ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಸುರಿವ ಮಳೆಯ ನಡುವೆ ನಡೆಯಿತು ಪಂಜಿನ ಮೆರವಣಿಗೆ!

 ಮಾದಾಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ
ಸುರಿವ ಮಳೆಯ ನಡುವೆ ನಡೆಯಿತು ಪಂಜಿನ ಮೆರವಣಿಗೆ!
ಮಡಿಕೇರಿ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಸುರಿಯುವ ಮಳೆಯ ನಡುವೆಯೂ ಶನಿವಾರ ರಾತ್ರಿ ಮಾದಾಪುರದಲ್ಲಿ  ಪಂಜಿನ ಮೆರವಣಿಗೆ ನಡೆಸಲಾಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ   ಸ್ವಾರ್ಥ ರಾಜಕೀಯಕ್ಕಾಗಿ ಮತೀಯ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ ಕಹಿ ಘಟನೆಯನ್ನು  ಇಂದಿನ ಸಮಾಜಕ್ಕೆ ತಿಳಿಸುವ ಮತ್ತು ಕಳೆದು ಹೋಗಿರುವ ಭಾರತ ಭೂಭಾಗಗಳನ್ನು ಮತ್ತೆ ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆನ್ನುವ ಗುರಿಯೊಂದಿಗೆ ಹಿಂದೂ ಜಾಗರಣ ವೇದಿಕೆಯ ವತಿಯಿಂದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾದಾಪುರದ ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಪಂಜಿನ ಮೆರವಣಿಗೆ ಮಾದಾಪುರದ ಮುಖ್ಯ ಬೀದಿಗಳಲ್ಲಿ  ಸಾಗಿ  ಮಾದಾಪುರ  ಶ್ರಿ ಗಣಪತಿ ದೇವಾಲಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. 
ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಮಂದಿ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸಭಾ ಕಾರ್ಯಕ್ರಮದಲ್ಲಿ  ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖ  ಹರೀಶ್ ಶಕ್ತಿನಗರ ಅವರು  ಮಾತನಾಡಿ,                  ಸಾವಿರಾರು   ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ  ಪಡೆದ  ಸ್ವಾತಂತ್ರ್ಯವನ್ನು  ಅಂದಿನ ಕೆಲವರ ಸ್ವಾರ್ಥದಿಂದಾಗಿ ದೇಶ ವಿಭಜನೆ ಮಾಡುವ ಮೂಲಕ ಅಪಮೌಲ್ಯಗೊಳಿಸಲಾಯಿತು. ನೂರಾರು ವರ್ಷಗಳ ಕಾಲ ಅಂದು ನಡೆದ ಸ್ವಾತಂತ್ರ್ಯ ಹೋರಾಟ ಈಗಿನ ನಮ್ಮ ನಕ್ಷೆಯಲ್ಲಿನ ಭಾರತಕ್ಕಾಗಿ ಆಗಿರಲಿಲ್ಲ.    ಪಾಕಿಸ್ಥಾನ, ಬಾಂಗ್ಲಾದೇಶಗಳನ್ನೊಳಗೊಂಡ ಭೂಪ್ರದೇಶವೂ ಭಾರತದ ಭೂಭಾಗಗಳೇ ಆಗಿದ್ದವು. ಅಂದಿನ ಮಹಮ್ಮದಾಲಿ ಜಿನ್ನಾ, ನೆಹರು ಸೇರಿದಂತೆ ಕೆಲವರ ತಪ್ಪು ನಿರ್ಧಾರಗಳು ದೇಶವನ್ನೇ ಮತೀಯ ಆಧಾರದಲ್ಲಿ ಚೂರು ಚೂರು ಮಾಡಿತು. ಅಂದು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದವರು ಇಂದು ತಮ್ಮ ಹೊಟ್ಟೆಪಾಡಿನ ರಾಜಕೀಯಕ್ಕಾಗಿ  ಜಾತ್ಯತೀತತೆಯ ಮಂತ್ರ ಜಪಿಸುತ್ತಾ   ನಾವೆಲ್ಲರೂ ಒಂದೇ ಅನ್ನುತ್ತಿರುವುದು ಸ್ವತಂತ್ರ ಭಾರತದ ದುರಂತವೇ ಆಗಿದೆ ಎಂದು ಟೀಕಿಸಿದರು.
ಯುವ ಸಮೂಹ ಸಿದ್ಧವಾಗಿರಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಮಾಜಿ ಯೋಧ, ಹವಾಲ್ದಾರ್ ತಂಬುಕುತ್ತಿರ ಗಪ್ಪು ಸೋಮಯ್ಯ ಅವರು ಮಾತನಾಡಿ, ಈ ದೇಶದ ಗಡಿಗಳನ್ನು ಹಗಲಿರುಳು ಸೈನಿಕರು ಕಾಯುತ್ತಿದ್ದು  ಇದರಿಂದಾಗಿ  ನಮ್ಮ ಸುತ್ತಲಿನ ಶತ್ರುದೇಶಗಳ ಉಪಟಳಗಳನ್ನು ದಿಟ್ಟವಾಗಿ ಎದುರಿಸಿ ದೇಶದೊಳಗೆ ಸುರಕ್ಷಿತವಾಗಿದ್ದೇವೆ. ಅದೇ ರೀತಿ ದೇಶದೊಳಗಿನ ಮತಾಂಧರ ಭಯೋತ್ಪಾದನೆ - ಸಂಘರ್ಷಗಳನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸದಾ ಸಿದ್ಧರಾಗಿ ಇರಬೇಕೆಂದರು. 
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿಯ ಪ್ರಮುಖರಾದ ರಾಜೀವ್, ತಾಲೂಕು ಸಂಯೋಜಕ ವಿನು ವೇದಿಕೆಯಲ್ಲಿದ್ದರು. ಆರ್.ಎಸ್.ಎಸ್.  ಜಿಲ್ಲಾ ಕಾರ್ಯವಾಹ ದೇವಪಂಡ ಡಾಲಿ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹ ಸಂಯೋಜಕ ಚೇತನ್ ಮತ್ತಿತರ ಪ್ರಮುಖರು ಹಾಜರಿದ್ದರು.
[07/08, 2:45 PM] Nagendra New: ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್‌ನಷ್ಟೇ ಪಾತ್ರ ಸಂಘ-ಪರಿವಾರದ್ದೂ ಇದೆ: ಬಿಜೆಪಿ ತಿರುಗೇಟು
ಮಂಡ್ಯ :  ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ನಷ್ಟೆ ಸಂಘ ಪರಿವಾರದ ಕೊಡುಗೆಯೂ ಇದೆ. ಇದಕ್ಕೆ ಇತಿಹಾಸ ಪುಟಗಳನ್ನೊಮ್ಮೆ ತಿರುವಿದರೆ ತಿಳಿಯುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. 
ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ರಾಷ್ಟ್ರಕ್ಕಾಗಿ ಹೋರಾಡಿ ಬಲಿದಾನ ಮಾಡಿದ ಮಹನೀಯರೆಲ್ಲರೂ ಕಾಂಗ್ರೆಸ್‌ನವರಲ್ಲಘಿ, ಇದರಲ್ಲಿ  ಸಂಘ ಪರಿವಾರದ ಕಾರ‌್ಯಕರ್ತರು, ದೇಶಾಭಿಮಾನಿಗಳೂ ಇದ್ದರು. ಮಹಾತ್ಮಾಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್‌ನ್ನು ಬಳಸಿಕೊಂಡಿದ್ದರು. ಸ್ವಾತಂತ್ರ್ಯ ದೊರೆತ ಮೇಲೆ ಕಾಂಗ್ರೆಸ್ಸನ್ನು ವಿಸರ್ಜಿಸುವಂತೆಯೂ ಸಲಹೆ ನೀಡಿದ್ದರು. ಆದರೆ ಒಂದು ಕುಟಂಬ ನಕಲಿ ಕಾಂಗ್ರೆಸ್ ಹೆಸರಿನಲ್ಲಿ ದೇಶದಲ್ಲಿ ಆಡಳಿತ ನಡೆಸಿದ್ದನ್ನು ಯಾರೂ ಮರೆತಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಕಾಂಗ್ರೆಸ್‌ನಂತೆ ಆರ್‌ಎಸ್‌ಎಸ್ ಕೂಡಾ ಪಾಲ್ಗೊಂಡಿತ್ತು.  ದೌರ್ಭಾಗ್ಯವೆಂಬಂತೆ ಇದಕ್ಕೆ ಸಂಬಂಧಿಸಿದ ಇತಿಹಾಸವನ್ನು ಕೇವಲ ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಬರೆಯಲಾಗಿದೆ. ಹೀಗಾಗಿ ಆರ್‌ಎಸ್‌ಎಸ್ ಈ ಸಂಗ್ರಾಮದಲ್ಲಿ ಭಾಗವಹಿಸಿದ ಮಾಹಿತಿ ಜನರಿಗೆ ತಲುಪಿಲ್ಲ ಎಂದು ತಿಳಿಸಿದ್ದಾರೆ. 
ಸಂಘವು ಹೆಸರು ಹೇಳಿಕೊಂಡು ಏನನ್ನೂ ಮಾಡುತ್ತಿರಲಿಲ್ಲಘಿ. ಹೆಸರು ಹಾಗೂ ಸಂಸ್ಥೆಯ ಹೆಸರನ್ನು ಬಿಟ್ಟು ರಾಷ್ಟ್ರ ಹಿತಕ್ಕಾಗಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕಾಂಗ್ರೆಸ್‌ನ ಎಲ್ಲಾ ಆಂದೋಲನಗಳಲ್ಲೂ ಸ್ವಯಂ ಸೇವಕರು ಭಾಗವಹಿಸಿದ್ದಾರೆ. ರಾಷ್ಟ್ರೀಯ ಸೇವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರೇ ವರ್ಷಾನುಗಟ್ಟಲೆ ಜೈಲಿನಲ್ಲಿದ್ದುದ್ದನ್ನು ಕಾಂಗ್ರೆಸ್ ಮರೆತಂತೆ ಕಾಣುತ್ತಿದೆ ಎಂದು ದೂರಿದರು. 
ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಕುದೀರ್ ಅಂಬೋಸ್, ಚಾಪೇಕರ್ ಸಹೋದರರು, ಮದನ್‌ಲಾಲ್ ಡಿಂಗ್ರಾಘಿ, ಸಂಗೊಳ್ಳಿ ರಾಯಣ್ಣಘಿ, ರಾಣಿ ಅಬ್ಬಕ್ಕ, ಸಿಂಧೂರ ಲಕ್ಷ್ಮಣ, ಭಗತ್‌ಸಿಂಗ್ ಸೇರಿದಂತೆ ಮೂರೂವರೇ ಲಕ್ಷ ಮಂದಿ ಬಲಿದಾನ ಮಾಡಿದ್ದಾರೆ. 16 ಸಾವಿರ ಸ್ವಯಂ ಸೇವಕರು ಅಂಡಮಾನ್ ಜೈಲಿನಲ್ಲಿದ್ದರು. ಅವರ ಹೆಸರನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಅಳಿಸಿಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ. 
ಗಾಂಧೀಜಿ ಬಂಧನದಿಂದ ನಡೆಯುತ್ತಿದ್ದ 1921ರ ಅಸಯೋಗ ಚಳವಳಿಯಲ್ಲಿ ಡಾ. ಹೆಡ್ಗೇವಾರ್ ಕೂಡ ಭಾಗವಹಿಸಿ ಜೈಲಿಗೆ ಹೋಗಿದ್ದರು. 1922ರ ಜುಲೈ 12ರಂದು ಜೈಲಿನಿಂದ ಬಿಡುಗಡೆಯಾಗಿ, 1925ರಲ್ಲಿ ವಿಜಯದಶಮಿ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ್ದರು. ಇದನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಮರೆತಂತೆ ಕಾಣುತ್ತಿದೆ. ಇತಿಹಾಸದ ಬಗ್ಗೆ ಅರಿವಿಲ್ಲದಿದ್ದರೆ, ರಾಷ್ಟ್ರೀಯ ಸೇವಕ ಸಂಘದ ಪ್ರಚಾರಕರಾಗಿದ್ದ ಸೆಹಗಲ್ ಅವರು ಸಾಕ್ಷಿ ಸಮೇತ ಸಂಗ್ರಹಿಸಿ ಬರೆದಿರುವ ಪುಸ್ತಕವನ್ನು ಕಾಂಗ್ರೆಸ್ಸಿಗರೆ ಕಳುಹಿಸಿಕೊಡುತ್ತೇವೆ. ಸಮಯವಿದ್ದರೆ ಓದಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 
ಇನ್ನಾದರೂ ಕಾಂಗ್ರೆಸ್ಸಿಗರು ಇತಿಹಾಸ ತಿಳಿಯದೆ ಜನರಿಗೆ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇತಿಹಾಸ ತಿಳಿದ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

Post a Comment

Previous Post Next Post