಎದ್ದು ಇಡೀ ದಿನ ಉಪವಾಸ ಮಾಡುವ ಪದ್ಧತಿ ಸಹ ಇದೆ. ಸಂಜೆಯ ವೇಳೆಗೆ ಗಣಪನಿಗೆ ಧಾನ್ಯಗಳಿಂದ ಮಾಡಿದ ಪ್ರಸಾದ ಅಥವ ಮೊಸರನ್ನ ಅರ್ಪಿಸಿ ಮಂಗಳಾರತಿ ಮಾಡಬೇಕು. ಕೆಲವರುಒಂದೇ ದಿನ ಇಟ್ಟು ಗಣಪನನ್ನು ವಿಸರ್ಜಿಸುತ್ತಾರೆ. ಆಗ ಸಂಜೆ ಪ್ರಸಾದ ಅರ್ಪಿಸಿ ಮಹಾ ಮಂಗಳಾರತಿ ಮಾಡಿ ಗಣೇಶನನ್ನು ಬೀಳ್ಕೊಡಬೇಕು. ಬಹುತೇಕರು ಅನಂತ ಚತುರ್ದಶಿಯಂದು ಗಣೇನನ್ನು ವಿಸರ್ಜಿಸುತ್ತಾರೆ. ಗಣೇಶನನ್ನು ವಿಸರ್ಜಿಸುವ ದಿನದವರೆಗೂ ಪ್ರತಿ ದಿನ ಸಂಜೆ ಪ್ರಸಾದ ಅರ್ಪಿಸಿ ಮಂಗಳಾರತಿ ಮಾಡಬೇಕು.

*ಗಣಪತಿ ಮಂತ್ರಗಳು*

https://chat.whatsapp.com/EFlTjNcMHHoEY5C6ZMlqak

ಓಂ ಗಮ್ ಗಣಪತಯೇ ನಮಃಓಂ ಶ್ರೀ ಗಣೇಶಾಯ ನಮಃಓಂ ಏಕದಂತಾಯ ನಮಃಓಂ ಸುಮುಖಾಯ ನಮಃಓಂ ಕ್ಷಿಪ್ರ ಪ್ರಸಾದಾಯ ನಮಃಓಂ ಬಾಲಚಂದ್ರಾಯ ನಮಃಓಂ ಗಣಾಧ್ಯಕ್ಷಾಯ ನಮಃಓಂ ವಿನಾಯಕಾಯ ನಮಃಓಂ ವಿಘ್ನನಾಶಾಯ ನಮಃಓಂ ಲಂಬೋಧರಾಯ ನಮಃಓಂ ಗಜಕರ್ಣಿಕಾಯ ನಮಃಓಂ ಕಪಿಲಾಯ ನಮಃಓಂ ವಿಕ್‌ತ್ರಾಯ ನಮಃ

         *👌🇮🇳🚩👌ಉತ್ತಮ ನಾಗರಿಕ ಗೆಳೆಯರ ಬಳಗ*👌🇮🇳🚩👌
[29/08, 10:48 PM] Pandit Venkatesh. Astrologer. Kannada: || ಶ್ರೀ ಗುರುಭ್ಯೋ ನಮಃ ||
|| ಹರಿಃ ಓಂ ||
ನಿತ್ಯ ಪಂಚಾಂಗ 
೩೦-೦೮-೨೦೨೨
ಮಂಗಳವಾರ
          
ಸಂವತ್ಸರ:          ಶ್ರೀ ಶುಭಕೃತು
ಆಯನ:            ದಕ್ಷಿಣ 
ಋತು:               ವರ್ಷ 
ಮಾಸ:              ಭಾದ್ರಪದ
ಪಕ್ಷ:                  ಶುಕ್ಲ
ತಿಥಿ:                  ತದಿಗೆ 
ವಾರ:                ಭೌಮ
ನಕ್ಷತ್ರ:                ಹಸ್ತಾ 
ಯೋಗ:             ಶುಭ
ಕರಣ:                ಗರಜೆ/ವಣಿಜೆ
ದಿನ ವಿಶೇಷ:       ಸ್ವರ್ಣಗೌರಿ ವ್ರತ 

             || ಓಂ ಶ್ರೀ ಸ್ವರ್ಣಗೌರ್ಯೈ ನಮಃ ||
[29/08, 10:49 PM] Pandit Venkatesh. Astrologer. Kannada: ಗೌರಿ / ಸ್ವರ್ಣ ಗೌರಿ ಹಬ್ಬದ ಮಹತ್ವ.

ಇದೇ ಮಂಗಳವಾರ ಅಂದರೆ ಆಗಸ್ಟ್ 30 ರಂದು ಗೌರಿ ಹಬ್ಬ. ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ, ಅಂದರೆ ಮೂರನೆ ದಿನ  ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಗೌರಿ ಹಬ್ಬವನ್ನು ಸ್ವರ್ಣ ಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ.

ಸ್ವರ್ಣ ಅಂದರೆ ಬಂಗಾರ, ಬಂಗಾರದ ಬಣ್ಣದಂತೆ ಹೊಳೆಯುವ ಜಗನ್ಮಾತೆಯಾದ ಗೌರಿಯನ್ನು ಈ ದಿನ ಷೋಡಶೋಪಚಾರದಿಂದ ಪೂಜಿಸಲಾಗುತ್ತದೆ. ಗೌರಿ ಎಂಬುದು ಪರಮೇಶ್ವರನ ಪತ್ನಿ ಪಾರ್ವತಿಯ ಮತ್ತೊಂದು ಹೆಸರು. ಪಾರ್ವತಿಯ ತಂದೆ ಪರ್ವತರಾಜ. ಅಂದರೆ ಹಿಮಾಲಯವಿರುವ ಭಾರತ (ಭೂಲೋಕ). ಶಿವನನ್ನು ವರಿಸಿ ಕೈಲಾಸದಲ್ಲಿ ನೆಲೆಸಿರುವ ಗೌರಿ ವರ್ಷಕ್ಕೊಮ್ಮೆ ತವರಿಗೆ (ಭೂಮಿಗೆ) ಬಂದು ಪೂಜೆ ಸ್ವೀಕರಿಸಿ, ಹೆಣ್ಣು ಮಕ್ಕಳಿಂದ ಬಾಗಿನ ಪಡೆದು ಸಂತೃಪ್ತಳಾಗಿ ಕೈಲಾಸಕ್ಕೆ ಹೋಗುತ್ತಾಳೆ ಎಂಬ ನಂಬಿಕೆ ಇದೆ.

ಶ್ರೀ ಸ್ವರ್ಣ ಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಅಂದರೆ ಬಂಗಾರ, ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ ಗೌರಿ ಎಂದು ಅರ್ಥ. ಅಂತಹ  ಜಗನ್ಮಾತೆಯಾದ ಗೌರಿಯನ್ನು ಸುಮಂಗಲಿಯರು ಪೂಜಿಸುವ ವಿಧಿ ವಿಧಾನ ಇಲ್ಲಿದೆ.

ಈ ದಿನ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು. ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ ( ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಟ್ಟರೆ ಅದೇ ಅರಿಶಿನದ ಗೌರಿ ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ ಮಡಿಸಿ ದೇವಿಯ ಹಿಂದೆ ಇಡಬೇಕು.

ಮೊರದ ಬಾಗಿನ ಹೀಗಿರಲಿ :-

 ಮೊರದ ಬಾಗಿನಕ್ಕೆ ಬಿದಿರಿನ ಮೊರವನ್ನು ಶುಭ್ರಗೊಳಿಸಿ,  ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಚೆನ್ನಾಗಿ ಒಣಗಿಸಿ ಇಟ್ಟುಕೊಳ್ಳಿ. ನಂತರ ಧಾನ್ಯಗಳು, ತೆಂಗಿನಕಾಯಿ, ಬಳೆಬಿಚ್ಚೋಲೆ, ಕನ್ನಡಿ , ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ತಾಯಿಗೆ ಹಾಗೆ ಅತ್ತಿಗೆ, ನಾದಿನಿಯರಿಗೆ ಸೀರೆಯನ್ನು ಹಾಕಿ ( ಇತ್ತೀಚಿನ ದಿನಗಳಲ್ಲಿ ಇತರ ಉಡುಗೊರೆಗಳನ್ನು ಅಥವ ಹಣವನ್ನು ಇಡುವ ಪದ್ದತಿ ಇದೆ ) ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು ಹಾಕಿ ಅದನ್ನು ಮತ್ತೊಂದು ಮೊರದಿಂದ ಮುಚ್ಚಿ ಬಾಗಿನ ಸಿದ್ಧ ಪಡಿಸಬೇಕು. 

ಈ ತರಹ ಎರಡು, ನಾಲ್ಕು, ಐದು ಅಥವ ಇನ್ನೂ ಹೆಚ್ಚು ಮೊರಗಳನ್ನು, ಅನುಕೂಲಕ್ಕೆ ತಕ್ಕಂತೆ ಸಿದ್ಧಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಒಂದು ಬಾಗಿನ ಮಾಡುವುದಿಲ್ಲ.

ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ, ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು ಅಲಂಕರಿಸಬೇಕು.

ಪೂಜೆಗೆ ಪತ್ರೆಗಳನ್ನು, ಹೂವುಗಳನ್ನು, ಹೂವಿನ ಮಾಲೆಗಳನ್ನು ಕಟ್ಟಿ, 5 ತೆಂಗಿನಕಾಯಿ,  ಅರಿಶಿನ ಕುಂಕುಮ, ಚಂದ್ರ, ಚಂದನ, ಅಡಿಕೆ, ದಶಾಂಗಂ, 5  ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ, ಗೆಜ್ಜೆವಸ್ತ್ರಗಳು, 16 ಎಳೆಯ ಗೆಜ್ಜೆವಸ್ತ್ರ ಹಾಗೆ 16 ಎಳೆಯ ಅರಿಶಿನದ ದಾರವನ್ನು  ತಯಾರಿಸಬೇಕು (  ಗೌರಿದಾರ ). ಆ ದಾರಕ್ಕೆ 16 ಗಂಟನ್ನು ಹಾಕಿ ಸಿದ್ಧ ಪಡಿಸಬೇಕು. ( ಈ ದಾರವನ್ನು ಪೂಜೆಯ ಸಂದರ್ಭದಲ್ಲಿ  ಒಂದು ಶಾವಂತಿಗೆ ಹೂವಿನ ಜೊತೆ ಹಿರಿಯರಿಂದ ಬಲಗೈಗೆ ಕಟ್ಟಿಸಿಕೊಳ್ಳಬೇಕು ).

 ಪಂಚಾಮೃತ ಅಭಿಷೇಕ ಮಧುಪರ್ಕ,ಮಂಗಳಾರತಿ ಬತ್ತಿಗಳು. ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ 2 ತೆಂಗಿನಕಾಯಿಗಳು ನಾಲ್ಕು ವಿಳ್ಳೆದೆಲೆ, ಅಡಿಕೆಗಳು, ದಕ್ಷಿಣೆ, ಸ್ವಲ್ಪ ಅಕ್ಕಿ ಅದನ್ನು ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ ಉಪಯೋಗಿಸಬೇಕು.

ಇನ್ನು ಕೆಲವರು ಮರಳಿನ ಗೌರಿಯನ್ನು,  ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ. ಅವರವರ ಸಂಪ್ರದಾಯದಂತೆ ಗೌರಿಯನ್ನು ಪ್ರತಿಸ್ಠಾಪಿಸಿ ಪೂಜೆ ಮಾಡಬೇಕು.

ಹಾಗೆಯೇ ಕಲಶದಲ್ಲಿ ಗಂಗೆಯನ್ನು ಹಾಕಿ ಅದಕ್ಕೆ 5 ವಿಳ್ಳೆದೆಲೆಯನ್ನು ಇಟ್ಟು ಹಾಗೆ ಯಾವುದಾದರು ಹಣ್ಣನ್ನು ಕಳಶದಲ್ಲಿ  ಇಡಬೇಕು ( ಸಾಮಾನ್ಯವಾಗಿ ಖರ್ಜೂರ, ಗೋಡಂಬಿ ಮೊದಲಾದ dry fruits ).  ಕಲಶದ ಸುತ್ತ ಬಿಳಿ ಸುಣ್ಣ ಹಚ್ಚಿ ಅದಕ್ಕೆ 4  ಕಡೆ ಅರಿಶಿನ ಕುಂಕುಮ ಹಚ್ಚಬೇಕು. ಒಂದು ತಟ್ಟೆಯಲ್ಲಿ ಹಳದಿ (ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು) ವಸ್ತ್ರವನ್ನು ಹಾಸಿ ಎರೆಡು ವಿಳ್ಳೆದೆಲೆಯ ಜೊತೆ ಎರೆಡು ಬಟ್ಟಳು ಆಡಿಕೆ ಇಟ್ಟು ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು  ಜೊತೆಯಲ್ಲಿ ಸಿದ್ಧಪಡಿಸಿದ ಕಲಶವನ್ನು ಸ್ಥಾಪನೆ ಮಾಡಬೇಕು .

ಮೊರದ ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು  ಶ್ರದ್ಧಾಪೂರ್ವಕವಾಗಿ ಹೇಳಿ ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು  ಹೇಳಿಕೆಯಿದೆ.

" ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ  ಮಯಾದತ್ತಾಣಿ ಸೂರ್ಪಾಣಿ  ಗೃಹಾಣಿ  ಮಾನಿ  ಜಾನಕಿ ".

ದೇವರ ವಿಸರ್ಜನೆ: ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು. ಅದಕ್ಕೆ ಬೇಕಾಗುವ ಸಾಮಾಗ್ರಿಗಳು: ತೆಂಗಿನಕಾಯಿ ಅಥವಾ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ, ಬೆಲ್ಲದಚ್ಚು, ಬಳೆ ಬಿಚ್ಚೋಲೆ, ವಿಳ್ಳೆದೆಲೆ, ಅಡಿಕೆ, ದಕ್ಷಿಣೆ, ಸೀರೆ, ಎರೆಡು ರವಿಕೆ ಕಣಗಳು, ಹಣ್ಣುಗಳಾದ ದಾಳಿಂಬೆ, ಸೀಬೆ ಹಣ್ಣು, ಸೀತಾ ಫಲ, ಸಪೋಟ, ಮೂಸಂಬಿ, ಕಿತ್ತಳೆ. ನಂತರ ಮಂಗಳಾರತಿ ಮಾಡಿ  ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು.

ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ ಸೇವಿಸಬೇಕು .

ಸ್ವರ್ಣಗೌರಿ ಹಬ್ಬದ ದಿನ ಹೆಣ್ಣುಮಕ್ಕಳು ಈ ಕೆಳಗಿನ ಶ್ಲೋಕವನ್ನು 108 ಬಾರಿ ಹೇಳಿಕೊಂಡು ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ ಅವರ ಎಲ್ಲಾ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.

" ಸರ್ವಮಂಗಳೆ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ 
ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೇ 
ಎಂದು ಹೇಳುತ್ತಾ ಭಕ್ತಿಯಿಂದ ಪ್ರಾರ್ಥನೆ  ಮಾಡಿಕೊಳ್ಳಬೇಕು - ಪತಿ ಪುತ್ರ ಪುತ್ರಿ ಪೌತ್ರಾದಿಗಳಿಗೆ ಆಯುರಾರೋಗ್ಯಕೊಟ್ಟು ಸೌಭಾಗ್ಯಸಂಪತ್ತನ್ನು ಕೊಟ್ಟು ಸದಾ ಕಾಪಾಡೆಂದು ಬೇಡಿಕೊಂಡು ನಮಸ್ಕರಿಸಿ -- ಯಜಮಾನರಿಂದ ಪೂಜೆಮಾಡಿದ ವ್ರತದ ದಾರವನ್ನು ಕೈಗೆ ಕಟ್ಟಿಸಿಕೊಂಡು ನಮಸ್ಕರಿಸಬೇಕು ಹಿರಿಯರಿಂದಲೂ ಕಟ್ಟಿಸಿ ಕೊಳ್ಳಬಹುದು . ನಂತರ ಮರದಜೊತೆಗೆ ಪೂಜೆಮಾಡಿ ಮೊದಲು ಸ್ವರ್ಣಗೌರಿಗೆ ಬಾಗಿನ ಅರ್ಪಿಸಿ ಆಮೇಲೆ ಹಿರಿಯ ಮುತೈದೆಯರಿಗೆ , ಮಗಳು ತಾಯಿಗೆ , ತಾಯಿ ಮಗಳಿಗೆ ಬಾಗಿನಕೊಡಬಹುದು .ಅತ್ತೆ ಸೊಸೆ , ವಾರಗಿತ್ತಿಯರು ಬಾಗಿನ ಕೊಟ್ಟು ತೆಗೆದುಕೊಳ್ಳುವ ಹಾಗಿಲ್ಲ ಅವರೆಲ್ಲಾ ಒಂದೇ ಮನೆಯವರು , ಅಕ್ಕಪಕ್ಕದ ಮನೆಯವರಿಗೂ ಬಾಗಿನ ಕೊಡಬಹುದು.
ನಂತರ ಶಾಸ್ತ್ರಿಗಳಿಗೆ ದಕ್ಷಿಣೆತಾಂಬೂಲದೊಂದಿಗೆ ಉಪಾಯನದಾನ ಕೊಟ್ಟು ನಮಸ್ಕರಿಸಬೇಕು 

ಆಗಸ್ಟ್ 30 ಮಂಗಳವಾರದಂದು ಸಂಜೆ 3.33 ರ ವರೆಗೂ ಮಾತ್ರ " ತದಿಗೆ " ಇದೆ. ಗೌರಿ ಪೂಜೆಗೆ ಶುಭ ಮಹೂರ್ಥ ಅಂದು ಮುಂಜಾನೆ 5.58 ರಿಂದ 8.31 ರ ವರೆಗೆ.

ಜಗನ್ಮಂಗಳೆಯಾದ  ಶ್ರೀ ಸ್ವರ್ಣಗೌರಿಯೂ ಸರ್ವರಿಗೂ   ಸಕಲ ಇಷ್ಟ ಸಿದ್ಧಾರ್ಥಗಳನ್ನು  ಅನುಗ್ರಹಿಸಿ ಮಂಗಳವನ್ನುಂಟು  ಮಾಡಲಿ ಎಂದು ಪ್ರಾರ್ಥಿಸೋಣ . 

▬▬▬ஜ۩۞۩ஜ▬▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

 *ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬
 ಸದಸ್ಯರಿಗೂ ಗೌರೀ ಹಬ್ಬದ ಶುಭಾಶಯಗಳು. 
ಎಲ್ಲರಿಗೂ ಸ್ವರ್ಣಗೌರಿ ಸುಖಸಂತಸ ಸೌಭಾಗ್ಯವಿತ್ತು ಕಾಪಾಡಲಿ .

Post a Comment

Previous Post Next Post