ನರೇಂದ್ರ ಮೋದಿ ಅವರಂಥ ನಾಯಕತ್ವ ಬೇಕು : ಮುರುಘಾಶ್ರೀ

[03/08, 8:04 PM] Nagendra New: ಮುಂಡಗೋಡ: ಪಾಳಾ ಗ್ರಾಮ ಪಂಚಾಯತ ಸದಸ್ಯೆ ಅಕ್ಕಮ್ಮ ಬಸವರಾಜ ಮೇಲಿನಮನಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಗಂಡನೇ ಕೊಲೆ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 
ಮೃತ ಸದಸ್ಯೆಯು ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿದ್ದಾಳೆ. ಮನೆಯ ಆವರಣದಲ್ಲಿಯೇ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಮಧ್ಯರಾತ್ರಿ ನಂತರ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ ಮಬನೂರ ಭೇಟಿ ನೀಡಿದ್ದಾರೆ. 
ಮೃತದೇಹದ ಸುತ್ತಲೂ ಕುಂಕುಮ ಚೆಲ್ಲಲಾಗಿದ್ದು, ಮನೆಯ ಒಳಗೆ ಹಾಗೂ ಹೊರಗೆ ಚುನಾವಣಾ ಕರಪತ್ರಗಳನ್ನು ಇಟ್ಟು ಅವುಗಳ ಮೇಲೆ ಹುಲ್ಲು, ಕುಂಕುಮ ಇಡಲಾಗಿದೆ. ವಾಮಾಚಾರಕ್ಕಾಗಿ ನಡೆದ ಕೊಲೆಯೋ ಅಥವಾ ಇನ್ಯಾವುದೋ ಕಾರಣಕ್ಕೆ ನಡೆದ ಕೊಲೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.
[03/08, 8:04 PM] Nagendra New: ದೇಶಕ್ಕೆ ನರೇಂದ್ರ ಮೋದಿ ಅವರಂಥ ನಾಯಕತ್ವ ಬೇಕು : ಮುರುಘಾಶ್ರೀ
ಚಿತ್ರದುರ್ಗ, ಆ.3
ಭಾರತ ದೇಶದ ಸುತ್ತ ಶತೃಗಳೇ ತುಂಬಿಕೊಂಟಿದ್ದು, ಅವರ ಉಪಟಳದಿಂದ ದೇಶವನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರಂಥ ನಾಯಕತ್ವ ನಮ್ಮ ದೇಶಕ್ಕೆ ಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.   
  ಇಲ್ಲಿನ ಮುರುಘಾಮಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ,  ವ್ಯಕ್ತಿಗಿಂತ ದೇಶ ಮುಖ್ಯ. ಅಲ್ಲದೇ ದೇಶದ ಸುತ್ತಮುತ್ತ ಶತ್ರುಗಳು ಹೆಚ್ಚಾಗಿದ್ದಾರೆ. ಅವರನ್ನು ಹಿಮ್ಮಟ್ಟಿಸಿ ದೇಶವನ್ನು ರಕ್ಷಣೆ ಮಾಡುವ ಸಮರ್ಥ ನಾಯಕತ್ವದ ಅಗತ್ಯ ದೇಶಕ್ಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
  ಕಳೆದ ಹತ್ತಾರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಮುಂದೆಯೂ ಇಂತಹ ಸಮರ್ಥ ನಾಯಕತ್ವದ ಅಗತ್ಯ ದೇಶಕ್ಕಿದೆ ಎಂದು ಮುರುಘಾ ಶರಣರು ಹೇಳಿದ್ದಾರೆ.
  ಇನ್ನು ಕೆಲವೇ ಕ್ಷಣಗಳಲ್ಲಿ ರಾಹುಲ್ ಗಾಂಧಿ ಮುರುಘಾಮಠಕ್ಕೆ ಭೇಟಿ ನೀಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಮುರುಘಾ ಶರಣರ ಈ ಹೇಳಿಕೆಯಿಂದ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಮುಜುಗರ ಉಂಟಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
[03/08, 8:04 PM] Nagendra New: ಕೂಡಿಗೆ ಕ್ರೀಡಾ ಶಾಲೆಗೆ ಒಂದು ಕೋಟಿ ಹಣ ಬಿಡುಗಡೆ
ಪದವಿ  ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸಲು ಸ್ಧಳ ಪರಿಶೀಲನೆ
ಕುಶಾಲನಗರ: ಕೂಡಿಗೆ ಕ್ರೀಡಾ ಶಾಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಆರಂಭಿಸಲು ಒಂದು ಕೋಟಿ‌ ರೂ.ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕ್ರೀಡಾ ಶಾಲೆಗೆ ಭೇಟಿ ನೀಡಿ ವಸತಿ ನಿಲಯಕ್ಕೆ ಕಟ್ಟಡ ನಿರ್ಮಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು.
ಕಳೆದ  ಆರು  ತಿಂಗಳ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ  ಇಲಾಖೆಯ  ಸಚಿವರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭ,   ‌ಪದವಿಪೂರ್ವ  ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಚಿವರಿಗೆ ಮನವಿ ಸಲ್ಲಿಸಿ ಪದವಿ ವಿದ್ಯಾರ್ಥಿಗಳಿಗೂ ವಸತಿ ನಿಲಯದ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದರು.
ಕೂಡಿಗೆ ಕ್ರೀಡಾ ಶಾಲೆಯಲ್ಲಿದ್ದು ಪದವಿಪೂರ್ವ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದ ಸೌಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಬೇಕಾಗಿತ್ತು. ಇಲ್ಲವೇ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನು ಮನಗಂಡ ಸಚಿವರು,   ಕ್ರೀಡಾ ಇಲಾಖೆಯ ಮೂಲಕ  ಪದವಿ ತರಗತಿಯ ವಿದ್ಯಾರ್ಥಿಗಳಿಗೆ 2.50 ಕೋಟಿ ಹಣದಲ್ಲಿ ಸುಸಜ್ಜಿತ ವಸತಿ ನಿಲಯ ನಿರ್ಮಿಸಲು ಮಂಜೂರಾತಿ ನೀಡಿದ್ದರು.
ಅದರನ್ವಯ ಈಗಾಗಲೇ ಒಂದು ಕೋಟಿ ಹಣ ಬಿಡುಗಡೆಯಾಗಿದ್ದು,  ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಕ್ರೀಡಾ ಶಾಲೆಗೆ ಭೇಟಿ ನೀಡಿ ಪದವಿ   ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ನಿಲಯದ ಕಟ್ಟಡ ಅರಂಭಿಸುವ ಸ್ಧಳ ಪರಿಶೀಲನೆ ನಡೆಸಿದರಲ್ಲದೆ, ಸಂಪೂರ್ಣವಾದ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳಿಂದ  ಪಡೆದರು. ಅಲ್ಲದೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳ ನಿಲಯಗಳಿಗೂ ಭೇಟಿ ನೋಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್,   ತಾಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್, ಕುಮಾರ ಸ್ವಾಮಿ, ಜಿಲ್ಲಾ ಬಿ ಜೆ ಪಿ. ಎಸ್ ಟಿ  ಘಟಕದ ಕಾರ್ಯದರ್ಶಿ ಪ್ರಭಾಕರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ,  ಕ್ರೀಡಾ ಶಾಲೆಯ ತರಬೇತುದಾರರು ಹಾಜರಿದ್ದರು.
[03/08, 8:05 PM] Nagendra New: ಸಿದ್ದಾಪುರ: ಕಾಫಿ ತೋಟದಲ್ಲಿ ಕಾಡಾಮೆ ಸಾವು
ಮಡಿಕೇರಿ: ಕಾಡಾನೆಯೊಂದು ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ಬಿಬಿಟಿಸಿ ಕಾಫಿ ತೋಟದಲ್ಲಿ ಬುಧವಾರ ಸುಮಾರು 60 ವರ್ಷ ಪ್ರಾಯದ ಹೆಣ್ಣಾನೆಯ ಮೃತದೇಹ ಕಂಡು ಬಂದಿದೆ.
ಇದು ವಯೋಸಹಜ ಸಾವೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
[03/08, 8:05 PM] Nagendra New: *ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋಚಾ೯ ಪ್ರಶಿಕ್ಷಣ ವರ್ಗ.*

*ಹರ್ ಘರ್ ತಿರಂಗಾ ಕಾಯ೯ಕ್ರಮ ಯಶಸ್ವಿಗೆ ಕರೆ: ಮಾಲೀಕಯ್ಯಾ ಗುತ್ತೇದಾರ.*

ಕಲಬುರಗಿ....

ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವವೆಂದು ಆಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದು,ಹೀಗಾಗಿ ಪ್ರತಿಯೊಬ್ಬ ಭಾರತೀಯರು ತಮ್ಮ ಮನೆ ಮೇಲೆ ತಿರಂಗಾ ಹಾರಿಸುವುದರ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿ ಮಾಡಲು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ ಕರೆ ನೀಡಿದರು.

ಬುಧವಾರ ನಗರದ ಯಾತ್ರಿಕ ನಿವಾಸದಲ್ಲಿ ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಮಹಿಳಾ ಮೋಚಾ೯ದ ಪ್ರಶಿಕ್ಷಣ ವರ್ಗವನ್ನು ಉದ್ಗಾಟನೆ ಮಾಡಿ ಮಾತನಾಡಿದರು.

ಪಕ್ಷದ ಸಂಘಟನೆ ದೃಷ್ಟಿಯಿಂದ ಅಭ್ಯಾಸ ವಗ೯ ಹಮ್ಮಿಕೊಳ್ಳಲಾಗಿದೆ. ಅಮೃತ ಮಹೋತ್ಸವ ಪವ೯ವಾಗಿರುವುದರಿಂದ ಭಾರತ ದೇಶಕ್ಕೆ ಮೆರಗು ಬರುವ ನಿಟ್ಟಿನಲ್ಲಿ ಬೈಕ್ ರ್ಯಾಲಿ, ಸ್ಥಬ್ದ ಚಿತ್ರ ಪ್ರದಶ೯ನ,ತಿರಂಗಾ ಯಾತ್ರೆ ಸೇರಿದಂತೆ ನಿಮ್ಮ ನಿಮ್ಮ ಶೈಲಿಯಲ್ಲಿ ಜನರಿಗೆ ಮನವರಿಕೆ ಮಾಡಿಸಿ,ಕಾಯ೯ಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿಯವರ 8 ವಷ೯ಗಳ ಆಡಳಿತದ ಅವಧಿಯಲ್ಲಿ ಮಾಡಿದಂತಹ ಸಾಧನೆ,ಯೋಜನೆಗಳನ್ನು ಜನರಿಗೆ ತಿಳಿಸಿ,ಪಕ್ಷ ಸಂಘಟನೆ ಮಾಡಬೇಕಾಗಿದೆ. ನಾವೆಲ್ಲರೂ ಒಗ್ಗೂಡಿ ನಾವೆಲ್ಲರೂ ಭಾರತೀಯರು ಎಂಬುದು ತೋರಿಸುವ ಕಲ್ಪನೆ ನಮ್ಮದಾಗಿರಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ರಾಜ್ಯ ಮಹಿಳಾ ಮೋರ್ಚಾದ ಚಂದಮ್ಮಾ ಪಾಟೀಲ್ ಮಾತನಾಡಿ,ಬೂತ್ ಮಟ್ಟದಿಂದ ಹಿಡಿದು ಪಕ್ಷದ ಸಂಘಟನೆ ಆಗಬೇಕಾಗಿದೆ. ಹೊಸ ಭಾರತ ನಿಮಾ೯ಣ ಮಾಡುವುದರ ಮೂಲಕ ಇಡೀ ವಿಶ್ವಕ್ಕೆ ಭಾರತದ ವಿಶೇಷತೆ ತಿಳಿಸಬೇಕೆಂದು ಹೇಳಿದರು.

ಕೇಂದ್ರ ಸರ್ಕಾರ ಜನಧನ ಖಾತೆ,ಕಿಸಾನ್ ಸಮ್ಮಾನ್ ಯೋಜನೆ,ಉಜ್ವಲಾ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ದೇಶದ ಜನರಿಗೆ ನೀಡಿದೆ. ಒಬ್ಬ ಸಾಮಾನ್ಯ ಮಹಿಳೆಯೂ ಬಿಜೆಪಿ ಪಕ್ಷ ಉಪಾಧ್ಯಕ್ಷ ಆಗುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಮಾತನಾಡಿದರು. ಮಹಿಳಾ ಮೋರ್ಚಾ ಅಧ್ಯಕ್ಷ ಭಾಗೀರಥಿ ಗುನ್ನಾಪುರ ಸ್ವಾಗತಿಸಿದರು.
[03/08, 8:05 PM] Nagendra New: ಮಂಡ್ಯ: ಕಳೆದ ಎರಡು ದಿನಗಳಿಂದ ಮೇಘಸ್ಪೋಟ ಉಂಟಾದ ಕಾರಣ ತಾಲೂಕಿನ ಕೆರಗೋಡು, ಹುಂಜನಕೆರೆ, ಕೀಲಾರ ಗ್ರಾಮಗಳ ಕೆರೆ ಒಡೆದು ಏಕಏಕಿ ಮದ್ದೂರು ಕೆರೆಗೆ ನೀರು ನುಗ್ಗಿದೆ. ಇದರಿಂದಾಗಿ ಮದ್ದೂರು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ಜಮೀನುಗಳು ಜಲಾವೃತವಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಸ್ಥಗಿತವಾಗಿದೆ.
ಘಟನೆಯಿಂದಾಗಿ ಮದ್ದೂರಿನ ಸೋಮೇಶ್ವರ ಸಮುದಾಯ ಭವನ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಎಲ್ ಐ ಸಿ ಹಿಂಭಾಗದ ಬಡಾವಣೆ ಸಿದ್ದರಾಜು ಬಡಾವಣೆ ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಮದ್ದೂರು ಕೆರೆಯ ನೀರು ಏಕಾಯಕಿ ಕೊಲ್ಲಿ ನದಿ ಮೂಲಕ ಬೆಂಗಳೂರು ಮೈಸೂರು ಹೆದ್ದಾರಿಗೆ ನುಗ್ಗಿದ ಪರಿಣಾಮ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ನೀರು ಪ್ರವಾಹ ಉಪಾದಿಯಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜನತೆ ತಂದೋಪ ತಂಡವಾಗಿ ಸ್ಥಳಕ್ಕೆ ಆಗಮಿಸಿ ರುವ ದೃಶ್ಯವನ್ನು ನೋಡುತ್ತಿದ್ದು ಸಾಮಾನ್ಯವಾಗಿತ್ತು.
ಅಪಾರ ಪ್ರಮಾಣದ ನೀರು ಹೆದ್ದಾರಿಯಲ್ಲಿ ಹರಿಯುತ್ತಿರುವ ಕಾರಣ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವಾಹನಗಳ ವಾಹನಗಳನ್ನು ಬದಲಿ ವ್ಯವಸ್ಥೆ ಮಾಡಿದ್ದು,  ರುದ್ರಾಕ್ಷಿ ಪುರ ಮಳವಳ್ಳಿ ಮೂಲಕ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳನ್ನು ಕೆಎಂ ದೊಡ್ಡಿ ಮಳವಳ್ಳಿ ಮಾರ್ಗವಾಗಿ  ತೆರಳಲು ವ್ಯವಸ್ಥೆ ಮಾಡಲಾಗಿತ್ತು.
[03/08, 8:05 PM] Nagendra New: ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಯಿಂದ ಅಪಾರ ಹಾನಿಗೊಳಗಾದ ಭಟ್ಕಳ ಸುತ್ತ ಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು ಆಗಮಿಸಿದ ಮುಖ್ಯ ಮಂತ್ರಿ  ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ ಅವರನ್ನು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಗೋವಾಕ್ಕೆ ತೆರಳಿ ಜಿಲ್ಲೆಗೆ ಸ್ವಾಗತ ಕೋರಿದರು. 
ಬೆಂಗಳೂರಿನಿಂದ ಖಾಸಗಿ ವಿಮಾನದಲ್ಲಿ ಗೋವಾ ವಾಸ್ಕೋ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ ಗೋವಾದಿಂದ ರಸ್ತೆ ಮಾರ್ಗವಾಗಿ ಭಟ್ಕಳಕ್ಕೆ ಪ್ರಯಾಣ ಬೆಳೆಸಿದರು.
[03/08, 8:05 PM] Nagendra New: ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ

ಗದಗ  : ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಲೋಕೋಪಯೋಗಿ ಇಲಾಖೆಯಿಂದ ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಅಳವಡಿಸಲಾಗಿದೆ. ಈ ನಿಬಂಧನೆಗಳನ್ನು ಪಾಲಿಸುವುದರಿಂದ ರಸ್ತೆಗಳಲ್ಲಿ ಅತಿಕ್ರಮಣ ತಡೆಯಲು ಸಹಾಯಕವಾಗಿ, ವಾಹನ ಸಂಚಾರ ಸುಗಮವಾಗುವುದಲ್ಲದೇ, ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯಭಾಗದಿಂದ ೪೦ ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಜಿಲ್ಲಾ ಮುಖ್ಯರಸ್ತೆಗಳ ಮಧ್ಯಭಾಗದಿಂದ ೨೫ ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೇ ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಷಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಗಳಲ್ಲಿ ಈ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕನಿಷ್ಠ  ೬ ಮೀಟರ್ ಅನ್ನು ಕಾಯ್ದುಕೊಳ್ಳಬೇಕು ಹಾಗೂ ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ ೧೫ ಕಿ.ಮೀ. ದೂರದವರೆಗೆ ೧೨ ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿದೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರುಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಿಸಲಾಗಿದ್ದು, ರಸ್ತೆಯಿಂದ ಕಟ್ಟಡಗಳ ಅಂತರ ನಿಗದಿಪಡಿಸುವುದು ಹಾಗೂ ರಸ್ತೆ ಗಡಿಯನ್ನು ನಿಗದಿಪಡಿಸುವುದು ಅವರ ಜವಾಬ್ಧಾರಿಯಾಗಿರುತ್ತದೆ ಎಂದು ಸಿ.ಸಿ.ಪಾಟೀಲ ಅವರು ತಿಳಿಸಿದ್ದಾರೆ.
[03/08, 8:05 PM] Nagendra New: ಸಂಪಾಜೆ: 24ಗಂಟೆಯಲ್ಲಿ 170 ಮಿ.ಮೀ.ಮಳೆ ನಾಳೆಯಿಂದ ಮತ್ತಷ್ಟು ಚುರುಕು ಸಂಭವ 
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 58.26 ಮಿ.ಮೀ. ಮಳೆಯಾಗಿದೆ. 
ಕೊಡಗು ಜಿಲ್ಲೆಯಲ್ಲಿ ಮಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಬೆಳಗ್ಗೆ 8:30 ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಗುರುವಾರ ಬೆಳಗ್ಗೆಯಿಂದ ಮಳೆ ಇನ್ನಷ್ಟು ಬಿರುಸಾಗುವ ಸಾಧ್ಯತೆಯೊಂದಿಗೆ ರೆಡ್ ಅಲರ್ಟ್ ಘೋಷಣೆ ಸಾಧ್ಯತೆ ಬಗ್ಗೆಯೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ 24ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ 93.95 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 40.14ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 40.77 ಮಿ.ಮೀ. ಮಳೆ ಬಿದ್ದಿದ್ದು, ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ ಸರಾಸರಿ 2072.59 ಮಿ.ಮೀ.ಮಳೆಯಾದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1740.19ಮಿ.ಮೀ.ಮಳೆಯಾಗಿತ್ತು.
ಕಳೆದ 24ಗಂಟೆಗಳಲ್ಲಿ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 66.60, ನಾಪೋಕ್ಲು 30.20, ಸಂಪಾಜೆ 170, ಭಾಗಮಂಡಲ 108.60, ವೀರಾಜಪೇಟೆ ಕಸಬಾ 100.40, ಹುದಿಕೇರಿ 19, ಶ್ರೀಮಂಗಲ 12, ಪೊನ್ನಂಪೇಟೆ 40, ಅಮ್ಮತ್ತಿ 22, ಬಾಳೆಲೆ 47.50, ಸೋಮವಾರಪೇಟೆ ಕಸಬಾ 50.80, ಶನಿವಾರಸಂತೆ 30.40, ಶಾಂತಳ್ಳಿ 79, ಕೊಡ್ಲಿಪೇಟೆ 43.20, ಕುಶಾಲನಗರ 5, ಸುಂಟಿಕೊಪ್ಪ 36.20 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ ಜಲಾಶಯದ ನೀರಿನ ಮಟ್ಟ 2857.69 ಅಡಿಗಳಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ  2855.67 ಅಡಿ ನೀರಿತ್ತು.
ಪ್ರಸಕ್ತ ಜಲಾಶಯಕ್ಕೆ  ನೀರಿನ ಒಳಹರಿವು 2209 ಕ್ಯುಸೆಕ್'ನಷ್ಟಿದ್ದರೆ, ಕಳೆದ ವರ್ಷ ಇದೇ ದಿನಾಂಕದಂದು 3220 ಕ್ಯುಸೆಕ್'ನಷ್ಟಿತ್ತು. ಬುಧವಾರ ನೀರಿನ ಹೊರ ಹರಿವು ನದಿಗೆ 4000 ಕ್ಯುಸೆಕ್ ಮತ್ತು ನಾಲೆಗೆ 20 ಕ್ಯುಸೆಕ್'ನಷ್ಟಿದ್ದರೆ, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಹೊರ ಹರಿವು ನದಿಗೆ 2400 ಕ್ಯುಸೆಕ್,  ನಾಲೆಗೆ 40 ಕ್ಯುಸೆಕ್'ನಷ್ಟಿತ್ತು.
ಬರೆ ಕುಸಿತ: ಬುಧವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 128 ಮಿ.ಮೀ. ಮಳೆಯಾಗಿದ್ದು, ಚೆಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ಕೆಲವು ಕಡೆ ಬರೆ ಕುಸಿದಿದೆ. ಹಾಗೆಯೇ ಮದೆ ಗ್ರಾ.ಪಂ.ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಬಲೆಕಂಡಿಯಲ್ಲಿ ರಸ್ತೆಗೆ ಮಣ್ಣು ಕುಸಿದಿದ್ದು, ಜೆಸಿಬಿ ಮೂಲಕ ಮಣ್ಣು ಸರಿಪಡಿಸುವ ಕಾರ್ಯ ನಡೆದಿದೆ ಎಂದು ಗ್ರಾ.ಪಂ.ಪಿಡಿಒ ಅವರು ಮಾಹಿತಿ ನೀಡಿದ್ದಾರೆ. ಚೆಂಬು, ಪೆರಾಜೆ ಮತ್ತು ಸಂಪಾಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಅಲ್ಲಲ್ಲಿ ಮನೆ ಮತ್ತು ಬೆಳೆಗೆ ಹಾನಿಯಾಗಿದೆ.
[03/08, 8:05 PM] Nagendra New: ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ : ಶ್ರೀಗಳಿಂದ ಲಿಂಗ ದೀಕ್ಷೆ 
ಚಿತ್ರದುರ್ಗ, ಆ.೦೩
ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಮುರುಘಾಮಠಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು. ಬಳಿಕ ೫೦ಕ್ಕೂ  ಹೆಚ್ಚು ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಿದರು.
 ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಣ್ಣನವರು ತಮ್ಮ ಮನೆಯನ್ನು ಬಿಟ್ಟು ಹೊರಬಂದಿದ್ದು ಹೆಣ್ಣುಮಕ್ಕಳಿಗೆ ಸಮಾನತೆ ಸಿಗಲಿಲ್ಲವೆಂಬ ಕಾರಣಕ್ಕೆ. ಪ್ರಪಂಚದ ಮೊದಲ ಸಂಸತ್ ಅನುಭವ ಮಂಟಪವನ್ನು ತೆರೆದು ಸಮಾನತೆಯ ತತ್ವ ಸಿದ್ಧಾಂತವನ್ನು ತಂದರು. ಸರ್ವತೋಮುಖ ಅಭಿವೃದ್ಧಿಗೆ ಸಮಸಮಾಜದ ಕಲ್ಪನೆಯನ್ನು ತಂದರು. ಕಾಯಕ ದಾಸೋಹ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ನೀಡಿದರು ಎಂದರು. 
 ಕಾಯಕದಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರಬೇಕು ಎಂದರು. ಶಾಂತಿ ಹಾಗು ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟರು. ಶ್ರದ್ಧೆ ಇಲ್ಲದಿದ್ದರೆ ಯಾವ ಕೆಲಸವೂ ಪರಿಪೂರ್ಣ ಆಗುವುದಿಲ್ಲ ಎಂದು ಹೇಳಿದರು.
 ರಾಹುಲ್‌ಗಾಂಧಿ  ಶ್ರೀಮಠವನ್ನು ಸೌಜನ್ಯಯುತವಾಗಿ ಸಂದರ್ಶಿಸಿದರು. ಇಷ್ಟಲಿಂಗದ ಬಗ್ಗೆ ವಿಚಾರಿಸಿದ ರಾಹುಲ್‌ಗಾಂಧಿಯವರು ಶ್ರೀಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೆಗಳಿಗೆ ಸ್ವಾಮೀಜಿ ಸಮಾಧಾನ ನೀಡಿದರು. ಇಷ್ಟಲಿಂಗ ಪೂಜೆ (ಶಿವಯೋಗದ) ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. 
 ನಂತರ ಮಾತನಾಡಿದ ರಾಹುಲ್‌ಗಾಂಧಿ, ನನಗೆ ಬಸವಣ್ಣನವರ ಬಗ್ಗೆ ಒಂದಿಷ್ಟು ಪರಿಚಯ ಇದೆ. ತಾವು ಯಾರನ್ನಾದರೂ ಕಳುಹಿಸಿದರೆ ಸಹಜ ಶಿವಯೋಗವನ್ನು ಕಲಿಯುತ್ತೇನೆ ಎಂದರು. ನಂತರ ಶ್ರೀಗಳು ರಾಹುಲ್ ಗಾಂಧಿಯವರಿಗೆ ಬಸವಣ್ಣನವರ ಭಾವಚಿತ್ರ ನೀಡಿ ಶಾಲು ಹೊದಿಸಿ ಗೌರವಿಸಿದರು.
 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಮಠ. ಶ್ರೀಗಳಿಗೆ ಹೇಗೆ ದೀಕ್ಷೆ ಕೊಟ್ಟರೋ ಹಾಗೆ ರಾಹುಲ್ ಗಾಂಧಿಯವರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ಈ ಮಠಕ್ಕೆ ಬರಬೇಕೆಂದು ಬಹಳ ದಿನದಿಂದ ಹೇಳುತ್ತಿದ್ದರು. ಅನೇಕ ಸಮುದಾಯದವರಿಗೆ ದೀಕ್ಷೆ ಕೊಟ್ಟಿರುವುದು ಅವರಿಗೆ ಖುಷಿ ಕೊಟ್ಟಿದೆ. ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಈ ಮಠದ ಬಗ್ಗೆ ಪ್ರಸ್ತಾಪಿಸುತ್ತಿದ್ದರು ಎಂದು ಸ್ಮರಿಸಿದರು. 
 ನಮ್ಮ ಪಕ್ಷದಿಂದ ಶ್ರೀಮಠ ಮೊದಲಾಗಿ ಯಾವುದೇ ಮಠಗಳಿಗೆ ಯಾವುದೇ ಸಂದರ್ಭದಲ್ಲಿ ನೋಯಿಸಿರುವುದಿಲ್ಲ. ಇದು ನಮ್ಮ ತತ್ವಸಿದ್ಧಾಂತ. ಮುಂದೆ ಭಾರತ ಜೋಡೋ ಕಾರ್ಯಕ್ರಮ ಬರುವಾಗ ಎಲ್ಲರೂ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತೇವೆ. ಇದೊಂದು ಪವಿತ್ರವಾದ ಸಂದರ್ಭ. ಇದು ನಮ್ಮ ಭಾಗ್ಯ ಎಂದರು.
 ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ನಾವೆಲ್ಲ ಸೇರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ೨ ಕೋಟಿ ಜನರಿಗೆ ಮೀಸಲಾತಿ ಸಿಗಬೇಕು. ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ನಮ್ಮ ಸಮುದಾಯಕ್ಕೆ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ಕೊಟ್ಟು ಸಾಮಾಜಿಕ ಸ್ಥಾನ ಒದಗಿಸಿದ್ದರು ಎಂದು ಸ್ಮರಿಸಿದರು.
 ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿದರು. ಬವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಸವಣೂರು ದೊಡ್ಡಹುಣಸೇಮಠದ ಶ್ರೀ ಚೆನ್ನಬಸವ ಸ್ವಾಮಿಗಳು, ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಜಿಗಳು, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರುಗಳು ಹಾಜರಿದ್ದರು.
[03/08, 8:05 PM] Nagendra New: ವಿಜಯಪುರ / ಸಿಡಿಲು ಬಡಿದು ಮಹಿಳೆ ಮತ್ತು ಎಮ್ಮೆಯೊಂದು ಸಾವು

ದಿಗಂತ ವರದಿ ವಿಜಯಪುರ: ಸಿಡಿಲು ಬಡಿದು ಮಹಿಳೆಯೊಬ್ಬಳು ಸಾವಿಗೀಡಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ. 

ಇಲ್ಲಿನ ಜೈನಾಬಿ ನಜೀರಅಹ್ಮದ ಸಿಪಾಯಿ (55) ಸಿಡಿಲು ಬಡಿದು ಮೃತಪಟ್ಟ ಮಹಿಳೆ. 

ಜೈನಾಬಿ ಸಿಪಾಯಿ, ಹೊಲದಲ್ಲಿ ಕಸ ತೆಗೆಯುವ ವೇಳೆ ಮಳೆ ಬಂದಿದ್ದು, ಮರದ ಕೆಳಗೆ ನಿಂತಿರುವ ವೇಳೆಯಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ.

ಈ ವೇಳೆ ಗಿಡದ ಪಕ್ಕದಲ್ಲಿದ ಎಮ್ಮೆಗೂ ಸಿಡಿಲು ತಾಗಿದ್ದು, ಎಮ್ಮೆ ಕೂಡ ಮೃತಪಟ್ಟಿದೆ. 

ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
[03/08, 8:05 PM] Nagendra New: ಹುಬ್ಬಳ್ಳಿ: ನಗರದ ಖಾದಿ ಗ್ರಾಮೋದ್ಯೋಗ ಸಂಘಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಭೇಟಿ ನೀಡಿ ಬುಧವಾರ ಭೇಟಿ ನೀಡಿದರು. 

ನಂತರ ಮಾಧ್ಯಮದವರೊಂದಿಗೆ ಮತನಾಡಿದ ಅವರು, ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಧ್ವಜ ಖಾದಿಯಿಂದ ಮಾಡಲಾಗುತ್ತದೆ. ಅದು ನಿಜಕ್ಕೂ ತುಂಬಾ ಉತ್ತಮ ಕಾರ್ಯ. ಯಾಕೆಂದರೆ ಅದು ದೇಶದ ಹೆಮ್ಮ  ಪ್ರತಿನಿಧಿಸುತ್ತದೆ ಈ ನಿಟ್ಟಿನಲ್ಲಿ ನಾವು ರಾಷ್ಟ್ರೀಯ ಧ್ವಜದ ಪರವಾಗಿದ್ದೇವೆ ಎಂದರು. 

 ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕೈಯಲ್ಲಿರುವ ಕೆಲಸವನ್ನು ಕಸಿದುಕೊಂಡು ದೊಡ್ಡ ಕುಳಗಳ  ಜೇಬಿಗೆ ಹಾಕುವ ಕಾರ್ಯವನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

ನೋಟು ಅಮಾನೀಕರಣ, ಕೃಷಿ ಕಾನೂನು ತಿದ್ದುಪಡಿಯಂತಹ ಯೋಜನೆಗಳು ಬಡವರಿಂದ ಕಿತ್ತುಕೊಂಡು ಇಬ್ಬರೂ ಮೂವರು ಜೇಬು ತುಂಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದರು.

ಚರಕ ಮಹಾತ್ಮ ಗಾಂಧಿಯವರ ಸಂಕೇತವಾಗಿದ್ದು, ಇಂತಹ ದೇಶದ ಸಂಪ್ರದಾಯದ ಉಳಿವಿಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ದೇಶ ಸ್ವಾತಂತ್ರ್ಯ ಪ್ರತಿಕವಾಗಿರು ರಾಷ್ಟ್ರ ತ್ರೀವರ್ಣ ಧ್ವಜದ ಸಂಹಿತೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜ ಬಳಸುತ್ತಿರುವ ಕಾರಣ ವಿರೋಧಿಸಿ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿ‌ ಪರಿಶೀಲಿಸಿದರು. 

ಖಾದಿ ಗ್ರಾಮೋದ್ಯೋಗ ಕೇಂದ್ರದ ಸುತ್ತಮುತ್ರ ಬಿಗಿ ಭದ್ರತೆ ವಹಿಸಲಾಗಿತ್ತು.

ಎಐಸಿಸಿ ಪ್ರಧಾನ‌ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನ ಪರಿಷತ್ ವಿರೋಧ ಪಕ್ಷ ದ ನಾಯಕ ಬಿ.ಕೆ. ಹರಿಪ್ರಸಾದ, ವಿಪ ಸದಸ್ಯ ಸಲೀಂ ಅಹ್ಮದ ಇದ್ದರು.

Post a Comment

Previous Post Next Post