ವರ ಮಹಾಲಕ್ಷ್ಮೀ ಹಬ್ಬದ ವ್ರತ

[04/08, 7:04 AM] Pandit Venkatesh. Astrologer. Kannada: ವರ ಮಹಾಲಕ್ಷ್ಮೀ ಹಬ್ಬದ ವ್ರತ ಕಥೆ ಓದಿ ಸಂಪೂರ್ಣ ಮಾಡಿ ಶ್ರೀ ಮಹಾಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಿ

🙏🙏🙏🙏🙏🙏🙏🙏🙏🙏🙏🙏
ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು 

ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ. ನೀವು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳಿ ಎಂದು ಕೇಳಿಕೊಂಡರು. 

ಋಷಿ ಶ್ರೇಷ್ಠರ ಮಾತನ್ನು ಮೆಚ್ಚಿದ ಸೂತಮಹಾಮುನಿಗಳು ಕಥೆಯೊಂದನ್ನು ಹೇಳಿದರು...

ಋಷಿ ಶ್ರೇಷ್ಠರೇ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದಿದೆ. ನಿಮಗಾಗಿ ಆ ವ್ರತದ ಕಥೆ ಹೇಳುವೆ ಕೇಳಿ ಎಂದರು. 

ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇರಿದಂತೆ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು. 

ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು.

ಒಂದಾನೊಂದು ಕಾಲದಲ್ಲಿ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು,  ಮಹಾದೇವಾ ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು? ಅದನ್ನು ನನಗೆ ಹೇಳು ಎಂದು ಕೇಳಿಕೊಂಡಳು.

ಆಗ ಪರಮೇಶ್ವರನು ಪಾರ್ವತಿಯೇ ಕೇಳು, ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ ಎಂಬುದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದು ಹೇಳಿದನು.

ಸಂತೋಷಗೊಂಡ ಪಾರ್ವತಿ, ಸ್ವಾಮಿ ವರಲಕ್ಷ್ಮೀ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳಿದಳು. 

ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. 
ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. 

ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುದು. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ಹೇಳುತ್ತೇನೆ ಕೇಳು ಎಂದು ಪಾರ್ವತಿಗೆ ಕಥೆಯನ್ನು ಹೇಳಲು ಮುಂದಾದನು ಪರಮೇಶ್ವರನು.

ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ಚಾರುಮತಿ ಎಂಬ ಸ್ತೀ ಇದ್ದಳು. 
ಈ ಚಾರುಮತಿ ದರಿದ್ರಳಾದರೂ ಸದಾಚಾರ ಸಂಪನ್ನಳು, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದಳು.

 ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- ' ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು.

 ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನಗೆ ನಿನ್ನ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ. 

ಯಾರು ನನ್ನನ್ನು ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು. 

ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ. 

ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು" ಎಂದು ನಿದ್ರೆಯಲ್ಲಿ ಉಪದೇಶಿಸಿದ ಮಹಾಲಕ್ಷ್ಮಿಯು ಕಣ್ಮರೆಯಾದಳು.

ಆಗ ಚಾರುಮತಿಯು ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿದಳು. 

ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.

ಆದರೆ, ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. 

ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು. 

ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು ಎಂದು ಹೇಳಿ ಪರಮೇಶ್ವರನು ಕಥೆ ಮುಗಿಸಿದನು.

ಕಥೆ ಕೇಳಿದ ಪಾರ್ವತಿಯು, ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು. 

ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು- 

ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳ ಸ್ನಾನದ ನಂತರ ಶುಭವಸ್ತ್ರಗಳನ್ನು ಧರಿಸಬೇಕು. 

ಮನೆಯಲ್ಲಿ ರಂಗೋಲಿಯಿಂದ  ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು. 

ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಮಾಡಿ, ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. 
ಷೋಡಶೋಪಚಾರ ಮಾಡಿ ಸತ್ಕರಿಸಿ
ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರದೊಂದಿಗೆ ಶಾಸ್ತ್ರೋಸ್ತ್ರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. 

ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು. 

ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು" ಎಂದು ಪರಮೇಶ್ವರನು ವಿವರಿಸಿದನು.

ಸೂತಪುರಾಣಿಕರು ಈ ಕಥೆಯನ್ನು ಋಷಿಗಳಿಗೆ ಹೇಳಿದರು. ಈ ಕಥೆಯನ್ನು ಕೇಳಿದ ಋಷಿಗಳು ಸಂತೋಷ ಭರಿತರಾದರು. 

ಈ ವರಮಹಾಲಕ್ಷ್ಮೀ ವ್ರತವನ್ನು ಯಾರು ಮಾಡುವರೋ ಹಾಗೂ ಈ ಕಥೆಯನ್ನು ಯಾರು ಕೇಳುವರೋ ಅವರಿಗೆ ದಾರಿದ್ರ್ಯ ದುಃಖ ನಾಶವಾಗಿ ಸಂಪತಿನಿಂದ ಸಕಲ ಭಾಗ್ಯಗಳೂ ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ.
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಇದು ಕಳೆದ ವರ್ಷದ ಮಾಹಿತಿ ಅದೇ ಕಥೆ ಮತ್ತೆ ಹಾಕಲಾಗಿದೆ.
[04/08, 7:10 AM] Pandit Venkatesh. Astrologer. Kannada: Shubhodaya... Jai Sri Krishna 🙏🏻🌹🙏🏻
✨ ಓಂ  ನಮೋ ಭಗವತೇ ವಾಸುದೇವಾಯ  ✨

ಕುಂಕುಮವನ್ನು* ಯಾವಾಗ ಮತ್ತು ಹೇಗೆ ಹಚ್ಚಿಕೊಳ್ಳಬೇಕು ?
ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು : ಸ್ನಾನವಾದ ನಂತರ ಬಲಗೈಯ ಅನಾಮಿಕ ದಿಂದ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು. ಕುಂಕುಮವು ಹಣೆಗೆ ಸರಿಯಾಗಿ ಹಿಡಿದುಕೊಳ್ಳಲು ಮೇಣವನ್ನು ಉಪಯೋಗಿಸಬೇಕು. ಹಣೆಗೆ ಮೊದಲು ಮೇಣವನ್ನು ಹಚ್ಚಿ ಅದರ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಅನಾಮಿಕಾದಿಂದ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದರ ಹಿಂದಿನ ಶಾಸ್ತ್ರ: ಅನಾಮಿಕಾದಿಂದ ಪ್ರಕ್ಷೇಪಿತವಾಗುವ ಆಪತತ್ತ್ವದ ಲಹರಿಗಳ ಸಹಾಯದಿಂದ ಕುಂಕುಮದಲ್ಲಿನ ಶಕ್ತಿತತ್ತ್ವವು ಕಡಿಮೆ ಕಾಲಾವಧಿಯಲ್ಲಿ ಜಾಗೃತವಾಗಿ ಆಜ್ಞಾಚಕ್ರದಲ್ಲಿ ಸಂಗ್ರಹವಾಗು ವುದರಿಂದ ಕುಂಕುಮದಲ್ಲಿನ ರಜೋಗುಣದ ಕಾರ್ಯಕ್ಕೆ ಶಕ್ತಿಯ ಬಲವು ಪ್ರಾಪ್ತವಾಗುತ್ತದೆ.

ಓರ್ವ ಸ್ತ್ರೀಯು ಇತರ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾವನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ : ----

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಅವರಲ್ಲಿರುವ ಕೆಟ್ಟಶಕ್ತಿಗಳು ಬೆರಳಿನ ಮೂಲಕ ನಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

1.‘ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದುಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.
2. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.
3. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.’
4. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ !

‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯುಜಾಗೃತವಾದರೆ ಆ ಶಕ್ತಿಯಲ್ಲಿ  ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮ ವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’(ಮುಂದುವರೆಯುವುದು )
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಕೃಪೆ - ರಾವ್ ಕಲೆಕ್ಷನ್ಸ್
[04/08, 8:28 AM] Pandit Venkatesh. Astrologer. Kannada: ಕೇಳಿದವರಿಗಾಗಿ ಕಳಸದ ವಿಸರ್ಜನೆ ಹಾಗೂ ಷೋಡಶೋಪಚಾರದ ಮಾಹಿತಿ.

ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ದೇವಿಯ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವನ್ನು ದೇವತೆಗೆ ಅರ್ಪಿಸಿ ನಮಸ್ಕರಿಸಬೇಕು.

ಪ್ರಾಣ ಪ್ರತಿಷ್ಟಾಪನೆ ಬಳಿಕ ನಂತರ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸಿ, ಅಲಂಕಾರ ಮಾಡಬೇಕು.
ಅಲಂಕಾರವಾದ ಬಳಿಕ ಪೂಜೆಗೆ ಯಾವುದೇ ವಿಘ್ನಗಳು ಬಾರದಿರುವುದಕ್ಕೆ, ನಮ್ಮ ಕಾರ್ಯವನ್ನು ಸಿದ್ಧಿ ಮಾಡು ಎಂದು ವಿಘ್ನೇಶ್ವರನ ಬಳಿ ಪ್ರಾರ್ಥಿಸಬೇಕು.

ಗಣಪತಿಗೆ ಪೂಜೆ ಮಾಡುವಾಗ ಅಷ್ಟನಾಮ ಸಹಸ್ರ ನಾಮಾವಳಿಯನ್ನು ಮಾಡಬೇಕು. 

ಹೇಳಲು ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಗಣಪತಿಯ ಸಹಸ್ರ ನಾಮಾವಳಿಯ ಸಿಡಿಗಳು ಲಭ್ಯವಿದೆ ಇದನ್ನು ಹಾಕಬಹುದು

ದೇವಿಯ ವಿಸರ್ಜನೆ...
ವರಮಹಾಲಕ್ಷ್ಮಿ ದಿನ ಮುಗಿಯಿತು....ಪೂಜೆ ಮಾಡಿ ಆಯಿತೆಂದು ಹೇಗೆಂದರೆ ಹಾಗೆ ದೇವಿಯನ್ನು ತೆಗೆದುಬಿಡುವುದಲ್ಲ...

ಪ್ರಾಣಪ್ರತಿಷ್ಠಾಪನೆ ಹಾಗೂ ಕಳಶವನ್ನು ಹೇಗೆ ಶ್ರದ್ಧಾ ಭಕ್ತಿ, ನೀತಿ, ನಿಯಮಗಳಿಂದ ಮಾಡುತ್ತೇವೆಯೋ ಹಾಗೆಯೇ ದೇವಿಯ ಕಳಶ ವಿಸರ್ಜನೆಯನ್ನೂ ಕ್ರಮಬದ್ಧವಾಗಿ, ಪದ್ಧತಿಯಿಂದ ಮಾಡಬೇಕು.

 ಸಾಮಾನ್ಯವಾಗಿ ವರಲಕ್ಷ್ಮಿಯನ್ನು ಒಂದು, ಮೂರು ಹಾಗೂ ಐದು ದಿನಗಳ ಕಾಲ ಮನೆಯಲ್ಲಿಟ್ಟು ಪೂಜಿಸುವುದುಂಟು.

ದೇವಿಯ ವಿಸರ್ಜನೆ ಮಾಡುವಾಗ ಸುಮಂಗಲಿಯರು ಸಂಕಲ್ಪ ಮುದ್ರೆಯಲ್ಲಿ ಕುಳಿತುಕೊಂಡು ಕೈಯ ನಡುಬೆರಳಿನಿಂದ ನೆಲದಲ್ಲಿ ಬರೆದಿರುವ ಚೌಕದ ಗೆರೆಯನ್ನು ಭಿನ್ನಗೊಳಿಸಬೇಕು. 

ಪ್ರತಿಷ್ಠಾಪನೆ ಉತ್ತಾರಾಭಿಮುಖವಾಗಿದ್ದರೆ ಉತ್ತರದ ಗೆರೆಯನ್ನು ಭಿನ್ನ ಮಾಡಬೇಕು. ಪೂರ್ವಾಭಿಮುಖವಾಗಿದ್ದರೆ ಪೂರ್ವದ ಗೆರೆಯನ್ನು ಭಿನ್ನಗೊಳಿಸಬೇಕು. 

ನಂತರ ನಿಧಾನವಾಗಿ ಕಳಶವನ್ನು ಅಲುಗಾಡಿಬೇಕು.

ಇದೆಲ್ಲಾ ಆದ ಮೇಲೆ ಒಳ್ಳೆಯ ಸಮಯ ನೋಡಿ ದೇವಿಯ ಬಳಿಯಿರುವ ಎಲ್ಲಾ ಸಾಮಾಗ್ರಿಗಳನ್ನು ನಿಧಾನವಾಗಿ ತೆಗೆಯಬೇಕು. 

ಕಲಶ ಪಾತ್ರೆಯಲ್ಲಿರುವ ಅಕ್ಕಿ ಹಾಗೂ ತೆಂಗಿನ ಕಾಯಿಯನ್ನು ಸಿಹಿ ಅಡುಗೆಗೆ ಉಪಯೋಗಿಸಿ ಮಕ್ಕಳಿಗೆ ಹಂಚಬೇಕು.
ಚೌಕ ಹಾಗೂ ರಂಗೋಲಿ ಬರೆದ ಪುಡಿ, ಹೂವು, ಎಲ್ಲಾ ವಸ್ತುವನ್ನು ತೆಗೆದು ಎಲ್ಲೆಂದರಲ್ಲಿ ಬಿಸಾಡದೆ ಗಲೀಜು ಮಾಡದೆ ನದಿ ದಡದಲ್ಲಿ ಇಡಬೇಕು. 

ನದಿಗೆ ಎಸೆಯಬಾರದು. ನದಿಗೆ ಎಸೆದರೆ ದೋಷ ಉಂಟಾಗುತ್ತದೆ. ಪೂಜೆ ಮಾಡುವುದು ಎಷ್ಟು ಮುಖ್ಯವೋ ಪೂಜೆ ನಂತರವಿರುವ ಪದ್ಧತಿಗಳನ್ನೂ ಅನುಸರಿಸುವುದೂ ಸಹ ಅಷ್ಟೇ ಮುಖ್ಯ.

ಇನ್ನೂ ಷೋಡಶೊಪಚಾರ

ಈಗ ಶಾಸ್ತ್ರೊಕ್ತ ಪೂಜಾ ವಿಧಾನ ತಿಳಿದುಕೊಳ್ಳಿ.

"ಪದ್ಮಾಸನೆ ಪದ್ಮಕಾರೇ ಸರ್ವ ಲೋಕೈಕ ಪೂಜಿತೆ
ನಾರಾಯಣ ಪ್ರಿಯದೇವಿ ಸುಪ್ರೀತಾ ಭಾವ ಸರ್ವದಾ"...

ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. 

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ (coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು.

ಸಾಮನ್ಯವಾಗಿ ಎಲ್ಲ ಪೂಜೆಗಳಿಗೂ ಉಪಯೋಗಿಸುವ ಸಾಮಗ್ರಿಗಳು: 
ರಂಗೋಲಿ , ಮಣೆ / ಮಂಟಪ, ದೇವರ ವಿಗ್ರಹ, ದೇವರ ಪಟ, ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಹತ್ತಿ ಬತ್ತಿ, ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು, ಪೂಜಾ ವಿಧಾನ ಇರುವ ಪುಸ್ತಕ /ಕ್ಯಾಸೆಟ್ / ಸಿ.ಡಿ. ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಶ್ರೀಗಂಧ, ಊದಿನ ಕಡ್ಡಿ, ಹೂವು, ಪತ್ರೆ, ಗೆಜ್ಜೆ ವಸ್ತ್ರ, ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ, ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ, ನೈವೇದ್ಯ - ಪಾಯಸ, ಹುಗ್ಗಿ, ಅನ್ನ, ಕೋಸಂಬರಿ , ಇತ್ಯಾದಿ ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ, ಆರತಿ ತಟ್ಟೆ, ಸೊಡಲು, ಹೂಬತ್ತಿ,

ಕೆಲವು ಪೂಜೆಗಳಲ್ಲಿ ಅಧಿಕವಾಗಿ ಇನ್ನಷ್ಟು ಸಾಮಗ್ರಿಗಳನ್ನು ಉಪಯೋಗಿಸುತ್ತೀವಿ :

ಕಳಶ, ಅರಿಶಿನದ ಕೊನೆ, ಜನಿವಾರ, ಅರಿಶಿನ ದಾರ, ಮರದ ಜೊತೆ / ಬಾಗಿನ, ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ, ಸೋಬಲಕ್ಕಿ, ಉಪಾಯನ ದಾನ, ನವಗ್ರಹ, ಮಂಡಲ ......ಇತ್ಯಾದಿ ಇವುಗಳೊಂದಿಗೆ ಇನ್ನು ಹಲವಾರು ವಸ್ತುಗಳ ಬಳಕೆ ಮಾಡಬಹುದು ಮುಖ್ಯವಾಗಿ ಅಲಂಕಾರ ಮಾಡುವುದಕ್ಕೆ. ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ . ಇದು ಪ್ರತಿಯೊಬ್ಬರ ಆಸಕ್ತಿ ಮತ್ತು ಅಭಿರುಚಿ ಮೇಲೆ ಅವಲಂಭಿಸಿದೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು.

ಪೂಜಾ ವಿಧಾನ :
ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ. ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು. 
ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.

ಸಂಕಲ್ಪ ಮಂತ್ರ

ಶುಭೇ ಶೋಭನೇ ಮುಹೂರ್ತೇ
ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ
ವರಾಹ ಕಲ್ಪೇ ವೈವಸ್ವತ
ಮನ್ವಂತರೇ ಕಲಿಯುಗೇ ಪ್ರಥಮ
ಪಾದೇ ಜಂಬೋ ದ್ವೀಪೇ
ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ
ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್
ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ
ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ
ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,...
ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ...
ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ
ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ
ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ,
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಾಂತ್ಯರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ
ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ
ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

ಧ್ಯಾನ - ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು. ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:

1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು. 

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7.ವಸ್ತ್ರ - ಧರಿಸಲು ಉಡುಪು ಕೊಡುವುದು. ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ ( ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ) ಸಮರ್ಪಿಸುವುದು.

8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ, ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು. 12.ದೀಪ - ದೀಪ ಸಮರ್ಪಣೆ ಮಾಡುವುದು.

13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.

ಹೀಗೆ ಕ್ರಮವಾಗಿ ಪೂಜೆ ಮಾಡಿ ದೇವರನ್ನು ಸಂತೃಪ್ತಿ ಪಡಿಸಿದರೆ, ಭಗವಂತನು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾನೆ

ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.

ಯಮುನಾ ಪೂಜೆಯಿಂದ ಭಕ್ತರು ಮಾನಸಿಕ ಮತ್ತು ಧಾರ್ಮಿಕ ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಅವರ ಜೀವನದಲ್ಲಿ ಈ ಪೂಜೆಯಿಂದ ಸುಖ, ನೆಮ್ಮದಿ ಕಂಡುಬರುತ್ತದೆ. ಅಂತೆಯೇ ಹಲವಾರು ಕಷ್ಟಗಳಿಂದ ಪರಿಹಾರ ಕೂಡ ದೊರೆಯುತ್ತದೆ ಎಂಬುದಾಗಿ ನಂಬಲಾಗಿದೆ.

 ವರಮಹಾಲಕ್ಷ್ಮಿ ಪೂಜೆಯನ್ನು ನಡೆಸುವುದರಿಂದ ಲಕ್ಷ್ಮೀ ಕಟಾಕ್ಷ ಹೇಗೆ ದೊರೆಯುತ್ತದೆಯೋ ಅಂತೆಯೇ ಈ ವ್ರತದಿಂದ ಕೃಷ್ಣನ ಕೃಪಾಕಟಾಕ್ಷ ನಮ್ಮ ಮೇಲಿರುತ್ತದೆ ಎಂದಾಗಿದೆ.

 ಕಳಸದಲ್ಲಿ ಐದು ವಿಳೆದೆಲೆ ಅಥವಾ ಐದು ಮಾವಿನ ಎಲೆ ಇಡುತ್ತೇವೆ ಈ ಐದು ಎಲೆಗಳು ಐದು ಪಂಚೇಂದ್ರಿಯಗಳ ಸಮ ಎಂದು ಹೇಳುತ್ತಾರೆ 

ಹಾಗೂ ಕಳಸದ ಮೇಲೆ ಇಡುವ ಕಾಯಿ ಸಾಕ್ಷಾತ್ ದೇವರ ಮುಖ ಇದ್ದಹಾಗೆ ಎಂದು ಹೇಳುತ್ತಾರೆ  ಈ ರೀತಿಯಾಗಿ ಕಳಸವನ್ನು ಪ್ರತಿಷ್ಠಾಪನೆ ಮಾಡಿದಾಗ ಕಳಸದ ಸ್ವರೂಪದಲ್ಲಿ ದೇವರು ಜೀವಂತವಾಗಿ ಆಹ್ವಾನ ಆಗಿದ್ದಾರೆ ಎಂದು ಅರ್ಥ ದೇವರ ಕಳಸದಲ್ಲಿ ಬಂದು ನೆಲೆಸಿರುತ್ತಾನೆ

 ಈ ರೀತಿಯಾಗಿ ಕಳಸ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದರೆ ಎಲ್ಲಾ ಪೂಜೆಗಳು ಉತ್ತಮ ಫಲವನ್ನು ಕೊಡುತ್ತವೆ ಗಪೂಜೆ ಮುಗಿದ ನಂತರ ಈ ಕಳಸದ ನೀರನ್ನು ಯಾರು ತುಳಿಯದೆ ಇರುವ ಜಾಗಕ್ಕೆ ತೆಂಗಿನಮರ ಅಥವಾ ಯಾರು ಆ ಸ್ಥಳಕ್ಕೆ ಹೋಗದೆ ಇರುವ ಗಿಡಕ್ಕೆ ಹಾಕಬೇಕು ಅಥವಾ ಯಾವುದಾದರೂ ನಿಮ್ಮ ಹತ್ತಿರ ಇರುವ ನದಿಗೆ ವಿಸರ್ಜನೆ ಮಾಡಬೇಕು.  ಕಳಸದ ನೀರನ್ನು ಹೊರಗಡೆ
ಹಾಕುವ ಮೊದಲು ಮನೆಯಲ್ಲಿ ಇರುವವರು ಆ ಕಳಸದ ನೀರನ್ನು ಒಮ್ಮೆ ಪ್ರೋಕ್ಷಣೆ ಮಾಡಿಕೊಳ್ಳಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಹಾಗೂ ನಿಮ್ಮ ದೇಹದಲ್ಲಿ ಇರುವ ಎಲ್ಲಾ ದರಿದ್ರಗಳು ಹೋಗುತ್ತವೆ ಹಾಗೂ ಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತವೆ ಹಾಗಾಗಿ ಒಂದು ಎಲೆಯನ್ನು ತೆಗೆದುಕೊಂಡು ಕಳಸದ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಬಹಳಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. 

 ಕಳಸದ ಕಾಯಿಯನ್ನು ದೇವರ ಮುಖ ಎಂದು ಅಂದುಕೊಳ್ಳುತ್ತೇವೆ ಹಾಗಾಗಿ ಆ ಕಾಯಿಯನ್ನು ಒಡೆಯ ಬಾರದು ಅದನ್ನು ಯಾವುದಾದರೂ ನದಿಗೆ ವಿಸರ್ಜನೆ ಮಾಡಬೇಕು ನದಿ ಇಲ್ಲವಾದರೆ ದೇವಸ್ಥಾನಗಳಲ್ಲಿ ಯಾವುದಾದರೂ ಹೋಮ ನಡೆಯುತ್ತಿದ್ದರೆ ಆ ಕಾಯಿಯನ್ನು ಕೊಡಬೇಕು ಗೆಳೆಯರೆ ಹಾಗಾಗಿ ಯಾವುದೇ ಕಾರಣಕ್ಕೂ ಕಳಸದ ಕಾಯಿಯನ್ನು ಒಡೆಯಬಾರದು ನೀರಿನಲ್ಲಿ ವಿಸರ್ಜಿಸಬೇಕು 

ವರಮಹಾಲಕ್ಷ್ಮಿ ಹಬ್ಬದ ದಿನ ದೇವಿಗೆ ಮಡಲಕ್ಕಿಯನ್ನು ಇಡಬೇಕು ಮಡಲಕ್ಕಿಯನ್ನು ಇಟ್ಟರೆ ಒಳ್ಳೆಯದು.
ಅದನ್ನು ಮನೆ ದೇವರಿಗೆ ಅಥವಾ ಹತ್ತಿರದ ದೇವಸ್ಥಾನಕ್ಕೆ ಕೊಡಿ .

ಬ್ರಾಹ್ಮಣರಿಗೆ ಕೊಡಲು ತಾಂಬೂಲ ದಕ್ಷಿಣೆ ಸಹಿತ ಇಟ್ಟಿರಬೇಕು ಪೂಜೆ ಮುಗಿದ ನಂತರ ಅದನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು ಆಶೀರ್ವಾದ ಪಡೆದು ಕೊಳ್ಳಿ ವರಮಹಾಲಕ್ಷ್ಮೀ ಪೂಜೆ ಫಲ ಸಂಪೂರ್ಣ ಸಿಗುತ್ತವೆ.

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
[04/08, 8:34 AM] Pandit Venkatesh. Astrologer. Kannada: ನಾಳೆ ದೇಶಾದ್ಯಂತ ವರಮಹಾಲಕ್ಷ್ಮಿ ಪೂಜೆ. ವರಮಹಾಲಕ್ಷ್ಮಿ ಪೂಜೆಯಲ್ಲಿ ನಾನಾ ಹಂತಗಳಿವೆ. 16 ವರಮಹಾಲಕ್ಷ್ಮಿ ಪೂಜಾ ಹಂತಗಳನ್ನು ಒಳಗೊಂಡಿರುವ ಪೂಜೆಯನ್ನು ಶೋಡಶೋಪಚಾರವೆಂದು 32 ಹಂತಗಳನ್ನೊಳಗೊಂಡಿರುವ ವರಮಹಾಲಕ್ಷ್ಮಿ ಪೂಜೆಯನ್ನು ದ್ವಾತ್ರಿಂಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದ್ವಾತ್ರಿಂಶೋಪಚಾರ ಪೂಜೆಯನ್ನು ಬಟ್ಟಿಶೋಪಚಾರ ಪೂಜೆಯೆಂದೂ ಕೂಡ ಕರೆಯಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಯ ಹಂತಗಳಾವುವು ತಿಳಿದುಕೊಳ್ಳಿ.

​ಧ್ಯಾನ

ವರಮಹಾಲಕ್ಷ್ಮಿ ಪೂಜೆಯನ್ನು ಲಕ್ಷ್ಮಿಯ ಧ್ಯಾನದೊಂದಿಗೆ ಪ್ರಾರಂಭಿಸಬೇಕು. ನಿಮ್ಮ ಮುಂದೆ ಈಗಾಗಲೇ ಸ್ಥಾಪಿಸಲಾದ ಶ್ರೀ ವರಮಹಾಲಕ್ಷ್ಮಿ ಪ್ರತಿಮೆಯ ಮುಂದೆ ಕುಳಿತು ಧ್ಯಾನವನ್ನು ಮಾಡಬೇಕು. ವರಮಹಾಲಕ್ಷ್ಮಿಯನ್ನು ಈ ಮಂತ್ರದೊಂದಿಗೆ ಧ್ಯಾನಿಸಿ:

ಮಂತ್ರ: ಕ್ಷೀರಸಾಗರ ಸಂಭೂತಂ ಕ್ಷೀರವರ್ಣಸಮಪ್ರಭಂ |

ಕ್ಷೀರವರ್ಣಾಸಮಂ ವಸ್ತ್ರಂ ದಧಾನಾಂ ಹರಿವಲ್ಲಭಂ ||

ಶುಕ್ರವಾರದ ಪೂಜೆ: ಇರುವೆಗಳಿಗೆ ಆಹಾರ ನೀಡಿದರೆ ಆರ್ಥಿಕ ಸಮಸ್ಯೆ ದೂರಾಗುವುದು..!

​ಆವಾಹನ

ಶ್ರೀ ವರಮಹಾಲಕ್ಷ್ಮಿ ಧ್ಯಾನವನ್ನು ಮಾಡಿದ ನಂತರ ಆವಾಹನ ಮುದ್ರದ ಮೂಲಕ ಲಕ್ಷ್ಮಿ ಮೂರ್ತಿಯ ಮುಂದೆ ಆವಾಹನ ಮಂತ್ರವನ್ನು ಅನುಸರಿಸಬೇಕು. ಆವಾಹನ ಮುದ್ರೆಯಲ್ಲಿ ಎರಡು ಅಂಗೈಗಳನ್ನು ಮುಂದಕ್ಕೆ ಚಾಚಿ ಎರಡೂ ಹೆಬ್ಬೆರಳುಗಳನ್ನು ಒಳಕ್ಕೆ ಮಡಚಿರಬೇಕು.

ಮಂತ್ರ: ಬ್ರಾಹ್ಮಿ ಹಂಸ ಸಮಾರೂಢ ಧಾರಿಣ್ಯಕ್ಷಕಮಂಡಲು |

ವಿಷ್ಣು ತೇಜೋಧಿಕ ದೇವಿ ಸ ಮಾಮ್‌ ಪಾತು ವರಪ್ರದ ||

​ಆಸನ

ಶ್ರೀ ವರಮಹಾಲಕ್ಷ್ಮಿಯನ್ನು ಆವಾಹನ ಮಾಡಿದ ನಂತರ ಅಂಜಲಿಯಲ್ಲಿ ಅಂದರೆ ಎರಡೂ ಅಂಗೈಯನ್ನು ಜೋಡಿಸಿ 5 ಹೂವುಗಳನ್ನು ತೆಗೆದುಕೊಂಡು ಈ ಮಂತ್ರವನ್ನು ಜಪಿಸುತ್ತಾ ದೇವಿಗೆ ಆಸನ ಮಾಡಲು ಮೂರ್ತಿಯ ಮುಂದೆ ಇಡಬೇಕು.

ಮಂತ್ರ: ಮಹೇಶ್ವರಿ ಮಹಾದೇವಿ ಆಸನಂ ತೇ ದದಾಮ್ಯಹಂ |

ಮಹೈಶ್ವರ್ಯಸಮಾಯುಕ್ತಂ ಬ್ರಾಹ್ಮಣಿ ಬ್ರಾಹ್ಮಣಃ ಪ್ರಿಯೆ ||

​ಪಾದ್ಯ

ಶ್ರೀ ವರಮಹಾಲಕ್ಷ್ಮಿಗೆ ಆಸನವನ್ನು ಅರ್ಪಿಸಿದ ನಂತರ ಆಕೆಯ ಪಾದಗಳನ್ನು ನೀರಿನಿಂದ ತೊಳೆಯಬೇಕು. ಪಾದಗಳನ್ನು ತೊಳೆಯುವಾಗ ಈ ಮಂತ್ರಗಳನ್ನು ತಪ್ಪದೇ ಜಪಿಸಿ.

ಮಂತ್ರ: ಕುಮಾರ ಶಕ್ತಿ ಸಂಪನ್ನೆ ಕೌಮರಿ ಶಿಖಿವಾಹನೇ |

ಪಾದ್ಯಂ ದದಾಮ್ಯಹಂ ದೇವಿ ವರದೇ ವರಲಕ್ಷಣೇ ||

​ಅರ್ಘ್ಯ

ಲಕ್ಷ್ಮಿಯ ಪಾದಗಳನ್ನು ತೊಳೆದ ನಂತರ ಮಂತ್ರವನ್ನು ಜಪಿಸುತ್ತಾ ಶ್ರೀ ವರಮಹಾಲಕ್ಷ್ಮಿಯ ಮುಖ್ಯ ಅಭಿಷೇಕಕ್ಕೆ ನೀರನ್ನು ಅರ್ಪಿಸಿ.

ಮಂತ್ರ: ತೀರ್ಥೋದಕೈರ್ಮಹಾದಿವ್ಯೈ ಪಾಪಸಂಹಾರಕಾರಕೈಃ |

ಅರ್ಘ್ಯಂ ಗೃಹಣ ಭೋ ಲಕ್ಷ್ಮಿ ದೇವಾನಾಮುಪಕಾರಿಣಿ ||

​ಆಚಮನ

ವರಮಹಾಲಕ್ಷ್ಮಿಗೆ ಅರ್ಘ್ಯವನ್ನು ನೀಡಿದ ನಂತರ ಮಂತ್ರವನ್ನು ಅನುಸರಿಸುತ್ತಾ ಆಚಮನಕ್ಕಾಗಿ ವರಮಹಾಲಕ್ಷ್ಮಿಗೆ ನೀರನ್ನು ಅರ್ಪಿಸಿ.

ಮಂತ್ರ: ವೈಷ್ಣವಿ ವಿಷ್ಣುಸಂಯುಕ್ತೇ ಅಸಂಖ್ಯಾಯುಧಧಾರಿಣಿ |

ಆಚಮ್ಯತಾಂ ದೇವಪೂಜ್ಯೆ ವರದೇ ಅಸುರಮರ್ದಿನಿ ||

​ಪಂಚಾಮೃತ ಸ್ನಾನ

ಆಚಮನ ಪೂರ್ಣಗೊಂಡ ನಂತರ ಲಕ್ಷ್ಮಿ ದೇವಿಗೆ ಪಂಚಾಮೃತ ಸ್ನಾನವನ್ನು ಮಾಡಿಸಬೇಕು. ಪಂಚಾಮೃತ ಸ್ನಾನದ ಮಂತ್ರ ಹೀಗಿದೆ.

ಮಂತ್ರ: ಪದ್ಮೇ ಪಂಚಾಮೃತೈಃ ಶುದ್ಧೈಃ ಸ್ನಪಯಿಷ್ಯೇ ಹರಿಪ್ರಿಯೆ |

ವರದೇ ಶಕ್ತಿ ಸಂಭೂತೇ ವರದೇವಿ ವರಪ್ರಿಯೆ ||

ಸ್ನಾನ

ವರಲಕ್ಷ್ಮಿಗೆ ಪಂಚಾಮೃತ ಸ್ನಾನವನ್ನು ಮಾಡಿಸಿದ ನಂತರ ನೀರಿನಿಂದ ಆಕೆಗೆ ಸ್ನಾನವನ್ನು ಮಾಡಿಸಬೇಕು. ಲಕ್ಷ್ಮಿಯನ್ನು ನೀರಿನಿಂದ ಸ್ನಾನ ಮಾಡಿಸುವಾಗ ಈ ಮಂತ್ರವನ್ನು ಪಠಿಸಿ.

ಮಂತ್ರ: ಗಂಗಾಜಲಂ ಸಮಾನೀತಂ ಸುಗಂಧೀ ದ್ರವ್ಯ ಸಮಾಯುತಂ |

ಸ್ನಾನಾರ್ಥಂ ತೇ ಮಯ ದತ್ತಂ ಗೃಹಣ ಪರಮೇಶ್ವರಿ ||

ವಸ್ತ್ರ

ಸ್ನಾನದ ನಂತರ ದೇವಿಗೆ ಹೊಸ ವಸ್ತ್ರವನ್ನು ಧರಿಸಬೇಕು. ಆಕೆಗೆ ವಸ್ತ್ರವನ್ನು ಧರಿಸುವಾಗ ಪಠಿಸಬೇಕಾದ ಮಂತ್ರ ಹೀಗಿದೆ.

ಮಂತ್ರ: ರಜತಾದ್ರಿಸಮಂ ದಿವ್ಯಂ ಕ್ಷೀರಸಾಗರ ಸನ್ನಿಭಂ |

ಚಂದ್ರಪ್ರಭಾಸಂ ದೇವಿ ವಸ್ತ್ರಂ ತೇ ಪ್ರದದಾಮ್ಯಹಂ ||

​ಕಂಠಸೂತ್ರ

ದೇವಿಯ ಕೊರಳಿಗೆ ಹಾರವನ್ನು ಧರಿಸುವಾಗ ಈ ಮಂತ್ರವನ್ನು ಪಠಿಸಿ, ನಂತರ ಹಾರವನ್ನು ಹಾಕಿರಿ.

ಮಂತ್ರ: ಮಾಂಗಲ್ಯಮಣಿಸಂಯುಕ್ತಂ ಮುಕ್ತಫಲಸಮನ್ವಿತಂ |

ದತ್ತಂ ಮಂಗಲಸೂತ್ರಂ ತೇ ಗೃಹಣ ಸುರವಲ್ಲಭೇ ||

​ಆಭರಣ

ದೇವಿಗೆ ಆಭರಣವನ್ನು ಹಾಕುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: ಸುವರ್ಣಭೂಷಿತಂ ದಿವ್ಯಂ ನಾನಾರತ್ನಸುಶೋಭಿತಂ |

ತ್ರೈಲೋಕ್ಯ ಭೂಷಿತೇ ದೇವಿ ಗೃಹಣಾಭರಣಂ ಶುಭಂ ||

ಗಂಧ ಸಮರ್ಪಣ

ಲಕ್ಷ್ಮಿ ದೇವಿಗೆ ಗಂಧವನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: ರಕ್ತಗಂಧಂ ಸುಗಂಧಧ್ಯಮಷ್ಟಗಂಧಸಮನ್ವಿತಂ |

ದಾಸ್ಯಾಮಿ ದೇವಿ ವರದೇ ಲಕ್ಷ್ಮಿರ್ದೇವಿ ಪ್ರಸಿದ ಮೇ |

​ಸೌಭಾಗ್ಯ ದ್ರವ್ಯ

ಲಕ್ಷ್ಮಿ ದೇವಿಗೆ ಅರಶಿಣ, ಕುಂಕುಮ, ಸಿಂಧೂರ, ಕಣ್ಕಪ್ಪು ಸೇರಿದಂತೆ ಇನ್ನಿತರ ಸೌಭಾಗ್ಯ ವಸ್ತುಗಳನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: ಹರಿದ್ರಾಂ ಕುಂಕುಮಾಂ ಚೈವ ಸಿಂಧೂರಂ ಕಾಜಲಾನ್ವಿತಂ |

ಸೌಭಾಗ್ಯದ್ರವ್ಯಸಮ್ಯುಕ್ತಂ ಗೃಹಣ ಪರಮೇಶ್ವರಿ ||

​ಪುಷ್ಪ ಸಮರ್ಪಣೆ

ದೇವಿಗೆ ಅಲಂಕಾರವನ್ನು ಮಾಡಿದ ನಂತರ ಈ ಮಂತ್ರದೊಂದಿಗೆ ಹೂವುಗಳನ್ನು ಅರ್ಪಿಸಬೇಕು.

ಮಂತ್ರ: ನಾನಾವಿಧಾನಿ ಪುಷ್ಪಾಣಿ ನಾನಾ ವರ್ಣಯುತಾನಿ ಚ |

ಪುಷ್ಪಾಣಿ ತೇ ಪ್ರಯಚ್ಚಾಮಿ ಭಕ್ತಯಾ ದೇವಿ ವರಪ್ರದೇ ||

​ಅಂಗ ಪೂಜನಾ

ಈಗ ವರಲಕ್ಷ್ಮಿಯನ್ನು ಪೂಜಿಸಬೇಕು. ಗಂಧ, ಅಕ್ಷತೆ ಮತ್ತು ಪುಷ್ಪವನ್ನು ಎಡಗೈಯಲ್ಲಿ ತೆಗೆದುಕೊಂಡು ಮಂತ್ರವನ್ನು ಹೇಳುತ್ತ ಬಲಗೈಯಿಂದ ಶ್ರೀ ವರಲಕ್ಷ್ಮಿ ಮೂರ್ತಿಗೆ ಅರ್ಪಿಸಬೇಕು.

ಮಂತ್ರ: ಓಂ ವರಲಕ್ಷ್ಮ್ಯೈ ನಮಃ ಪಾದೌ ಪೂಜಯಾಮಿ |

ಓಂ ಕಮಲವಾಸಿನ್ಯೈ ನಮಃ ಗುಲ್ಫೌ ಪೂಜಯಾಮಿ |

ಓಂ ಪದ್ಮಲಯಾಯೈ ನಮಃ ಜಂಘೇ ಪೂಜಯಾಮಿ |

ಓಂ ಶ್ರೀಯ್ಯೈ ನಮಃ ಜಾನುನಿ ಪೂಜಯಾಮಿ |

ಓಂ ಇಂದಿರಾಯ್ಯೈ ನಮಃ ಉರು ಪೂಜಯಾಮಿ |

ಓಂ ಹರಿಪ್ರಿಯ್ಯೈ ನಮಃ ನಾಭಿ ಪೂಜಯಾಮಿ |

ಓಂ ಲೋಕದಾತ್ರ್ಯೈ ನಮಃ ಸ್ತಾನೌ ಪೂಜಯಾಮಿ |

ಓಂ ವಿದಾತ್ರ್ಯೈ ನಮಃ ಕಠಂ ಪೂಜಯಾಮಿ |

ಓಂ ದಾತ್ರ್ಯೈ ನಮಃ ನಾಸಾಂ ಪೂಜಯಾಮಿ |

ಓಂ ಸರಸ್ವತ್ಯೈ ನಮಃ ಮುಖಂ ಪೂಜಯಾಮಿ |

ಓಂ ಪದ್ಮಾನಿಧಯೇ ನಮಃ ನೇತ್ರೇ ಪೂಜಯಾಮಿ |

ಓಂ ಮಾಂಗಲ್ಯೈ ನಮಃ ಕರ್ಣೌ ಪೂಜಯಾಮಿ |

ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ ಶಿರಃ ಪೂಜಯಾಮಿ |

ಓಂ ಶ್ರೀ ಮಹಾಕಾಳ್ಯೈ ನಮಃ ಸರ್ವಾಂಗಂ ಪೂಜಯಾಮಿ |

​ಧೂಪ

ಲಕ್ಷ್ಮಿ ದೇವಿಗೆ ಧೂಪವನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸಬೇಕು

ಮಂತ್ರ: ಧೂಪಂ ದಾಸ್ಯಾಮಿ ತೇ ದೇವಿ ಗೋ ಘೃತೇನ ಸಮನ್ವಿತಂ |

ಪ್ರತಿಗ್ರಹಣ ಮಹಾದೇವಿ ಭಕ್ತಾನಾಂ ವರದಪ್ರಿಯೆ |

​ದೀಪ

ಲಕ್ಷ್ಮಿ ದೇವಿಗೆ ದೀಪವನ್ನು ಬೆಳಗುವಾಗ ಈ ಕೆಳಗಿನ ಮಂತ್ರವನ್ನು ಹೇಳಬೇಕು.

ಮಂತ್ರ: ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |

ದೀಪಂ ಗ್ರಹಣ ದೇವೇಶಿ ತ್ರೈಲೋಕ್ಯತಿಮಿರಾಪಹಂ ||

ಈ ತಪ್ಪುಗಳಿಂದ ಲಕ್ಷ್ಮಿ ಕೋಪಿಸಿಕೊಳ್ಳುವಳು.. ನೀವು ಇದನ್ನು ಮಾಡುತ್ತಿರಬಹುದು..!

​ನೈವೇದ್ಯ

ದೀಪದ ನಂತರ ದೇವಿಗೆ ನೈವೇದ್ಯವನ್ನು ಈ ಮಂತ್ರದೊಂದಿಗೆ ಅರ್ಪಿಸಬೇಕು.

ಮಂತ್ರ: ನೈವೇದ್ಯಂ ಪರಂ ದಿವ್ಯಂ ದೃಷ್ಟಿಪ್ರಿತಿಕರಂ ಶುಭಂ |

ಭಕ್ಷ್ಯಭೋಜ್ಯಾದಿಸಂಯುಕ್ತಂ ಪರಮಾನ್ನಾದಿಸಂಯುತಂ ||

​ತಾಂಬೂಲ

ಲಕ್ಷ್ಮಿ ದೇವಿಗೆ ಎಲೆ ಅಡಿಕೆಯ ತಾಂಬೂಲವನ್ನು ನೀಡುವಾಗ ಈ ಮಂತ್ರವನ್ನು ಹೇಳಬೇಕು.

ಮಂತ್ರ: ನಾಗವಲ್ಲಿದಲೈರ್ಯುಕ್ತಂ ಚೂರ್ಣಕ್ರಮುಕಸಂಯುಕ್ತಂ |

ವರಲಕ್ಷ್ಮಿಗ್ರಹಣ ತ್ವಂ ತಾಂಬೂಲಂ ಪ್ರತಿಗೃಹ್ಯತಾಂ ||

​ದಕ್ಷಿಣಾ

ಲಕ್ಷ್ಮಿ ದೇವಿಗೆ ಉಡುಗೊರೆಯನ್ನು ನೀಡುವಾಗ ತಪ್ಪದೇ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: ಸುವರ್ಣಂ ಸರ್ವಧಾತುನಾಂ ಶ್ರೇಷ್ಠಂ ದೇವಿ ಚ ತತ್ಸದಾ |

ಭಕ್ತಯಾ ದದಾಮಿ ವರದೇ ಸ್ವರ್ಣವೃಷ್ಠಿಂ ಚ ದೇಹಿ ಮೇ ||

ಮಂಗಳವಾರ ಹನುಮನ ಪೂಜೆ.. ಈ ವಸ್ತುಗಳನ್ನು ಕಡ್ಡಾಯವಾಗಿ ಅರ್ಪಿಸಿ..!

​ನಿರಾಜನ

ನಂತರ ವರಮಹಾಲಕ್ಷ್ಮಿಗೆ ನಿರಾಜನ ಅಂದರೆ ಆರತಿಯನ್ನು ಬೆಳಗಬೇಕು. ನೀವು ಆರತಿಯನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸುತ್ತ ಆರತಿಯನ್ನು ಬೆಳಗುವುದು ಉತ್ತಮ.

ಮಂತ್ರ: ನಿರಾಜನಂ ಸುಮಂಗಲ್ಯಂ ಕರ್ಪೂರೇಣಾ ಸಮನ್ವಿತಂ |

ಚಂದ್ರಾರ್ಕವಹ್ನಿಸದೃಶಂ ಗ್ರಹಣ ದೇವಿ ನಮೋಸ್ತು ತೇ ||

​ದೋರಕಬಂಧನ

ದೋರಕಗ್ರಹಣದ ನಂತರ ಲಕ್ಷ್ಮಿ ಪೂಜೆಯನ್ನು ಮಾಡುವ ಭಕ್ತರು ದೋರಕ ಅಂದರೆ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ದಾರವನ್ನು ಕಟ್ಟುವಾಗ ಈ ಮಂತ್ರವನ್ನು ಜಪಿಸಿ.

ಮಂತ್ರ: ಕರಿಷ್ಯಾಮಿ ವ್ರತಂ ದೇವಿ ತ್ವದ್‌ಭಕ್ತಸ್ತ್ವತ್ಪರಾಯಣ |

ಶ್ರೀಯಂ ದೇಹಿ ಯಶೋ ದೇಹಿ ಸೌಭಾಗ್ಯಂ ದೇಹಿ ಮೇ ಶುಭೇ ||

ಗಾಯತ್ರಿ ಮಂತ್ರಗಳಾವುವು ..? ಇಲ್ಲಿದೆ ಎಲ್ಲಾ ದೇವರುಗಳ ಗಾಯತ್ರಿ ಮಂತ್ರಗಳು

​ಪುನರ್‌ ಅರ್ಘ್ಯ

ಲಕ್ಷ್ಮಿ ದೇವಿಗೆ ದೋರಕಬಂಧನವನ್ನು ಮಾಡಿದ ನಂತರ, ಮತ್ತೊಮ್ಮೆ ದೇವಿಗೆ ಅರ್ಘ್ಯವನ್ನು ಅರ್ಪಿಸಬೇಕು. ದೇವಿಗೆ ಮತ್ತೊಮ್ಮೆ ಅರ್ಘ್ಯವನ್ನು ಅರ್ಪಿಸುವಾಗ ನಿಮ್ಮ ಮಂತ್ರ ಬೇರೆಯದ್ದಾಗಿರಬೇಕು. ಪುನರ್‌ ಅರ್ಘ್ಯವನ್ನು ನೀಡುವಾಗ ಜಪಿಸಬೇಕಾದ ಮಂತ್ರವಿದು.

ಮಂತ್ರ: ಕ್ಷೀರಾರ್ಣವಸುತೇ ಲಕ್ಷ್ಮಿಶ್ಚಂದ್ರಸ್ಯ ಚ ಸಹೋದರಿ |

ಗ್ರಹಣಾರ್ಘ್ಯಂ ಮಹಾಲಕ್ಷ್ಮಿರ್ದೇವಿ ತುಭ್ಯಂ ನಮೋಸ್ತು ತೇ ||

ಸೋಮವಾರದಂದು ಬಿಲ್ವ ಪತ್ರೆ ಕಿತ್ತರೆ ಶಿವನ ಕೋಪಕ್ಕೆ ಗುರಿಯಾಗುವಿರಿ..!

ಬಿಲ್ವಪತ್ರ

ವರಮಹಾಲಕ್ಷ್ಮಿ ಗೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಿ.

ಮಂತ್ರ: ಶ್ರೀವೃಕ್ಷಸ್ಯ ದಳಂ ದೇಹಿ ಮಹಾದೇವಪ್ರಿಯಂ ಸದಾ |

ಬಿಲ್ವಪತ್ರಂ ಪ್ರಯಚ್ಛಾಮಿ ಪವಿತ್ರಂ ತೇ ಸುನಿರ್ಮಲಂ ||

ಪ್ರದಕ್ಷಿಣಾ

ಈಗ ನೀವು ದೇವಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆಯನ್ನು ಯಾವಾಗಲೂ ನಿಮ್ಮ ಎಡದಿಂದ ಬಲಕ್ಕೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ಪಠಿಸಬೇಕಾದ ಮಂತ್ರವಿದು.

ಮಂತ್ರ: ಇಹ ಜನ್ಮನಿ ಯತ್ಪಾಪಂ ಮಮ ಜನ್ಮಾಂತರೇಷು ಚ |

ನಿವಾರಯ ಮಹಾದೇವಿ ಲಕ್ಷ್ಮಿ ನಾರಾಯಣ ಪ್ರಿಯೆ ||

ನಮಸ್ಕಾರ

ಲಕ್ಷ್ಮಿ ದೇವಿಗೆ ನಮಸ್ಕರಿಸುವ ಜಪಿಸಬೇಕಾದ ಮಂತ್ರವಿದು.

ಮಂತ್ರ: ಕಾಮೋದರಿ ನಮಸ್ತೇಸ್ತು ನಮಸ್ತ್ರೈಲೋಕ್ಯನಾಯಿಕೇ |

ಹರಿಕಾಂತೆ ನಮಸ್ತೇಸ್ತು ತ್ರಾಹಿ ಮಾಮ್‌ ದುಃಖಸಾಗರಾತ್‌ ||

ವ್ರತ ಸಮರ್ಪಣ

ಈ ಎಲ್ಲಾ ನಿಯಮಗಳು ಮುಗಿದ ನಂತರ ದೇವಿ ಲಕ್ಷ್ಮಿ ವ್ರತವನ್ನು ಸಮರ್ಪಿಸಬೇಕು. ವ್ರತ ಸಮರ್ಪಣೆಗೆ ನೀವು ಈ ಮಂತ್ರವನ್ನು ಹೇಳಿ.

ಮಂತ್ರ: ಕ್ಷೀರಾರ್ಣವಸಮುದ್ಭೂತೆ ಕಮಲೇ ಕಮಲಾಲಯೇ |

ಪ್ರಯಚ್ಛ ಸರ್ವಕಾಮಾಂಶ್ಚ ವಿಷ್ಣು ವಿಷ್ಣು ವಕ್ಷಃ ಸ್ಥಲಾಲಯ ||

ಶಂಖದ ನೀರನ್ನು ಸಿಂಪಡಿಸುವುದೇಕೆ..? ಶಂಖವನ್ನು ಮನೆಯಲ್ಲಿಟ್ಟರೆ ಏನಾಗುತ್ತೆ..?

​ಕ್ಷಮಾಪನ

ನೀವು ಪೂಜೆಯಲ್ಲಿ ತಿಳಿದು ಅಥವಾ ತಿಳಿಯದೆಯೋ ಮಾಡಿದ ತಪ್ಪಗಳಿಗೆ ಲಕ್ಷ್ಮಿಯಲ್ಲಿ ಕ್ಷಮೆಯನ್ನು ಕೇಳಲು ಈ ಮಂತ್ರವನ್ನು ಪಠಿಸಿ. ಇದರಿಂದ ಲಕ್ಷ್ಮಿ ನಿಮ್ಮ ತಪ್ಪುಗಳನ್ನು ಕ್ಷಮಿಸುವಳು.

ಮಂತ್ರ: ಛತ್ರಂ ಚಾಮರಮಾಂದೋಲಂ ದತ್ತ್ವಾ ವ್ಯಜನದರ್ಪಣೆ |

ಗೀತಾವಾದಿತ್ರನೃತ್ಯೈಶ್ಚ ರಾಜಸಮ್ಮಾನನೈಸ್ತಥಾ |

ಕ್ಷಮಾಪಯೇ ಸೂಪಚಾರೈಃ ಸಮಭ್ಯರ್ಚ್ಯ ಮಹೇಶ್ವರೀ ||

​ಪ್ರಾರ್ಥನ

ಈಗ ಲಕ್ಷ್ಮಿ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆ ಮಾಡುವ ಮಂತ್ರ.

ಮಂತ್ರ: ವರಲಕ್ಷ್ಮೀರ್‌ ಮಹಾದೇವಿ ಸರ್ವಕಾಮ - ಪ್ರದಾಯಿನಿ |

ಯನ್ಮಯಾ ಚ ಕೃತಂ ದೇಹಿ ಪರಿಪೂರ್ಣಾಂ ಕುರುಶ್ವ ತತ್‌ |

​ವಾಯನಮಂತ್ರ

ನಂತರ ಶ್ರೀ ವರಮಹಾಲಕ್ಷ್ಮಿಗೆ ಸಿಹಿಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: ಏಕವಿಂಶತಿಪಕ್ವಾನ್ನಶರ್ಕರಾಘೃತಸಂಯುತಂ |

ವಾಯನಂ ತೆ ಪ್ರಯಚ್ಛಾಮಿ ಇಂದಿರಾ ಪ್ರಿಯತಾಮಿತಿ |

ಇಂದಿರಾ ಪ್ರತಿಗ್ರಹಣಾತಿ ಇಂದಿರಾ ವೈ ದದಾತಿ ಚ |

ಇಂದಿರಾ ತಾರಕೋಭಾಭ್ಯಾಮಿಂದಿರಾಯೈ ನಮೋಃ ನಮಃ |

ವಾಯನಮಂತ್ರ

ನಂತರ ಶ್ರೀ ವರಮಹಾಲಕ್ಷ್ಮಿಗೆ ಸಿಹಿಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: ಏಕವಿಂಶತಿಪಕ್ವಾನ್ನಶರ್ಕರಾಘೃತಸಂಯುತಂ |

ವಾಯನಂ ತೆ ಪ್ರಯಚ್ಛಾಮಿ ಇಂದಿರಾ ಪ್ರಿಯತಾಮಿತಿ |

ಇಂದಿರಾ ಪ್ರತಿಗ್ರಹಣಾತಿ ಇಂದಿರಾ ವೈ ದದಾತಿ ಚ |

ಇಂದಿರಾ ತಾರಕೋಭಾಭ್ಯಾಮಿಂದಿರಾಯೈ ನಮೋಃ ನಮಃ ||

ದೈನಂದಿನ ಪ್ರಾರ್ಥನಾ ಶ್ಲೋಕಗಳಿವು.. ಪ್ರತಿನಿತ್ಯ ಈ ಶ್ಲೋಕಗಳನ್ನು ತಪ್ಪದೇ ಪಠಿಸಿ

​ಪೂಜಾ ಸಮರ್ಪಣ

ಪೂಜೆಯ ಕೊನೆಯದಾಗಿ ತಾಯಿ ಲಕ್ಷ್ಮಿಗೆ ಪೂಜೆಯನ್ನು ಸಮರ್ಪಿಸಬೇಕು. ಪೂಜೆಯನ್ನು ಸಮರ್ಪಿಸಲು ಈ ಮಂತ್ರವನ್ನು ಪಠಿಸಿ.

ಮಂತ್ರ: ಪಂಚ ವಾಯನಕಾನೇವಂ ದದ್ಯಾದ್‌ ದಕ್ಷಿಣಾಯಾ ಯುತಾನ್‌ |

ವಿಪ್ರಾಯ ಚಾಥ್‌ ಚತಯೇ ದೇವ್ಯೈ ತು ಬ್ರಹ್ಮಚಾರಿಣೆ |

ಸುವಾಸಿನ್ಯೈ ತತಸ್ತ್ವೇಕಂ ದಾಪಯೆಚ್ಛ ಯಥಾವಿಧಿ ||

 

ಶುಕ್ರವಾರದ ಪೂಜೆ: ಇರುವೆಗಳಿಗೆ ಆಹಾರ ನೀಡಿದರೆ ಆರ್ಥಿಕ ಸಮಸ್ಯೆ ದೂರಾಗುವುದು.
ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡುವುದರಿಂದ ಸಂತೋಷ, ಸಮೃದ್ಧಿ ನಮ್ಮದಾಗುತ್ತದೆ. ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು..? ಇಲ್ಲಿದೆ ಶುಕ್ರವಾರದ ಲಕ್ಷ್ಮಿ ಪೂಜೆಯ ನಿಯಮಗಳು.
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರ ತುಂಬಾನೇ ಪ್ರಶಸ್ತವಾದ ದಿನ. ಈ ದಿನ ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ಹಾಗೂ ಭಕ್ತರ ಎಲ್ಲಾ ಕಷ್ಟಗಳು ದೂರಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಜ್ಯೋತಿಷ್ಯ ಶಾಸ್ತ್ರವು ಕೆಲವೊಂದು ನಿಯಮಗಳನ್ನು ಉಲ್ಲೇಖಿಸಿದೆ. ಈ ನಿಯಮಗಳನ್ನು ಶುಕ್ರವಾರದಂದು ಲಕ್ಷ್ಮಿ ಪೂಜೆಯಲ್ಲಿ ರೂಢಿಸಿಕೊಂಡರೆ ದೇವಿಯ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಶುಕ್ರವಾರ ಲಕ್ಷ್ಮಿ ಪೂಜೆ

ಲಕ್ಷ್ಮಿ ಪೂಜೆಯ ನಿಯಮಗಳು

2022 ವರಮಹಾಲಕ್ಷ್ಮಿ ವ್ರತ: ಲಕ್ಷ್ಮಿಯ ಅಲಂಕಾರ ಹೇಗೆ..? ಇಲ್ಲಿವೆ ಪೂಜಾ ಸಾಮಾಗ್ರಿಗಳು

ಶುಕ್ರವಾರ ಪೂಜೆಯಲ್ಲಿ ಜ್ಯೋತಿಷ್ಯ ನಿಯಮಗಳಾವುವು ನೋಡಿ.

1) ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡುವವರು ಈ ವಸ್ತುಗಳನ್ನು ಸೇವಿಸದಿರಿ:
ಜ್ಯೋತಿಷಿಗಳ ಪ್ರಕಾರ, ಶುಕ್ರವಾರದಂದು ಹುಳಿಯುಕ್ತ ಹಣ್ಣುಗಳನ್ನು, ಉಪ್ಪಿನಕಾಯಿಯನ್ನು ಅಥವಾ ಯಾವುದೇ ರೀತಿಯ ಹುಳಿಯುಕ್ತ ವಸ್ತುಗಳನ್ನು ಸೇವಿಸಬಾರದು. ಶುಕ್ರವಾರದಂದು ಹುಳಿ ಪದಾರ್ಥಗಳನ್ನು ಸೇವಿಸಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಅಥವಾ ಲಕ್ಷ್ಮಿ ಪೂಜೆಯ ನಂತರ ಹುಳಿಯನ್ನು ಸೇವಿಸುವುದರಿಂದ ಪೂಜೆಯ ಫಲವನ್ನು ಅನುಭವಿಸಲಾರಿರಿ. ಶುಕ್ರವಾರ ಸಿಹಿ ಪದಾರ್ಥಗಳನ್ನು ಸೇವಿಸಿ. ಇದರೊಂದಿಗೆ ಶುಕ್ರವಾರದಂದು ವೈಭವ ಲಕ್ಷ್ಮಿ ಮತ್ತು ಸಂತೋಶಿ ಮಾತಾರನ್ನು ಪೂಜಿಸಿ. ಲಕ್ಷ್ಮಿ ದೇವಿಯು ಹುಳಿಯುಕ್ತ ಆಹಾರ ಪದಾರ್ಥಗಳನ್ನು ಇಷ್ಟಪಡುವುದಿಲ್ಲ

2) ಹಣದ ಕೊರತೆಯನ್ನು ದೂರಾಗಿಸುವಳು:
ಶುಕ್ರವಾರದಂದು ಪಾಯಸದಲ್ಲಿ ಜೇನುತುಪ್ಪವನ್ನು ಬೆರೆಸಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ನಂತರ ಆ ಪಾಯಸದ ಪ್ರಸಾದವನ್ನು ಮೊದಲು ಮನೆಯ ಹಿರಿಯ ಮಹಿಳೆಗೆ ನೀಡಿ, ತದನಂತರ ಮನೆಯ ಸದಸ್ಯರಿಗೆ ನೀಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮೆಲ್ಲಾ ಹಣದ ಕೊರತೆಯನ್ನು ದೂರಾಗಿಸುವಳು. ನಿಮ್ಮಲ್ಲಿ ಹಣದ ಕೊರತೆಯಿಲ್ಲದಿರುವಂತೆ ಮಾಡುವಳು.

ಪಾಯಸದಲ್ಲಿ ಜೇನುತುಪ್ಪವನ್ನು ಬೆರೆಸಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು.

3) ಗೃಹ ದೋಷವನ್ನು ನಿವಾರಿಸುತ್ತದೆ:
ಸಾಮಾನ್ಯವಾಗಿ ಎಲ್ಲಾ ಪೂಜೆಯಲ್ಲೂ ಕರ್ಪೂರವನ್ನು ಬಳಸಲಾಗುತ್ತದೆ. ಶುಕ್ರವಾರದಂದು ಲಕ್ಷ್ಮಿ ಪೂಜೆಯಲ್ಲಿ ಕರ್ಪೂರವನ್ನು ಬಳಸಬೇಕು. ಲಕ್ಷ್ಮಿ ದೇವಿಗೆ ಕರ್ಪೂರದ ಆರತಿ ಬೆಳಗಿ, ನಂತರ ಆರತಿಯನ್ನು ಮನೆಯ ಪ್ರತಿಯೊಂದು ಕೋಣೆಯಲ್ಲೂ ಬೆಳಗಬೇಕು. ಇದರಿಂದ ಸಕಾರಾತ್ಮಕ ಶಕ್ತಿ ನೆಲೆಯಾಗುವುದು ಮಾತ್ರವಲ್ಲ, ಗೃಹ ಸಮಸ್ಯೆಯೂ ಕೂಡ ದೂರಾಗುತ್ತದೆ. ಇದರೊಂದಿಗೆ ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಯಾಗುತ್ತದೆ.

4) ಇದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುವಳು:
ಶುಕ್ರವಾರದಂದು ಯಾರು ಕೂಡ ಸಾಲ ನೀಡಬಾರದು ಮತ್ತು ಇನ್ನೊಬ್ಬರಿಂದ ಸಾಲವನ್ನು ಪಡೆಯಬಾರದು. ಶುಕ್ರವಾರ ಯಾರಿಗಾದರೂ ಹಣ ನೀಡಿದರೆ ಅದು ಹಿಂತಿರುಗುವುದಿಲ್ಲ. ಮತ್ತು ಇದರಿಂದ ನೀವು ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಈ ದಿನ ಸಾಲ ನೀಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುವಳು.

ಈ ತಪ್ಪುಗಳಿಂದ ಲಕ್ಷ್ಮಿ ಕೋಪಿಸಿಕೊಳ್ಳುವಳು.. ನೀವು ಇದನ್ನು ಮಾಡುತ್ತಿರಬಹುದು..!

ಶುಕ್ರವಾರದಂದು ಯಾರು ಕೂಡ ಸಾಲ ನೀಡಬಾರದು

5) ಮನಶಾಂತಿಗಾಗಿ ವಿಷ್ಣು ಮತ್ತು ಶಿವನನ್ನು ಆರಾಧಿಸಿ:
ಶುಕ್ರವಾರದಂದು ಪರಶಿವನ ಲಿಂಗವನ್ನು ಸಕ್ಕರೆ ಬೆರೆಸಿದ ಹಾಲಿನಿಂದ ಅಭಿಷೇಕ ಮಾಡಬೇಕು. ಹಾಗೂ ಈ ದಿನ ಇರುವೆಗಳಿಗೆ ಸಕ್ಕರೆಯನ್ನು ಆಹಾರವಾಗಿ ನೀಡಬೇಕು. ಇದರಿಂದ ನಿಮ್ಮ ಮನಸ್ಸು ಶಾಂತತೆಯಿಂದ ಕೂಡಿರುತ್ತದೆ. ಶುಭ ಕೆಲಸಗಳನ್ನು ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಇರುವೆಗಳು ಭಗವಾನ್‌ ವಿಷ್ಣುವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನ ವಿಷ್ಣು ಮತ್ತು ಶಿವನನ್ನು ಪೂಜಿಸುವುದರಿಂದ ಲಕ್ಷ್ಮಿಯು ಸಂತಸಗೊಳ್ಳುವಳು.

6) ಸಂತೋಷ ಮತ್ತು ಸಮೃದ್ಧಿಗಾಗಿ ಹೀಗೆ ಮಾಡಿ:
ಶುಕ್ರವಾರದಂದು ಸಂಜೆ ಲಕ್ಷ್ಮಿ ಸ್ತೋತ್ರವನ್ನು ಪಠಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಮತ್ತು ಮುಸ್ಸಂಜೆವೇಳೆ ಮನೆಯ ಬಾಗಿಲನ್ನು ತೆರೆದಿರಬೇಕು. ವಿಷ್ಣು ಪುರಾಣದಲ್ಲೂ ಕೂಡ ಮುಸ್ಸಂಜೆ ವೇಳೆ ಲಕ್ಷ್ಮಿ ಸ್ತೋತ್ರವನ್ನು ಪಠಿಸುವುದು ಶುಭವೆಂದು ಉಲ್ಲೇಖಿಸಲಾಗಿದೆ. ಸಾಧ್ಯವಾದರೆ, ಲಕ್ಷ್ಮಿ ಸ್ತೋತ್ರವನ್ನು ಶುಕ್ರವಾರ ಮಾತ್ರವಲ್ಲ, ಪ್ರತಿದಿನವೂ ಪಠಿಸಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.

ಶುಕ್ರವಾರದ ಲಕ್ಷ್ಮಿ ಪೂಜೆಯ ನಿಯಮಗಳು

ಈ ಮೇಲಿನ ಕೆಲವು ಲಕ್ಷ್ಮಿ ಪೂಜಾ ನಿಯಮಗಳನ್ನು ನೀವು ಕೇವಲ ಶುಕ್ರವಾರದಂದು ಮಾತ್ರವಲ್ಲ, ಪ್ರತಿದಿನವೂ ಅನುಸರಿಸಬಹುದು. ಈ ಮೇಲಿನ ಲಕ್ಷ್ಮಿ ಪೂಜಾ ನಿಯಮಗಳಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯು ದೂರಾಗುತ್ತದೆ.🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು 📱9482655011🙏🙏🙏🙏
[05/08, 4:03 AM] Pandit Venkatesh. Astrologer. Kannada: 🙏ಹರಿಃ ಓಂ
🕉️ ವರಮಹಾಲಕ್ಷ್ಮೀ ಹಬ್ಬದ ಸಂದೇಹಗಳು

🎙️ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು 🙏

🌷 ಶುಕ್ರವಾರ 5ನೇ ದಿನ ಅಷ್ಟಮಿ ತಿಥಿ ಬಂದಿತ್ತು.. ವರಲಕ್ಷ್ಮಿ ವ್ರತವನ್ನು ಎಲ್ಲರೂ ಸಂದೇಹವಿಲ್ಲದೆ ಮಾಡಬಹುದು.....🌷

ಶುಕ್ರವಾರ ಬೆಳಗ್ಗೆ ಯಾವಾಗ ಪೂಜೆ ಮಾಡಬೇಕು..
🌷🌷🌷🌷🌷🌷🌷🌷
    
 🌷 1. ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ 3 ರಿಂದ 4 ರವರೆಗೆ ಬೆಳಿಗ್ಗೆ 5 ರಿಂದ 06 ರವರೆಗೆ ಈ ಸಮಯದಲ್ಲಿ ಪ್ರಾರಂಭವಾಗಬೇಕು.. ...

🌷 2..ಬೆಳಿಗ್ಗೆ 06 ರಿಂದ 07 ರವರೆಗೆ ಪ್ರಾರಂಭಿಸಿ ..ಈ ಸಮಯದಲ್ಲಿ ಶುಕ್ರ ಹೋರ ಇದೆ..ತುಂಬಾ ತುಂಬಾ ಒಳ್ಳೆಯದು..ಈ ಸಮಯದಲ್ಲಿ ಮಾಡುವವರು ಬೆಳಗ್ಗೆ 10 ರಿಂದ 10.15 ರ ಒಳಗೆ ಮಾಡಬೇಕು...

ಈ ಸಮಯದಲ್ಲಿ ಗುರು ಹೋರ ಇರುತ್ತದೆ.. ತುಂಬಾ ಚೆನ್ನಾಗಿದೆ..

ನೈವೇದ್ಯಂ ಜೇನು, ಸಕ್ಕರೆ ಪೊಂಗಲ್, ಪುಳಿಯೋಗರೆ, ಮೊಸರು ಅನ್ನ, ಪಾಯಸಂ,,  ಇವುಗಳಲ್ಲಿ ಯಾವುದಾದರೂ ಹಾಕಬಹುದು.

🌷 3.. ಅಮ್ಮಾವರಿ ದೇವಸ್ಥಾನದಲ್ಲಿ ಸುಣ್ಣದ ಪಾತ್ರೆಗಳಲ್ಲಿ ಹಸುವಿನ ತುಪ್ಪವನ್ನು ಹಾಕಿ ರಾಹುಕಾಲದಲ್ಲಿ ದೀಪವನ್ನು ಹಚ್ಚಿ..

🌷 4.. ಹಸುಗಳಿಗೆ ಬಾಳೆಹಣ್ಣು ಮತ್ತು ಬೆಲ್ಲ ನೆನೆಸಿದ ನವಧಾನ್ಯಗಳನ್ನು ಹಾಕಿ..

🌷 5.. ಪೂಜೆ ಮಾಡುವ ಮೊದಲು ಹಸುವಿನ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ನೆನೆಸಿ ಗಿಡಗಳಿಗೆ ಚಿಮುಕಿಸಿ..

🌷6.. ಬೆಳಕಿನ ಲಕ್ಷ್ಮೀ ದೀಪ ಎಂದರೆ ಕಾಮಾಕ್ಷಿ ದೀಪ.. ಅಥವಾ ಕುಭೇರ ದೀಪ ಅಥವಾ ಅಷ್ಟಲಕ್ಷ್ಮಿ ದೀಪ.. ಈ ದೀಪವು ಉತ್ತರಕ್ಕೆ ಮುಖ ಮಾಡಬೇಕು..

7. ನೀವು ಪ್ರತಿ ವರ್ಷ ವ್ರತವನ್ನು ಮಾಡುವ ರೀತಿಯಲ್ಲಿಯೇ ವ್ರತವನ್ನು ಆಚರಿಸಿ.

🌷8.. ಸಂಜೆ ಐಶ್ವರ್ಯ ದೀಪವನ್ನು ಅಂದರೆ ಉಪ್ಪಿನ ದೀಪವನ್ನು ಹಚ್ಚಿ..

🌷9.. ನೀವು ಎಷ್ಟು ಹೆಚ್ಚು ದೀಪಗಳನ್ನು ಹಾಕುತ್ತೀರೋ ಅಷ್ಟು ಒಳ್ಳೆಯದು.ಮನೆಯೆಲ್ಲ ದೀಪಗಳನ್ನು ಹಾಕಿರಿ.ಹೊರಗಿನ ವರಾಂಡದ ಬಳಿ ದೀಪಗಳನ್ನು ಹಾಕಿ.

10. ಪೂಜೆಯಲ್ಲಿ ನೀವು 06 ರಿಂದ 07 ರವರೆಗೆ ಮಾಡಬೇಕಾದ ಕೆಲಸಗಳು.

"""ಮಮ ಗೃಹೇ ಸುವರ್ಣಂ ವೃದ್ಧಿ ಕುರು ಕುರು ಸ್ವಾಹಾ" ಎಂಬ ಈ ಮಂತ್ರವನ್ನು ಪಠಿಸಿದ ನಂತರ ನಿಮ್ಮ ಹಳೆಯ ಚಿನ್ನವನ್ನೆಲ್ಲ ಅಮ್ಮಾವರಿ ಬಳಿ ಇಟ್ಟು ಕೊರಳಿಗೆ ಏನನ್ನಾದರೂ ಧರಿಸಿಕೊಳ್ಳಿ.

 🌷ಸಾಧ್ಯವಾದರೆ ದೇವಿಗೆ ಸುಗಂಧ ಮತ್ತು ಪಂಚಾಮೃತ ಅಭಿಷೇಕ ಮಾಡಿ..ಅರಗಜ,,ಜವ್ವಾಡು ಪುನುಗು,,ಕಸ್ತೂರಿ,,ಜವ್ವಾಡು,,ಅಭಿಷೇಕದಲ್ಲಿ ಬಳಸಿದರೆ ದೇವಿಯ ಕೃಪೆ ಸಿಗುತ್ತದೆ..

ಇವುಗಳನ್ನು ನೀರಿನಲ್ಲಿ ಬೆರೆಸಿ ಆ ನೀರಿನಿಂದ ದೇವಿಗೆ ಅಭಿಷೇಕ ಮಾಡಿ.. ಬೆಳಿಗ್ಗೆ ಅಭಿಷೇಕ ಮಾಡಬಹುದು.

** ಈಗ ಅಮ್ಮಾವರಿ ಅಷ್ಟೋತ್ತರ ಪಠಿಸುತ್ತಾ 108 ನಾಣ್ಯಗಳಿಂದ ಪೂಜೆ ಮಾಡಿ.. ಬೆಳ್ಳಿ ಹೂಗಳನ್ನು ಬದಲಾಯಿಸಿ ಅರಾವಳಿ ಕುಂಕುಮ ಪೂಜೆ ಮಾಡಿ ಮಣಿದ್ವೀಪದ ವಿವರಣೆ ಓದಿ..

**ಅಂತೆಯೇ ಲಕ್ಷ್ಮಿ ದೇವಿಗೆ ಪ್ರಿಯವಾದ ಗೋಮತಿ ಚಕ್ರಗಳು, ಲಕ್ಷ್ಮಿ ಚಿಪ್ಪುಗಳು, ಗುರುವಿಂದ ಬೀಜಗಳು ಏಲಕ್ಕಿ, ಹಸಿರು ಕರ್ಪೂರ ಕಮಲದ ಬೀಜಗಳು, ಕಪ್ಪು ಹಳದಿ ಕೊಂಬುಗಳು, ದಕ್ಷಿಣ ಶಂಖಗಳು, ಮುತ್ತುಗಳು, ಮುತ್ತಿನ ಶಂಕುಗಳು, ಈ ಕೆಳಗಿನ ಎರಡು ಮಂತ್ರಗಳನ್ನು ಪಠಿಸಿ.

🙏🙏""ಓಂ ಐಂ ಹ್ರೀಂ ಶ್ರೀಯೋ ಮಹಾಲಕ್ಷ್ಮೀ ದೇವ್ಯೈ ನಮಃ".. 🙏🙏

🙏🙏 """ಓಂ ಐಂ ಕಹ್ರೀಂ ಶ್ರೀಂ ಧನಂ ದೇಹಿ ದೇಹಿ ಓಂ"..🙏🙏

🌷ಈ ಎರಡು ಮಂತ್ರಗಳನ್ನು ಜಾಗರೂಕತೆಯಿಂದ ಪಠಿಸಿ ಮತ್ತು ಎಲ್ಲಾ ಪೂಜೆಯನ್ನು ಮಾಡಿ..

 🌷 8 ರಿಂದ 9 ರ ಮಧ್ಯದಲ್ಲಿ ಹಸುವಿನ ಹಾಲನ್ನು ಸುಟ್ಟು ಸಾಂಬ್ರಾಣಿ ಇದ್ದಿಲು ಸೇರಿಸಿ ಮನೆಯಲ್ಲೆಲ್ಲಾ ಧೂಪ ಹಾಕಿ.. 8 ರಿಂದ 9 ರ ಮಧ್ಯದಲ್ಲಿ ಹಳದಿ ಬಟ್ಟೆಯಲ್ಲಿ ಗೋಮತಿ ಚಕ್ರ, ಲಕ್ಷ್ಮಿ ಗೋಮತಿ ಚಕ್ರ ಸುತ್ತಿ ಏಲಕ್ಕಿ ಸಣ್ಣ ಪಾಯಸ ಹಸಿರು ಕರ್ಪೂರವನ್ನು ಪೂಜಿಸುತ್ತಾರೆ. ಒಂದು ಮೂಟೆಯನ್ನು ಹಾಕಿ ಆ ಬಂಡಲ್ ಅನ್ನು ಭೀರುವದಲ್ಲಿ ಹಾಕಿ ಅಲ್ಲಿ ಹಣ ಇಡಲಾಗುತ್ತದೆ.

ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮೌನವಾಗಿರಿ...

🌷ಈ ರೀತಿ ಪೂಜೆಯನ್ನು ಮಾಡುವುದರಿಂದ ಎಲ್ಲರಿಗೂ ಅಷ್ಟೈಶ್ವರ್ಯ ಭೋಗಭಾಗ್ಯಗಳು ಲಭಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ..🙏🏻

ಸಂಗ್ರಹಣೆ... ಆದಿ ಅರುಣಾಚಲ 

ವೇದಾಂತ ಜ್ಞಾನ ➡️  1 ಲೈಕ್ / 1ಕಾಮೆಂಟ್  👇
                       ➡️  ಶೇರ್ ಮಾಡಿ ,

 ▶️ ನಮ್ಮ ಹಿಂದೂ  ಸಂಸ್ಕೃತಿ ಉಳಿಸಲು  ನಿಮ್ಮ  ಕೊಡುಗೆ  ಇರಲಿ 😊👍

➡️ ಗೋಮಾತೆಯನ್ನು ಪೂಜಿಸಿ, ಗೋಮಾತೆಯನ್ನು ರಕ್ಷಿಸಿ. 🙂👍

ಹರಿಯೇ ಪರದೈವ 🙏  
ಜಗತ್ತು ಸತ್ಯ 🙏   
ದೇವರ ಸ್ಮರಣೆ ಮುಖ್ಯ 🙏🙏.
[05/08, 4:09 AM] Pandit Venkatesh. Astrologer. Kannada: Happy varamahalaxmi pooja 🙏💐

 ವರಮಹಾಲಕ್ಷ್ಮಿ ಪೂಜೆ 💐🙏💐

ಕಲಶ ಸ್ಥಾಪನೆ ಸಮಯ.. ಬೆಳಿಗ್ಗೆ - 07:00 ರಿಂದ 08:00 ರ ವರೆಗೆ 
                                      ಮಧ್ಯಾನ್ಹ -01:15 ರಿಂದ 03:15 ರ ಒಳಗೆ 

Vedamatajyotishyalaya@gmail.com

©👈 👇📉 

ದಿನಾಂಕ 05-08-2022 ಶುಭ ಶ್ರಾವಣ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ.  ಮಂತ್ರಗಳ ಸಮೇತ ಮಾಡುವ ಪೂಜೆ ಹೀಗಿದೆ.

*ವರಮಹಾಲಕ್ಷ್ಮಿಯನ್ನು ಪೂಜಿಸುವುದು ಹೇಗೆ..? ಇದು ಲಕ್ಷ್ಮಿ ಪೂಜೆಯ 32 ಹಂತಗಳು*

ಸದ್ಯದಲ್ಲಿಯೇ ದೇಶದಾದ್ಯಂತ ವರ ಮಹಾಲಕ್ಷ್ಮೀ ವ್ರತ ಪೂಜೆ. ವರಮಹಾಲಕ್ಷ್ಮಿ ಪೂಜೆಯಲ್ಲಿ ನಾನಾ ಹಂತಗಳಿವೆ. 16 ವರಮಹಾಲಕ್ಷ್ಮಿ ಪೂಜಾ ಹಂತಗಳನ್ನು ಒಳಗೊಂಡಿರುವ ಪೂಜೆಯನ್ನು ಶೋಡಶೋಪಚಾರವೆಂದು 32 ಹಂತಗಳನ್ನೊಳಗೊಂಡಿರುವ ವರಮಹಾಲಕ್ಷ್ಮಿ ಪೂಜೆಯನ್ನು ದ್ವಾತ್ರಿಂಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದ್ವಾತ್ರಿಂಶೋಪಚಾರ ಪೂಜೆಯನ್ನು ಬಟ್ಟಿಶೋಪಚಾರ ಪೂಜೆಯೆಂದೂ ಕೂಡ ಕರೆಯಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಯ ಹಂತಗಳಾವುವು ತಿಳಿದುಕೊಳ್ಳಿ.

*​ಧ್ಯಾನ*

ವರಮಹಾಲಕ್ಷ್ಮಿ ಪೂಜೆಯನ್ನು ಲಕ್ಷ್ಮಿಯ ಧ್ಯಾನದೊಂದಿಗೆ ಪ್ರಾರಂಭಿಸಬೇಕು. ನಿಮ್ಮ ಮುಂದೆ ಈಗಾಗಲೇ ಸ್ಥಾಪಿಸಲಾದ ಶ್ರೀ ವರಮಹಾಲಕ್ಷ್ಮಿ ಪ್ರತಿಮೆಯ ಮುಂದೆ ಕುಳಿತು ಧ್ಯಾನವನ್ನು ಮಾಡಬೇಕು. ವರಮಹಾಲಕ್ಷ್ಮಿಯನ್ನು ಈ ಮಂತ್ರದೊಂದಿಗೆ ಧ್ಯಾನಿಸಿ:

ಮಂತ್ರ: *ಕ್ಷೀರಸಾಗರ ಸಂಭೂತಂ ಕ್ಷೀರವರ್ಣಸಮಪ್ರಭಂ* |
*ಕ್ಷೀರವರ್ಣಾಸಮಂ ವಸ್ತ್ರಂ ದಧಾನಾಂ ಹರಿವಲ್ಲಭಂ* ||

*​ಆವಾಹನ*

ಶ್ರೀ ವರಮಹಾಲಕ್ಷ್ಮಿ ಧ್ಯಾನವನ್ನು ಮಾಡಿದ ನಂತರ ಆವಾಹನ ಮುದ್ರದ ಮೂಲಕ ಲಕ್ಷ್ಮೀ ಮೂರ್ತಿಯ ಮುಂದೆ ಆವಾಹನ ಮಂತ್ರವನ್ನು ಅನುಸರಿಸಬೇಕು. ಆವಾಹನ ಮುದ್ರೆಯಲ್ಲಿ ಎರಡು ಅಂಗೈಗಳನ್ನು ಮುಂದಕ್ಕೆ ಚಾಚಿ ಎರಡೂ ಹೆಬ್ಬೆರಳುಗಳನ್ನು ಒಳಕ್ಕೆ ಮಡಚಿರಬೇಕು.

ಮಂತ್ರ: *ಬ್ರಾಹ್ಮೀ ಹಂಸ ಸಮಾರೂಢ ಧಾರಿಣ್ಯಕ್ಷಕಮಂಡಲು* |

*ವಿಷ್ಣು ತೇಜೋಧಿಕ ದೇವಿ ಸ ಮಾಮ್‌ ಪಾತು ವರಪ್ರದ* ||

*​ಆಸನ*

ಶ್ರೀ ವರಮಹಾಲಕ್ಷ್ಮಿಯನ್ನು ಆವಾಹನ ಮಾಡಿದ ನಂತರ ಅಂಜಲಿಯಲ್ಲಿ ಅಂದರೆ ಎರಡೂ ಅಂಗೈಯನ್ನು ಜೋಡಿಸಿ 5 ಹೂವುಗಳನ್ನು ತೆಗೆದುಕೊಂಡು ಈ ಮಂತ್ರವನ್ನು ಜಪಿಸುತ್ತಾ ದೇವಿಗೆ ಆಸನ ಮಾಡಲು ಮೂರ್ತಿಯ ಮುಂದೆ ಇಡಬೇಕು.

ಮಂತ್ರ: *ಮಹೇಶ್ವರಿ ಮಹಾದೇವಿ ಆಸನಂ ತೇ ದದಾಮ್ಯಹಂ* |

*ಮಹೈಶ್ವರ್ಯಸಮಾಯುಕ್ತಂ ಬ್ರಾಹ್ಮಣಿ ಬ್ರಾಹ್ಮಣಃ ಪ್ರಿಯೇ* ||

*​ಪಾದ್ಯ*

ಶ್ರೀ ವರಮಹಾಲಕ್ಷ್ಮಿಗೆ ಆಸನವನ್ನು ಅರ್ಪಿಸಿದ ನಂತರ ಆಕೆಯ ಪಾದಗಳನ್ನು ನೀರಿನಿಂದ ತೊಳೆಯಬೇಕು. ಪಾದಗಳನ್ನು ತೊಳೆಯುವಾಗ ಈ ಮಂತ್ರಗಳನ್ನು ತಪ್ಪದೇ ಜಪಿಸಿ.

ಮಂತ್ರ: *ಕುಮಾರ ಶಕ್ತಿ ಸಂಪನ್ನೆ ಕೌಮರಿ ಶಿಖಿವಾಹನೇ* |

*ಪಾದ್ಯಂ ದದಾಮ್ಯಹಂ ದೇವಿ ವರದೇ ವರಲಕ್ಷಣೇ* ||

*​ಅರ್ಘ್ಯ*

ಲಕ್ಷ್ಮಿಯ ಪಾದಗಳನ್ನು ತೊಳೆದ ನಂತರ ಮಂತ್ರವನ್ನು ಜಪಿಸುತ್ತಾ ಶ್ರೀ ವರಮಹಾಲಕ್ಷ್ಮಿಯ ಮುಖ್ಯ ಅಭಿಷೇಕಕ್ಕೆ ನೀರನ್ನು ಅರ್ಪಿಸಿ.

ಮಂತ್ರ: *ತೀರ್ಥೋದಕೈರ್ಮಹಾದಿವ್ಯೈ ಪಾಪಸಂಹಾರಕಾರಕೈಃ* |

*ಅರ್ಘ್ಯಂ ಗೃಹಣ ಭೋ ಲಕ್ಷ್ಮಿ ದೇವಾನಾಮುಪಕಾರಿಣೀ* ||

*​ಆಚಮನ*

ವರಮಹಾಲಕ್ಷ್ಮಿಗೆ ಅರ್ಘ್ಯವನ್ನು ನೀಡಿದ ನಂತರ ಮಂತ್ರವನ್ನು ಅನುಸರಿಸುತ್ತಾ ಆಚಮನಕ್ಕಾಗಿ ವರಮಹಾಲಕ್ಷ್ಮಿಗೆ ನೀರನ್ನು ಅರ್ಪಿಸಿ.

ಮಂತ್ರ: *ವೈಷ್ಣವೀ ವಿಷ್ಣುಸಂಯುಕ್ತೇ ಅಸಂಖ್ಯಾಯುಧಧಾರಿಣೀ* |

*ಆಚಮ್ಯತಾಂ ದೇವಪೂಜ್ಯೆ ವರದೇ ಅಸುರಮರ್ದಿನೀ* ||

*​ಪಂಚಾಮೃತ ಸ್ನಾನ*
                                                                            ಆಚಮನ ಪೂರ್ಣಗೊಂಡ ನಂತರ ಲಕ್ಷ್ಮೀ ದೇವಿಗೆ ಪಂಚಾಮೃತ ಸ್ನಾನವನ್ನು ಮಾಡಿಸಬೇಕು. ಪಂಚಾಮೃತ ಸ್ನಾನದ ಮಂತ್ರ ಹೀಗಿದೆ.

ಮಂತ್ರ: *ಪದ್ಮೇ ಪಂಚಾಮೃತೈಃ ಶುದ್ಧೈಃ ಸ್ನಪಯಿಷ್ಯೇ ಹರಿಪ್ರಿಯೇ* |

*ವರದೇ ಶಕ್ತಿ ಸಂಭೂತೇ ವರದೇವಿ ವರಪ್ರಿಯೇ* ||

*ಸ್ನಾನ*
                                                                                 ವರಲಕ್ಷ್ಮಿಗೆ ಪಂಚಾಮೃತ ಸ್ನಾನವನ್ನು ಮಾಡಿಸಿದ ನಂತರ ನೀರಿನಿಂದ ಆಕೆಗೆ ಸ್ನಾನವನ್ನು ಮಾಡಿಸಬೇಕು. ಲಕ್ಷ್ಮಿಯನ್ನು ನೀರಿನಿಂದ ಸ್ನಾನ ಮಾಡಿಸುವಾಗ ಈ ಮಂತ್ರವನ್ನು ಪಠಿಸಿ.

ಮಂತ್ರ: *ಗಂಗಾಜಲಂ ಸಮಾನೀತಂ ಸುಗಂಧೀ ದ್ರವ್ಯ ಸಮಾಯುತಂ* |

*ಸ್ನಾನಾರ್ಥಂ ತೇ ಮಯ ದತ್ತಂ ಗೃಹಣ ಪರಮೇಶ್ವರಿ* ||

*​ವಸ್ತ್ರ*
                                                               ಸ್ನಾನದ ನಂತರ ದೇವಿಗೆ ಹೊಸ ವಸ್ತ್ರವನ್ನು ಧರಿಸಬೇಕು. ಆಕೆಗೆ ವಸ್ತ್ರವನ್ನು ಧರಿಸುವಾಗ ಪಠಿಸಬೇಕಾದ ಮಂತ್ರ ಹೀಗಿದೆ.

ಮಂತ್ರ: *ರಜತಾದ್ರಿಸಮಂ ದಿವ್ಯಂ ಕ್ಷೀರಸಾಗರ ಸನ್ನಿಭಂ* |

*ಚಂದ್ರಪ್ರಭಾಸಂ ದೇವಿ ವಸ್ತ್ರಂ ತೇ ಪ್ರದದಾಮ್ಯಹಂ* ||

*​ಕಂಠಸೂತ್ರ*
                                                                               ದೇವಿಯ ಕೊರಳಿಗೆ ಹಾರವನ್ನು ಧರಿಸುವಾಗ ಈ ಮಂತ್ರವನ್ನು ಪಠಿಸಿ, ನಂತರ ಹಾರವನ್ನು ಹಾಕಿರಿ.

ಮಂತ್ರ: *ಮಾಂಗಲ್ಯಮಣಿಸಂಯುಕ್ತಂ ಮುಕ್ತಫಲಸಮನ್ವಿತಂ* |

*ದತ್ತಂ ಮಂಗಲಸೂತ್ರಂ ತೇ ಗೃಹಣ ಸುರವಲ್ಲಭೇ* ||

*​ಆಭರಣ*
                                                             ದೇವಿಗೆ ಆಭರಣವನ್ನು ಹಾಕುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಸುವರ್ಣಭೂಷಿತಂ ದಿವ್ಯಂ ನಾನಾರತ್ನಸುಶೋಭಿತಂ* |

*ತ್ರೈಲೋಕ್ಯ ಭೂಷಿತೇ ದೇವಿ ಗೃಹಣಾಭರಣಂ ಶುಭಂ* ||

*ಗಂಧ ಸಮರ್ಪಣ*
                                                                 ಲಕ್ಷ್ಮೀ ದೇವಿಗೆ ಗಂಧವನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ರಕ್ತಗಂಧಂ ಸುಗಂಧಧ್ಯಮಷ್ಟಗಂಧಸಮನ್ವಿತಂ* |

*ದಾಸ್ಯಾಮಿ ದೇವಿ ವರದೇ ಲಕ್ಷ್ಮಿರ್ದೇವಿ ಪ್ರಸಿದ ಮೇ* |

*​ಸೌಭಾಗ್ಯ ದ್ರವ್ಯ*
                                                                         ಲಕ್ಷ್ಮೀ ದೇವಿಗೆ ಅರಶಿಣ, ಕುಂಕುಮ, ಸಿಂಧೂರ, ಕಾಡಿಗೆ ಸೇರಿದಂತೆ ಇನ್ನಿತರ ಸೌಭಾಗ್ಯ ವಸ್ತುಗಳನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಹರಿದ್ರಾಂ ಕುಂಕುಮಾಂ ಚೈವ ಸಿಂಧೂರಂ ಕಜ್ಜಲಾನ್ವಿತಂ* |

*ಸೌಭಾಗ್ಯದ್ರವ್ಯಸಮ್ಯುಕ್ತಂ ಗೃಹಣ ಪರಮೇಶ್ವರಿ* ||

*​ಪುಷ್ಪ ಸಮರ್ಪಣೆ*
                                                                                         ದೇವಿಗೆ ಅಲಂಕಾರವನ್ನು ಮಾಡಿದ ನಂತರ ಈ ಮಂತ್ರದೊಂದಿಗೆ ಹೂವುಗಳನ್ನು ಅರ್ಪಿಸಬೇಕು.

ಮಂತ್ರ: *ನಾನಾವಿಧಾನಿ ಪುಷ್ಪಾಣಿ ನಾನಾ ವರ್ಣಯುತಾನಿ ಚ* |

*ಪುಷ್ಪಾಣಿ ತೇ ಪ್ರಯಚ್ಚಾಮಿ ಭಕ್ತಯಾ ದೇವಿ ವರಪ್ರದೇ* ||

*​ಅಂಗ ಪೂಜನಾ*
                                                                            ಈಗ ವರಲಕ್ಷ್ಮಿಯನ್ನು ಪೂಜಿಸಬೇಕು. ಗಂಧ, ಅಕ್ಷತೆ ಮತ್ತು ಪುಷ್ಪವನ್ನು ಎಡಗೈಯಲ್ಲಿ ತೆಗೆದುಕೊಂಡು ಮಂತ್ರವನ್ನು ಹೇಳುತ್ತ ಬಲಗೈಯಿಂದ ಶ್ರೀ ವರಲಕ್ಷ್ಮಿ ಮೂರ್ತಿಗೆ ಅರ್ಪಿಸಬೇಕು.

ಮಂತ್ರ: ಓಂ ವರಲಕ್ಷ್ಮ್ಯೈ ನಮಃ ಪಾದೌ ಪೂಜಯಾಮಿ |

ಓಂ ಕಮಲವಾಸಿನ್ಯೈ ನಮಃ ಗುಲ್ಫೌ ಪೂಜಯಾಮಿ |

ಓಂ ಪದ್ಮಲಯಾಯೈ ನಮಃ ಜಂಘೇ ಪೂಜಯಾಮಿ |

ಓಂ ಶ್ರೀಯ್ಯೈ ನಮಃ ಜಾನುನಿ ಪೂಜಯಾಮಿ |

ಓಂ ಇಂದಿರಾಯ್ಯೈ ನಮಃ ಉರು ಪೂಜಯಾಮಿ |

ಓಂ ಹರಿಪ್ರಿಯ್ಯೈ ನಮಃ ನಾಭಿ ಪೂಜಯಾಮಿ |

ಓಂ ಲೋಕದಾತ್ರ್ಯೈ ನಮಃ ಸ್ತಾನೌ ಪೂಜಯಾಮಿ |

ಓಂ ವಿದಾತ್ರ್ಯೈ ನಮಃ ಕಠಂ ಪೂಜಯಾಮಿ |

ಓಂ ದಾತ್ರ್ಯೈ ನಮಃ ನಾಸಾಂ ಪೂಜಯಾಮಿ |

ಓಂ ಸರಸ್ವತ್ಯೈ ನಮಃ ಮುಖಂ ಪೂಜಯಾಮಿ |

ಓಂ ಪದ್ಮಾನಿಧಯೇ ನಮಃ ನೇತ್ರೇ ಪೂಜಯಾಮಿ |

ಓಂ ಮಾಂಗಲ್ಯೈ ನಮಃ ಕರ್ಣೌ ಪೂಜಯಾಮಿ |

ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ ಶಿರಃ ಪೂಜಯಾಮಿ |

ಓಂ ಶ್ರೀ ಮಹಾಕಾಳ್ಯೈ ನಮಃ ಸರ್ವಾಂಗಂ ಪೂಜಯಾಮಿ |

*​ಧೂಪ*
                                                                                     ಲಕ್ಷ್ಮೀ ದೇವಿಗೆ ಧೂಪವನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸಬೇಕು

ಮಂತ್ರ: *ಧೂಪಂ ದಾಸ್ಯಾಮಿ ತೇ ದೇವಿ ಗೋ ಘೃತೇನ ಸಮನ್ವಿತಂ* |

*ಪ್ರತಿಗ್ರಹಣ ಮಹಾದೇವಿ ಭಕ್ತಾನಾಂ ವರದಪ್ರಿಯೇ* |

*​ದೀಪ*
                                                                       ಲಕ್ಷ್ಮೀ ದೇವಿಗೆ ದೀಪವನ್ನು ಬೆಳಗುವಾಗ ಈ ಕೆಳಗಿನ ಮಂತ್ರವನ್ನು ಹೇಳಬೇಕು.

ಮಂತ್ರ: *ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ* |

*ದೀಪಂ ಗ್ರಹಣ ದೇವೇಶಿ ತ್ರೈಲೋಕ್ಯತಿಮಿರಾಪಹಂ* ||

*​ನೈವೇದ್ಯ*
                                                                                                                  ದೀಪದ ನಂತರ ದೇವಿಗೆ ನೈವೇದ್ಯವನ್ನು ಈ ಮಂತ್ರದೊಂದಿಗೆ ಅರ್ಪಿಸಬೇಕು.

ಮಂತ್ರ: *ನೈವೇದ್ಯಂ ಪರಂ ದಿವ್ಯಂ ದೃಷ್ಟಿಪ್ರಿತಿಕರಂ ಶುಭಂ* |

*ಭಕ್ಷ್ಯಭೋಜ್ಯಾದಿಸಂಯುಕ್ತಂ ಪರಮಾನ್ನಾದಿಸಂಯುತಂ* ||

*​ತಾಂಬೂಲ*
                                                                                   ಲಕ್ಷ್ಮೀ ದೇವಿಗೆ ಎಲೆ ಅಡಿಕೆಯ ತಾಂಬೂಲವನ್ನು ನೀಡುವಾಗ ಈ ಮಂತ್ರವನ್ನು ಹೇಳಬೇಕು.

ಮಂತ್ರ: *ನಾಗವಲ್ಲಿದಲೈರ್ಯುಕ್ತಂ ಚೂರ್ಣಕ್ರಮುಕಸಂಯುಕ್ತಂ* |

*ವರಲಕ್ಷ್ಮೀ ಗ್ರಹಣ ತ್ವಂ ತಾಂಬೂಲಂ ಪ್ರತಿಗೃಹ್ಯತಾಂ* ||

*​ದಕ್ಷಿಣಾ*
                                                                                                      ಲಕ್ಷ್ಮೀ ದೇವಿಗೆ ಉಡುಗೊರೆಯನ್ನು ನೀಡುವಾಗ ತಪ್ಪದೇ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಸುವರ್ಣಂ ಸರ್ವಧಾತುನಾಂ ಶ್ರೇಷ್ಠಂ ದೇವಿ ಚ ತತ್ಸದಾ* |

*ಭಕ್ತಯಾ ದದಾಮಿ ವರದೇ ಸ್ವರ್ಣವೃಷ್ಠಿಂ ಚ ದೇಹಿ ಮೇ* ||

*​ನೀರಾಜನ*
                                                                                      ನಂತರ ವರಮಹಾಲಕ್ಷ್ಮಿಗೆ ನೀರಾಜನ ಅಂದರೆ ಆರತಿಯನ್ನು ಬೆಳಗಬೇಕು. ನೀವು ಆರತಿಯನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸುತ್ತ ಆರತಿಯನ್ನು ಬೆಳಗುವುದು ಉತ್ತಮ.

ಮಂತ್ರ: *ನೀರಾಜನಂ ಸುಮಂಗಲ್ಯಂ ಕರ್ಪೂರೇಣಾ ಸಮನ್ವಿತಂ* |

*ಚಂದ್ರಾರ್ಕವಹ್ನಿಸದೃಶಂ ಗ್ರಹಣ ದೇವಿ ನಮೋಸ್ತು ತೇ* ||

*​ದೋರಕಬಂಧನ*
                                                        ದೋರಕಗ್ರಹಣದ ನಂತರ ಲಕ್ಷ್ಮೀ ಪೂಜೆಯನ್ನು ಮಾಡುವ ಭಕ್ತರು ದೋರಕ ಅಂದರೆ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ದಾರವನ್ನು ಕಟ್ಟುವಾಗ ಈ ಮಂತ್ರವನ್ನು ಜಪಿಸಿ.

ಮಂತ್ರ: *ಕರಿಷ್ಯಾಮಿ ವ್ರತಂ ದೇವಿ ತ್ವದ್‌ಭಕ್ತಸ್ತ್ವತ್ಪರಾಯಣ* |

*ಶ್ರೀಯಂ ದೇಹಿ ಯಶೋ ದೇಹಿ ಸೌಭಾಗ್ಯಂ ದೇಹಿ ಮೇ ಶುಭೇ* ||

*​ಪುನರ್‌ ಅರ್ಘ್ಯ*
                                                                                       ಲಕ್ಷ್ಮೀ ದೇವಿಗೆ ದೋರಕಬಂಧನವನ್ನು ಮಾಡಿದ ನಂತರ, ಮತ್ತೊಮ್ಮೆ ದೇವಿಗೆ ಅರ್ಘ್ಯವನ್ನು ಅರ್ಪಿಸಬೇಕು. ದೇವಿಗೆ ಮತ್ತೊಮ್ಮೆ ಅರ್ಘ್ಯವನ್ನು ಅರ್ಪಿಸುವಾಗ ನಿಮ್ಮ ಮಂತ್ರ ಬೇರೆಯದ್ದಾಗಿರಬೇಕು. ಪುನರ್‌ ಅರ್ಘ್ಯವನ್ನು ನೀಡುವಾಗ ಜಪಿಸಬೇಕಾದ ಮಂತ್ರವಿದು.

ಮಂತ್ರ: *ಕ್ಷೀರಾರ್ಣವಸುತೇ ಲಕ್ಷ್ಮಿಶ್ಚಂದ್ರಸ್ಯ ಚ ಸಹೋದರಿ* |

*ಗ್ರಹಣಾರ್ಘ್ಯಂ ಮಹಾಲಕ್ಷ್ಮಿರ್ದೇವಿ ತುಭ್ಯಂ ನಮೋಸ್ತು ತೇ* ||

*ಬಿಲ್ವಪತ್ರ*
ವರಮಹಾಲಕ್ಷ್ಮಿ ಗೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಿ.

ಮಂತ್ರ: *ಶ್ರೀವೃಕ್ಷಸ್ಯ ದಳಂ ದೇಹಿ ಮಹಾದೇವಪ್ರಿಯಂ ಸದಾ* |

*ಬಿಲ್ವಪತ್ರಂ ಪ್ರಯಚ್ಛಾಮಿ ಪವಿತ್ರಂ ತೇ ಸುನಿರ್ಮಲಂ* ||

*ಪ್ರದಕ್ಷಿಣಾ*
                                                                                             ಈಗ ನೀವು ದೇವಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆಯನ್ನು ಯಾವಾಗಲೂ ನಿಮ್ಮ ಎಡದಿಂದ ಬಲಕ್ಕೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ಪಠಿಸಬೇಕಾದ ಮಂತ್ರವಿದು.

ಮಂತ್ರ: *ಇಹ ಜನ್ಮನಿ ಯತ್ಪಾಪಂ ಮಮ ಜನ್ಮಾಂತರೇಷು ಚ* |

*ನಿವಾರಯ ಮಹಾದೇವಿ ಲಕ್ಷ್ಮೀ ನಾರಾಯಣ ಪ್ರಿಯೇ* ||

*ನಮಸ್ಕಾರ* ‌      ‌                      ‌     ‌                                                                                                                         ಲಕ್ಷ್ಮೀ ದೇವಿಗೆ ನಮಸ್ಕರಿಸುವ ಜಪಿಸಬೇಕಾದ ಮಂತ್ರವಿದು.

ಮಂತ್ರ: *ಕಾಮೋದರಿ ನಮಸ್ತೇಸ್ತು ನಮಸ್ತ್ರೈಲೋಕ್ಯನಾಯಿಕೇ* |

*ಹರಿಕಾಂತೇ ನಮಸ್ತೇಸ್ತು ತ್ರಾಹಿ ಮಾಮ್‌ ದುಃಖಸಾಗರಾತ್‌* ||

*ವ್ರತ ಸಮರ್ಪಣ*
      ‌                                                                                ಈ ಎಲ್ಲಾ ನಿಯಮಗಳು ಮುಗಿದ ನಂತರ ದೇವಿ ಲಕ್ಷ್ಮೀ ವ್ರತವನ್ನು ಸಮರ್ಪಿಸಬೇಕು. ವ್ರತ ಸಮರ್ಪಣೆಗೆ ನೀವು ಈ ಮಂತ್ರವನ್ನು ಹೇಳಿ.

ಮಂತ್ರ: *ಕ್ಷೀರಾರ್ಣವಸಮುದ್ಭೂತೆ ಕಮಲೇ ಕಮಲಾಲಯೇ* |

*ಪ್ರಯಚ್ಛ ಸರ್ವಕಾಮಾಂಶ್ಚ ವಿಷ್ಣು ವಿಷ್ಣು ವಕ್ಷಃ ಸ್ಥಲಾಲಯ* ||

*​ಕ್ಷಮಾಪಣಾ*
                                                                                                ನೀವು ಪೂಜೆಯಲ್ಲಿ ತಿಳಿದು ಅಥವಾ ತಿಳಿಯದೆಯೋ ಮಾಡಿದ ತಪ್ಪಗಳಿಗೆ ಲಕ್ಷ್ಮಿಯಲ್ಲಿ ಕ್ಷಮೆಯನ್ನು ಕೇಳಲು ಈ ಮಂತ್ರವನ್ನು ಪಠಿಸಿ. ಇದರಿಂದ ಲಕ್ಷ್ಮಿ ನಿಮ್ಮ ತಪ್ಪುಗಳನ್ನು ಕ್ಷಮಿಸುವಳು.

ಮಂತ್ರ: *ಛತ್ರಂ ಚಾಮರಮಾಂದೋಲಂ ದತ್ತ್ವಾ ವ್ಯಜನದರ್ಪಣೆ* |

*ಗೀತಾವಾದಿತ್ರನೃತ್ಯೈಶ್ಚ ರಾಜಸಮ್ಮಾನನೈಸ್ತಥಾ* |

*ಕ್ಷಮಾಪಯೇ ಸೂಪಚಾರೈಃ ಸಮಭ್ಯರ್ಚ್ಯ ಮಹೇಶ್ವರೀ* ||

*​ಪ್ರಾರ್ಥನಾ*
                                                                                                                ಈಗ ಲಕ್ಷ್ಮೀ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆ ಮಾಡುವ ಮಂತ್ರ.

ಮಂತ್ರ: *ವರಲಕ್ಷ್ಮೀರ್‌ ಮಹಾದೇವಿ ಸರ್ವಕಾಮ - ಪ್ರದಾಯಿನಿ* |

*ಯನ್ಮಯಾ ಚ ಕೃತಂ ದೇಹಿ ಪರಿಪೂರ್ಣಾಂ ಕುರುಶ್ವ ತತ್‌* |

*​ವಾಯನಮಂತ್ರ*
                                                                                                                                                  ನಂತರ ಶ್ರೀ ವರಮಹಾಲಕ್ಷ್ಮಿಗೆ ಸಿಹಿಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.

ಮಂತ್ರ: *ಏಕವಿಂಶತಿಪಕ್ವಾನ್ನಶರ್ಕರಾಘೃತಸಂಯುತಂ* |

*ವಾಯನಂ ತೆ ಪ್ರಯಚ್ಛಾಮಿ ಇಂದಿರಾ ಪ್ರಿಯತಾಮಿತಿ* |

*ಇಂದಿರಾ ಪ್ರತಿಗ್ರಹಣಾತಿ ಇಂದಿರಾ ವೈ ದದಾತಿ ಚ* |

*ಇಂದಿರಾ ತಾರಕೋಭಾಭ್ಯಾಮಿಂದಿರಾಯೈ ನಮೋಃ ನಮಃ* ||

*​ಪೂಜಾ ಸಮರ್ಪಣ*
  ‌                                                                                                                                      ಪೂಜೆಯ ಕೊನೆಯದಾಗಿ ತಾಯಿ ಲಕ್ಷ್ಮಿಗೆ ಪೂಜೆಯನ್ನು ಸಮರ್ಪಿಸಬೇಕು. ಪೂಜೆಯನ್ನು ಸಮರ್ಪಿಸಲು ಈ ಮಂತ್ರವನ್ನು ಪಠಿಸಿ.

ಮಂತ್ರ: *ಪಂಚ ವಾಯನಕಾನೇವಂ ದದ್ಯಾದ್‌ ದಕ್ಷಿಣಾಯಾ ಯುತಾನ್‌* |

*ವಿಪ್ರಾಯ ಚಾಥ್‌ ಚತಯೇ ದೇವ್ಯೈ ತು ಬ್ರಹ್ಮಚಾರಿಣೇ* |

*ಸುವಾಸಿನ್ಯೈ ತತಸ್ತ್ವೇಕಂ ದಾಪಯೆಚ್ಛ ಯಥಾವಿಧಿ* ||

©®

ಸರ್ವೇ ಜನಾಃ ಸುಖಿನೋ ಭವಂತು 
ಸಮಸ್ತ ಸನ್ಮಂಗಳಾನಿ ಭವಂತು 
ಲಕ್ಮಿ ಕೃಪಾ ಕಟಾಕ್ಷ ಎಲ್ಲರಿಗೂ ಇರಲಿ 💐🙏

Editer :- Ananthbhat

Post a Comment

Previous Post Next Post