[16/08, 2:55 PM] Pandit Venkatesh. Astrologer. Kannada: 🕉️ ಓಂ ಶ್ರೀ ಗುರುಭ್ಯೋ ನಮಃ🕉️ 🙏*ದ್ರೌಪದೀ ಜಯಂತಿ* 🙏 🙏ಇಂದು ದ್ರೌಪದಿಯ ಜಯಂತಿ ಪ್ರಯುಕ್ತ ಈ ಮಾಹಿತಿ ನಿಮಗೆ ತಿಳಿದಿರಲಿ🙏
ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ. ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ಇದು ವಿಸ್ತಾರವಾಗಿ ವಿವರಿಸುತ್ತದೆ. ಮಹಾಭಾರತದಲ್ಲಿ ನಾವು ಕೇಳುವ ಕೆಲವು ಪಾತ್ರಗಳು ಇಂದಿಗೂ ನಿಗೂಢ. ಅಂತಹ ಪಾತ್ರಗಳಲ್ಲಿ ಒಂದು ದ್ರೌಪದಿಯ ಪಾತ್ರ. ಮಹಾಭಾರತದ ವೀರ ರಾಜಕುಮಾರಿ ದ್ರೌಪದಿ ಪಾಂಚಾಲ ರಾಜ ದ್ರುಪದನ ಮಗಳು, ಈಕೆಗೆ 5 ಜನಸಹೋದರರು, 5 ಜನ ಪತಿಯಂದಿರು ಮತ್ತು 5 ಜನ ಮಕ್ಕಳಿದ್ದಾರೆ. ಈಕೆಯ ಬಗ್ಗೆ ನಿಮಗೆ ತಿಳಿಯದ ಅನೇಕ ರಹಸ್ಯಗಳಿವೆ. ಅವುಗಳು ಯಾವುವು ಗೊತ್ತಾ..?
🙏*ದ್ರೌಪದಿಯ ಜನನ*🙏
🙏ಸೇಡಿನಿಂದ ಜನಿಸಿದವಳು ದ್ರೌಪದಿಯೆಂದು ಹೇಳಲಾಗುತ್ತದೆ. ಪಾಂಚಾಲ ರಾಜ್ಯದ ರಾಜನಾದ ದ್ರುಪದನನ್ನು ದ್ರೋಣರ ಪರವಾಗಿ ಅರ್ಜುನನು ಸೋಲಿಸಿ ಆತನಿಂದ ಅರ್ಧ ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ಇದರಿಂದ ಕೋಪಗೊಂಡ ದ್ರುಪದನು ಅರ್ಜುನನಿಗಿಂತ ತಾನು ಶಕ್ತಿಶಾಲಿಯಾಗಬೇಕೆಂದು ಯಜ್ಞವನ್ನು ಮಾಡುತ್ತಾನೆ. ಆ ಯಜ್ಞದಲ್ಲಿ ಜನಿಸಿದ ಮಗುವೇ ಈ ದ್ರೌಪದಿ. ದ್ರೌಪದಿ ಕಪ್ಪು ಮೈಬಣ್ಣದೊಂದಿಗೆ ಯಜ್ಞದಿಂದ ಹೊರಬರುತ್ತಾಳೆ. ದ್ರುಪದನ ಮಗ ಧೃಷ್ಟದ್ಯುಮ್ನನ ನಂತರ ದ್ರೌಪದಿಯು ದ್ರುಪದನಿಗೆ ಸಿಗುತ್ತಾಳೆ. ಈಕೆ ಯಜ್ಞದಿಂದ ಹೊರಹೊಮ್ಮುವಾಗ ಮುಂದೆ ಭವಿಷ್ಯದಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತಾಳೆಂದು ಸ್ವರ್ಗೀಯ ಧ್ವನಿ ಹೇಳುತ್ತದೆ. ದ್ರೌಪದಿಯು ಯಜ್ಞದಿಂದ ಬಂದ ಅನಗತ್ಯ ಮಗುವಾಗಿದ್ದು, ಈಕೆಯ ತಂದೆ - ತಾಯಿ ಯಾರೆಂಬುದು ತಿಳಿದಿಲ್ಲ. ಈಕೆ ವಯಸ್ಕ ಹುಡುಗಿಯಂತೇ ಅಗ್ನಿಯಿಂದ ಹೊರಹೊಮ್ಮಿದವಳೇ ಹೊರತು, ಶಿಶುವಿನಂತಲ್ಲ.🙏
🙏*ದ್ರೌಪದಿಯ ನಾನಾ ಹೆಸರುಗಳು*🙏
ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದ್ರೌಪದಿಯು ಅನೇಕ ಹೆಸರುಗಳನ್ನು ಹೊಂದಿದ್ದಾಳೆ. ಅವಳಿಗಿರುವ ಪ್ರತಿಯೊಂದು ಹೆಸರು ಆಕೆಯ ಗುಣವನ್ನು ವಿವರಿಸುತ್ತದೆ.
ದ್ರೌಪದಿ - ದ್ರುಪದ ರಾಜನ ಮಗಳು🙏
ಪಾಂಚಾಲಿ - ಪಾಂಚಾಲ ರಾಜ್ಯದ ರಾಜಕುಮಾರಿ🙏
ಯಜ್ಞಸೇನಿ - ಯಜ್ಞದ ಬೆಂಕಿಯಿಂದ ಜನಿಸಿದವಳು🙏
ಸೈರಂಧ್ರಿ - ಪರಿಣಿತ ಸೇವಕಿ🙏
ನಿತ್ಯಾಯುವಾಣಿ - ಎಂದಿಗೂ ವಯಸ್ಸಾಗದ ಶಕ್ತಿಯನ್ನು ಹೊಂದಿದವಳು🙏
ಮಾಲಿನಿ - ಹೂಮಾಲೆ ಕಟ್ಟುವವಳು🙏
ಕೃಷ್ಣೆ - ಅವಳ ಕಪ್ಪು ಮೈಬಣ್ಣದ ಸಂಕೇತ🙏
🙏*ದ್ರೌಪದಿಯ ವಿವಾಹ*🙏
🙏ದ್ರೌಪದಿ ಅತ್ಯಂತ ಧೈರ್ಯಶಾಲಿ ಮತ್ತು ಕಪ್ಪಾಗಿದ್ದರೂ ಅಸಾಧಾರಣ ಸುಂದರಿಯಾಗಿದ್ದಳು. ರಾಜ ದ್ರುಪದ ತನ್ನ ಮಗಳಿಗೆ ವಿವಾಹ ಮಾಡಲು ಸ್ವಯಂವರವನ್ನು ಏರ್ಪಡಿಸುತ್ತಾನೆ. ಸ್ವಯಂವರದಲ್ಲಿ ಪಾಂಡವ ರಾಜಕುಮಾರ ಅರ್ಜುನನೂ ಇದ್ದನು. ತನ್ನ ಸಹೋದರರಾದ ಯುಧಿಷ್ಠಿರ ಮತ್ತು ಭೀಮನೊಂದಿಗೆ ಬ್ರಾಹ್ಮಣ ವೇಷವನ್ನು ಧರಿಸಿ ಸ್ವಯಂವರದಲ್ಲಿ ಹಾಜರಿದ್ದರು. ರಾಜ ದ್ರುಪದ ಸ್ವಯಂವರಕ್ಕೆ ಆಗಮಿಸಿದ್ದ ರಾಜರುಗಳಿಗೆ ಷರತ್ತನ್ನು ನೀಡುತ್ತಾನೆ. ಅದೇನೆಂದರೆ ನೀರಿನಲ್ಲಿ ಮೀನಿನ ಪ್ರತಿಬಿಂಬವನ್ನು ಕಂಡು, ಚಲಿಸುವ ಮೀನಿನ ಕಣ್ಣಿಗೆ ಬಾಣವನ್ನು ಹೊಡೆಯಬೇಕಿತ್ತು.🙏
🙏ಈ ಕಲೆ ಕಣ್ಣನನ್ನು ಹೊರತುಪಡಿಸಿ ಅರ್ಜುನನಿಗೆ ಮಾತ್ರ ತಿಳಿದಿತ್ತು. ದ್ರೌಪದಿ ಈಗಾಗಲೇ ಕರ್ಣ ರಥ ಓಡಿಸುವವನ ಮಗನೆಂದು ನಿರಾಕರಿಸಿದ್ದಳು. ಆದ್ದರಿಂದ ಸ್ವಯಂವರದಲ್ಲಿ ಅರ್ಜುನನು ಗೆದ್ದು ದ್ರೌಪದಿಯನ್ನು ವಿವಾಹವಾಗುತ್ತಾನೆ. ನಂತರ ದ್ರೌಪದಿಯನ್ನು ಕರೆದುಕೊಂಡು ಅರ್ಜುನ, ಯುಧಿಷ್ಠಿರ ಮತ್ತು ಭೀಮನು ಕುಂತಿಯಿದ್ದ ಸ್ಥಳಕ್ಕೆ ಬರುತ್ತಾರೆ. ಆಗ ಅರ್ಜುನ ಕುಂತಿಗೆ ತಾಯಿ ನಿಮಗೊಂದು ಭಿಕ್ಷೆಯನ್ನು ತಂದಿದ್ದೇನೆಂದು ಹೇಳುತ್ತಾನೆ. ಆಗ ಕುಂತಿ ಅದೇನೆಂಬೂದನ್ನು ನೋಡದೇ ಆ ವಸ್ತುವನ್ನು ನೀವು 5 ಜನ ಸಹೋದರರು ಸಮನಾಗಿ ಹಂಚಿಕೊಳ್ಳಿ ಎನ್ನುತ್ತಾಳೆ. ಆಗ ಪಾಂಡವರು ತಾಯಿಯ ಮಾತನ್ನು ಧಿಕ್ಕರಿಸದೇ ದ್ರೌಪದಿಯನ್ನು ವಿವಾಹವಾಗುತ್ತಾರೆ.🙏
🙏*ಕೃಷ್ಣ ಕುಂತಿಯನ್ನು ಸಮಾಧಾನಿಸುತ್ತಾನೆ*🙏
🙏ದ್ರೌಪದಿಗೆ 5 ಮದುವೆಯಾಗುವುದು ಆಕೆಯ ಹಣೆಬರಹವಾಗಿತ್ತೇ ಹೊರತು ಕುಂತಿಯ ತಪ್ಪಾಗಿರಲಿಲ್ಲ. ತನ್ನಿಂದಲೇ ತನ್ನ ಮಕ್ಕಳ ಬಾಳು ಹಾಳಾಯಿತೆಂದು ಕುಂತಿ ಚಿಂತೆಗೆ ಒಳಗಾಗುತ್ತಾಳೆ. ಆಗ ಕೃಷ್ಣನು ಪ್ರತ್ಯಕ್ಷನಾಗಿ ಆಕೆಗೆ ಸಮಾಧಾನ ಮಾಡುತ್ತಾನೆ. ಕೃಷ್ಣನು ದ್ರೌಪದಿಯು ಹಿಂದಿನ ಜನ್ಮದಲ್ಲಿ ಶಿವನಿಂದ ಪಡೆದ ವರದ ಬಗ್ಗೆ ತಿಳಿಸುತ್ತಾನೆ. ದ್ರೌಪದಿ ತನ್ನ ಹಿಂದಿನ ಜನ್ಮದಲ್ಲಿ ಶಿವನನ್ನು ಕಠಿಣವಾಗಿ ಧ್ಯಾನಿಸಿ, ಆತನಲ್ಲಿ ತನಗೆ ಸದಾಚಾರ, ಅತ್ಯುತ್ತಮ ಬಿಲ್ಲುಗಾರ, ಅತ್ಯಂತ ಶಕ್ತಿಶಾಲಿ, ಸುಂದರ ಮತ್ತು ತಾಳ್ಮೆಯುಳ್ಳ ಪತಿಯನ್ನು ಕರುಣಿಸು ಎಂದು ವರವನ್ನು ಬೇಡಿದ್ದಳು. ಆದರೆ ಶಿವನು ಈ ಎಲ್ಲಾ ಗುಣಗಳನ್ನು ಒಬ್ಬನಲ್ಲಿ ಕಾಣಲು ಸಾಧ್ಯವಿಲ್ಲ. ಬದಲಾಗಿ, ನಿನಗೆ ಈ 5 ಗುಣವುಳ್ಳ 5 ಗಂಡಂದಿರು ಸಿಗಲೆಂದು ಆಶೀರ್ವಾದಿಸಿದ್ದಾನೆ. ಅದರ ಫಲವೇ ಹೀಗೆಲ್ಲಾ ಆಗಲು ಕಾರಣವೆಂದು ಕುಂತಿಗೆ ತಿಳಿಹೇಳುತ್ತಾನೆ.🙏
🙏*ಪಾಂಡವರಿಗೆ ದ್ರೌಪದಿಯ ಷರತ್ತು*🙏
🙏ದ್ರೌಪದಿ ತಾನು 5 ಜನ ಪಾಂಡವರನ್ನು ವಿವಾಹವಾಗುವ ಮುನ್ನ ಒಂದು ಷರತ್ತನ್ನು ನೀಡುತ್ತಾಳೆ. ಅದೇನೆಂದರೆ ಪಾಂಡವರು ಇಂದ್ರಪ್ರಸ್ಥಕ್ಕೆ ಇತರೆ ಪತ್ನಿಯರನ್ನು ತರಲು ಹಕ್ಕಿಲ್ಲ, ನೀವು 5 ಜನ ಪಾಂಡವ ಸಹೋದರರು ನನ್ನನ್ನು ಹೊರತು ಪಡಿಸಿ ಬೇರಾವುದೇ ಮಹಿಳೆಯನ್ನು ಇಷ್ಟಪಡುವಂತಿಲ್ಲವೆಂದು ಹಾಗೂ ತನ್ನ ಕೋಣೆಗೆ ಬರುವಾಗ ಕೇವಲ ಒಬ್ಬರು ಮಾತ್ರ ಬರಬೇಕೆಂದು ಷರತ್ತನ್ನು ನೀಡಿದಳು.🙏
🙏*ನಾಯಿಗೆ ದ್ರೌಪದಿಯ ಶಾಪ*🙏
🙏ಒಂದು ದಿನ ಯುಧಿಷ್ಠಿರನು ದ್ರೌಪದಿಯ ಕೋಣೆಯ ಹೊರಗೆ ತನ್ನ ಪಾದರಕ್ಷೆಯನ್ನು ಬಿಟ್ಟು ದ್ರೌಪದಿಯ ಕೋಣೆಗೆ ಹೋಗುತ್ತಾನೆ. ಆಗ ನಾಯಿಯೊಂದು ದ್ರೌಪದಿಯ ಕೋಣೆಯ ಹೊರಗಿದ್ದ ಯುಧಿಷ್ಠಿರನ ಪಾದುಕೆಗಳನ್ನು ಕಚ್ಚಿಕೊಂಡು ಹೋಗುತ್ತದೆ. ಅದೇ ಸಮಯಕ್ಕೆ ಸರಿಯಾಗಿ ಅರ್ಜುನನು ಕೂಡ ದ್ರೌಪದಿಯನ್ನು ನೋಡಲು ಬರುತ್ತಾನೆ. ದ್ರೌಪದಿಯ ಕೋಣೆಯ ಹೊರಗೆ ಯಾವುದೇ ಪಾದರಕ್ಷೆಗಳು ಇಲ್ಲದಿರುವುದನ್ನು ಕಂಡು ಕೋಣೆಯಲ್ಲಿ ಯಾರೂ ಇಲ್ಲವೆಂದು ತಪ್ಪಾಗಿ ಭಾವಿಸಿ ಕೋಣೆಯನ್ನು ಪ್ರವೇಶಿಸುತ್ತಾನೆ. ಇದರಿಂದ ಮುಜುಗರಕ್ಕೊಳಗಾದ ದ್ರೌಪದಿಯು ಶ್ವಾನ ಕುಲವನ್ನು ಕುರಿತು ನೀವು ಸಾರ್ವಜನಿಕ ಸ್ಥಳದಲ್ಲೇ ದೈಹಿಕ ಸಂಪರ್ಕ ಹೊಂದುವಂತಾಗಲಿ. ಇದರಿಂದ ಇಡೀ ಸಮಾಜವೇ ನಿಮ್ಮನ್ನು ದೂಷಿಸಬೇಕೆಂದು ಶಾಪವನ್ನು ನೀಡುತ್ತಾಳೆ.🙏
🙏*ಕಾಳಿಯ ಅವತಾರ*🙏
🙏ದಕ್ಷಿಣ ಭಾರತದಲ್ಲಿ ದ್ರೌಪದಿಯನ್ನು ಕಾಳಿಯ ಅವತಾರವೆಂದು ನಂಬುತ್ತಾರೆ. ಎಲ್ಲಾ ದುಷ್ಟ ರಾಜರನ್ನು ಸಂಹರಿಸಲು ಅವಳು ಕೃಷ್ಣನಿಗೆ ಸಹಾಯ ನೀಡಲೆಂದೇ ಜನಿಸಿದವಳು. ಆದ್ದರಿಂದ ಅವರಿಬ್ಬರನ್ನು ಸಹೋದರ - ಸಹೋದರಿಯೆಂದು ಪರಿಗಣಿಸಲಾಗುತ್ತದೆ.🙏
🙏*ದ್ರೌಪದಿಯ ನಾನಾ ಅವತಾರಗಳು*🙏
ದ್ರೌಪದಿಯು ನಾನಾ ಅವತಾರದಲ್ಲಿ ಕಾಣಿಸಿಕೊಂಡಿದ್ಧಾಳೆಂದು ನಾರದ ಪುರಾಣ ಮತ್ತು ವಾಯು ಪುರಾಣ ಉಲ್ಲೇಖಿಸಿದೆ. ಹಾಗಾದರೆ ದ್ರೌಪದಿಯ ವಿವಿಧ ಅವತಾರಗಳಾವುವು..?
ದೇವಿ ಶ್ಯಾಮಲಾ - ಧರ್ಮನ ಪತ್ನಿ🙏
ಭಾರತಿ - ವಾಯುವಿನ ಪತ್ನಿ🙏
ಸಚಿ - ಇಂದ್ರನ ಪತ್ನಿ🙏
ಉಷಾ - ಅಶ್ವಿನ್ ನ ಪತ್ನಿ🙏
ಪಾರ್ವತಿ - ಶಿವನ ಪತ್ನಿ🙏
🙏*ಕನ್ಯೆಯಾಗೇ ಇರುವಂತೆ ವರವನ್ನು ಪಡೆದವಳು*🙏
🙏5 ಕನ್ಯೆಯರು ಎಂದು ಕರೆಯಲ್ಪಡುವ ಪಂಚಕನ್ಯೆಯರಲ್ಲಿ ದ್ರೌಪದಿ ಕೂಡ ಒಬ್ಬಳಾಗಿದ್ದಾಳೆ🙏. ಅವಳು ಪ್ರತಿ ಜನ್ಮದ ಅಂತ್ಯದಲ್ಲೂ ಅಗ್ನಿ ಪ್ರವೇಶವನ್ನು ಮಾಡಿದವಳು. ಅಗ್ನಿಯನ್ನು ಪ್ರವೇಶಿಸುವ ಮೂಲಕ ಜೀವನಕ್ಕೆ ಅಂತ್ಯವನ್ನು ಹಾಡಿದವಳು. ಪಾಂಡವರಿಗೆ ದ್ರೌಪದಿಯನ್ನು ಹೊರತುಪಡಿಸಿ, ಬೇರೆ ಪತ್ನಿಯರು ಇದ್ದರು. ಆದರೆ ಅವರು ಪಾಂಡವರೊಂದಿಗೆ ಇರುತ್ತಿರಲಿಲ್ಲ. ತಮ್ಮ ಹೆತ್ತವರೊಂದಿಗೆ ಇರುತ್ತಿದ್ದರು. 4 ವರ್ಷಗಳಿಗೊಮ್ಮೆ ಪಾಂಡವರು ತಮ್ಮ ಪತ್ನಿಯನ್ನು ಭೇಟಿಯಾಗಲು ಹೋಗುತ್ತಿದ್ದರು. ದ್ರೌಪದಿಗೆ ಎಷ್ಟೇ ವಯಸ್ಸಾದರೂ ಕೂಡ ಆಕೆ ಕನ್ಯೆಯಂತೆಯೇ ಇರುತ್ತಿದ್ದಳು🙏.
🙏*ದ್ರೌಪದಿಯ ಮರಣ*🙏
ಶ್ರೀಕೃಷ್ಣನ ಮರಣದ ನಂತರ, ಪಾಂಡವರು ಮತ್ತು ದ್ರೌಪದಿ ಪ್ರಪಂಚದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆಗ ಪಾಂಡವರು ಮತ್ತು ದ್ರೌಪದಿ ಸ್ವರ್ಗವನ್ನು ಸೇರಲು ನಾಯಿಯೊಂದಿಗೆ ಸ್ವರ್ಗದತ್ತ ಪ್ರಯಾಣಿಸುತ್ತಾರೆ. ಹಿಮಾಲಯದತ್ತ ಪ್ರಯಾಣಿಸುವಾಗ ಅವರಿಗೆ ಸುಮೇರು ಪರ್ವತ ಎದುರಾಗುತ್ತದೆ. ಸುಮೇರು ಪರ್ವತವನ್ನು ದಾಟುವಾಗ ದ್ರೌಪದಿ ಪರ್ವತದಿಂದ ಕೆಳಗೆ ಬಿದ್ದು ಮರಣ ಹೊಂದುತ್ತಾಳೆ. 🙏 ಆಗ ಭೀಮನು ಯುಧಿಷ್ಠಿರನ ಬಳಿ ದ್ರೌಪದಿ ಯಾಕೆ ನಮಗಿಂತ ಮೊದಲು ಸತ್ತಳು..? ನಮ್ಮೊಂದಿಗೆ ಸ್ವರ್ಗಕ್ಕೆ ಬರಲು ಯಾಕೆ ಸಾಧ್ಯವಾಗಲಿಲ್ಲ..? ಎಂದು ಪ್ರಶ್ನಿಸುತ್ತಾನೆ. 🙏 ಆಗ ಯುಧಿಷ್ಟಿರನು ದ್ರೌಪದಿ ನಮ್ಮೆಲ್ಲರಿಗಿಂತ ಹೆಚ್ಚಾಗಿ ಅರ್ಜುನನ್ನು ಪ್ರೀತಿಸುತ್ತಿದ್ದಳು.🙏 ನನ್ನ ಪ್ರೀತಿಗೆ ಮೋಸ ಮಾಡಿದಳು. ಆದ್ದರಿಂದ ಆಕೆಗೆ ಸ್ವರ್ಗಕ್ಕೆ ಬರಲು ಸಾಧ್ಯವಾಗಲಿಲ್ಲವೆಂದು ಉತ್ತರಿಸುತ್ತಾನೆ.🙏 ದಯವಿಟ್ಟು ಓದಿ ಅದ್ಭುತ ವಾಗಿದೆ.🙏 ಕತೆ ಓದಿದರೆ ನಿಮ್ಮ ಇಚ್ಛೆಯಂತೆ ಕೆಲಸ ನೇರವೆರುತ್ತದೆ. ಸಿ.ಆರ್.ಸತ್ಯ ಪ್ರಕಾಶ್ ವಕೀಲರು .
[16/08, 2:57 PM] Pandit Venkatesh. Astrologer. Kannada: ಭೋಜನದ ಮಹತ್ವ.
ಊಟ ಪ್ರತಿಯೊಬ್ಬರಿಗೂ ಅವಶ್ಯಕ. ಅದು ಯಾವುದೇ ರೂಪದಲ್ಲಿದ್ದರೂ ದೇಹಕ್ಕಾಗುವ ಹಸಿವನ್ನು ಶಮನ ಗೊಳಿಸುವಲ್ಲಿ ಭೋಜನ ಅತ್ಯಂತ ಮಹತ್ವ ಪಡೆಯುತ್ತದೆ.
ಯಾವ್ಯಾವಾಗಲೋ ಎಲ್ಲೆಲ್ಲೋ ಸಿಕ್ಕಿದ್ದನ್ನು ತಿನ್ನುವುದು ಸಮಯ ಸಂದರ್ಭ ಗಮನಿಸದೇ ನಾಲಗೆಯ ರುಚಿಯನ್ನು ಮಾತ್ರ ನೋಡಿಕೊಂಡು ಆರೋಗ್ಯಕ್ಕೆ ಅಹಿತವಾದದ್ದನ್ನೂ ತಿನ್ನುವುದು ನಿಜಕ್ಕೂ ಅಘಾತಕಾರಿ.
ಆಹಾರ ನಮ್ಮ ಆಯುಷ್ಯಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಅಸು ಎನ್ನುವುದರ ಅರ್ಥವೆ ಅದು, ಆಯುಷ್ಯ ಮುಗಿಯಿತು ಎಂದರೂ ಸಹ ಅದೇ ಅರ್ಥ. ಅದಕ್ಕಾಗಿಯೇ ತೀರಿಕೊಂಡ, ಮುಗಿಸಿದ ಎಂದೆಲ್ಲ ಹೇಳುತ್ತೇವೆ.
ಈ ಭೂಮಿಯಲ್ಲಿ ಅನ್ನದ ಋಣ ಮುಗಿದರೆ ಮತ್ತೆ ಯಾರೂ ಇರಲಿಕ್ಕಾಗುವುದಿಲ್ಲ. ಹಿತಮಿತ ಆಹಾರ ಸೇವನೆಯಿಂದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಅದೇನೇ ಇರಲಿ ಇಂದು ಭೋಜನದ ಕುರಿತಾಗಿ ಸ್ವಲ್ಪ ಗಮನಿಸುವೆ.
’ಅಜೀಜನ ಓಷಧಿರ್ಭೋಜನಾಯ’ ಎಂದು ಋಗ್ವೇದದ ೫ನೇ ಮಂಡಲದ ೮೩ನೇ ಸೂಕ್ತದಲ್ಲಿ ಅತ್ರಿ ಮಹರ್ಷಿ ಪರ್ಜನ್ಯನನ್ನು ದೇವತೆಯಾಗಿ ಸ್ತುತಿಸುವಾಗ ಭೋಜನದ ಕುರಿತಾಗಿ ಹೇಳುತ್ತಾ ಮಾನವರ ಉಪಭೋಗಕ್ಕೆ ಯೋಗ್ಯವಾಗಿರುವುದೇ ಭೋಜನ. ಆ ಭೋಜನವೇ ಔಷಧಗಳ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ.
ಅನ್ನಾದಷ್ಟ ಗುಣಂ ಪಿಷ್ಟಂ ಪಿಷ್ಟಾದಷ್ಟ ಗುಣಂ ಪಯಃ |
ಪಯಸೋಷ್ಟ ಗುಣಂ ಮಾಂಸಂ ಮಾಂಸಾದಷ್ಟ ಗುಣಂ ಘೃತಮ್ ||
ಘೃತಾದಷ್ಟ ಗುಣಂ ತೈಲಂ ಮರ್ಧನಾನ್ನ ಚ ಭಕ್ಷಣಮ್ ||
ಅನ್ನಕ್ಕಿಂತ ಎಂಟು ಪಟ್ಟು ಉತ್ತಮವಾಗಿರುವುದು ಹಿಟ್ಟು, ಹಿಟ್ಟಿಗಿಂತ ಹಾಲು ಎಂಟು ಪಟ್ಟು ಉತ್ತಮ. ಹಾಲಿಗಿಂತ ಎಂಟು ಪಟ್ಟು ಮಾಂಸ ಉತ್ತಮ, ಮಾಂಸಕ್ಕಿಂತ ಎಂಟು ಪಟ್ಟು ತುಪ್ಪದ ಸೇವನೆ ಉತ್ತಮ. ಇಂತಹ ತುಪ್ಪಕಿಂತಲೂ ಎಂಟು ಪಟ್ಟು ಎಣ್ಣೆ ಉತ್ತಮ ಅದೂ ಸಹ ಅನ್ನದೊಂದಿಗೆ ಹದವಾಗಿ ನುರಿದು ಕಲಿಸಿಕೊಂಡು ತಿನ್ನಬೇಕು ಎನ್ನುವುದು ರಾಜನಿಘಂಟುವಿನಲ್ಲಿ ಅದೇನೇ ಇರಲಿ ಇನ್ನೊಂದು ಮಹತ್ವದ ಸುಭಾಷಿತ ವೃದ್ಧ ಚಾಣಕ್ಯನದ್ದು.
ಅಜೀರ್ಣೇ ಭೇಷಜಂ ವಾರೀ ಜೀರ್ಣೇ ವಾರಿ ಬಲಪ್ರದಮ್ |
ಭೋಜನೇ ಚಾಮೃತಂ ವಾರಿ ಭೋಜನಾಂತೇ ವಿಷಪ್ರದಮ್ ||
- ವೃದ್ಧ ಚಾಣಕ್ಯ||
ಅಜೀರ್ಣವಾದಾಗ ಆಹಾರ ಸೇವನೆ ಮಾಡದೇ ಕೇವಲ ನೀರನ್ನು ಮಾತ್ರ ಸೇವಿಸಿದರೆ ಅದು ಔಷಧವಾಗುತ್ತದೆಯಂತೆ.
ಊಟವಾದ ನಂತರ ಜೀರ್ಣಕ್ರಿಯೆ ಆರಂಭವಾದ ನಂತರ ನೀರು ಕುಡಿದರೂ ಅದು ಔಷಧವಾಗುತ್ತದೆ. ಅಂದರೆ ಊಟವಾಗಿ ೩ ಗಂಟೆಯ ನಂತರ ನೀರು ಕುಡಿದರೆ ಪುನಃ ಹಸಿವೆಯಾಗುತ್ತದೆ.
ಊಟ ಮಾಡುವ ಮಧ್ಯದಲ್ಲಿ ನೀರನ್ನು ಆಗಾಗ ಕುಡಿಯುತ್ತಾ ಊಟಮಾಡಿದರೆ ಆ ನೀರು ಅಮೃತಕ್ಕೆ ಸಮನಾಗುತ್ತದೆ. ಆದರೆ ಊಟಮಾಡಿದ ನಂತರ ಆ ತಕ್ಷಣ ನೀರು ಕುಡಿದರೆ ಅದು ವಿಷವಾಗಿ ಪರಿಣಮಿಸುತ್ತದೆ ಎನ್ನುತ್ತಾನೆ.
ಎಂತಹ ಮಹತ್ವದ ಸಂದೇಶವನ್ನು ಈ ಶ್ಲೋಕದಲ್ಲಿ ಕಟ್ಟಿಕೊಡುತ್ತಾನೆ. ಯದ್ವಾ ತದ್ವಾ ನೀರನ್ನು ಕುಡಿದರೆ ಅದು ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ತಿಳಿಸಿಕೊಡುತ್ತಾನೆ. ಊಟದಲಿಯೂ ಶಿಸ್ತು ಮುಖ್ಯವಾಗುತ್ತದೆ.
ಮತ್ತೊಂದು ಸುಂದರವಾದ ಕಥೆ
ನಿಮ್ಮ #ದೇವರು ನೈವೇದ್ಯ ತಿಂತಾನಾ?
ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ.
ಓದಿ ಅನುಭವಿಸಿ ಮತ್ತು ಆನಂದಿಸಿ.
#ನೈವೇದ್ಯ : ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?
ಇದು ನಂಬಿಕೆಯಿಲ್ಲದವರ ಪ್ರಶ್ನೆ. ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ.
ಒಬ್ಬ #ಗುರು ಮತ್ತು #ಶಿಷ್ಯರ ಸಂವಾದ ಹೀಗೆ ನಡೆದಿತ್ತು.
ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.
ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ ತಯಾರಾಗಲು ಆದೇಶಿಸಿದರು.
ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' #ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.
ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ ಕಂಠಸ್ಥ ಹೇಳಿ, ಒಪ್ಪಿಸಿದ.
ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ.
" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.
ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.
"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ.
ನಾವು ಉಣ್ಣುವ ಆಹಾರದಲ್ಲಿ '#ಭಕ್ತಿ' ಹೊಕ್ಕರೆ
ಅದು ' #ಪ್ರಸಾದ' ವಾಗುತ್ತದೆ.....
ನಮ್ಮ ಹಸಿವಿಗೆ '#ಭಕ್ತಿ' ಹೊಕ್ಕರೆ
ಅದು ' #ಉಪವಾಸ' ವಾಗುತ್ತದೆ......
ನಾವು '#ಭಕ್ತಿ' ಕುಡಿದರೆ
ಅದು '#ಚರಣಾಮೃತ' ವಾಗುತ್ತದೆ......
ನಮ್ಮ ಪ್ರಯಾಣ ' #ಭಕ್ತಿ' ಪೂರ್ಣವಾದರೆ
ಅದು ' #ತೀರ್ಥಯಾತ್ರೆ' ಯಾಗುತ್ತದೆ.......
ನಾವು ಹಾಡುವ ಸಂಗೀತ' #ಭಕ್ತಿ' ಮಯವಾದರೆ
ಅದು '#ಕೀರ್ತನೆ'ಯಾಗುತ್ತದೆ......
ನಮ್ಮ ವಾಸದ ಮನೆಯೊಳಕ್ಕೆ' #ಭಕ್ತಿ ' ತುಂಬಿದರೆ
ನಮ್ಮ ಮನೆಯೇ ' #ಮಂದಿರ ' ವಾಗುತ್ತದೆ.......
ನಮ್ಮ ಕ್ರಿಯೆ ' #ಭಕ್ತಿ' ಪೂರಿತವಾದರೆ
ನಮ್ಮ ಕಾರ್ಯಗಳು ' #ಸೇವೆ' ಯಾಗುತ್ತದೆ.....
ನಾವು ಮಾಡುವ ಕೆಲಸದಲ್ಲಿ' #ಭಕ್ತಿ ' ಇದ್ದರೆ
ಅದು ನಮ್ಮ ' #ಕರ್ಮ ' ವಾಗುತ್ತದೆ.....
ನಮ್ಮ ಹೃದಯದಲ್ಲಿ ' #ಭಕ್ತಿ ' ತುಂಬಿದರೆ
ನಾವು ಮಾನವರಾಗುತ್ತೇವೆ.....
ನಮ್ಮ ವಿಚಾರವಿನಿಮಯದಲ್ಲಿ ' #ಭಕ್ತಿ' ಇದ್ದರೆ
ಅದು ' #ಸತ್ಸಂಗ' ವಾಗುತ್ತದೆ....
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[16/08, 6:11 PM] Pandit Venkatesh. Astrologer. Kannada: ವಿಶೇಷ ತೈಲ ದೀಪ ಪರಿಹಾರ.
ದೀಪ ಜ್ಞಾನ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ. ಒಂದು ದೀಪವನ್ನು ಉರಿಸುವುದರಿಂದ ಒಬ್ಬ ವ್ಯಕ್ತಿಯ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತವೆ. ದೀಪಕ್ಕೆ ಹಾಕುವ ಎಣ್ಣೆಯು ಕೂಡ ಬತ್ತದ ಪ್ರೀತಿಯ ಸಂಕೇತವಾಗಿದೆ, ಬತ್ತಿಯೂ ಕೆಲಸದ ಸಂಕೇತವಾಗಿದೆ.
ವಿವಿಧ ಎಣ್ಣೆಯನ್ನು ಹಾಕಿ ದೀಪ ಹಚ್ಚುವುದರಿಂದ ಜಾತಕದಲ್ಲಿರುವ ಗ್ರಹ ದೋಷಗಳು ನಿವಾರಣೆಯಾಗುತ್ತವೆ.
ರವಿ ದೋಷಕ್ಕೆ….
ರವಿ ದೋಷ ಇದ್ದರೆ ಪ್ರತಿ ಭಾನುವಾರ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವನಿಗೆ ತುಪ್ಪದ ದೀಪ ಹಚ್ಚಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಸಿಗುವುದು.
ಚಂದ್ರ ದೋಷಕ್ಕೆ...
ಚಂದ್ರ ಗ್ರಹ ದೋಷವಿದ್ದರೆ ಸೋಮವಾರ ರಾತ್ರಿ 6 ರಿಂದ 7 ಗಂಟೆಯೊಳಗೆ ತುಳಸಿ ಗಿಡದ ಸಮೀಪ ಕಡಲೇಕಾಯಿ ಎಣ್ಣೆಯ ದೀಪ ಹಚ್ಚಬೇಕು. ಕಟಕ ರಾಶಿಯವರು ಚಂದ್ರನಿಗೆ ದೀಪ ಹಚ್ಚಿ ಪೂಜಿಸಿದರೆ ಪ್ರತಿ ಕ್ಷಣವೂ ಅವರ ಜೀವನವು ಆನಂದಮಯವಾಗಿದೆ.
ಕುಜ ದೋಷಕ್ಕೆ...
ಕುಜ ದೋಷ ಇದ್ದರೆ ಪ್ರತಿ ಮಂಗಳವಾರ ಮಧ್ಯಾಹ್ನ ಮೂರರಿಂದ ನಾಲ್ಕು ಗಂಟೆಯ ಸಮಯದೊಳಗೆ ಕುಜ ಗ್ರಹದ ವಿಗ್ರಹಕ್ಕೆ ತುಪ್ಪದ ದೀಪ ಹಚ್ಚಬೇಕು. ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ, ಕಾಳ ಸರ್ಪ ದೋಷಗಳು ನಿವಾರಣೆಯಾಗುವುದು.
ಬುಧ ದೋಷಕ್ಕೆ….
ಬುಧ ದೋಷಕ್ಕೆ ಬುಧವಾರ ಮಧ್ಯಾಹ್ನ 12 ರಿಂದ 1:30 ರ ಒಳಗೆ ಬುಧ ಗ್ರಹದ ಸಮೀಪ ದೀಪ ಬೆಳಗಬೇಕು. ಮಿಥುನ ಮತ್ತು ಕನ್ಯಾ ರಾಶಿಯವರು ಬುಧವಾರ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು. ಜೊತೆಗೆ ಅವರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಗಳಿಸುವವರು .
ಗುರು ದೋಷಕ್ಕೆ...
ಗುರು ಗ್ರಹದ ದೋಷ ಇದ್ದರೆ ಪ್ರತಿ ಗುರುವಾರ ಮಧ್ಯಾಹ್ನ 1:30 ರಿಂದ 3 ಗಂಟೆಯೊಳಗೆ ಗುರು ಗ್ರಹದ ಸಮೀಪ ದೀಪ ಹಚ್ಚಬೇಕು. ಧನಸ್ಸು ಮತ್ತು ಮೀನ ರಾಶಿಯವರು ಗುರುವಾರದ ದಿನ ಬೇವಿನ ಎಣ್ಣೆಯ ದೀಪವನ್ನು ಹಚ್ಚಿದರೆ ವಿದ್ಯಾ ಪ್ರಾಪ್ತಿಯಾಗುವುದು.
ಶುಕ್ರ ದೋಷಕ್ಕೆ….
ಶುಕ್ರ ದೋಷ ನಿವಾರಣೆಗೆ ಪ್ರತಿ ಶುಕ್ರವಾರ ಬೆಳಗ್ಗೆ 10:30 ರಿಂದ 12 ಗಂಟೆಗಳ ಒಳಗೆ ದೇವಿ ದೇವಾಲಯದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚಬೇಕು. ವೃಷಭ ಮತ್ತು ತುಲಾ ರಾಶಿಯವರು ಶುಕ್ರವಾರದ ದಿನ ಕೊಬ್ಬರಿ ಎಣ್ಣೆಯ ಅಥವಾ ತುಪ್ಪದ ದೀಪ ಹಚ್ಚಿದರೆ ಉತ್ತಮ ಆರೋಗ್ಯ ಪಡೆಯಬಹುದು.
ಶನಿ ದೋಷಕ್ಕೆ...
ಶನಿ ದೋಷ ಇದ್ದರೆ, ಸಾಡೇಸಾತಿ ಶನಿ ಇದ್ದರೆ ಮತ್ತು ಪಂಚಮ ಶನಿ ಇದ್ದರೆ ಶನಿ ದೇವಾಲಯದಲ್ಲಿ ಎಳ್ಳೆಣ್ಣೆ ದೀಪವನ್ನು ಬೆಳಿಗ್ಗೆ 9 ರಿಂದ 10:30 ರ ಒಳಗೆ ದೀಪವನ್ನು ಹಚ್ಚಬೇಕು.
ಮಕರ ಮತ್ತು ಕುಂಭ ರಾಶಿಯವರು ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿದರೆ ಮನಸ್ಸಿಗೆ ಶಾಂತಿ ಮತ್ತು ಧನ ಪ್ರಾಪ್ತಿಯಾಗುವುದು.
ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಮತ್ತು ಅದರ ಮಹತ್ವವನ್ನು ತಿಳಿಯೋಣ
ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ.
ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ಸಮಸ್ಯೆಗಳು, ನಿರುತ್ಸಾಹ, ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತುದೋಷಕ್ಕೆ, ಅಪಮೃತ್ಯು, ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ ತೊಂದರೆಯಾಗುತ್ತಿದೆ, ಶತೃಗಳ ಕಾಟ ಹೆಚ್ಚಾದರೆ, ಮದುವೆ ನಿಧಾನವಾಗುತ್ತಿರುವಾಗ ಕನಸುಗಳು ಕನಸುಗಳನ್ನು ಅನುಭವಿಸುವುದಿಲ್ಲವಾದರೆ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
*ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕಾದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು.* ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 11.00 ರಿಂದ 12.30 ರವರೆಗೆ ಹಚ್ಚಬಹುದು.
ನಿಂಬೆದೀಪವನ್ನು ಮಂಗಳವಾರ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ.
*ನಿಂಬೆಹಣ್ಣಿನ ದೀಪವನ್ನು ಹಚ್ಚಿ ನಂತರ ದೇವಿಗೆ ಅಷ್ಟೋತ್ತರ ಪೂಜೆಯನ್ನು ಮಾಡಬೇಕು.
*ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆರ್ಶಿವಾದವನ್ನು ತೆಗೆದುಕೊಳ್ಳಬೇಕು.
,*ಯಾರಿಗೆ ಸಮಸ್ಸೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರಿಗೂ ದೀಪವನ್ನು ಹಚ್ಚಬಹುದು ಆದರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.
ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೆ ಆರೋಗ್ಯ ಸರಿಯಿಲ್ಲದಿದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು.
ಮಕ್ಕಳ ಹುಟ್ಟುಹಬ್ಬ, ಮದುವೆಯಾದದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.
ಒಂದು ದೀಪ ಹಚ್ಚುವುದರಿಂದ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು.🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏
[16/08, 6:30 PM] Pandit Venkatesh. Astrologer. Kannada: ತಂದೆಯನ್ನು ಕಳೆದುಕೊಳ್ಳಬೇಕಾದರೆ
*ರವಿ ನಿಬ೯ಲನಾಗಿರಬೇಕು*
ರವಿ ನಿಬ೯ಲನಾಗಿದ್ದರೆ ತಂದೆಯಿಂದ ದೊರೆಯುವ ಅದೃಷ್ಣ ಕಡಿಮೆಯಾಗುತ್ತದೆ ...
ನವಮ ಸ್ಥಾನ
ನವಮಾಧಿಪತಿ ಹಾಗೂ ಕಾರಕಗ್ರಹ *ಅಶುಭರಾಗಿದ್ದರೆ* ತಂದೆಗೆ ತೊಂದರೆ ...
(ನವಮ ಸ್ಥಾನ ಎರಡು ಪಾಪ ಗ್ರಹಗಳ ಮಧ್ಯೆ
ನವಮಾಧಿಪತಿ ಗುರು ಮೃತವಸ್ಥೆಯಲ್ಲಿ
ಕಾರಕ ರವಿ ರಾಹು ಕೇತುಗಳ ಗ್ರಹಣದಲ್ಲಿ ...)
ರವಿ ಪಿತೃಕಾರಕ
ನವಮ ಪಿತೃಸ್ಥಾನ
ರವಿ ಅಲ್ಲಿದ್ದರೆ ತಂದೆಗೆ ತೊಂದರೆ..(ಭಾವ ಕುಂಡಲಿಯಲ್ಲಿ ರವಿ ನವಮದಲ್ಲಿ)
ಕಾರಕೋ ಭಾವನಾಶಯ ಎಂಬ ಉಕ್ತಿಯಿದೆ
ನವಮದಲ್ಲಿ ರವಿ ಒಳ್ಳೆಯದಲ್ಲ ..(ಭಾವ ಕುಂಡಲಿಯಲ್ಲಿ ರವಿ ನವಮದಲ್ಲಿ )
ನಾಲ್ಕನೇ ಸ್ಥಾನ ಮಾತೃ ಸ್ಥಾನ.. ಅಲ್ಲಿ ರಾಹು/ಕೇತು ಸ್ಥಿತರಾಗಿದ್ದರೆ ತಾಯಿ ಯೋಗಕ್ಷೇಮದಲ್ಲಿ ಕೊರತೆ ಅಥವ ತಂದೆ ತಾಯಿಯ ನಡುವೆ ವಿರಸ ...
(ಜಾತಕದಲ್ಲಿ ಚತುರ್ಥ ಸ್ಥಾನದಲ್ಲಿ ಕೇತು ಸ್ಥಿತ)
ಕಟಕ ಲಗ್ನದಲ್ಲಿ ಜನಿಸಿದವರಿಗೆ ತಂದೆ ತಾಯಿ ಇಬ್ಬರೂ *ಒಟ್ಟಾಗಿರುವುದನ್ನು ಜಾತಕರು ಕಾಣುವುದಿಲ್ಲ ...*
(ಜಾತಕರದು ಕಟಕ ಲಗ್ನ )...
ದ್ವಾದಶಾಂಶ ಕುಂಡಲಿಯಲ್ಲಿ
ಲಗ್ನಾಧಿಪತಿ ಗುರುವಿಗೆ ಪಾಪ ಗ್ರಹಗಳ ಸಂಬಂಧ ಹಾಗೂ ಪಾಪ ಗ್ರಹಗಳ ಯುತಿ ಇರುವುದರಿಂದ *ತಂದೆ ತಾಯಿಯ ಪ್ರೀತಿ ಅಕ್ಕರೆ ಸಹಾಯ ಇಲ್ಲವಾಗುತ್ತದೆ.*..
ಷಷ್ಠಾಂಶ ಕುಂಡಲಿಯಲ್ಲಿ ನವಮ ಸ್ಥಾನದಲ್ಲಿ ಕೇತು ಸ್ಥಿತನಾಗಿದ್ದು
ನವಮಾಧಿಪತಿ ಚಂದ್ರ ಉಚ್ಚನಾಗಿದ್ದರೂ
ಶನಿ ರಾಹು ಮತ್ತು ಕುಜನ ಸಂಬಂಧ ....
ಇವೆಲ್ಲವೂ ಜಾತಕನಿಗೆ ತಂದೆಯಿಂದ ದೊರೆಯಬಹುದಾದ ಸುಖಕ್ಕೆ ಧಕ್ಕೆಯನ್ನು ತೋರುತ್ತದೆ ....
ಇನ್ನು *ರವಿ ದಶೆ ರಾಹುಭುಕ್ತಿಯಲ್ಲಿ* ತಂದೆಗೆ ಮರಣ ಉಂಟಾಗಲು ಕಾರಣವೇನೆಂದರೆ ...
ರವಿಯು ತಂದೆ ಲಗ್ನಕ್ಕೆ ಅಷ್ಟಮದಲ್ಲಿ ಸ್ಥಿತನಾಗಿರುವ ಕೇತು ನಕ್ಷತ್ರದಲ್ಲಿ ..(ಅದು ಋಕ್ಷ ಸಂಧಿ) ಹಾಗುಾ ಮಾರಕ ಸ್ಥಾನದಲ್ಲಿ ಹಾಗೂ ಮಾರಕಾಧಿಪತಿ ಬಾಧಕಾಧಿಪತಿ ಬುಧನ ಯುತಿಯಲ್ಲಿ ಹಾಗೂ ರಾಹು ಕೇತು ಗ್ರಹಣದಲ್ಲಿ....
ಹಾಗಾಗಿ ಜಾತಕರ ತಂದೆಗೆ ರವಿದೆಶೆ
ರಾಹು ಭುಕ್ತಿ
ಬುಧ ಭುಕ್ತಿ
ಕೇತು ಭುಕ್ತಿ ಯಲ್ಲಿ ತೊಂದರೆ ಉಂಟಾಗುವ ಸಂಭವವಿತ್ತು...
ಹಾಗೂ ಜಾತಕದಲ್ಲಿ ಚಂದ್ರ
ರಾಹು
ಕೇತು ಶನಿ ಎಲ್ಲರೂ 28 ಡಿಗ್ರಿಯಲ್ಲಿ
ಹೆಚ್ಚು ಗ್ರಹಗಳು ಒಂದೇ ಡಿಗ್ರಿಯಲ್ಲಿ ಸ್ಥಿತರಾದರೆ ಏನಾದರೂ ಅನಾಹುತ ಸಂಭವಿಸುತ್ತದೆ .....
ಹೀಗಾಗಿ ಜಾತಕರ ತಂದೆ
ರವಿ ದಶೆ ರಾಹು ಭುಕ್ತಿಯಲ್ಲಿ ಮರಣವನ್ನು ಹೊಂದಿರುತ್ತಾರೆ ....
[16/08, 6:34 PM] Pandit Venkatesh. Astrologer. Kannada: *ಗೃಹಲಕ್ಷ್ಮಿ*
*ಈ ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಮನೆಯ ಎನ್ನುವುದರ ಅರ್ಥವೇನು ?*
🌷ಆ ಮನೆಯ ಶ್ರೀಮಂತಿಕೆ ಧನ. , ಧಾನ್ಯಸಂಪತ್ತು, ಸೌಖ್ಯ ಸಂತೃಪ್ತಿಗಳು, ವ್ರತನಿಯಮ ಸದಾಚಾರಗಳು ಇವುಗಳೆಲ್ಲವನ್ನೂ ಅಥವಾ ಇವುಗಳಲ್ಲಿ ಕೆಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುವುದು ರೂಢಿ. ಅಂತೆಯೇ ಸುಮಂಗಲಿಯ ಮುಖದ ತೇಜಸ್ಸನ್ನು ಕಂಡು ಈಕೆ ಸಾಕ್ಷಾತ್ ಲಕ್ಷ್ಮಿ ಎನ್ನುವುದುಂಟು. ಲಕ್ಷ್ಮಿಯೆಂದರೆ ತೇಜಸ್ಸು, ವರ್ಚಸ್ಸು! ಈ ದೃಷ್ಟಿಯಿಂದ ಪುರುಷರಲ್ಲೂ ಲಕ್ಷ್ಮಿಯು ನೆಲೆಸುತ್ತಾಳೆ. ಆದರೆ ಲಕ್ಷ್ಮಿಯು ಗೃಹಲಕ್ಷ್ಮಿಯಾಗಿ ನೆಲೆಸಬೇಕಾದರಂತೂ ಮನೆಯ ಸಾಧಿಯೇ ಕಾರಣ.ಗೃಹಿಣೀ ಗೃಹಮುಚ್ಯತೇ . ಗೃಹಿಣಿಯೇ ಗೃಹ, ಆಕೆಯೇ ತನ್ನ ಸದಾಚಾರಮೂಲವಾದ
ತಪಸ್ತೇಜದಿಂದ ಗೃಹಲಕ್ಷ್ಮಿಯಾಗುತ್ತಾಳೆ.
🌷“ನಾನು ಪತಿವ್ರತೆಯರಲ್ಲಿ ನೆಲೆಸುತ್ತೇನೆ. ಇತರರ ಮನೆಗಳಲ್ಲಿ ಕಾಲ ಕಳೆಯುವುದರಲ್ಲಿ ಆಸಕ್ತಿಯುಳ್ಳವಳನ್ನೂ ಲಜ್ಞಾವಿಹೀನಳನ್ನೂ ತ್ಯಜಿಸುತ್ತೇನೆ. ಸದಾ ಮಲಗಿರುವವಳನ್ನೂ, ನಿದ್ದೆಯಲ್ಲಿರುವವಳನ್ನೂ, ತ್ಯಜಿಸುತ್ತೇನೆ. ಸದ್ಗುಣ ಸದಾಚಾರಗಳುಳ್ಳ ಶೀಲವತಿಯರಲ್ಲೂ ನೋಟಕ್ಕೆ ಹಿತವಾದ ಸುಂದರಿಯರಲ್ಲೂ ನಾನು ನೆಲೆಸುತ್ತೇನೆ”
🌷ರುಕ್ಕಿಣೀ ದೇವಿಯು ಒಮ್ಮೆ ಲಕ್ಷ್ಮಿಯನ್ನು ಕುರಿತು *'ನೀನು ಎಂತಹ ಸ್ತ್ರೀ-ಪುರುಷರಲ್ಲಿ ವಾಸಿಸುವೆ?'* - ಎಂದು ಪ್ರಶ್ನಿಸಿದಾಗ ಆಕೆ ಕೊಟ್ಟ ಉತ್ತರವಿದು -
*ಸತ್ಯಾಸು ನಿತ್ಯಂ ಪ್ರಿಯದರ್ಶನಾಸು | ಸೌಭಾಗ್ಯಯುಕ್ತಾಸು ಗುಣಾನ್ವಿತಾಸು | ವಸಾಮಿ ನಾರೀಮು ಪತಿವ್ರತಾಸು | ಕಲ್ಯಾಣ ಶೀಲಾಸು ವಿಭೂಷಿತಾಸು* |
🌷“ನಾನು ಅರಳಿದ ಕಮಲಗಳಲ್ಲಿ ವಾಸಿಸುತ್ತೇನೆ.
ಪುರುಷೋತ್ತಮನಾದ ನಾರಾಯಣನಲ್ಲಿ ಏಕಾಗ್ರಚಿತ್ತದಿಂದ ಸರ್ವಭಾವಗಳಲ್ಲೂ ಶರೀರಸ್ಥಳಾಗಿ ನೆಲೆಸುತ್ತೇನೆ. ಏಕೆಂದರೆ ಆತನಲ್ಲಿ ಧರ್ಮವೂ, ಬ್ರಹ್ಮಣ್ಯತೆಯೂ, ಪ್ರಿಯತ್ವವೂ, ಪೂರ್ಣರೂಪದಲ್ಲಿ ಮೈಗೊಂಡಿದೆ. ಅನ್ಯರು ಹಾಗಲ್ಲ. ನಾನು ಅವರಲ್ಲಿ ಶರೀರದಿಂದ ನೆಲೆಸುವುದು ಸಾಧ್ಯವಿಲ್ಲ. ಆದರೆ ಕಟಾಕ್ಷ ರೂಪದ ಭಾವದಿಂದ ಯಾವ ಪುರುಷರಲ್ಲಿ
ನೆಲೆಸುತ್ತೇನೆಯೋ ಅವರು ಧರ್ಮ, ಯಶಸ್ಸು, ಸಂಪತ್ತು ಮತ್ತು ಇಷ್ಟಾರ್ಥಗಳನ್ನು ಪಡೆಯುವವರಾಗುತ್ತಾರೆ”
🌷ಇಲ್ಲಿ ಲಕ್ಷ್ಮಿಯು ಮಂಗಳ, ಸೌಭಾಗ್ಯ, ತೇಜಸ್ಸು ಮೊದಲಾದುವುಗಳ ಪ್ರತೀಕವೆನಿಸಿದ ಭಾವದೇವತೆ. ಆಕೆ ನಾಕರ್ಮಶೀಲೇ ಪುರುಷ ವಸಾಮಿ - ಅಕರ್ಮಣ್ಯರಾದ ಪುರುಷರಲ್ಲಿ ತಾನು ವಾಸಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾಳೆ.
🌷 ಗೃಹಿಣಿಯು ಮಂಗಳಕರವಾದ ದ್ರವ್ಯಗಳನ್ನು ಪೂಜ್ಯ ಭಾವನೆಯಿಂದ ಬಳಸಬೇಕು. ಗೌರವವನ್ನು ಹುಟ್ಟಿಸುವ ರೀತಿಯಲ್ಲಿ ವಸ್ತ್ರ-ಭೂಷಣಾದಿಗಳಿಂದ ದೇಹವನ್ನು ಅಲಂಕರಿಸಿ ಕೊಳ್ಳಬೇಕು. ಗೃಹದಲ್ಲಿ ಶುಭ್ರತೆ ಮತ್ತು ಪವಿತ್ರತೆಗಳಿಗೆ ಲಕ್ಷ್ಯಕೊಡಬೇಕು. ಗೃಹದ ವಸ್ತುಗಳನ್ನೂ ಪಾತ್ರೆಗಳನ್ನೂ ಬೆಳಗಿ ಒಪ್ಪ ಓರಣವಾಗಿಡಬೇಕು. ಒಡೆದು ಶಿಥಿಲವಾದ, ಕೊಳೆಯಾದ ಪಾತ್ರೆಗಳನ್ನು ಸಿಕ್ಕಿದಂತೆ ಹರಡಿರಬಾರದು
*ದೇವತಾಃ ಪಿತರಶೈವ ಉತ್ಸವೇ ಪರ್ವಣೇಷು ವಾ | ನಿರಾಶಾಃ ಪ್ರತಿಗಚ್ಛಂತಿ ಕಶ್ಯಲೋಪಹತಾದ್ ಗೃಹಾತ್* ||
🌷ಅಂದರೆ ಹಬ್ಬ-ಹರಿದಿನಗಳಲ್ಲಿ ದೇವತೆಗಳೂ ಪಿತೃಗಳೂ ಗೃಹಕ್ಕೆ ಆಗಮಿಸುತ್ತಾರೆ; ಅಂದು ಮನೆಯನ್ನು ಸಾರಿಸಿ ಸುಣ್ಣ-ಬಣ್ಣಗಳಿಂದ ಸಂಸ್ಕರಿಸಬೇಕು. ಹಾಗಿಲ್ಲದೆ ಕೊಳಕಾಗಿರುವ ಗೃಹವನ್ನು ಕಂಡೊಡನೆ ಬೇಸರಗೊಂಡು ನಿರಾಶೆಯಿಂದ ಹಿಂತಿರುಗುತ್ತಾರೆ. ಇದು ಲಕ್ಷ್ಮಿಯು ತಾನಾಗಿ ಹೇಳಿದ ಧರ್ಮರಹಸ್ಯ,
Post a Comment